Home
Deal of the day

ಯಾರು ಕೊಡಲ್ಲ..! 50MP ಕ್ಯಾಮೆರಾ.. ಬಿಗ್ ಸ್ಟೋರೇಜ್.. ಜಸ್ಟ್ 6,499ಕ್ಕೆ ಸಿಗುತ್ತೆ.. ಯಾವ ಫೋನ್?

ಸ್ಯಾಮ್‌ಸಂಗ್ ತನ್ನ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ನೀಡಿದೆ. ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F06 (Samsung Galaxy F06) ಫೋನನ್ನು ಬಿಡುಗಡೆ ಮಾಡಿತ್ತು. ಇದನ್ನು ಅಗ್ಗದ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮತ್ತೊಂದೆಡೆ, ತನ್ನ ಹಳೆಯ ಮೊಬೈಲ್‌ ಬೆಲೆಯನ್ನು ದಿಢೀರನೆ ಇಳಿಕೆ ಮಾಡಿದೆ. ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ F05 (Samsung Galaxy F05) ಸ್ಮಾರ್ಟ್‌ಫೋನ್ ಆಕರ್ಷಕ ರಿಯಾಯಿತಿ ಪಡೆದಿದೆ. ಪ್ರಸ್ತುತ, ಈ ಮೊಬೈಲ್ ಫ್ಲಿಪ್‌ಕಾರ್ಟ್‌ನಲ್ಲಿ ಕಡಿಮೆ ಬೆಲೆಗೆ ಖರೀದಿಸಲು ಲಭ್ಯವಿದೆ. ನೀವು ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಫೋನಿನ ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಸ್ಮಾರ್ಟ್‌ಫೋನ್ ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ ಬಂದಿತ್ತು. ಈ ಫೋನಿನ ವಿಶೇಷತೆಗಳೆಂದರೆ, ಇದು ಮೀಡಿಯಾ ಟೆಕ್ ಹೆಲಿಯೊ G85 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್‌ನಲ್ಲಿ 6.7 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರೊಂದಿಗೆ 5000mAh ಬ್ಯಾಟರಿ ಮತ್ತು 25W ವೇಗದ ಚಾರ್ಜಿಂಗ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ವಿನ್ಯಾಸ ಗ್ರಾಹಕರ ಗಮನ ಸೆಳೆದಿದೆ. ಈ ಫೋನಿನ ಮೂಲ ಬೆಲೆ ಮತ್ತು ಹೊಸ ಬೆಲೆಯನ್ನು ತಿಳಿಯೋಣ ಬನ್ನಿ.

ಯಾರು ಕೊಡಲ್ಲ..! 50MP ಕ್ಯಾಮೆರಾ, ಬಗ್ ಸ್ಟೋರೇಜ್.. ಕೇವಲ 6,499.. ಯಾವ ಫೋನ್?

ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ವೈಶಿಷ್ಟ್ಯಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಫೋನಿನ ಡಿಸ್ಪ್ಲೇ

ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಸ್ಮಾರ್ಟ್‌ಫೋನ್ 6.7 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ವಾಟರ್‌ಡ್ರಾಪ್ ನಾಚ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 720 x 1600 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಇದರೊಂದಿಗೆ 60Hz ರಿಫ್ರೆಶ್ ದರದ ಬೆಂಬಲ ಹೊಂದಿದೆ. ಈ ಫೋನ್ ಬ್ರೌಸಿಂಗ್, ಗೇಮಿಂಗ್ ಮತ್ತು ಬಿಂಜ್ ವೀಕ್ಷಣೆಗೆ ಉತ್ತಮ ಆಯ್ಕೆಯಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಫೋನಿನ ಪ್ರೊಸೆಸರ್

ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಮೊಬೈಲ್ ಮೀಡಿಯಾ ಟೆಕ್‌ನ ಹೆಲಿಯೊ G85 ಪ್ರೊಸೆಸರ್‌ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಓಎಸ್‌ ನೊಂದಿಗೆ ಕೆಲಸ ಮಾಡುತ್ತದೆ. ಇದು 2 ವರ್ಷಗಳ ಓಎಸ್‌ ಅಪ್‌ಗ್ರೇಡ್‌ಗಳು ಮತ್ತು 4 ವರ್ಷಗಳ ಭದ್ರತಾ ನವೀಕರಣಗಳೊಂದಿಗೆ ಬರುತ್ತದೆ. ಈ ಮೊಬೈಲ್ 8GB RAM ಹೊಂದಿದೆ. ಜೊತೆಗೆ, 64GB ಆಂತರಿಕ ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಫೋನಿನ ಕ್ಯಾಮೆರಾ

ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲ್ಯಾಶ್ ಹೊಂದಿದೆ. ಹಾಗೆಯೇ ಎರಡನೇ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್ ಲೆನ್ಸ್ (ಸೆನ್ಸಿಂಗ್) ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಇದೆ.

ಯಾರು ಕೊಡಲ್ಲ..! 50MP ಕ್ಯಾಮೆರಾ, ಬಗ್ ಸ್ಟೋರೇಜ್.. ಕೇವಲ 6,499.. ಯಾವ ಫೋನ್?

ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಫೋನಿನ ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಈ ಸ್ಯಾಮ್‌ಸಂಗ್ ಫೋನ್ ಭದ್ರತೆಗಾಗಿ ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಹೊಂದಿದೆ. ಹಾಗೆಯೇ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 3.5 ಎಂಎಂ ಆಡಿಯೋ ಜಾಕ್ ಸಹ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್ 5.3, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಪೋರ್ಟ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಹೊಸ ಬೆಲೆ ಮತ್ತು ಆಫರ್

ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಮೊಬೈಲ್ 4GB RAM + 64GB ಸ್ಟೋರೇಜ್ ರೂಪಾಂತರವನ್ನು ಹೊಂದಿದೆ. ಇದನ್ನು 7,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ ಶೇ.35 ರಷ್ಟು ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ನೀವು ಕೇವಲ 6,499 ರೂ.ಗೆ ಖರೀದಿಸಬಹುದು. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಈ ಫೋನ್ ಖರೀದಿಸಿದರೆ, ಶೇ.5 ರಷ್ಟು ಕ್ಯಾಶ್‌ಬ್ಯಾಕ್ ನೀಡಲಾಗುವುದು. ಈ ರಿಯಾಯಿತಿಯೊಂದಿಗೆ ಮತ್ತಷ್ಟು ಅಗ್ಗದ ಬೆಲೆಗೆ ಈ ಸ್ಮಾರ್ಟ್‌ಫೋನ್ ಕೊಳ್ಳಬಹುದು.

Best Mobiles in India

English summary
Samsung Galaxy F05 available with 35 percent discount on Flipkart Sale: check new price, Offers, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+