Home
Deal of the day

Samsung: ಅಗ್ಗದ 5G ಫೋನ್ ಬೆಲೆ ಮತ್ತಷ್ಟು ಇಳಿಕೆ; 2,500 ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ಸ್ಯಾಮ್‌ಸಂಗ್‌ ಫೋನ್‌ ಖರೀದಿಸುವವರಿಗೆ ಸಿಹಿ ಸುದ್ದಿ ಇದೆ. ಕಡಿಮೆ ಬಜೆಟ್‌ನಲ್ಲಿ 5G ಸ್ಮಾರ್ಟ್‌ಫೋನ್ ಕೊಳ್ಳಲು ಬಯಸಿದರೆ ನಿಮಗಿದೆ ಸಿಗುತ್ತೆ ಭರ್ಜರಿ ಆಫರ್‌. ಹೌದು, ಸ್ಯಾಮ್‌ಸಂಗ್‌ ಕಂಪನಿಯು ತನ್ನ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 5G (Samsung Galaxy A15 5G) ಫೋನಿನ ಖರೀದಿ ಮೇಲೆ ರಿಯಾಯಿತಿ ಘೋಷಿಸಿದೆ. 2,500 ರೂಪಾಯಿ ಕಡಿಮೆ ಮಾಡಿದೆ. ಅದರಂತೆ, ಈ ಮೊಬೈಲ್‌ ಅನ್ನು ಬಿಡುಗಡೆ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿಸಬಹುದು. ಈ ಫೋನಿನ ಹೊಸ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 5G ಕೈಗೆಟುಕುವ 5G ಸ್ಮಾರ್ಟ್‌ಫೋನ್ ಆಗಿದ್ದು, ಇದು ಹಲವು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ನೀವು 5G ಸಂಪರ್ಕ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ನೀಡುವ ಬಜೆಟ್ ಸ್ನೇಹಿ ಫೋನ್‌ ಹುಡುಕುತ್ತಿದ್ದರೆ, ಇದು ಸೂಕ್ತ ಆಯ್ಕೆಯಾಗಿದೆ. ಈ ಮೊಬೈಲ್ ಡೈಮೆನ್ಶನ್ 6100 ಪ್ಲಸ್ ಚಿಪ್‌ಸೆಟ್, 50 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ, 5000mAh ಬ್ಯಾಟರಿ, 256 GB ವರೆಗಿನ ಸ್ಟೋರೇಜ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Samsung: ಅಗ್ಗದ 5G ಫೋನ್ ಬೆಲೆ ಇಳಿಕೆ; 2,500 ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 5G ಫೋನಿನ ಹೊಸ ಬೆಲೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 5G ಮೊಬೈಲ್ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಎಲ್ಲಾ ರೂಪಾಂತರಗಳ ಬೆಲೆ 2,500 ರೂಪಾಯಿ ಇಳಿಕೆಯಾಗಿದೆ. ಈ ಫೋನಿನ 6GB RAM + 128GB ಸ್ಟೋರೇಜ್‌ ರೂಪಾಂತರವನ್ನು 17,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಇದನ್ನು ಕೇವಲ 15,499 ರೂ.ಗಳಲ್ಲಿ ಖರೀದಿಸಬಹುದು. 8GB RAM + 128GB ಸ್ಟೋರೇಜ್‌ ರೂಪಾಂತರವನ್ನು 19,499 ರೂ.ಗೆ ಪ್ರಾರಂಭಿಸಲಾಗಿತ್ತು. ಇದೀಗ, ರಿಯಾಯಿತಿಯೊಂದಿಗೆ 16,999 ರೂ.ಗೆ ಲಭ್ಯವಿದೆ.

ಟಾಪ್ ಮಾಡೆಲ್ 8GB RAM + 256GB ಅನ್ನು 22,499 ರೂ.ಗೆ ಲಾಂಚ್ ಮಾಡಲಾಗಿತ್ತು. ಪ್ರಸ್ತುತ ಬೆಲೆ ಕಡಿತದ ನಂತರ ಇದು 19,999 ರೂ.ಗೆ ಲಭ್ಯವಿದೆ. ಬೆಲೆ ಇಳಿಕೆಯ ಜೊತೆಗೆ, ಈ ಫೋನಿನಲ್ಲಿ ಇಎಂಐ ಮತ್ತು ಎಕ್ಸ್‌ಚೇಂಜ್‌ ಆಫರ್‌ಗಳನ್ನು ಸಹ ಪಡೆಯಬಹುದು. ನೀವು ಈ ಫೋನನ್ನು ತಿಳಿ ನೀಲಿ, ನೀಲಿ ಕಪ್ಪು ಮತ್ತು ನೀಲಿ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 5G ಫೋನನ್ನು ನೀವು ಆಫ್‌ಲೈನ್ ಚಿಲ್ಲರೆ ಅಂಗಡಿಗಳು ಮತ್ತು ಆನ್‌ಲೈನ್ ಕಂಪನಿ ವೆಬ್‌ಸೈಟ್‌ನಿಂದ ಖರೀದಿಸಬಹುದು. ಇಲ್ಲಿ ನಿಮಗೆ ಡಿಸ್ಕೌಟ್‌ ಸಿಗುತ್ತದೆ. ಇದರೊಂದಿಗೆ, ಈ ಫೋನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿಯೂ ಲಭ್ಯವಿದೆ. ಆದರೆ, ಇಲ್ಲಿ ಬೆಲೆ ಸ್ವಲ್ಪ ಹೆಚ್ಚಾಗಿದೆ.

Samsung: ಅಗ್ಗದ 5G ಫೋನ್ ಬೆಲೆ ಇಳಿಕೆ; 2,500 ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 5G ಫೋನ್ ಇನ್ಫಿನಿಟಿ U ನಾಚ್‌ನೊಂದಿಗೆ 6.5 ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್, 800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಮತ್ತು 1080 x 2340 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ.

ಪ್ರೊಸೆಸರ್: ಈ ಫೋನ್ ಆಕ್ಟಾ ಕೋರ್ ಡೈಮೆನ್ಶನ್ 6100 ಪ್ಲಸ್‌ ಚಿಪ್‌ಸೆಟ್ ಅನ್ನು ಹೊಂದಿದೆ. ಇದು 8GB RAM + 256GB ಇಂಟರ್ನಲ್ ಸ್ಟೋರೇಜ್‌ ಸೌಲಭ್ಯದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ Android 13 ಆಧಾರಿತ One UI ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಭದ್ರತೆ ಮತ್ತು ಆಂಡ್ರಾಯ್ಡ್ ನವೀಕರಣಗಳನ್ನು ಪಡೆಯಬಹುದು.

ಕ್ಯಾಮೆರಾ: ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 5G ಫೋನ್ LED ಫ್ಲ್ಯಾಷ್‌ನೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲೆನ್ಸ್, 5 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ಬ್ಯಾಟರಿ: ಈ ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 25 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು: ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 5G ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಡ್ಯುಯಲ್ ಸಿಮ್ 5G, ಬ್ಲೂಟೂತ್, ವೈ-ಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್‌ನಂತಹ ಹಲವು ಆಯ್ಕೆಗಳನ್ನು ಒಳಗೊಂಡಿದೆ.

Best Mobiles in India

English summary
Samsung Galaxy A15 5G price cut in India: know availability, offers, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+