Home
Deal of the day

5000 ಅಗ್ಗ! ಕಡಿಮೆ ಬೆಲೆಗೆ Samsung 5G ಫೋನ್ ಸೇಲ್; ಆಫರ್‌ ಕೂಡ ಸಿಗುತ್ತೆ

ದಸರಾ ಮತ್ತು ದೀಪಾವಳಿ ಮುಗಿದಿದೆ. ಬಹುತೇಕ ಎಲ್ಲಾ ಆಫರ್‌ಗಳು ಕೊನೆಗೊಂಡಿವೆ. ಹಾಗಂತ, ಹಬ್ಬಕ್ಕೆ ಹೊಸ ಮೊಬೈಲ್ ಖರೀದಿಸಲು ಸಾಧ್ಯವಾಗಲಿಲ್ಲ ಅಂತ ಬೇಜಾರು ಮಾಡಿಕೊಳ್ಳಬೇಡಿ. ನಿಮಗಾಗಿ, ಟೆಕ್ ದೈತ್ಯ ಸ್ಯಾಮ್‌ಸಂಗ್ ತನ್ನ 5G ಫೋನಿನ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಹೌದು, ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ A35 5G (Samsung Galaxy A35 5G) ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ಆಫರ್‌ಗಳನ್ನು ತಿಳಿಯೋಣ.

ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ A35 5G ಫೋನನ್ನು ಎರಡು ಸ್ಟೋರೇಜ್‌ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ. ನೀವು ಆಸ್ಸಮ್ ಐಸ್‌ ಬ್ಲೂ, ಆಸ್ಸಮ್ ಲೈಲಾಕ್ ಹಾಗೂ ಆಸ್ಸಮ್ ನಾವಿ ಬಣ್ಣಗಳ ಆಯ್ಕೆಗಳಲ್ಲಿ ಫೋನನ್ನು ಖರೀದಿಸಬಹುದು. ಇದು Exynos 1380 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ 6.6 ಇಂಚಿನ ಡಿಸ್ಪ್ಲೇ, 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Samsung Galaxy A35 5G ಬೆಲೆ ಇಳಿಕೆ; 5,000 ಡಿಸ್ಕೌಂಟ್ ಲಭ್ಯ.. ಖರೀದಿ ಎಲ್ಲಿ?

ಸ್ಯಾಮ್‌ಸಂಗ್ ಗ್ಯಾಲಕ್ಸಿ A35 5G ಬೆಲೆ ಮತ್ತು ರಿಯಾಯಿತಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ A35 5G ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವನ್ನು 30,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಕಂಪನಿಯು ಇದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ನೀವು, ಕೇವಲ 25,999 ರೂ.ಗೆ ಖರೀದಿಸಬಹುದು. ಈ ಮೂಲಕ 5000 ರೂ.ಗಳ ರಿಯಾಯಿತಿಯ ಲಾಭ ಪಡೆಯಬಹುದು.

ನೀವು, ಯಾವುದೇ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸದೇ ಈ ಡಿಸ್ಕೌಂಟ್‌ ಪಡೆಯಬಹುದು. ಈ ಬೆಲೆ ಇಳಿಕೆಯ ಹೊರತಾಗಿ, ನೀವು 10,000 ರೂ. ಗಿಂತ ಹೆಚ್ಚಿನ ಎಕ್ಸ್‌ಚೇಂಜ್‌ ಆಫರ್‌ ಸಹ ಪಡೆಯಬಹುದು. ಇದಲ್ಲದೆ, ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಮತ್ತು ನೋ ಕಾಸ್ಟ್ ಇಎಂಐ ಸೌಲಭ್ಯ ಕೂಡ ಲಭ್ಯವಿದೆ. ಈ ಡಿಸ್ಕೌಂಟ್‌ಗಳ ಮೂಲಕ ಫೋನನ್ನು ಕಡಿಮೆ ಬೆಲೆಗೆ ಕೊಳ್ಳಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಈ ಎಲ್ಲಾ ಆಫರ್‌ಗಳನ್ನು ಪಡೆಯಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ A35 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಮೊಬೈಲ್ 6.6 ಇಂಚಿನ ಪೂರ್ಣ ಎಚ್‌ಡಿ ಪ್ಲಸ್‌ ಸೂಪರ್‌ ಅಮೊಲೆಡ್‌ ಡಿಸ್ಪ್ಲೇಯನ್ನು ಹೊಂದಿದೆ. ಇದು 2340 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಮತ್ತು 120Hz ರಿಫ್ರೆಶ್‌ ದರದ ಬೆಂಬಲ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಅನ್ನು Exynos 1380 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇದರ ಜೊತೆಗೆ ಮಾಲಿ G68 GPU ಬೆಂಬಲ ಹೊಂದಿದೆ. ಈ ಫೋನ್ ಆಂಡ್ರಾಯ್ಡ್‌ 14 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಮೊಬೈಲ್‌ನಲ್ಲಿ 8GB RAM ಮತ್ತು 128GB ಸ್ಟೋರೇಜ್‌ ಆಯ್ಕೆ ಲಭ್ಯವಿದೆ.

ಕ್ಯಾಮೆರಾ ಸೆಟಪ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸಲ್‌ ಅಲ್ಟ್ರಾ ವೈಡ್ ಆಂಗಲ್ (ದ್ವಿತೀಯ ಕ್ಯಾಮೆರಾ) ಲಭ್ಯವಿದೆ. ಜೊತೆಗೆ 5 ಮೆಗಾಪಿಕ್ಸಲ್‌ ಮ್ಯಾಕ್ರೋ ಕ್ಯಾಮೆರಾ (ತೃತೀಯ ಕ್ಯಾಮೆರಾ) ಹೊಂದಿವೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 13 ಮೆಗಾಪಿಕ್ಸಲ್‌ ಫ್ರಂಟ್ ಕ್ಯಾಮೆರಾ ಇದೆ. ಮುಖ್ಯ ಕ್ಯಾಮೆರಾ ಆಟೋ ಫೋಕಸ್ ಮತ್ತು 10X ಡಿಜಿಟಲ್ ಜೂಮ್ ಹೊಂದಿದೆ. 4K ವಿಡಿಯೋ ರೆಕಾರ್ಡಿಂಗ್ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಅನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಈ ಫೋನ್ ಇನ್‌ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಸಹ ಹೊಂದಿದೆ. ಇದು ನೀರು ಮತ್ತು ಧೂಳು ನಿರೋಧಕ IP67 ರೇಟಿಂಗ್ ಪಡೆದಿದೆ. ಬೆಲೆ ಕಡಿಮೆ ಎಂಬ ಮಾತ್ರಕ್ಕೆ, ಫೋನಿನ ವೈಶಿಷ್ಟ್ಯಗಳು ಹಾಗೂ ಕಾರ್ಯಕ್ಷಮತೆಯಲ್ಲಿ ಕಂಪನಿ ಯಾವುದೇ ರಾಜಿ ಮಾಡಿಕೊಂಡಿಲ್ಲ.

Best Mobiles in India

English summary
Samsung Galaxy A35 5G available with Rs 5,000 Discount on flipkart: Know offers, price and specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+