ಸಂತೋಷದ ಸುದ್ದಿ! ಈ ದುಬಾರಿ ಬೆಲೆಯ Samsung ಫೋನ್.. ಬರೋಬ್ಬರಿ 35,000 ಕಡಿಮೆ!
ಸ್ಯಾಮ್‌ಸಂಗ್ ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಕಳೆದ ವರ್ಷ ಬಿಡುಗಡೆಯಾದ ಸ್ಯಾಮ್‌ಸಂಗ್ (Samsung) ಕಂಪನಿಯ ಬೊಂಬಾಟ್ 5G ಸ್ಮಾರ್ಟ್‌ಫೋನ್ ಬಿಡುಗಡೆಯ ಬೆಲೆಗಿಂತ ಬರೋಬ್ಬರಿ 35,000 ರೂ.ಗಳಷ್ಟು ಕಡಿಮೆಯಾಗಿದೆ. ಹೌದು, ನಾವು ಸ್ಯಾಮ್‌ಸಂಗ್ ಕಂಪನಿಯ 'S' ಸರಣಿಯ ಪ್ರೀಮಿಯಂ ಫೋನ್ ಬಗ್ಗೆ ಹೇಳುತ್ತಿದ್ದೇವೆ. ಇದುವೇ Samsung Galaxy S23 Ultra. ಕಳೆದ ವರ್ಷ ಫೆಬ್ರವರಿಯಲ್ಲಿ ಈ ಫೋನ್ ಅನ್ನು ಬಿಡುಗಡೆ ಮಾಡಲಾಯಿತು. 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ರೂಪಾಂತರದ ಬೆಲೆ ಬಿಡುಗಡೆಯ ಸಮಯದಲ್ಲಿ 1,24,999 ರೂ. ಇತ್ತು. ಈ ಫೋನ್ ಪ್ರಸ್ತುತ Amazon Indiaದಲ್ಲಿ 89,999 ರೂ.ಗೆ ಲಭ್ಯವಿದೆ.
ಹೌದು, ವಿಶ್ವದ ಪ್ರತಿಷ್ಠಿತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಸ್ಯಾಮ್‌ಸಂಗ್, ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದೆ. ಕಂಪನಿಯು ವಿವಿಧ ರೀತಿಯ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಗ್ರಾಹಕರ ಹಾಟ್ ಫೇವರಿಟ್ ಆಗಿವೆ. ಕೆಲವೊಮ್ಮೆ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತದೆ. ಅದರಂತೆ, ಇತ್ತೀಚೆಗೆ ಬಿಡುಗಡೆಯಾಗಿರುವ Samsung Galaxy S23 Ultra ಖರೀದಿಯ ಮೇಲೆ ಶೇ.40 ರಿಯಾಯಿತಿ ಲಭ್ಯವಿದೆ. ಈ ಮೊಬೈಲ್ ಕುರಿತ ಮತ್ತಷ್ಟು ವಿವರಗಳು ಇಲ್ಲಿದೆ ನೋಡಿ.

ಎಕ್ಸ್‌ಚೇಂಜ್ ಆಫರ್‌ನಲ್ಲಿ 59 ಸಾವಿರ ರೂ. ಇಳಿಕೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಅಲ್ಟ್ರಾ ಪ್ರಸ್ತುತ ಲಭ್ಯವಿರುವ ಅತ್ಯುತ್ತಮ ಆಂಡ್ರಾಯ್ಡ್ ಫೋನ್‌ಗಳಲ್ಲಿ ಒಂದಾಗಿದೆ. ನೀವು ಈ ಫೋನ್ ಅನ್ನು 5% ಕ್ಯಾಶ್‌ಬ್ಯಾಕ್‌ನೊಂದಿಗೆ ಖರೀದಿಸಬಹುದು. ಈ ಫೋನ್ ಎಕ್ಸ್‌ಚೇಂಜ್ ಆಫರ್‌ನಲ್ಲಿ 59 ಸಾವಿರ ರೂ.ವರೆಗೆ ಇಳಿಕೆಯಾಗಬಹುದು. ಎಕ್ಸ್‌ಚೇಂಜ್ ಆಫರ್‌ನಲ್ಲಿ ಲಭ್ಯವಿರುವ ಡಿಸ್ಕೌಂಟ್ ನಿಮ್ಮ ಹಳೆಯ ಫೋನ್ ಸ್ಥಿತಿ, ಬ್ರಾಂಡ್ ಮತ್ತು ಕಂಪನಿಯ ವಿನಿಮಯ ನೀತಿಯನ್ನು ಅವಲಂಬಿಸಿರುತ್ತದೆ. ಇತ್ತೀಚಿನ ರಿಯಾಯಿತಿಯೊಂದಿಗೆ, ನೀವು ಇದನ್ನು 90,000 ರೂ.ಗೆ ಈ ಫೋನ್ ನಿಮ್ಮದಾಗಿಸಿಕೊಳ್ಳಬಹುದು.
Amazonನಲ್ಲಿ Samsung Galaxy S23 Ultra ಆಫರ್
- ಅಮೆಜಾನ್‌ನಲ್ಲಿ Samsung Galaxy S23 Ultra ಅನ್ನು ಪ್ರಸ್ತುತ ಬೆಲೆ 1,04,999 ರಿಂದ ಶೇ.40 ರಷ್ಟು ರಿಯಾಯಿತಿಯ ನಂತರ 89,999 ರೂ.ಗೆ ಖರೀದಿಸಬಹುದು.
- ಇದು 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಗೆ. ಇದು ಮೂರು ಬಣ್ಣಗಳಲ್ಲಿ ಲಭ್ಯವಿದೆ - ಹಸಿರು, ಫ್ಯಾಂಟಮ್ ಕಪ್ಪು ಮತ್ತು ಕ್ರೀಮ್.
- Galaxy S23 Ultra 12GB + 512GB ಸ್ಟೋರೇಜ್ ರೂಪಾಂತರದ ಪ್ರಸ್ತುತ ಬೆಲೆ 1,14,999 ರೂ. ಇದು ಶೇ.32 ರಷ್ಟು ಡಿಸ್ಕೌಂಟ್ ನಂತರ 1,10,000 ರೂ.ಗೆ ಲಭ್ಯವಿದೆ.

ಈ ಫೋನ್‌ನ ಫೀಚರ್ಸ್ ಏನು?
ಇದು 6.8-ಇಂಚಿನ ಕ್ವಾಡ್ HD+ ಡೈನಾಮಿಕ್ AMOLED 2X ಇನ್ಫಿನಿಟಿ-O ಡಿಸ್ಪ್ಲೇಯನ್ನು ಹೊಂದಿದೆ. 1 ರಿಂದ 120Hz ವರೆಗೆ ವೇರಿಯಬಲ್ ರಿಫ್ರೆಶ್ ರೇಟ್ ಮತ್ತು 1750 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದು Galaxyಗಾಗಿ Snapdragon 8 Gen 2 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಇನ್-ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಮತ್ತು ಸ್ಯಾಮ್‌ಸಂಗ್‌ನ OneUI 5.1 ನೊಂದಿಗೆ ಆಂಡ್ರಾಯ್ಡ್ 13 ಅನ್ನು ರನ್ ಮಾಡುತ್ತದೆ.
200MP ಮುಖ್ಯ ಕ್ಯಾಮೆರಾ, 12MP ಸೆಲ್ಫಿ ಶೂಟರ್
ಈ ಸ್ಮಾರ್ಟ್‌ಫೋನ್ ಈಗಾಗಲೇ Android 14-ಆಧಾರಿತ One UI 6.1 ಅನ್ನು ಸ್ವೀಕರಿಸಿದೆ. ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಇದು OIS, ಸೂಪರ್ HDR ಮತ್ತು Pixel Enhancer ಜೊತೆಗೆ 200MP ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಜೊತೆಗೆ, 12MP ಅಲ್ಟ್ರಾ-ವೈಡ್ ಕ್ಯಾಮೆರಾ, 3x ಜೂಮ್‌ನೊಂದಿಗೆ 10MP ಟೆಲಿಫೋಟೋ ಲೆನ್ಸ್, 10x ಜೂಮ್‌ನೊಂದಿಗೆ 10MP ಪೆರಿಸ್ಕೋಪ್ ಲೆನ್ಸ್ ಮತ್ತು 3D ToF ಸಂವೇದಕವನ್ನು ಒಳಗೊಂಡಿದೆ.
5000mAh ಬ್ಯಾಟರಿ, 45W ಸ್ಪೀಡ್ ಚಾರ್ಜಿಂಗ್
ಫ್ರಂಟ್ ಕ್ಯಾಮೆರಾವು AI ಆಬ್ಜೆಕ್ಟ್ ಜಾಗೃತಿಯೊಂದಿಗೆ 12MP ಡ್ಯುಯಲ್ ಪಿಕ್ಸೆಲ್ ಸಂವೇದಕವನ್ನು ಹೊಂದಿದೆ. ಇದು VDIS ತಂತ್ರಜ್ಞಾನದೊಂದಿಗೆ 30 fpsನಲ್ಲಿ 8K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೇ, UWB ಸಾಮರ್ಥ್ಯ, IP68 ರೇಟಿಂಗ್, 45W ವೇಗದ ಚಾರ್ಜಿಂಗ್ ಜೊತೆಗೆ 5000mAh ಬ್ಯಾಟರಿಯನ್ನು ಹೊಂದಿದೆ. ವೈರ್‌ಲೆಸ್ ಚಾರ್ಜಿಂಗ್, ಅಂತರ್ನಿರ್ಮಿತ S ಪೆನ್ ಸ್ಟೈಲಸ್ ಅನ್ನು ಸೇರಿಸಲಾಗಿದೆ. ಇದನ್ನು ಆರ್ಮರ್ ಅಲ್ಯೂಮಿನಿಯಂ ಫ್ರೇಮ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2ನೊಂದಿಗೆ ವಿನ್ಯಾಸಗೊಳಿಸಲಾಗಿದೆ.


Click it and Unblock the Notifications








