ಕೇವಲ 9,499 ರೂ.! ಸೋನಿ ಕ್ಯಾಮೆರಾ.. 5000mAh ಬ್ಯಾಟರಿ.. ಈ Tecno ಫೋನಿಗೆ ಭಾರೀ ಆಫರ್
ಅಮೆಜಾನ್ ಗ್ರಾಹಕರಿಗೆ ಇಲ್ಲಿದೆ ಭರ್ಜರಿ ಸಿಹಿಸುದ್ದಿ. ಮೊಬೈಲ್ ಪ್ರಿಯರನ್ನು ಸೆಳೆಯಲು ಒಂದಿಲ್ಲೊಂದು ಆಫರ್ ಅಥವಾ ಡಿಸ್ಕೌಂಟ್ ನೀಡುತ್ತಿದೆ. ಹೌದು, ಪ್ರಸ್ತುತ ಅಮೆಜಾನ್‌ನಲ್ಲಿ ಕೆಲವು ಮೊಬೈಲ್‌ಗಳು ಆಕರ್ಷಕ ರಿಯಾಯಿರಿ ಬೆಲೆಯಲ್ಲಿ ಮಾರಾಟವಾಗುತ್ತಿವೆ. ಆ ಪೈಕಿ ಟೆಕ್ನೋ ಪಾಪ್ 9 5G (Tecno Pop 9 5G) ಮೊಬೈಲ್ ಭಾರೀ ಡಿಸ್ಕೌಂಟ್ ಪಡೆದಿದೆ. ಗ್ರಾಹಕರು ಈ ಅಗ್ಗದ ಫೋನನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಬನ್ನಿ, ಈ ಫೋನಿನ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.
ಟೆಕ್ನೋ ಪಾಪ್ 9 5G ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಇದು ಸ್ಮಾರ್ಟ್‌ಫೋನ್ ಮೂರು ಬಣ್ಣಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನ್ 48 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.67 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 4GB RAM + 128GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 15W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟೆಕ್ನೋ ಪಾಪ್ 9 5G ಬೆಲೆ ಮತ್ತು ಆಫರ್‌ಗಳು
ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಟೆಕ್ನೋ ಪಾಪ್ 9 5G ಫೋನಿನ ಖರೀದಿ ಮೇಲೆ ಶೇ.21 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಕೇವಲ 9,499 ರೂ.ಗೆ ಈ ಮೊಬೈಲ್ ಮಾರಟವಾಗುತ್ತಿದೆ. ಇದು 4GB RAM + 64GB ಸ್ಟೋರೇಜ್ ಬೆಲೆಯಾಗಿದೆ. ಈ ಮೂಲಕ 2,500 ರೂ. ಉಳಿತಾಯ ಮಾಡಬಹುದು. ನೀವು, ಈ ಫೋನನ್ನು ಅರೋರಾ ಕ್ಲೌಡ್, ಅಜುರೆ ಸ್ಕೈ ಮತ್ತು ಮಿಡ್‌ನೈಟ್ ಶಾಡೋ ಬಣ್ಣದಲ್ಲಿ ಖರೀದಿಸಬಹುದು. ಅಮೆಜಾನ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.
ಟೆಕ್ನೋ ಪಾಪ್ 9 5G ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ಟೆಕ್ನೋ ಪಾಪ್ 9 5G ಮೊಬೈಲ್ 6.67 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 1612 x 720 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಪಡೆದಿದೆ.
ಪ್ರೊಸೆಸರ್ ಯಾವುದು?
ಟೆಕ್ನೋ ಪಾಪ್ 9 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ನಲ್ಲಿ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 14 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ.
ಸ್ಟೋರೇಜ್ ಆಯ್ಕೆ
ಟೆಕ್ನೋ ಪಾಪ್ 9 5G ಫೋನ್ 4GB RAM ನೊಂದಿಗೆ ಬಿಡುಗಡೆಯಾಗಿದೆ. ಈ ಫೋನಿನಲ್ಲಿ 64GB ಸ್ಟೋರೇಜ್ ಮತ್ತು 128GB ಸ್ಟೋರೇಜ್ ಆಯ್ಕೆ ಲಭ್ಯವಿದೆ.
ಡ್ಯುಯಲ್ ಕ್ಯಾಮೆರಾ ಸೆಟಪ್
ಟೆಕ್ನೋ ಪಾಪ್ 9 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್ಇಡಿ ಫ್ಲ್ಯಾಶ್ ಮತ್ತು ರಿಂಗ್ ಎಲ್ಇಡಿ ಲೈಟ್ ಒಳಗೊಂಡಿದೆ. ಇದು ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದೊಂದಿಗೆ ಕೆಲಸ ನಿರ್ವಹಿಸುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ದೊಡ್ಡ ಬ್ಯಾಟರಿ
ಟೆಕ್ನೋ ಪಾಪ್ 9 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಟೆಕ್ನೋ ಪಾಪ್ 9 5G ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಇದು ಇನ್‌ಫ್ರಾರೆಡ್ ಸೆನ್ಸಾರ್ ಹೊಂದಿದ್ದು, ಟಿವಿ ರಿಮೋಟ್ ಆಗಿಯೂ ಕೆಲಸ ಮಾಡುತ್ತದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಡ್ಯುಯಲ್ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, ಡ್ಯುಯಲ್ ಸಿಮ್ 5G, ವೈ-ಫೈ, ಬ್ಲೂಟೂತ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








