Home
Deal of the day

Tecno: ಕೇವಲ 7,749 ರೂ.! 48MP ಕ್ಯಾಮೆರಾ, 5000mAh ಬ್ಯಾಟರಿ.. ಯಾವ ಫೋನ್!

ದೀಪಾವಳಿಗೂ ಮುನ್ನವೇ ಟೆಕ್ನೋ (Tecno) ತನ್ನ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಕಂಪನಿಯು, ಹೊಸ 5G ಫೋನನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ನೀವು, ಕೇವಲ 7,999 ರೂ.ಗೆ ಈ 5G ಮೊಬೈಲ್‌ ಖರೀದಿಸಬಹುದು. ಹೌದು, ಟೆಕ್ನೋ ಪಾಪ್ 9 5G (Tecno Pop 9 5G) ಫೋನಿನ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಈ ಅಗ್ಗದ 5G ಫೋನನ್ನು ಕಳೆದ ತಿಂಗಳು 9,499 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಇದನ್ನು 1,750 ರೂ.ಗಳ ರಿಯಾಯಿತಿಯೊಂದಿಗೆ ಖರೀದಿಸಬಹುದು.

ಟೆಕ್ನೋ ಪಾಪ್ 9 5G ಫೋನನ್ನು ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಫೋನ್ ಡ್ಯುಯಲ್ ರಿಯಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ 48 ಮೆಗಾಪಿಕ್ಸೆಲ್ ಎಐ ಕ್ಯಾಮೆರಾ ಲಭ್ಯವಿದೆ. ಇದು 120Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ, ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಬನ್ನಿ, ಟೆಕ್ನೋ ಪಾಪ್ 9 5G ಫೋನಿನ ಹೊಸ ಬೆಲೆ ಮತ್ತು ಇನ್ನಿತರ ವಿಶೇಷತೆಗಳನ್ನು ತಿಳಿಯೋಣ.

Tecno: ಕೇವಲ 7,749 ರೂ.! 48MP ಕ್ಯಾಮೆರಾ, 5000mAh ಬ್ಯಾಟರಿ.. ಯಾವ ಫೋನ್!

ಟೆಕ್ನೋ ಪಾಪ್ 9 5G ಹೊಸ ಬೆಲೆ ಮತ್ತು ಆಫರ್‌ಗಳು

4GB RAM + 64GB ಸ್ಟೋರೇಜ್ ಬೆಲೆ = 9,499 ರೂ.
ಆಫರ್ ಬೆಲೆ = 7,749 ರೂ.

4GB RAM + 128GB ಸ್ಟೋರೇಜ್ ಬೆಲೆ = 9,999 ರೂ.
ಆಫರ್ ಬೆಲೆ = 8,249 ರೂ.

ಟೆಕ್ನೋ ಪಾಪ್ 9 5G ಫೋನನ್ನು ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಖರೀದಿಸಬಹುದು. ಇದು ಮಿಡ್‌ನೈಟ್ ಶಾಡೋ ಮತ್ತು ಅರೋರಾ ಕ್ಲೌಡ್ ಬಣ್ಣಗಳಲ್ಲಿ ಲಭ್ಯವಿದೆ. ಕಂಪನಿಯು, ದೀಪಾವಳಿಗೂ ಮುನ್ನವೇ ಈ ಫೋನ್ ಖರೀದಿಯ ಮೇಲೆ ಅನೇಕ ಬ್ಯಾಂಕ್ ಆಫರ್‌ಗಳನ್ನು ನೀಡಿದೆ. ಇದರಲ್ಲಿ 1,750 ರೂ.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ಬ್ಯಾಂಕ್ ಆಫ್ ಬರೋಡ ಮತ್ತು ಎಚ್‌ಎಸ್‌ಬಿಸಿ (HSBC) ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳ ಮೇಲೆ 1,750 ರೂ. ರಿಯಾಯಿತಿ ಪಡೆಯಬಹುದು.

ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಇಎಂಐ ವಹಿವಾಟುಗಳ ಮೇಲೆ 1,500 ರೂ. ಡಿಸ್ಕೌಂಟ್ ಲಭ್ಯವಿದೆ. ಬ್ಯಾಂಕ್ ಆಫ್ ಬರೋಡ ಮತ್ತು ಎಚ್‌ಎಸ್‌ಬಿಸಿ (HSBC) ಕ್ರೆಡಿಟ್ ಕಾರ್ಡ್ ಇಎಂಐ ಅಲ್ಲದ ವಹಿವಾಟುಗಳ ಮೇಲೆ 1,250 ರೂ. ಡಿಸ್ಕೌಂಟ್ ನೀಡಲಾಗುತ್ತಿದೆ. ಇಂಡಸ್ಇಂಡ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳ ಮೇಲೆ 1,000 ರೂ. ಡಿಸ್ಕೌಂಟ್ ಮತ್ತು ಇಎಂಐ ಅಲ್ಲದ ವಹಿವಾಟುಗಳ ಮೇಲೆ 750 ರೂ. ರಿಯಾಯಿತಿ ಲಭ್ಯವಿದೆ.

ಇಂಡಸ್ಇಂಡ್ ಬ್ಯಾಂಕ್ ಡೆಬಿಟ್ ಕಾರ್ಡ್ ಇಎಂಐ ಅಲ್ಲದ ವಹಿವಾಟುಗಳ ಮೇಲೆ 500 ರೂ. ಡಿಸ್ಕೌಂಟ್ ಸಿಗುತ್ತದೆ. ಇನ್ನೂ, ಎಚ್‌ಡಿಎಫ್‌ಸಿ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ಎಚ್‌ಎಸ್‌ಬಿಸಿ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ ಹೆಚ್ಚುವರಿ 50 ರೂ. ರಿಯಾಯಿತಿ ನೀಡಲಾಗುತ್ತದೆ. ಅಮೆಜಾನ್ ಪೇ ಯುಪಿಐ (Amazon Pay UPI) ಪಾವತಿ ಮೇಲೆ 75 ರೂ. ಡಿಸ್ಕೌಂಟ್ ಪಡೆಯಬಹುದು. ಅಮೆಜಾನ್‌ನಲ್ಲಿ ಈ ಎಲ್ಲಾ ಆಫರ್‌ಗಳನ್ನು ಪಡೆಯಿರಿ.

ಟೆಕ್ನೋ ಪಾಪ್ 9 5G ಫೋನಿನ ಫೀಚರ್ಸ್‌

ಡಿಸ್ಪ್ಲೇ ವಿವರ

ಟೆಕ್ನೋ ಪಾಪ್ 9 5G ಸ್ಮಾರ್ಟ್‌ಫೋನ್ 6.67 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಈ ಐಪಿಎಸ್‌ ಎಲ್‌ಸಿಡಿ ಡಿಸ್ಪ್ಲೇಯು 120Hz ರಿಫ್ರೆಶ್ ದರದಲ್ಲಿ ಕಾರ್ಯನಿರ್ವಹಿಸುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಈ ಅಗ್ಗದ ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 6300 ಆಕ್ಟಾಕೋರ್ ಪ್ರೊಸೆಸರ್‌ ಹೊಂದಿದೆ. ಇದನ್ನು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ನಲ್ಲಿ ನಿರ್ಮಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 14 ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದು 4GB RAM ನೊಂದಿಗೆ ಬಿಡುಗಡೆಯಾಗಿದೆ. ಇದನ್ನು 64GB ಮತ್ತು 128GB ಸ್ಟೋರೇಜ್‌ ಆಯ್ಕೆಯಲ್ಲಿ ಖರೀದಿಸಬಹುದು.

ಕ್ಯಾಮೆರಾ ಸೆಟಪ್

ಟೆಕ್ನೋ ಪಾಪ್ 9 5G ಮೊಬೈಲ್ ಡ್ಯುಯಲ್ ರಿಯಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಫೋನಿನಲ್ಲಿ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು, ಎಲ್ಇಡಿ ಫ್ಲ್ಯಾಷ್ ಮತ್ತು ರಿಂಗ್ ಎಲ್ಇಡಿ ಲೈಟ್‌ ಒಳಗೊಂಡಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತದೆ. ಸೆಲ್ಫಿ ಪ್ರಿಯರಿಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಇದೆ.

ಬ್ಯಾಟರಿ ಬ್ಯಾಕಪ್‌

ಟೆಕ್ನೋ 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ದೊಡ್ಡ ಬ್ಯಾಟರಿಯನ್ನು ವೇಗವಾಗಿ ಚಾರ್ಜ್‌ ಮಾಡಲು, ಇದು 15W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಇತರೆ ವೈಶಿಷ್ಟ್ಯಗಳು

ಟೆಕ್ನೋ ಪಾಪ್ 9 5G ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆಗೆ IP54 ರೇಟಿಂಗ್ ಪಡೆದಿದೆ. ಈ ಮೊಬೈಲ್ ಇನ್‌ಫ್ರಾರೆಡ್ ಸೆನ್ಸಾರ್ ಹೊಂದಿದ್ದು, ಟಿವಿ ರಿಮೋಟ್ ಆಗಿಯೂ ಕೆಲಸ ಮಾಡುತ್ತದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಡ್ಯುಯಲ್ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, ಡ್ಯುಯಲ್ ಸಿಮ್ 5G, ವೈ-ಫೈ ಸೇರಿದಂತೆ ಮುಂತಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Tecno POP 9 5G Available under 8000 price With discount offer on amazon: know price, offers, availability, Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+