TECNO: ಈ ದೈತ್ಯ ಫೋನಿನ ಬೆಲೆ ಭಾರೀ ಇಳಿಕೆ: ಕೇವಲ 29,899 ರೂ.! ಖರೀದಿ ಎಲ್ಲಿ?
ಫ್ಲಿಪ್ ಫೋನ್ ಪ್ರಿಯರಿಗೆ ದೊಡ್ಡ ಸಿಹಿ ಸುದ್ದಿ ಇದೆ. ನೀವು ಸ್ಮಾರ್ಟ್‌ಫೋನ್‌ಗಳಿಂದ ದೂರ ಸರಿದು ಫ್ಲಿಪ್ ಮೊಬೈಲ್ ಖರೀದಿಸಲು ಬಯಸಿದರೆ, ನಿಮಗಿದೆ ಸಖತ್ ಆಫರ್. ಹೌದು, ಬಹಳ ಜನರಿಗೆ ಫ್ಲಿಪ್ ಫೋನ್ ಖರೀದಿಸುವ ಆಸೆ ಇರುತ್ತದೆ. ಆದರೆ, ಅನೇಕರಿಗೆ ಇದನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ನೀವು ಸಹ ಇವರಲ್ಲಿ ಒಬ್ಬರಾಗಿದ್ದರೆ, ನಿಮಗಿದು ಸಂತಸದ ಸುದ್ದಿ ಆಗಿದೆ. ಈ ಫ್ಲಿಪ್ ಮೊಬೈಲ್ ಕೇವಲ 29,899 ರೂ.ಗೆ ಲಭ್ಯವಿದೆ. ಜೊತೆಗೆ, ಬ್ಯಾಂಕ್ ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಆಫರ್ ಸಹ ಸಿಗುತ್ತದೆ. ಇಲ್ಲಿಯವರೆಗೆ ಯಾವುದೇ ಫ್ಲಿಪ್ ಸ್ಮಾರ್ಟ್‌ಫೋನ್ ಇಷ್ಟು ಕಡಿಮೆ ಬೆಲೆಗೆ ಮಾರಾಟವಾಗಿಲ್ಲ.
ಹೌದು, ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 5G (TECNO Phantom V Flip 5G) ಫೋನ್ ಅಮೇಜಾನ್‌ನಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ. ಈ ಫೋನ್ ಅನ್ನು ಟೆಕ್ನೋ ಕಂಪನಿಯು ಕಳೆದ ವರ್ಷ ಬಿಡುಗಡೆ ಮಾಡಿದೆ. ಇದು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 6.9 ಇಂಚಿನ ದೊಡ್ಡ ಪ್ರಾಥಮಿಕ ಡಿಸ್ಪ್ಲೇ ಮತ್ತು 1.32 ಇಂಚಿನ ಸೆಕೆಂಡರಿ ಡಿಸ್ಪ್ಲೇಯನ್ನು ಒಳಗೊಂಡಿದೆ. 256GB ವರೆಗಿನ ಸ್ಟೋರೇಜ್, ಮೀಡಿಯಾ ಟೆಕ್ ಡೈಮೆನ್ಷನ್ 8050 ಚಿಪ್‌ಸೆಟ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.

ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 5G ಬೆಲೆ ಮತ್ತು ಆಫರ್‌ಗಳು
ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 5G ಅನ್ನು ಆನ್‌ಲೈನ್ ಶಾಪಿಂಗ್ ಸೈಟ್ ಅಮೇಜಾನ್‌ನಲ್ಲಿ 25,000 ರೂ.ಗಳ ಕೂಪನ್ ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ ಇದರ ಬೆಲೆ 54,899 ರೂ. ಆಗಿದೆ. ಕೂಪನ್ ರಿಯಾಯಿತಿ ಬಳಿಕ, ಇದು ಕೇವಲ 28,999 ರೂ.ಗೆ ಲಭ್ಯವಾಗಲಿದೆ. ಎಸ್‌ಬಿಐ ಬ್ಯಾಂಕ್ ಕ್ರೆಡಿಟ್, ಡೆಬಿಟ್ ಕಾರ್ಡ್ ಇಎಂಐ ಮತ್ತು ಸಾಮಾನ್ಯ ವಹಿವಾಟುಗಳಲ್ಲಿ 1,500 ರೂ. ವರೆಗೆ ರಿಯಾಯಿತಿ ಲಭ್ಯವಿದೆ. ಇದು ಫೋನಿನ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ.
ನೀವು 28,399 ರೂ.ಗೆ ಈ ಫೋನ್ ಖರೀದಿಸಬಹುದು. ನಿಮ್ಮ ಹಳೆಯ ಫೋನ್ ಅನ್ನು ಮಾರಾಟ ಮಾಡುವಾಗ ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 5G ಅನ್ನು ಖರೀದಿಸಿದರೆ, ಕಂಪನಿಯು 18,050 ರೂ.ಗಳ ಎಕ್ಸ್‌ಚೇಂಜ್ ಆಫರ್ ಅನ್ನು ನೀಡುತ್ತದೆ. ಇದು, ನಿಮ್ಮ ಹಳೆಯ ಫೋನಿನ ಸ್ಥಿತಿಗೆ ಅನುಗುಣವಾಗಿರುತ್ತದೆ. ಈ ಆಫರ್‌ಗಳ ಹೊರತಾಗಿ, 3 ರಿಂದ 6 ತಿಂಗಳ ಸುಲಭ ಕಂತುಗಳಲ್ಲಿ ನೋ ಕಾಸ್ಟ್ ಇಎಂಐ ಮೂಲಕ ಫೋನನ್ನು ನಿಮ್ಮದಾಗಿಸಿಕೊಳ್ಳಬಹುದು.
ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 5G ವೈಶಿಷ್ಟ್ಯಗಳು
ಡಿಸ್ಪ್ಲೇ: ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 5G ಮೊಬೈಲ್ 6.9 ಇಂಚಿನ ಎಫ್‌ಹೆಚ್‌ಡಿ ಪ್ಲಸ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ, 1.32 ಇಂಚಿನ ವೃತ್ತಾಕಾರದ AMOLED ಸೆಕೆಂಡರಿ ಡಿಸ್ಪ್ಲೇ ಇದೆ.
ಪ್ರೊಸೆಸರ್: ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8050 ಪ್ರೊಸೆಸರ್ ಅನ್ನು ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ ಮಾಲಿ-ಜಿ 77 ಜಿಪಿಯು ಹೊಂದಿದೆ. ಈ ಮೊಬೈಲ್ 8GB LPDDR4X RAM ಮತ್ತು 256GB ವರೆಗಿನ ಆಂತರಿಕ ಸ್ಟೋರೇಜ್ ಅನ್ನು ಹೊಂದಿದೆ. ಇದು 8GB ವರ್ಚುವಲ್ RAM ಬೆಂಬಲವನ್ನು ಹೊಂದಿದೆ.ಇದು ಆಂಡ್ರಾಯ್ಡ್ 13 ನೊಂದಿಗೆ ಬಂದಿದೆ. ಇದು ಓಎಸ್ ಮತ್ತು ಭದ್ರತಾ ನವೀಕರಣಗಳನ್ನು ಸಹ ಪಡೆಯುತ್ತದೆ.
ಈ ಸುದ್ದಿ ಓದಿದ್ದೀರಾ?: OnePlus: ಈ 5G ಫೋನ್ ಬೆಲೆ ಇಳಿಕೆ: 3,000 ಅಗ್ಗ.. 1,299 ರೂ.ನ ನೆಕ್‌ಬ್ಯಾಂಡ್ ಉಚಿತ!
ಕ್ಯಾಮೆರಾ: ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 5G ಫೋಲ್ಡಬಲ್ ಫೋನ್ 64 ಮೆಗಾಪಿಕ್ಸೆಲ್ RGBW ಪ್ರಾಥಮಿಕ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 5G ಮೊಬೈಲ್ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಬೆಂಬಲ ನೀಡಲಾಗಿದೆ.
ಇತರೆ ವೈಶಿಷ್ಟ್ಯಗಳು: ಈ ಫೋನ್ ಸ್ಟಿರಿಯೊ ಸ್ಪೀಕರ್, ಅಲ್ಟ್ರಾ-ಥಿನ್ ವಿಸಿ ಲಿಕ್ವಿಡ್ ಕೂಲಿಂಗ್, ಎನ್‌ಎಫ್‌ಸಿ, ಡ್ಯುಯಲ್ ಸಿಮ್ 5G, 4G, ವೈಫೈ, ಬ್ಲೂಟೂತ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತದೆ.


Click it and Unblock the Notifications








