Home
Deal of the day

20,000 ಬೆಲೆ ಕಡಿತ! 512GB ಸ್ಟೋರೇಜ್.. ಮೂರು ಕ್ಯಾಮೆರಾಗಳು.. 40% ಡಿಸ್ಕೌಂಟ್.. ಯಾವ ಫೋನ್?

ಸ್ಯಾಮ್‌ಸಂಗ್ ಪ್ರಿಯರ ಮೆಚ್ಚಿನ ಫೋನ್‌ ಬಂಪರ್ ಆಫರ್‌ನಲ್ಲಿ ಮಾರಾಟವಾಗುತ್ತಿದೆ. ಈ ಫೋನ್‌ ಖರೀದಿ ಮೇಲೆ ಬರೋಬ್ಬರಿ 20,000 ರೂ. ಉಳಿತಾಯ ಮಾಡಬಹುದು. ಹೌದು, ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ (Samsung Galaxy S24+) ಭಾರೀ ಇಳಿಕೆಯಾಗಿದೆ. ಶೇ.40 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಈ ಆಫರ್‌ ಪಡೆಯಲು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಅಗತ್ಯವಿಲ್ಲ. ನೀವು ನೇರವಾಗಿ ಈ ಮೊಬೈಲ್ ಖರೀದಿಸಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್‌ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 6.7 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಇದು Exynos 2400 Deca Core ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ RAM + 512GB ಸ್ಟೋರೇಜ್, 4900mAh ಬ್ಯಾಟರಿ ಮತ್ತು 25W ವೇಗದ ಚಾರ್ಜಿಂಗ್ ಒಳಗೊಂಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಯಾವೆಲ್ಲಾ ಆಫರ್‌ಗಳು ಲಭ್ಯವಿದೆ ಎಂದು ತಿಳಿಯಲು ಮುಂದೆ ಓದಿ.

Samsung: ಈ ದೈತ್ಯ ಫೋನಿನ ಬೆಲೆ ಇಳಿಕೆ! 40% ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್‌ ಸ್ಮಾರ್ಟ್‌ಫೋನ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 3120 x 1440 ಪಿಕ್ಸೆಲ್‌ ರೆಸಲ್ಯೂಶನ್‌, 120Hz ರಿಫ್ರೆಶ್ ದರ ಮತ್ತು 2600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಯಾವುದು?

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ ಮೊಬೈಲ್ Exynos 2400 Deca Core ಪ್ರೊಸೆಸರ್‌ ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ, Xclipse 940 ಜಿಪಿಯು ಸಹ ಹೊಂದಿದೆ. ಈ ಸ್ಯಾಮ್ಸಂಗ್ ಫೋನ್ ಆಂಡ್ರಾಯ್ಡ್‌ ಆಧಾರಿತ One UI 6.1 ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 12GB RAM + 256GB ಸ್ಟೋರೇಜ್ ರೂಪಾಂತರ ಮತ್ತು 12GB RAM + 512GB ಸ್ಟೋರೇಜ್ ರೂಪಾಂತರದಲ್ಲಿ ಮಾರಾಟವಾಗುತ್ತಿದೆ.

ಟ್ರಿಪಲ್ ಕ್ಯಾಮೆರಾ ಸೆಟಪ್

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 12 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 10 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ. ಇದು 8K ವಿಡಿಯೋ ರೆಕಾರ್ಡಿಂಗ್ ಮತ್ತು 3X ಆಪ್ಟಿಕಲ್ ಝೂಮಿಂಗ್ ಸಪೋರ್ಟ್‌ ಪಡೆದಿದೆ.

Samsung: ಈ ದೈತ್ಯ ಫೋನಿನ ಬೆಲೆ ಇಳಿಕೆ! 40% ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ಅದ್ಭುತ ಬ್ಯಾಟರಿ ಬ್ಯಾಕಪ್

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ ಸ್ಮಾರ್ಟ್‌ಫೋನ್ 4900mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್‌ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು ಗ್ಯಾಲಕ್ಸಿ ಎಐ (Galaxy AI) ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, 4G VoLTE, ವೈ-ಫೈ 7, ಬ್ಲೂಟೂತ್ 5.3, ಜಿಪಿಎಸ್‌ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ ಬೆಲೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್‌ ಫೋನನ್ನು 79,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ನೀವು 59,999 ರೂ.ಗೆ ಖರೀದಿ ಮಾಡಬಹುದು. ಈ ಫೋನ್‌ ಖರೀದಿ ಮೇಲೆ ಬರೋಬ್ಬರಿ 20,000 ರೂ. ರಿಯಾಯಿತಿ ಲಭ್ಯವಿದೆ. ಈ ಆಫರ್‌ನ ಲಾಭ ಪಡೆಯಲು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಅಗತ್ಯವಿಲ್ಲ. ನೀವು ಫ್ಲಿಪ್‌ಕಾರ್ಟ್‌ನಲ್ಲಿ ನೇರವಾಗಿ ರಿಯಾಯಿತಿ ದರದಲ್ಲಿ ಈ ಮೊಬೈಲ್ ಕೊಳ್ಳಬಹುದು. ಇದು ಓನಿಕ್ಸ್ ಬ್ಲ್ಯಾಕ್ ಮತ್ತು ಕೋಬಾಲ್ಟ್ ವೈಲೆಟ್ ಬಣ್ಣಗಳಲ್ಲಿ ಬರುತ್ತದೆ.

Best Mobiles in India

English summary
Samsung Galaxy S24 Plus gets 40% discount in Flipkart Monumental Sale: Check new price, specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+