Samsung: ದೀಪಾವಳಿಗೆ 'ಧಮಾಕಾ' ಆಫರ್! ಮೊದಲೇ ಕಡಿಮೆ ಬೆಲೆ.. ಈಗ 23% ಡಿಸ್ಕೌಂಟ್; ಯಾವ ಫೋನ್?
ದೀಪಾವಳಿ ಹಬ್ಬದ ಪ್ರಯುಕ್ತ ಅಮೆಜಾನ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival Diwali Sale) ನಡೆಯುತ್ತಿದೆ. ಈ ವಿಶೇಷ ಮಾರಾಟದಲ್ಲಿ ಹಲವು ಪ್ರಮುಖ ಕಂಪನಿಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಅದರಂತೆಯೇ, ಈ ವಿಶೇಷ ಸೇಲ್‌ನಲ್ಲಿ ಟೆಕ್ ದೈತ್ಯ ಸ್ಯಾಮ್‌ಸಂಗ್ ಫೋನ್‌ಗಳಿಗೆ ಬೊಂಬಾಟ್ ರಿಯಾಯಿತಿ ನೀಡಲಾಗಿದೆ. ನೀವು, ಕಡಿಮೆ ಬಜೆಟ್‌ನಲ್ಲಿ ಈ 5G ಸ್ಮಾರ್ಟ್‌ಫೋನ್ ಕೊಳ್ಳಲು ಬಯಸಿದರೆ, ನಿಮಗೆ ಭರ್ಜರಿ ಆಫರ್‌ಗಳು ಸಿಗುತ್ತದೆ. ಬನ್ನಿ, ಅದು ಯಾವ ಫೋನ್? ಯಾವೆಲ್ಲಾ ಆಫರ್ ಲಭ್ಯವಿದೆ? ಎನ್ನುವುದನ್ನು ತಿಳಿಯೋಣ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ A15 5G (Samsung Galaxy A15 5G) ಅಮೆಜಾನ್ ವಿಶೇಷ ಸೇಲ್‌ನಲ್ಲಿ ಶೇ.23 ರಷ್ಟು ರಿಯಾಯಿತಿಯೊಂದಿಗೆ ಲಭ್ಯವಿದೆ. ಅಂದರೆ, ಕೇವಲ 15,499 ರೂ.ಗೆ ಮಾರಾಟವಾಗುತ್ತಿದೆ. ಅಲ್ಲದೆ, ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಈ ಫೋನ್ ಖರೀದಿಸಿದರೆ, ಶೇ.5 ರಷ್ಟು ರಿಯಾಯಿತಿ ಪಡೆಯಬಹುದು. ಎರಡು ರಿಯಾಯಿತಿ ಬಳಿಕ, ಈ ಮೊಬೈಲ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಕೊಳ್ಳಬಹುದಾಗಿದೆ. ಈ ಎಲ್ಲಾ ಆಫರ್‌ಗಳನ್ನು ಅಮೇಜಾನ್‌ನಲ್ಲಿ ಪಡೆಯಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ A15 5G ಬೆಲೆ
ಕಂಪನಿಯು ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರವನ್ನು 17,999 ರೂ.ಗೆ ಬಿಡುಗಡೆ ಮಾಡಿತ್ತು. 8GB RAM + 128GB ಸ್ಟೋರೇಜ್ ಬೆಲೆ 19,499 ರೂ. ಆಗಿದೆ. ಇನ್ನೂ, 8GB RAM + 256GB ಸ್ಟೋರೇಜ್ ರೂಪಾಂತರವನ್ನು 22,499 ರೂ.ಗೆ ಪರಿಚಯಿಸಲಾಗಿತ್ತು. ನೀವು, ಈ ಫೋನನ್ನು ತಿಳಿ ನೀಲಿ (ಲೈಟ್ ಬ್ಲೂ), ನೀಲಿ ಕಪ್ಪು ( ಬ್ಲೂ ಬ್ಲಾಕ್) ಮತ್ತು ನೀಲಿ (ಬ್ಲೂ) ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ A15 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಸ್ಯಾಮ್‌ಸಂಗ್ ಗ್ಯಾಲಕ್ಸಿ A15 5G ಫೋನ್ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 2340 x 1080 ಪಿಕ್ಸೆಲ್ ರೆಸಲ್ಯೂಶನ್, 90Hz ರಿಫ್ರೆಶ್ ದರ ಮತ್ತು 800 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ A15 5G ಅನ್ನು ಆಕ್ಟಾಕೋರ್ ಮೀಡಿಯಾಟೆಕ್ ಡೈಮೆನ್ಶನ್ 6100 ಪ್ರೊಸೆಸರ್‌ನೊಂದಿಗೆ ಪರಿಚಯಿಸಿದೆ. ಈ ಫೋನ್ ಒನ್ ಯುಐ 6 ಆಧಾರಿತ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಈ ಫೋನ್ ಆಂಡ್ರಾಯ್ಡ್ ನವೀಕರಣಗಳು ಮತ್ತು ಭದ್ರತಾ ನವೀಕರಣಗಳನ್ನು ಪಡೆಯುತ್ತದೆ.
ಸ್ಟೋರೇಜ್ ಆಯ್ಕೆ
ಈ ಫೋನ್ 8GB RAM + 256GB ಇಂಟರ್ನಲ್ ಸ್ಟೋರೇಜ್ ಆಯ್ಕೆ ಹೊಂದಿದೆ. ಇದು ಮೆಮೊರಿ ವಿಸ್ತರಣೆಯನ್ನು ಸಹ ಬೆಂಬಲಿಸುತ್ತದೆ. ನೀವು, ಮೆಮೊರಿ ಕಾರ್ಡ್ ಅನ್ನು ಬಳಸಲು ಮೈಕ್ರೊ SD ಕಾರ್ಡ್ ಸ್ಲಾಟ್ ಬೆಂಬಲವನ್ನು ಹೊಂದಿದೆ.
ಈ ಸುದ್ದಿ ಓದಿದ್ದೀರಾ?: ಕೇವಲ 6,499 ಸಾಕು! 50MP ಕ್ಯಾಮೆರಾ, ಬಿಗ್ ಬ್ಯಾಟರಿ.. ಅದೂ Samsung ಫೋನ್!
ಕ್ಯಾಮೆರಾ ಸೆಟಪ್
ಸ್ಯಾಮ್‌ಸಂಗ್ ಗ್ಯಾಲಕ್ಸಿ A15 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಜೊತೆಗೆ, 5 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಫೋನ್ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ, ವಿವಿಧ ಕ್ಯಾಮೆರಾ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ A15 5G ಅನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ. ಈ ಮೊಬೈಲ್ ದೀರ್ಘ ಬ್ಯಾಟರಿ ಬ್ಯಾಕಪ್ ನೀಡುತ್ತದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ A15 5G ಮೊಬೈಲ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ 5G, ಬ್ಲೂಟೂತ್ 5.3, ವೈ ಫೈ, ಜಿಎನ್‌ಎಸ್‌ಎಸ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಆಯ್ಕೆಗಳನ್ನು ಒಳಗೊಂಡಿದೆ.


Click it and Unblock the Notifications








