Home
Deal of the day

17,000 ಉಳಿತಾಯ! ಈ ದೈತ್ಯ Samsung ಫೋನಿನ ಬೆಲೆ ದೊಡ್ಡ ಕುಸಿತ.. ಬೊಂಬಾಟ್ ಡಿಸ್ಕೌಂಟ್.. ಭರಪೂರ ಫೀಚರ್ಸ್

ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಸ್ಯಾಮ್‌ಸಂಗ್ ದೊಡ್ಡ ಸಿಹಿಸುದ್ದಿ ತಂದಿದೆ. ಅದರಲ್ಲೂ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫ್ಲಿಪ್ 6 (Samsung Galaxy Z Flip 6) ಫೋನನ್ನು ಖರೀದಿಸಲು ನೀವು ಬಯಸಿದರೆ, ಇದು ಸೂಕ್ತ ಸಮಯವಾಗಿದೆ. ಹೌದು, ಪ್ರಸ್ತುತ ಈ ಫೋಲ್ಡಬಲ್ ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ 15,000 ರೂ.ಗಳ ರಿಯಾಯಿತಿ ದರದೊಂದಿಗೆ ಲಭ್ಯವಿದೆ. ಈ ಆಫರ್‌ ಸ್ಯಾಮ್‌ಸಂಗ್‌ನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದನ್ನು ಬಿಡುಗಡೆ ಬೆಲೆಗಿಂತ ಭಾರೀ ಕಡಿಮೆ ಬೆಲೆಗೆ ಖರೀದಿಸಲು ಉತ್ತಮ ಅವಕಾಶ ಕಲ್ಪಿಸಿದೆ. ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫ್ಲಿಪ್ 6 ಫೋನನ್ನು ಭಾರತದಲ್ಲಿ 1,09,999 ರೂ. ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಈ ಫೋಲ್ಡಬಲ್ ಫೋನ್ ಅಮೆಜಾನ್‌ನಲ್ಲಿ 94,999 ರೂ.ಗೆ ಲಭ್ಯವಿದೆ. ಈ ಆಫರ್‌ ಜೊತೆಗೆ ಅಮೆಜಾನ್, ಆಯ್ದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಪಾವತಿ ಮೇಲೆ 2,000 ರೂ. ವರೆಗೆ ರಿಯಾಯಿತಿ ನೀಡುತ್ತಿದೆ. ನೀವು ಇನ್ನು ಹೆಚ್ಚು ಹಣ ಉಳಿತಾಯ ಸಹ ಮಾಡಬಹುದು. ಇದಕ್ಕಾಗಿ ಕಂಪನಿಯು ಎಕ್ಸ್‌ಚೇಂಜ್‌ ಆಫರ್‌ ಸಹ ನೀಡುತ್ತಿದೆ. ಒಟ್ಟಾರೆಯಾಗಿ, ಈ ಫೋನಿನ ಖರೀದಿ ಮೇಲೆ ನೀವು 17,000 ರೂ.ಗಳ ದೊಡ್ಡ ಉಳಿತಾಯ ಮಾಡಬಹುದು.

Samsung Galaxy Z Flip 6 ಬೆಲೆ ಇಳಿಕೆ; 17,000 ರಿಯಾಯಿತಿ.. ರಾಶಿ ಫೀಚರ್ಸ್

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫ್ಲಿಪ್ 6 ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫ್ಲಿಪ್ 6 ಸ್ಮಾರ್ಟ್‌ಫೋನ್ 6.7 ಇಂಚಿನ ಡೈನಾಮಿಕ್ ಅಮೋಲೆಡ್ 2X ಮುಖ್ಯ ಡಿಸ್ಪ್ಲೇ ಹೊಂದಿದೆ. ಇದು 2640 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಈ ಮೊಬೈಲ್ 60Hz ರಿಫ್ರೆಶ್ ದರ ಮತ್ತು 720 x 748 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ 3.4 ಇಂಚಿನ ಸೂಪರ್ ಅಮೋಲೆಡ್ ಕವರ್ ಡಿಸ್ಪ್ಲೇ ಸಹ ಹೊಂದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಪಡೆದಿದೆ.

ಪ್ರೊಸೆಸರ್‌ ಯಾವುದು?

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫ್ಲಿಪ್ 6 ಮೊಬೈಲ್ 4nm ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 750 ಜಿಪಿಯು ಸಹ ಹೊಂದಿದೆ. ಈ ಫೋನ್ ಆಂಡ್ರಾಯ್ಡ್‌ 14 ಆಧಾರಿತ One UI 6.1.1 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ 12GB RAM ಜೊತೆಗೆ 256GB ಮತ್ತು 512GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ ಸೆಟಪ್ ಹೇಗಿದೆ

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫ್ಲಿಪ್ 6 ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 12 ಮೆಗಾಪಿಕ್ಸೆಲ್ ದ್ವಿತೀಯ (ಅಲ್ಟ್ರಾವೈಡ್ ಲೆನ್ಸ್) ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 10 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ಸೂಪರ್ ಬ್ಯಾಟರಿ

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫ್ಲಿಪ್ 6 ಸ್ಮಾರ್ಟ್‌ಫೋನ್ 4000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು ವೈರ್‌ಲೆಸ್ ಪವರ್‌ಶೇರ್ ರಿವರ್ಸ್ ಚಾರ್ಜಿಂಗ್ ಸಹ ಹೊಂದಿದೆ. ನೀವು ಈ ಫೋನನ್ನು ಸಿಲ್ವರ್ ಶ್ಯಾಡೋ, ಹಳದಿ, ನೀಲಿ ಮತ್ತು ಪುದೀನ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.

ಇತರೆ ವೈಶಿಷ್ಟ್ಯಗಳು

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫ್ಲಿಪ್ 6 ಮೊಬೈಲ್ ಆಟೋ ಜೂಮ್‌ನಂತಹ ಎಐ (AI) ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP48 ರೇಟಿಂಗ್ ಪಡೆದಿದೆ. ಹಾಗೆಯೇ ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, 4G, ವೈ-ಫೈ 6E, ಬ್ಲೂಟೂತ್ 5.3, ಯುಎಸ್‌ಬಿ ಟೈಪ್ ಸಿ, ಎನ್‌ಎಫ್‌ಸಿ ಮತ್ತು ಜಿಪಿಎಸ್‌ ಸೇರಿದಂತೆ ಹಲವು ಸೌಭ್ಯಗಳನ್ನು ಹೊಂದಿದೆ.

Best Mobiles in India

English summary
Samsung Galaxy Z Flip 6 with big Discount on amazon Sale: check new price, offers, availability, specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+