Home
Deal of the day

ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಮೇಲೆ ಭರ್ಜರಿ ರಿಯಾಯಿತಿ!

ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ನ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ S24 ಅಲ್ಟ್ರಾ ಈಗ ಆಕರ್ಷಕ ರಿಯಾಯಿತಿ ದರದಲ್ಲಿ ಲಭ್ಯವಿದೆ. ಪ್ರಮುಖ ಇ-ಕಾಮರ್ಸ್ ವೇದಿಕೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಬಿಡುಗಡೆಯಾದ ಬೆಲೆಗಿಂತಲೂ ಭಾರೀ ಕಡಿಮೆ ದರದಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಈ ವಿಶೇಷ ಕೊಡುಗೆ ಸೀಮಿತ ಅವಧಿಗೆ ಮಾತ್ರ ಇರಬಹುದೆಂದು ನಿರೀಕ್ಷಿಸಲಾಗಿದೆ. ಅಲ್ಲದೆ, ಕಳೆದ ವರ್ಷ ಬಿಡುಗಡೆಯಾದ ಈ ಪ್ರೀಮಿಯಂ ಫೋನ್‌ನ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಲು ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾವು 12GB RAM ಮತ್ತು 256GB ಮಾದರಿಗೆ ಭಾರತದಲ್ಲಿ 1,29,999 ರೂ ಬೆಲೆಯನ್ನು ಹೊಂದಿತ್ತು. ಪ್ರಸ್ತುತ ಅಮೆಜಾನ್‌ನಲ್ಲಿ ಈ ಫೋನ್‌ಗೆ ಬರೋಬ್ಬರಿ ಶೇಕಡಾ 36 ರಷ್ಟು ರಿಯಾಯಿತಿ ಲಭ್ಯವಿದ್ದು, ಕೇವಲ ರೂ. 85,899 ಕ್ಕೆ ಖರೀದಿಸಬಹುದು. ಇದರೊಂದಿಗೆ, ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವ ಗ್ರಾಹಕರಿಗೆ ರೂ. 2,579 ರವರೆಗೆ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿದೆ. ಒಂದು ವೇಳೆ ಗ್ರಾಹಕರು ಒಮ್ಮೆಲೆ ಪೂರ್ಣ ಮೊತ್ತ ಪಾವತಿಸಲು ಇಚ್ಛಿಸದಿದ್ದರೆ, ನೋ ಕಾಸ್ಟ್ EMI ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದು.

ಇತ್ತ ಫ್ಲಿಪ್‌ಕಾರ್ಟ್‌ನಲ್ಲಿಯೂ ಸಹ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್ ಮೇಲೆ ಇದೇ ರೀತಿಯ ಕೊಡುಗೆಯಿದೆ. ಗ್ಯಾಲಕ್ಸಿ S24 ಅಲ್ಟ್ರಾ ಟೈಟಾನಿಯಂ ಕಪ್ಪು ಬಣ್ಣದ ಫೋನ್12GB RAM ಮತ್ತು 256GB ಸಂಗ್ರಹಣೆಯೊಂದಿಗೆ 87,770 ರೂ.ಗೆ ಲಭ್ಯವಿದೆ. ಇದರ ಜೊತೆಗೆ, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ ರೂ. 1,250 ವರೆಗೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ಮತ್ತು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅನಿಯಮಿತ 5 ಪ್ರತಿಶತ ಕ್ಯಾಶ್‌ಬ್ಯಾಕ್ ಲಭ್ಯವಿದೆ. ಗ್ರಾಹಕರು ಸಾಮಾನ್ಯ EMI ಸೌಲಭ್ಯವನ್ನು ಸಹ ಪಡೆಯಬಹುದು.

ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಮೇಲೆ ಭರ್ಜರಿ ರಿಯಾಯಿತಿ!

Samsung Galaxy S24 Ultra ಫೋನ್ ವೈಶಿಷ್ಟ್ಯಗಳು,
Samsung Galaxy S24 Ultra ಸ್ಮಾರ್ಟ್‌ಫೋನ್ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಆಂಡ್ರಾಯ್ಡ್ 15 ಆಧಾರಿತ ಒನ್ UI 7 ನಲ್ಲಿ ಕಾರ್ಯನಿರ್ವಹಿಸುತ್ತದೆ. 1Hz ನಿಂದ 120Hz ವರೆಗಿನ ಅಡಾಪ್ಟಿವ್ ರಿಫ್ರೆಶ್ ದರ ಮತ್ತು 2,600nits ಗರಿಷ್ಠ ಹೊಳಪಿನೊಂದಿಗೆ 6.8-ಇಂಚಿನ ಎಡ್ಜ್ QHD+ ಡೈನಾಮಿಕ್ AMOLED 2X ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಗ್ಯಾಲಕ್ಸಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ನಾಪ್‌ಡ್ರಾಗನ್ 8 Gen 3 ಮೊಬೈಲ್ ಪ್ಲಾಟ್‌ಫಾರ್ಮ್‌ನಿಂದ ಚಾಲಿತವಾಗಿದ್ದು, 12GB RAM ಮತ್ತು 1TB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ.

ಕ್ಯಾಮೆರಾ ವಿಭಾಗದಲ್ಲಿ, Galaxy S24 Ultra ಫೋನಿನ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ನೊಂದಿಗೆ 200-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 120 ಡಿಗ್ರಿ ವೀಕ್ಷಣಾ ಕ್ಷೇತ್ರ ಮತ್ತು f/2.2 ಅಪರ್ಚರ್ ಹೊಂದಿರುವ 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, 5x ಆಪ್ಟಿಕಲ್ ಜೂಮ್ ಮತ್ತು OIS ನೊಂದಿಗೆ 50-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹಾಗೂ 3x ಆಪ್ಟಿಕಲ್ ಜೂಮ್ ಮತ್ತು OIS ಬೆಂಬಲದೊಂದಿಗೆ 10-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಸೇರಿವೆ. ಸೆಲ್ಫಿಗಳಿಗಾಗಿ 12-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಸಹ ನೀಡಲಾಗಿದೆ.'

ಸಂಪರ್ಕ ಆಯ್ಕೆಗಳಲ್ಲಿ, Samsung Galaxy S24 Ultra ಸ್ಮಾರ್ಟ್‌ಫೋನ್ 5G, 4G LTE, Wi-Fi 7, Wi-Fi ಡೈರೆಕ್ಟ್, ಬ್ಲೂಟೂತ್ 5.3 ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದು S ಪೆನ್ ಸ್ಟೈಲಸ್‌ನೊಂದಿಗೆ ಬರುತ್ತದೆ. ಈ ಫೋನ್ 45W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ. ಲೈವ್ ಟ್ರಾನ್ಸ್‌ಲೇಟ್, ಇಂಟರ್‌ಪ್ರಿಟರ್, ಚಾಟ್ ಅಸಿಸ್ಟ್, ನೋಟ್ ಅಸಿಸ್ಟ್, ಟ್ರಾನ್ಸ್‌ಕ್ರಿಪ್ಟ್ ಅಸಿಸ್ಟ್ ಮತ್ತು ಸರ್ಕಲ್ ಟು ಸರ್ಚ್ ವಿತ್ ಗೂಗಲ್‌ನಂತಹ ಜನಪ್ರಿಯ ಗ್ಯಾಲಕ್ಸಿ AI ವೈಶಿಷ್ಟ್ಯಗಳು ಈ ಸ್ಮಾರ್ಟ್‌fಫೋನ್‌ನಲ್ಲಿವೆ.

Best Mobiles in India

English summary
Samsung Galaxy S24 Ultra is now offered at a reduced price on various e-commerce sites in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+