ಖುಷಿ ಸುದ್ದಿ! Samsung Galaxy A55, Galaxy A35 ಬೆಲೆ ಭಾರೀ ಇಳಿಕೆ; ತುಂಬಾ ಕಡಿಮೆಗೆ ಸಿಗುತ್ತೆ!
Samsung Galaxy A55, Galaxy A35 Price Drop: ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಪ್ರಿಯರಿಗೆ ಇಲ್ಲಿದೆ ಬಂಪರ್ ಸುದ್ದಿ. ಸ್ಯಾಮ್‌ಸಂಗ್ ಎರಡು 5G ಸ್ಮಾರ್ಟ್‌ಫೋನ್ ಬೆಲೆ ದಿಢೀರ್ ಇಳಿಕೆ ಮಾಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A55 ಮತ್ತು ಗ್ಯಾಲಕ್ಸಿ A35 ಬೆಲೆ ಭಾರತದಲ್ಲಿ ಕುಸಿತ ಕಂಡಿದೆ. ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ A55 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ A35 ಬೆಲೆ ಭಾರೀ ಇಳಿಕೆ ಕಂಡಿದೆ. ಗ್ರಾಹಕರು ಈ ಫೋನ್‌ಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಬನ್ನಿ, ಈ ಫೋನಿನ ಬೆಲೆ, ಡಿಸ್ಕೌಂಟ್ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A55 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ A35 5G ಮೊಬೈಲ್‌ಗಳ ದರವನ್ನು ಕ್ರಮವಾಗಿ 6,000 ರೂ. ಮತ್ತು 5,000 ರೂ. ಇಳಿಕೆ ಮಾಡಲಾಗಿದೆ. ಕಂಪನಿಯು ಈ ಆಫರ್ ಅನ್ನು ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಮತ್ತು ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಎಕ್ಸ್‌ಚೇಂಜ್ ಬೋನಸ್ ರೂಪದಲ್ಲಿ ನೀಡುತ್ತಿದೆ. ನೀವು ಈ ಆಫರ್ ಅನ್ನು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್ ಇಲ್ಲವೆ, ಇತರೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಪಡೆದುಕೊಳ್ಳಬಹುದು.

ಡಿಸ್ಕೌಂಟ್‌ನೊಂದಿಗೆ ಈ ಫೋನ್‌ಗಳ ಬೆಲೆ ಎಷ್ಟು?
ಸ್ಯಾಮ್‌ಸಂಗ್ ಕಂಪನಿಯು ಈ ಮೊಬೈಲ್‌ಗಳ ಬೆಲೆ ಇಳಿಕೆ ನಂತರ, ಸ್ಯಾಮ್‌ಸಂಗ್ ಗ್ಯಾಲಕ್ಸಿ A55 5G ಮೊಬೈಲ್ ಅನ್ನು ನೀವು ಆರಂಭಿಕ ಬೆಲೆ 33,999 ರೂ.ಗೆ ಖರೀದಿಸಬಹುದು. ಈ ಮೊಬೈಲ್ ಮೂರು ಬಣ್ಣದಲ್ಲಿ ಲಭ್ಯವಿದ್ದು, ಆವ್‌ಸಮ್ ಲಿಲಾಕ್, ಆವ್‌ಸಮ್ ಐಸ್ ಬ್ಲ್ಯೂ, ಮತ್ತು ಆವ್‌ಸಮ್ ನ್ಯಾವಿ ಕಲರ್‌ನಲ್ಲಿ ಲಭ್ಯವಿರಲಿದೆ.
ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ A35 ಫೋನ್ ಆಫರ್ ಬಳಿಕ 25,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಈ ಫೋನ್ ಆವ್‌ಸಮ್ ಐಸ್ ಬ್ಲ್ಯೂ, ಮತ್ತು ಆವ್‌ಸಮ್ ನ್ಯಾವಿ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಹೆಚ್ಚುವರಿಯಾಗಿ, ಆರು ತಿಂಗಳವರೆಗೆ EMI ಆಯ್ಕೆಗಳು ಲಭ್ಯವಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A55 ಮತ್ತು ಗ್ಯಾಲಕ್ಸಿ A35 5G ವೈಶಿಷ್ಟ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ A55 ಮತ್ತು ಗ್ಯಾಲಕ್ಸಿ A35 5G ಎರಡೂ ಫೋನ್‌ಗಳ ಫೀಚರ್ಸ್ ಬಹುತೇಕ ಒಂದೇ ಆಗಿದೆ. ಇದು 6.6 ಇಂಚಿನ FDH+ ಸೂಪರ್ ಅಮೋಲ್ಡ್ ಡಿಸ್ಪ್ಲೇ ಹೊಂದಿದೆ. 120Hz ಗರಿಷ್ಠ ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. ಜೊತೆಗೆ 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A55 ಸ್ಮಾರ್ಟ್‌ಫೋನ್‌ಎಕ್ಸ್‌ನೋಸ್ 1480 ಪ್ರೊಸೆಸರ್ ಅನ್ನು ಹೊಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A35 ಮೊಬೈಲ್ ಎಕ್ಸಿನೋಸ್ 1380 ಪ್ರೊಸೆಸರ್ ಹೊಂದಿದೆ. ಗ್ಯಾಲಕ್ಸಿ A55 ಸ್ಮಾರ್ಟ್‌ಫೋನ್ 12 GB RAM ಮತ್ತು 256 GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಆದ್ರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ A35 ಸ್ಮಾರ್ಟ್‌ಫೋನ್ 8 GB RAM ಮತ್ತು 256 GB ಇಂಟರ್ನಲ್ ಸ್ಟೋರೇಜ್ ಒಳಗೊಂಡಿದೆ.
ಈ ಫೋನಿನ ಕ್ಯಾಮೆರಾ ಸೆಟಪ್ ಹೇಗಿದೆ?
ಸ್ಯಾಮ್‌ಸಂಗ್ ಗ್ಯಾಲಕ್ಸಿ A55 ಮತ್ತು ಗ್ಯಾಲಕ್ಸಿ A35 5G ಫೋನಿನ ಕ್ಯಾಮೆರಾ ಸೆಟಪ್ ಅದ್ಭುತವಾಗಿದೆ. ಗ್ಯಾಲಕ್ಸಿ A55 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹೊಂದಿದೆ. ಜೊತೆಗೆ 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. 2 ಮೆಗಾಪಿಕ್ಸೆಲ್ ಮ್ಯಾಕ್ರೊ ಕ್ಯಾಮೆರಾ ಅಲ್ಲದೆ, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A35 ಫೋನ್ 50 ಮೆಗಾಪಿಕ್ಸೆಲ್ OIS ಕ್ಯಾಮೆರಾವಿದ್ದು, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಥರ್ಡ್ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A55 ಮತ್ತು ಗ್ಯಾಲಕ್ಸಿ A35 5G ಎರಡೂ ಫೋನ್‌ಗಳು 4 ವರ್ಷಗಳ OS ಅಪ್‌ಗ್ರೇಡ್‌ಗಳು ಮತ್ತು 5 ವರ್ಷಗಳ ಭದ್ರತಾ ನವೀಕರಣಗಳೊಂದಿಗೆ ಲಭ್ಯವಿದೆ. ಸರ್ಕಲ್ ಟು ಸರ್ಚ್ ವೈಶಿಷ್ಟ್ಯವು ಈ ಎರಡೂ ಫೋನ್‌ಗಳಲ್ಲಿ ಲಭ್ಯವಿದೆ. ಗೂಗಲ್ ರೇಂಜ್ ಗ್ಯಾಲಕ್ಸಿ A ಸಿರೀಸ್ ಡಿವೈಸ್ ಮತ್ತು ಗ್ಯಾಲಕ್ಸಿ ಟ್ಯಾಬ್ S9 FE ಸಿರೀಸ್ ಒಳಗೊಂಡಿದೆ. ಬಜೆಟ್ ಬೆಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಮಾಡಲು ಬಯಸುವವರಿಗೆ ಈ ಫೋನ್‌ಗಳು ಉತ್ತಮ ಆಯ್ಕೆಗಳಾಗಿವೆ.


Click it and Unblock the Notifications








