ಖರೀದಿಗೆ ಕ್ಯೂ! ಬರೋಬ್ಬರಿ 1,09,999 ರೂ.ನ ಫೋನ್.. 20,000 ರಿಯಾಯಿತಿ ಘೋಷಣೆ.. ಹೊಸ ಬೆಲೆ ಎಷ್ಟು?
ಸ್ಯಾಮ್‌ಸಂಗ್ ಫೋಲ್ಡಬಲ್ ಪ್ರಿಯರಿಗೆ ಅದ್ಭುತ ಆಫರ್ ಘೋಷಿಸಿದೆ. ಈ ದೈತ್ಯ ಫೋನ್ 20,000 ರೂ.ಗಳ ಭಾರೀ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಹೌದು, ಕಂಪನಿಯು ತನ್ನ ಪ್ರೀಮಿಯಂ ಫೋಲ್ಡಬಲ್ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫ್ಲಿಪ್ 6 5G (Samsung Galaxy Z Flip6 5G) ಬೆಲೆಯನ್ನು ಭಾರೀ ಇಳಿಕೆ ಮಾಡಿದೆ. ಈ ಫೋನಿನ ಎರಡೂ ರೂಪಾಂತರಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಈ ಆಫರ್ ಎಲ್ಲಾ ಡೀಲರ್‌ಗಳಿಗೆ ಮೇ 1 ರಿಂದ ಮೇ 20 ರವರೆಗೆ ಮಾತ್ರ ಲಭ್ಯವಿರುತ್ತದೆ. ಈ ಆಫರ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಫ್ಲಿಪ್ 6 5G ಮೊಬೈಲ್ ಗೇಮಿಂಗ್ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಈ ಫೋನ್ ಸಿಲ್ವರ್ ಶ್ಯಾಡೋ, ಹಳದಿ, ನೀಲಿ ಮತ್ತು ಪುದೀನ ಬಣ್ಣಗಳಲ್ಲಿ ಬರುತ್ತದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಎರಡು ಡಿಸ್ಪ್ಲೇಗಳನ್ನು ಹೊಂದಿದೆ. ಮುಖ್ಯ ಡಿಸ್ಪ್ಲೇ 6.7 ಇಂಚು ಹೊಂದಿದೆ. ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50MP ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದರೊಂದಿಗೆ 4,000mAh ಬ್ಯಾಟರಿ ಮತ್ತು 25W ವೈರ್ಡ್ ಚಾರ್ಜಿಂಗ್ ಸೇರಿದಂತೆ ಹಲವು ವೈಶೀಷ್ಟ್ಯಗಳಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಫ್ಲಿಪ್ 6 ಬೆಲೆ ಮತ್ತು ಆಫರ್‌ಗಳು
12GB + 256GB ಸ್ಟೋರೇಜ್ = 1,09,999 ರೂ.
ಆಫರ್ ಬೆಲೆ = 89,999 ರೂ.
12GB + 512GB ಸ್ಟೋರೇಜ್ = 1,21,999 ರೂ.
ಆಫರ್ ಬೆಲೆ = 1,01,999 ರೂ.
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 5G ಮೊಬೈಲ್ 12GB RAM ಹೊಂದಿರುವ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಪ್ರಸ್ತುತ ಎರಡೂ ರೂಪಾಂತರಗಳ ಖರೀದಿ ಮೇಲೆ 20,000 ರಿಯಾಯಿತಿ ನೀಡಲಾಗುತ್ತಿದೆ. ಈ ಆಫರ್ ಮಾನ್ಯವಾದ ಸ್ಯಾಮ್‌ಸಂಗ್ ಚಾನೆಲ್‌ಗಳಿಂದ ಖರೀದಿಸಿದ ಯೂನಿಟ್‌ಗಳಿಗೆ ಮಾತ್ರ ಲಭ್ಯವಿದೆ. ಡೀಲರ್‌ಗಳ ಸಹಾಯದಿಂದ 20,000 ರೂ.ಗಳ ವಿಶೇಷ ರಿಯಾಯಿತಿ ಲಭ್ಯವಿದೆ. ಇದಲ್ಲದೆ, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸೇರಿದಂತೆ ಇನ್ನಿತರೆ ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ಈ ಫೋನನ್ನು ಆಫರ್‌ಗಳೊಂದಿಗೆ ಇನ್ನೂ ಅಗ್ಗವಾಗಿ ಖರೀದಿಸಬಹುದು. ಈ ಮೊಬೈಲ್ ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 ಸ್ಮಾರ್ಟ್‌ಫೋನ್ ಎರಡು ಡಿಸ್ಪ್ಲೇಗಳನ್ನು ಹೊಂದಿದೆ. ಈ ಫೋನಿನಲ್ಲಿ 6.7 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡೈನಾಮಿಕ್ ಅಮೋಲೆಡ್ ಮುಖ್ಯ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಇನ್ನು, ಕವರ್ ಡಿಸ್ಪ್ಲೇ 3.4 ಇಂಚಿನ ಸೂಪರ್ ಅಮೋಲೆಡ್ ಸ್ಕ್ರೀನ್ ಆಗಿದೆ. ಇದು 60Hz ರಿಫ್ರೆಶ್ ದರದ ಬೆಂಬಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಇದು ಕಾರ್ಯಕ್ಷಮತೆ ಮತ್ತು ದಕ್ಷತೆ ಎರಡರಲ್ಲೂ ಅತ್ಯುತ್ತಮವಾಗಿದೆ. ಈ ಪ್ರೊಸೆಸರ್ ಉನ್ನತ ಮಟ್ಟದ ಕಾರ್ಯಗಳು ಮತ್ತು ಗೇಮಿಂಗ್‌ಗೆ ಸೂಕ್ತವಾಗಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಒನ್ ಯುಐ 6.1.1 ಆಪರೇಟಿಂಗ್ ಸಿಸ್ಟಮ್ ಜೊತೆಗೆ ಕೆಲಸ ನಿರ್ವಹಿಸುತ್ತದೆ. ಈ ಫೋನ್ 12GB RAM ಹೊಂದಿದೆ. ಇದಕ್ಕೆ ಪೂರಕವಾಗಿ 512GB ಆಂತರಿಕ ಸ್ಟೋರೇಜ್ ಲಭ್ಯವಿದೆ.
ಕ್ಯಾಮೆರಾ ಸೆಟಪ್
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ ಬರುತ್ತದೆ. ಇದರೊಂದಿಗೆ 12 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 10 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 25W ವೈರ್ಡ್ ಮತ್ತು ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಬರುತ್ತದೆ.


Click it and Unblock the Notifications








