Home
Deal of the day

ಇಂಥಾ ಆಫರ್‌ ಬಿಡಬೇಡಿ! 17000 ಉಳಿತಾಯ.. 50MP ಕ್ಯಾಮೆರಾ.. 1TB ಸ್ಟೋರೇಜ್; ಈ Samsung ಫೋನಿಗೆ ಬಿಗ್ ಡಿಸ್ಕೌಂಟ್

ಕಡಿಮೆ ಬೆಲೆಯಲ್ಲಿ ಸ್ಯಾಮ್‌ಸಂಗ್‌ ಪ್ರೀಮಿಯಂ ಮೊಬೈಲ್ ಖರೀದಿಸಲು ಉತ್ತಮ ಅವಕಾಶವಿದೆ. ಕಳೆದ ವರ್ಷ ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G (Samsung Galaxy A54 5G) ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಈ ಸ್ಮಾರ್ಟ್‌ಫೋನ್ ಖರೀದಿ ಮೇಲೆ ದೊಡ್ಡ ರಿಯಾಯಿತಿ ಘೋಷಿಸಲಾಗಿದೆ. ಹೌದು, ನೀವು ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G ಮೊಬೈಲ್ ಖರೀದಿಸಿದರೆ, 17,000 ರೂ.ಗಳ ದೊಡ್ಡ ಉಳಿತಾಯ ಮಾಡಬಹುದು. ಜೊತೆಗೆ ಬ್ಯಾಂಕ್ ಆಫರ್‌, ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಪ್ರಸ್ತುತ, 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ ಭಾರೀ ಇಳಿಕೆಯಾಗಿದೆ. ಈ ಫೋನಿನಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು Exynos 1380 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಮೊಬೈಲ್ 6.4 ಇಂಚಿನ ಡಿಸ್ಪ್ಲೇ ಹೊಂದಿದೆ. ಹಾಗೆಯೇ 5000mAh ಬ್ಯಾಟರಿಯೊಂದಿಗೆ ಬರುತ್ತದೆ. ಈ ಫೋನಿನ ಲಭ್ಯತೆ ಮತ್ತು ಆಫರ್‌ಗಳನ್ನು ತಿಳಿಯಲು ಮುಂದೆ ಓದಿ.

17000 ಉಳಿತಾಯ! 50MP ಕ್ಯಾಮೆರಾ, 1TB ಸ್ಟೋರೇಜ್; ಈ ಫೋನಿಗೆ ಬಿಗ್ ಡಿಸ್ಕೌಂಟ್

ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G ಹೊಸ ಬೆಲೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G ಸ್ಮಾರ್ಟ್‌ಫೋನ್ 8GB RAM + 128GB ಮತ್ತು 8GB RAM + 256GB ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನ 128GB ಸ್ಟೋರೇಜ್ ರೂಪಾಂತರದ ಬೆಲೆ 38,999 ರೂ. ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 40,999 ರೂ. ಇದೆ. ಪ್ರಸ್ತುತ, ನೀವು 256GB ಸ್ಟೋರೇಜ್ ರೂಪಾಂತರವನ್ನು 23,999 ರೂ.ಗೆ ಕೊಳ್ಳಬಹುದು.

ಬರೋಬ್ಬರಿ 17,000 ರೂ. ಉಳಿತಾಯ

ನೀವು ಈ ಫೋನಿನ ಖರೀದಿ ಮೇಲೆ ಬರೋಬ್ಬರಿ 17,000 ರೂ. ರಿಯಾಯಿತಿ ಪಡೆಯಬಹುದು. ಈ ಆಫರ್‌ ಪ್ರಸ್ತುತ, ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಜೊತೆಗೆ ಫ್ಲಿಪ್‌ಕಾರ್ಟ್ ಆಕ್ಸೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ. ವಿಶೇಷವೆಂದರೆ, ಈ ರಿಯಾಯಿತಿ ಗ್ರ್ಯಾಫೈಟ್ ಬಣ್ಣದ ರೂಪಾಂತರದಲ್ಲಿ ಮಾತ್ರ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G ಸ್ಮಾರ್ಟ್‌ಫೋನ್ 6.4 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2,400 x 1,080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇ 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಹೊಂದಿದೆ.

ಪ್ರೊಸೆಸರ್ ಯಾವುದು?

ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G ಮೊಬೈಲ್ Exynos 1380 ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ One UI 5.1 ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಅನ್ನು ರನ್ ಮಾಡುತ್ತದೆ. ನೀವು 5 ವರ್ಷಗಳವರೆಗೆ ಭದ್ರತಾ ನವೀಕರಣ ಮತ್ತು 4 ಆಂಡ್ರಾಯ್ಡ್‌ ಓಎಸ್‌ (Android OS) ನವೀಕರಣಗಳನ್ನು ಪಡೆಯಬಹುದು.

ಸ್ಟೋರೇಜ್ ಆಯ್ಕೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G ಫೋನ್ 8GB RAM ಮತ್ತು 256GB ಸ್ಟೊರೇಜ್ ಆಯ್ಕೆಯೊಂದಿಗೆ ಬರುತ್ತದೆ. ನೀವು ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

17000 ಉಳಿತಾಯ! 50MP ಕ್ಯಾಮೆರಾ, 1TB ಸ್ಟೋರೇಜ್; ಈ ಫೋನಿಗೆ ಬಿಗ್ ಡಿಸ್ಕೌಂಟ್

ಮೂರು ಸೊಗಸಾದ ಕ್ಯಾಮೆರಾಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಶ್ ಲೈಟ್‌ನೊಂದಿಗೆ ಬರುತ್ತದೆ. ಈ ಫೋನಿನಲ್ಲಿ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 12 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.

ಸೂಪರ್ ಬ್ಯಾಟರಿ ಬ್ಯಾಕಪ್

ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡುತ್ತದೆ.

ಇತರೆ ವೈಶಿಷ್ಟ್ಯಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G ಫೋನ್ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP67 ರೇಟಿಂಗ್‌ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, ಬ್ಲೂಟೂತ್ 5.3, ವೈ-ಫೈ 802.11, ಜಿಪಿಎಸ್, ಎ-ಜಿಪಿಎಸ್, ಯುಎಸ್‌ಬಿ ಸಿ ಚಾರ್ಜಿಂಗ್ ಪೋರ್ಟ್, ಡಾಲ್ಬಿ ಅಟ್ಮೋಸ್ ಮತ್ತು ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ.

Best Mobiles in India

English summary
Samsung Galaxy A54 5G available with Rs 17000 discount on Flipkart Sale: check new price, offers, availability, specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+