Home
Deal of the day

Samsung: 99,999 ರೂ.ಗಳ ಫೋನ್.. ಅರ್ಧದಷ್ಟು ಬೆಲೆಗೆ ಲಭ್ಯ.. ಹೊಸ ಬೆಲೆ ಎಷ್ಟು? ಎಲ್ಲಿ ಖರೀದಿಸಬೇಕು?

ಸ್ಯಾಮ್‌ಸಂಗ್ ತನ್ನ ದೈತ್ಯ ಫೋನಿನ ಬೆಲೆಯನ್ನು ಭಾರೀ ಇಳಿಕೆ ಮಾಡಿದೆ. ನೀವು ಈ ಸೊಗಸಾದ ಮೊಬೈಲ್ ಅನ್ನು ಬಿಡುಗಡೆ ಬೆಲೆಗಿಂತ ಅರ್ಧದಷ್ಟು ಅಗ್ಗವಾಗಿ ಖರೀದಿಸಬಹುದು. ಹೌದು, ಪ್ರಸ್ತುತ ಸ್ಯಾಮ್‌ಸಂಗ್ ಗ್ಯಾಲಕ್ಸಿ S24+ (Samsung Galaxy S24+) ಮೊಬೈಲ್ ಭಾರೀ ರಿಯಾಯಿತಿ ದರದೊಂದಿಗೆ (Samsung Galaxy S24+ Price Drop) ಮಾರಾಟವಾಗುತ್ತಿದೆ. ಇದು ಫೋನಿನ ಮೂಲ ಬೆಲೆಯ ಅರ್ಧದಷ್ಟು ಎನ್ನುವುದು ವಿಶೇಷ. ಈ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 52,999 ರೂ.ಗೆ ಪಟ್ಟಿ ಮಾಡಲಾಗಿದೆ. ಇದು ಬರೋಬ್ಬರಿ ಒಂದು ಲಕ್ಷ ರೂ. ಬೆಲೆಗೆ ಬಿಡುಗಡೆಯಾಗಿತ್ತು. ಬನ್ನಿ, ಈ ಫೋನಿನ ಮೂಲ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24+ ಸ್ಮಾರ್ಟ್‌ಫೋನ್ ಓನಿಕ್ಸ್ ಬ್ಲಾಕ್ ಮತ್ತು ಕೋಬಾಲ್ಟ್ ವೈಲೆಟ್ ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ. ಈ ಸ್ಯಾಮ್‌ಸಂಗ್ ಫೋನಿನ ವಿಶೇಷತೆಗಳೆಂದರೆ, ಇದು Exynos 2400 Deca Core ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಮೊಬೈಲ್ 6.7 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರೊಂದಿಗೆ 12GB RAM + 512GB ಸ್ಟೋರೇಜ್, 4900mAh ಬ್ಯಾಟರಿ ಮತ್ತು 25W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ಒಂದು ಲಕ್ಷದ ಸ್ಮಾರ್ಟ್‌ಫೋನ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಮಾರಾಟವಾಗುತ್ತಿದೆ.

Samsung: 99,999 ರೂ.ನ ಫೋನ್.. ಅರ್ಧದಷ್ಟು ಬೆಲೆಗೆ ಲಭ್ಯ.. ಹೊಸ ಬೆಲೆ ಎಷ್ಟು?

ಸ್ಯಾಮ್‌ಸಂಗ್ ಗ್ಯಾಲಕ್ಸಿ S24+ ಹೊಸ ಬೆಲೆ ಮತ್ತು ರಿಯಾಯಿತಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ S24+ ಮೊಬೈಲ್‌ನ 12GB + 256GB ಸ್ಟೋರೇಜ್ ರೂಪಾಂತರವು ಫ್ಲಿಪ್‌ಕಾರ್ಟ್‌ನಲ್ಲಿ 52,999 ರೂ.ಗೆ ಲಭ್ಯವಿದೆ. ಇದನ್ನು 99,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಇದಲ್ಲದೆ, 1060 ಬ್ಯಾಂಕ್ ರಿಯಾಯಿತಿ ಲಭ್ಯವಿದೆ. ಇದರ ಮೂಲಕ ಬೆಲೆಯು 51,939 ರೂ.ಗೆ ಇಳಿಕೆಯಾಗುತ್ತದೆ. ನೀವು, ಅಮೆಜಾನ್‌ ಮೂಲಕವೂ ಈ ಮೊಬೈಲ್ ಖರೀದಿಸಬಹುದು. ಇದು ಮೂಲ ಬೆಲೆ 1,09,999 ರೂ.ಗೆ ಬದಲಿಗೆ 65,000 ರೂ.ಗೆ ಲಭ್ಯವಿದೆ. ವಿಶೇಷವೆಂದರೆ, ಹೈ-ಎಂಡ್ 512GB ಆವೃತ್ತಿಯ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿಲ್ಲ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್‌ ಮೊಬೈಲ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 3120 x 1440 ಪಿಕ್ಸೆಲ್‌ ರೆಸಲ್ಯೂಶನ್‌, 120Hz ರಿಫ್ರೆಶ್ ದರ ಮತ್ತು 2600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್‌ ಯಾವುದು

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ ಫೋನ್ Exynos 2400 Deca Core ಪ್ರೊಸೆಸರ್‌ ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ, Xclipse 940 ಜಿಪಿಯು ಸಹ ಹೊಂದಿದೆ. ಈ ಸ್ಯಾಮ್ಸಂಗ್ ಫೋನ್ ಆಂಡ್ರಾಯ್ಡ್‌ ಆಧಾರಿತ One UI 6.1 ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 12GB RAM + 256GB ಸ್ಟೋರೇಜ್ ಮತ್ತು 12GB RAM + 512GB ಸ್ಟೋರೇಜ್ ಆಯ್ಕೆಯಲ್ಲಿ ಮಾರಾಟವಾಗುತ್ತಿದೆ.

ಟ್ರಿಪಲ್ ಕ್ಯಾಮೆರಾ ಸೆಟಪ್

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 12 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 10 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಬ್ಯಾಕಪ್ ಹೇಗಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ ಮೊಬೈಲ್ 4,900mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್‌ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, 4G VoLTE, ವೈ-ಫೈ 7, ಬ್ಲೂಟೂತ್ 5.3, ಜಿಪಿಎಸ್‌ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Samsung Galaxy S24 Plus Now Available at Half of Its Launch Price; Where to Buy?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+