Home
Deal of the day

ಮಿಡ್‌ರೇಂಜ್ Galaxy A55 5G ಮೇಲೆ ₹16,000 ನೇರ ಭಾರೀ ರಿಯಾಯಿತಿ!

ಹಬ್ಬದ ಸಮಯದ ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮುಗಿದಿದ್ದರೂ, ಇಂದಿಗೈ ಕೆಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಇನ್ನೂ ಆಕರ್ಷಕ ರಿಯಾಯಿತಿಗಳು ಮುಂದುವರಿದಿವೆ. ಅದರಲ್ಲಿ ಇದೀಗ ಹೆಚ್ಚು ಗಮನ ಸೆಳೆಯುತ್ತಿರುವುದು Samsung Galaxy A55 5G ಸ್ಮಾರ್ಟ್‌ಫೋನ್. ಈಗ ಈ ಜನಪ್ರಿಯ ಫೋನ್‌ನ್ನು ಖರೀದಿಸಲು ಬಯಸುವವರು ನೇರವಾಗಿ ₹16,000 ರಿಯಾಯಿತಿಯನ್ನು ಪಡೆಯಬಹುದು. ಅಂದರೆ, ₹39,999 ಬೆಲೆಯ ಈ ಫೋನ್ ಇದೀಗ ಕೇವಲ ₹23,999 ಕ್ಕೆ ಲಭ್ಯವಾಗುತ್ತಿದೆ. ಜೊತೆಗೆ ವಿನಿಮಯ ಕೊಡುಗೆಯು ಸಹ ಲಭ್ಯವಿದೆ.

Samsung Galaxy A55 5G: ಕೊಡುಗೆಗಳು
ಭಾರತದಲ್ಲಿ Samsung Galaxy A55 5G ಸ್ಮಾರ್ಟ್‌ಫೋನ್ ಅನ್ನು ಮೊದಲು ₹39,999 ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಅಮೆಜಾನ್‌ನಲ್ಲಿ ಈಗ ಈ ಫೋನ್‌ (ಅವೆಸಮ್ ಐಸ್‌ಬ್ಲೂ, 8GB RAM, 128GB ಮೆಮೊರಿ ಮಾದರಿ) ಮೇಲೆ ನೇರ ₹16,000 ರಿಯಾಯಿತಿ ದೊರೆಯುತ್ತಿದೆ. ಇದರಿಂದ ಗ್ರಾಹಕರು ₹23,999 ಕ್ಕೆ ಫೋನ್ ಅನ್ನು ಖರೀದಿಸಬಹುದು. ಇದರ ಜೊತೆಗೆ ₹1,164 ರೂ.ಗಳಿಂದ ಆರಂಭವಾಗುವ EMI ಆಯ್ಕೆಗಳು ಹಾಗೂ ನೀವು ನಿಮ್ಮ ಹಳೆಯ ಫೋನ್‌ ಅನ್ನು ಟ್ರೇಡ್-ಇನ್ ಮಾಡಿದರೆ ಹೆಚ್ಚುವರಿ ರಿಯಾಯಿತಿ ಪಡೆಯುವ ಅವಕಾಶವೂ ಇದೆ.

Samsung Galaxy A55 5G: ಖರೀದಿಸಲು ಇದು ಉತ್ತಮ ಸಮಯ.
ನಮ್ಮ ಅಭಿಪ್ರಾಯದಂತೆ, Samsung Galaxy A55 5G ಸ್ಮಾರ್ಟ್‌ಫೋನ್ ಖರೀದಿಸಲು ಇದು ಉತ್ತಮ ಸಮಯ ಎಂದು ಹೇಳಬಹುದು. ಏಕೆಂದರೆ, ಈ Galaxy A55 5G ಫೋನ್ 6.6 ಇಂಚಿನ Full HD+ Super AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಮತ್ತು 1000 ನಿಟ್ಸ್ ಪೀಕ್ ಬ್ರೈಟ್ನೆಸ್ ಬೆಂಬಲಿಸುತ್ತದೆ ಇದರಿಂದ ಪ್ರಮುಖ ಗೇಮಿಂಗ್‌ ಅಥವಾ ವಿಡಿಯೋ ವೀಕ್ಷಣೆಯ ಅನುಭವ ತುಂಬಾ ಸ್ಪಷ್ಟವಾಗಿರುತ್ತದೆ. ಫೋನ್‌ನ ಮೌಲ್ಯವನ್ನು ಹೆಚ್ಚಿಸುವ ಅಂಶವೆಂದರೆ ಇದರ ಮತ್ತೊಂದು ಅಂಶವೆಂದರೆ, ಇದರ ಪ್ರೀಮಿಯಂ ಲುಕ್ ಮತ್ತು ಸ್ಮೂತ್ ಫಿನಿಷ್ ಡಿಸೈನ್.

ಮಿಡ್‌ರೇಂಜ್ Galaxy A55 5G ಮೇಲೆ ₹16,000 ನೇರ ಭಾರೀ ರಿಯಾಯಿತಿ!

ಕಾರ್ಯಕ್ಷಮತೆ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್‌ಗೆ Exynos 1480 ಪ್ರೊಸೆಸರ್ ಶಕ್ತಿ ನೀಡುತ್ತದೆ. ಈ ಫೋನ್‌ನಲ್ಲಿ ಗರಿಷ್ಠ 12GB RAM ಮತ್ತು 256GB ಸ್ಟೋರೇಜ್ ನೀಡಲಾಗಿದೆ. (ಈ ಬೆಲೆ ಕೊಡುಗೆಯು ಅವೆಸಮ್ ಐಸ್‌ಬ್ಲೂ, 8GB RAM, 128GB ಮೆಮೊರಿ ಮಾದರಿಗೆ) ಇದು ಬಹುತೇಕ ಎಲ್ಲಾ ರೀತಿಯ ಅಪ್ಲಿಕೇಶನ್‌ಗಳಿಗೂ ಸುಗಮವಾದ ಕಾರ್ಯಕ್ಷಮತೆ ನೀಡುತ್ತದೆ. ಜೊತೆಗೆ, ಇದರಲ್ಲಿರುವ 5,000mAh ಬ್ಯಾಟರಿಯು ದಿನಪೂರ್ತಿ ಬ್ಯಾಕಪ್ ನೀಡಲು ಸಾಕಷ್ಟು ಸಾಮರ್ಥ್ಯ ಹೊಂದಿದೆ. ಜೊತೆಗೆ 25W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇರುವುದರಿಂದ ಫೋನ್‌ ವೇಗವಾಗಿ ಚಾರ್ಜ್ ಆಗುತ್ತದೆ.

ಕ್ಯಾಮೆರಾ ವಿಭಾಗದಲ್ಲಿಯೂ ಸಹ Galaxy A55 5G ಸ್ಮಾರ್ಟ್‌ಫೋನ್ ಉತ್ತಮ ಮೌಲ್ಯವನ್ನು ತೋರಿಸಿದೆ ಎನ್ನಬಹುದು. ಏಕೆಂದರೆ, ಈ ಫೋನ್ ಹಿಂಭಾಗದಲ್ಲಿ 50MP ಪ್ರಾಥಮಿಕ ಕ್ಯಾಮೆರಾ, 12MP ಅಲ್ಟ್ರಾವೈಡ್ ಲೆನ್ಸ್, ಮತ್ತು 5MP ಮ್ಯಾಕ್ರೋ ಕ್ಯಾಮೆರಾ ಹೊಂದಿದೆ.. ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 32MP ಫ್ರಂಟ್ ಕ್ಯಾಮೆರಾ ಇದೆ. ಇದರಿಂದ ಫೋಟೋಗಳು ಹಾಗೂ ವಿಡಿಯೋ ಕಾಲ್‌ಗಳ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ. ಇದರೊಂದಿಗೆ ಫೋನ್ IP67 ರೇಟಿಂಗ್ ಹೊಂದಿರುವುದರಿಂದ ಧೂಳು ಮತ್ತು ನೀರಿನಿಂದ ರಕ್ಷಣೆ ಸಿಗುತ್ತದೆ. ಈ ದರದಲ್ಲಿ ಇದು ದೊಡ್ಡ ಪ್ಲಸ್ ಪಾಯಿಂಟ್ ಎಂದು ಹೇಳಬಹುದು.

ಒಟ್ಟಾರೆಯಾಗಿ, Samsung Galaxy A55 5G ಪ್ರೀಮಿಯಂ ವಿನ್ಯಾಸ ಮತ್ತು ಉತ್ತಮ ಕ್ಯಾಮೆರಾ ಬಯಸುವವರಿಗೆ ಹೇಳಿಮಾಡಿಸಿದಂತಿದೆ. ₹23,999 ದರದಲ್ಲಿ Samsung Galaxy A55 5G ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯುತ್ತಮ ಆಲ್‌ರೌಂಡ್ ಆಯ್ಕೆಯ ಸ್ಮಾರ್ಟ್‌ಫೋನ್ ಆಗಿದೆ ಎನ್ನಬಹುದು.

Best Mobiles in India

English summary
The Samsung Galaxy A55 5G smartphone, originally introduced in India with a starting price of ₹39,999, is currently available on Amazon with a direct discount of ₹16,000 for the Awesome Ice Blue model, featuring 8GB of RAM and 128GB of storage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+