ಇದು ಸತ್ಯ! ಜಸ್ಟ್ 6999 ರೂ.. 50MP ಕ್ಯಾಮೆರಾ.. 5000mAh ಬ್ಯಾಟರಿ; ಅದೂ Samsung ಫೋನ್!
ಇದು ಸತ್ಯ! ಕೇವಲ 6,999 ರೂ.ಗೆ ಸ್ಯಾಮ್‌ಸಂಗ್ ಫೋನ್. 50 ಮೆಗಾಪಿಕ್ಸೆಲ್ ಕ್ಯಾಮೆರಾ, 6.7 ಇಂಚಿನ ಡಿಸ್ಪ್ಲೇ, 5000mAh ಬ್ಯಾಟರಿ.. ಸ್ಯಾಮ್‌ಸಂಗ್ ಪ್ರಿಯರಿಗೆ ಇದಕ್ಕಿಂತ ಮತ್ತೇನು ಬೇಕು! ಹೌದು, ಟೆಕ್ ದೈತ್ಯ ಸ್ಯಾಮ್‌ಸಂಗ್ ತನ್ನ ಸ್ಯಾಮ್‌ಸಂಗ್ ಗ್ಯಾಲಕ್ಸಿ M05 (Samsung Galaxy M05) ಫೋನಿನ ಬೆಲೆಯನ್ನುಇಳಿಕೆ ಮಾಡಿದೆ. ನೀವು ಈ ಫೋನ್ ಖರೀದಿಸಿದರೆ, ಶೇ.30 ರಷ್ಟು ರಿಯಾಯಿತಿ ಸಿಗುತ್ತದೆ. ಜೊತೆಗೆ, ಹೆಚ್ಚುವರಿಯಾಗಿ 1,000 ಡಿಸ್ಕೌಂಟ್ ಲಭ್ಯವಿದೆ. ಈ ಫೋನಿನ ಹೊಸ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.
10 ಸಾವಿರ ರೂ. ಬಜೆಟ್‌ನಲ್ಲಿ ಬ್ರಾಂಡೆಡ್ ಫೋನ್‌ಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂಬ ದಿನಗಳು ಹೋಗಿವೆ. ಪ್ರಸ್ತುತ, ಸ್ಯಾಮ್‌ಸಂಗ್ ಕಂಪನಿಯ ಫೋನ್ ಕೂಡ 10,000 ರೂ. ಬಜೆಟ್‌ನಲ್ಲಿ ಲಭ್ಯವಿದೆ. ಅದರಂತೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಫೋನನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಮೊಬೈಲ್ ಮೀಡಿಯಾಟೆಕ್ ಹೆಲಿಯೊ G85 ಪ್ರೊಸೆಸರ್ ಹೊಂದಿದೆ. ಇದರಲ್ಲಿ 4GB RAM, ಡ್ಯುಯಲ್ ಕ್ಯಾಮೆರಾ ಸೆಟಪ್, ಫೇಸ್ ಅನ್‌ಲಾಕ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಫೋನಿನ ಬೆಲೆ ಮತ್ತು ಆಫರ್‌ಗಳು
ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಫೋನನ್ನು 4GB RAM ಮತ್ತು 64GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 7,999 ರೂ. ಆಗಿದೆ. ಪ್ರಸ್ತುತ, ಕೇವಲ 6,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕಂಪನಿಯು 1,000 ರೂ. ರಿಯಾಯಿತಿ ನೀಡುತ್ತಿದೆ. ಜೊತೆಗೆ, 6,600 ರೂ. ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಪುದೀನ ಹಸಿರು ಬಣ್ಣದಲ್ಲಿ ಲಭ್ಯವಿದೆ. ನೀವು, ಅಮೆಜಾನ್‌ನಲ್ಲಿ ಈ ಫೋನನ್ನು ರಿಯಾಯಿತಿಯೊಂದಿಗೆ ಕೊಳ್ಳಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಮೊಬೈಲ್ 6.7 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 720 × 1600 ಪಿಕ್ಸೆಲ್ ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ದರದ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಫೋನಿನಲ್ಲಿ ಮೀಡಿಯಾಟೆಕ್ ಹೆಲಿಯೊ G85 ಪ್ರೊಸೆಸರ್ ಅಳವಡಿಸಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ OneUI6 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್ ಕಾರ್ಡ್‌ಗಾಗಿ, ಮಾಲಿ G52 ಜಿಪಿಯು ಲಭ್ಯವಿದೆ.
ಸ್ಟೋರೇಜ್ ಆಯ್ಕೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಸ್ಮಾರ್ಟ್‌ಫೋನ್ 4GB RAM + 64GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದು 4GB ವರ್ಚುವಲ್ RAM ಸಹ ಹೊಂದಿದೆ. ಇದರ ಸಹಾಯದಿಂದ 8GB ವರೆಗಿನ ಶಕ್ತಿಯನ್ನು ಬಳಸಬಹುದು. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1 TB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು.
ಕ್ಯಾಮೆರಾ ಸೆಟಪ್
ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ಎಲ್ಇಡಿ ಫ್ಲ್ಯಾಷ್ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಫೋನಿನಲ್ಲಿ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ M05 ಸ್ಮಾರ್ಟ್‌ಫೋನ್ ಸೈಡ್ ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ 4G, ವೈ-ಫೈ, ಬ್ಲೂಟೂತ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








