Home
Deal of the day

ಒಂದೇ ತಿಂಗಳೊಳಗೆ..! ಮತ್ತೆ ಈ 5G ಫೋನಿನ ಬೆಲೆ ಕುಸಿತ.. 2000 ರಿಯಾಯಿತಿ.. ಯಾವುದು, ಎಷ್ಟಕ್ಕೆ ಸಿಗುತ್ತೆ?

Samsung galaxy A16 5G Price Drop: ಒಂದೇ ತಿಂಗಳೊಳಗೆ ಎರಡನೇ ಬಾರಿ ಬೆಲೆ ಇಳಿಕೆ. ಕಡಿಮೆ ಬೆಲೆಗೆ 128GB ಮತ್ತು 256GB ಸ್ಟೋರೇಜ್ ಹೊಂದಿರುವ 5G ಫೋನನ್ನು ಖರೀದಿಸಬಹುದು. ಹೌದು, ನೀವು 8GB RAM ಹೊಂದಿರುವ ಹೊಸ ಫೋನ್ ಕೊಳ್ಳಲು ಬಯಸಿದರೆ, ಟೆಕ್ ದೈತ್ಯ ಸ್ಯಾಮ್‌ಸಂಗ್ ಉತ್ತಮ ಡೀಲ್‌ ತಂದಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ A16 5G (Samsung Galaxy A16 5G) ಮೊಬೈಲ್ ಅನ್ನು 2 ಸಾವಿರ ರೂ.ಗಳ ಅಗ್ಗದ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕಂಪನಿಯು ಎರಡೂ ರೂಪಾಂತರಗಳ ಖರೀದಿ ಮೇಲೆ ರಿಯಾಯಿತಿ ನೀಡುತ್ತಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A16 ಮೊಬೈಲ್ ಕಡಿಮೆ ದರದಲ್ಲಿ ಲಭ್ಯವಿದ್ದರೂ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳು ಅದ್ಭುತವಾಗಿವೆ. ಇದು ಮೀಡಿಯಾ ಟೆಕ್‌ನ ಡೈಮೆನ್ಸಿಟಿ 6300 ಪ್ರೊಸೆಸರ್‌ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.7 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಜೊತೆಗೆ 256GB ಸ್ಟೋರೇಜ್ ಮತ್ತು 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಮೂಲ ಬೆಲೆ, ಆಫರ್ ಮತ್ತು ಇನ್ನಿತರ ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಮತ್ತೆ ಈ ಫೋನಿನ ಬೆಲೆ ಕುಸಿತ.. 2000 ರಿಯಾಯಿತಿ.. ಯಾವುದು, ಎಷ್ಟಕ್ಕೆ ಸಿಗುತ್ತೆ?

ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G ಬೆಲೆ ಮತ್ತು ಆಫರ್

ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G ಫೋನಿನ 8GB RAM + 128GB ಸ್ಟೋರೇಜ್‌ ಬೆಲೆ 18,999 ರೂ.ಗೆ ಬಿಡುಗಡೆಯಾಗಿತ್ತು. ಪ್ರಸ್ತುತ, ಕಂಪನಿಯು ಈ ರೂಪಾಂತರವನ್ನು 2,000 ರೂ.ಗಳ ಅಗ್ಗದ ದರದಲ್ಲಿ ಮಾರಾಟ ಮಾಡುತ್ತಿದೆ. ನೀವು ಇದನ್ನು ಕೇವಲ 16,999 ರೂ.ಗೆ ಕೊಳ್ಳಬಹುದು. 8GB RAM + 256GB ಸ್ಟೋರೇಜ್ ಹೊಂದಿರುವ ಈ ಫೋನನ್ನು 21,999 ರೂ.ಗೆ ಪರಿಚಯಿಸಲಾಗಿತ್ತು.

ಈ ರೂಪಾಂತರದ ಬೆಲೆಯೂ 2,000 ರೂ. ಕಡಿಮೆ ಆಗಿದೆ. ನೀವು ​​ಈ ರೂಪಾಂತರದ 19,999 ರೂ.ಗೆ ಖರೀದಿಸಬಹುದು. ಈ ರಿಯಾಯಿತಿ ಎಲ್ಲಾ ಗ್ರಾಹಕರಿಗೆ ಲಭ್ಯವಿದೆ. ಇದಕ್ಕೆ ಯಾವುದೇ ಬ್ಯಾಂಕ್ ಕಾರ್ಡ್ ಅಥವಾ ಕೂಪನ್ ಅಗತ್ಯವಿಲ್ಲ. ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಹೊಸ ಬೆಲೆಯೊಂದಿಗೆ ಖರೀದಿಸಬಹುದು. ಈ ಮೊಬೈಲ್ ನೀಲಿ ಕಪ್ಪು, ಗೋಲ್ಡ್ ಮತ್ತು ತಿಳಿ ಹಸಿರು ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

ಮತ್ತೆ ಈ ಫೋನಿನ ಬೆಲೆ ಕುಸಿತ.. 2000 ರಿಯಾಯಿತಿ.. ಯಾವುದು, ಎಷ್ಟಕ್ಕೆ ಸಿಗುತ್ತೆ?

ಸ್ಯಾಮ್‌ಸಂಗ್ ಗ್ಯಾಲಕ್ಸಿ A16 5G ವೈಶಿಷ್ಟ್ಯಗಳು

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A16 5G ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 1080 x 2340 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಬೆಂಬಲ ಪಡೆದಿದೆ. ಇದರೊಂದಿಗೆ 90Hz ರಿಫ್ರೆಶ್ ದರದ ಬೆಂಬಲ ಹೊಂದಿದೆ. ಈ ಸ್ಯಾಮ್‌ಸಂಗ್‌ 5G ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 6300 ಪ್ರೊಸೆಸರ್‌ ಹೊಂದಿದೆ. ವಿಶೇಷವೆಂದರೆ, ಇದೇ ಮೊಬೈಲ್ ಜಾಗತಿಕ ಮಾರುಕಟ್ಟೆಯಲ್ಲಿ Exynos 1330 ಪ್ರೊಸೆಸರ್‌ ಒಳಗೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A16 5G ಮೊಬೈಲ್ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 5 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 13 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಲಭ್ಯವಿದೆ. ಈ ಗ್ಯಾಲಕ್ಸಿ A16 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಈ ಗ್ಯಾಲಕ್ಸಿ 5G ಸ್ಮಾರ್ಟ್‌ಫೋನ್ 8GB RAM ಹೊಂದಿದೆ. ಇದರೊಂದಿಗೆ 128GB ಸ್ಟೋರೇಜ್ ಮತ್ತು 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ. ಇದು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್‌ ಸೌಲಭ್ಯವನ್ನು ಸಹ ಹೊಂದಿದೆ. ನೀವು 1.5TB ವರೆಗೆ ಸ್ಟೋರೇಜ್‌ ವಿಸ್ತರಿಸಬಹುದು., ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಇದು ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ ಡ್ಯುಯಲ್ ಸಿಮ್ 4G ಮತ್ತು 5G, ವೈ-ಫೈ 5, ವೈ-ಫೈ ಡೈರೆಕ್ಟ್, ಬ್ಲೂಟೂತ್ 5.3, ಎನ್‌ಎಫ್‌ಸಿ, ಜಿಪಿಎಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Samsung galaxy A16 5G Gets a Big Price Drop in india: How to get it for under Rs 20,000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+