20,000 ಉಳಿತಾಯ! ಈ Samsung ಫೋಲ್ಡಬಲ್ ಬೆಲೆ ಭಾರೀ ಕುಸಿತ.. ಬೆಲೆ ನೋಡಿ
ಸ್ಯಾಮ್‌ಸಂಗ್ ಕಂಪನಿಯ ಫೋಲ್ಡಬಲ್ ಫೋನ್‌ಗಳು ದೇಶೀಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಕಾರಣ, ಮೊಬೈಲ್ ಪ್ರಿಯರು ಸಹ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇನ್ನೂ ಕಂಪನಿಯು ಭಾರೀ ರಿಯಾಯಿತಿ ದರದಲ್ಲಿ ಫೋನ್‌ಗಳನ್ನು ಲಭ್ಯಗೊಳಿಸಿದ್ರೆ, ಯಾರೂ ಈ ಅವಕಾಶ ಕಳೆದುಕೊಳ್ಳುವುದಿಲ್ಲ. ಹೌದು, ಸ್ಯಾಮ್‌ಸಂಗ್ ನಿಮಗಾಗಿ ದೊಡ್ಡ ಆಫರ್ ತಂದಿದೆ. ಕಂಪನಿಯು ತನ್ನ ಪ್ರೀಮಿಯಂ ಫೋಲ್ಡಬಲ್ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 (Samsung Galaxy Z Flip 6) ಮೇಲೆ ವಿಶೇಷ ರಿಯಾಯಿತಿ ಘೋಷಿಸಿದೆ. ಈ ಮೊಬೈಲ್ ಖರೀದಿ ಮೇಲೆ ಬರೋಬ್ಬರಿ 20,000 ರೂ. ಉಳಿತಾಯ ಮಾಡಬಹುದು. ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 ಮೊಬೈಲ್ 1,09,999 ರೂ. ಬೆಲೆಗೆ ಬಿಡುಗಡೆಯಾಗಿತ್ತು. ಪ್ರಸ್ತುತ ಈ ದೈತ್ಯ ಫೋನ್ 89,999 ರೂ.ಗೆ ಮಾರಾಟವಾಗುತ್ತಿದೆಮ ಅಂದರೆ, ಈ ಮೊಬೈಲ್ 20,000 ರೂ.ಗಳ ಭಾರೀ ಡಿಸ್ಕೌಂಟ್‌ನೊಂದಿಗೆ ಲಭ್ಯವಿದೆ. ಇದನ್ನು 2,500 ರೂ.ಗಳ ಇಎಂಐನಲ್ಲಿ ಕೊಳ್ಳಬಹುದು. ಇದು 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 ಫೋನಿನ ರೂಪಾಂತರದ ಬೆಲೆ ಆಗಿದೆ. ಇದಲ್ಲದೆ, ಕಂಪನಿಯು ಈ ಫೋನ್‌ಗೆ 24 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಸಹ ನೀಡುತ್ತಿದೆ. ಇದರಲ್ಲಿ ನೀವು ತಿಂಗಳಿಗೆ ಕೇವಲ 2,500 ರೂ.ಗಳ ಸುಲಭ ಕಂತುಗಳಲ್ಲಿ ಇದನ್ನು ಖರೀದಿಸಬಹುದು.

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫ್ಲಿಪ್ 6 ಫೀಚರ್ಸ್
ದೊಡ್ಡ ಡಿಸ್ಪ್ಲೇ: ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫ್ಲಿಪ್ 6 ಮೊಬೈಲ್ 6.7 ಇಂಚಿನ ಡೈನಾಮಿಕ್ ಅಮೋಲೆಡ್ 2X ಮುಖ್ಯ ಡಿಸ್ಪ್ಲೇ ಹೊಂದಿದೆ. ಇದು 2,640 x 1,080 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಈ ಫೋನ್ 60Hz ರಿಫ್ರೆಶ್ ದರ ಮತ್ತು 720 x 748 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ 3.4 ಇಂಚಿನ ಸೂಪರ್ ಅಮೋಲೆಡ್ ಕವರ್ ಡಿಸ್ಪ್ಲೇ ಸಹ ಇದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಹೊಂದಿದೆ.
ಸ್ನಾಪ್‌ಡ್ರಾಗನ್ ಪ್ರೊಸೆಸರ್: ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫ್ಲಿಪ್ 6 ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ One UI 6.1.1 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 750 ಜಿಪಿಯು ಸಹ ಹೊಂದಿದೆ. ಈ ಫೋನ್ 12GB RAM ಜೊತೆಗೆ 256GB ಮತ್ತು 512GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.
ಡ್ಯುಯಲ್ ಕ್ಯಾಮೆರಾ ಸೆಟಪ್: ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫ್ಲಿಪ್ 6 ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 12 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನಿನಲ್ಲಿ 10 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬೊಂಬಾಟ್ ಬ್ಯಾಟರಿ: ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫ್ಲಿಪ್ 6 ಮೊಬೈಲ್ 4,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು ವೈರ್‌ಲೆಸ್ ಪವರ್‌ಶೇರ್ ರಿವರ್ಸ್ ಚಾರ್ಜಿಂಗ್ ಸಹ ಹೊಂದಿದೆ.
ಇತರೆ ವೈಶಿಷ್ಟ್ಯಗಳು: ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫ್ಲಿಪ್ 6 ಫೋನ್ ಆಟೋ ಜೂಮ್ ಎಐ (AI) ವೈಶಿಷ್ಟ್ಯ ಹೊಂದಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP48 ರೇಟಿಂಗ್ ಪಡೆದಿದೆ. ಜೊತೆಗೆ ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ 5G, 4G, ವೈ-ಫೈ 6E, ಬ್ಲೂಟೂತ್ 5.3, ಯುಎಸ್‌ಬಿ ಟೈಪ್ ಸಿ, ಎನ್‌ಎಫ್‌ಸಿ ಮತ್ತು ಜಿಪಿಎಸ್ ಸೇರಿದಂತೆ ಹಲವು ಸೌಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








