2500 ಅಗ್ಗ.. 1750 ಡಿಸ್ಕೌಂಟ್.. ಸಸ್ತಾ ಬೆಲೆಗೆ TECNO 5G ಫೋನ್ ಲಭ್ಯ
ಟೆಕ್ನೋ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಇದೆ. ಕಂಪನಿಯು ತನ್ನ 5G ಫೋನಿನ ಬೆಲೆ ಇಳಿಕೆ ಮಾಡಿದೆ. ಹೌದು, ಟೆಕ್ನೋ ಪೋವಾ 5 ಪ್ರೊ 5G (TECNO Pova 5 Pro 5G) ಸ್ಮಾರ್ಟ್‌ಫೋನ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಪ್ರಸ್ತುತ, ಅಮೆಜಾನ್‌ನಲ್ಲಿ 2,500 ರೂ.ಗಳ ರಿಯಾಯಿತಿ, ಬ್ಯಾಂಕ್ ಆಫರ್ ಮತ್ತು ನೋ ಕಾಸ್ಟ್ ಇಎಂಐ ಸೇರಿದಂತೆ ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ನೀವು, ಹೊಸ 5G ಮೊಬೈಲ್ ಖರೀದಿಸಲು ಬಯಸಿದರೆ, ಟೆಕ್ನೋ ಪೋವಾ 5 ಪ್ರೊ ಉತ್ತಮ ಆಯ್ಕೆಯಾಗಿದೆ.
ಕಂಪನಿಯು ಟೆಕ್ನೋ ಪೋವಾ 5 ಪ್ರೊ 5G ಫೋನನ್ನು ಕಳೆದ ವರ್ಷ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 6080 ಆಕ್ಟಾಕೋರ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದರಲ್ಲಿ 6.78 ಇಂಚಿನ ಡಿಸ್ಪ್ಲೇ ಇದೆ. ಜೊತೆಗೆ, 5000mAh ಬ್ಯಾಟರಿ ಮತ್ತು 68W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಟೆಕ್ನೋ ಪೋವಾ 5 ಪ್ರೊ 5G ಬೆಲೆ ಮತ್ತು ಆಫರ್‌ಗಳು
ಟೆಕ್ನೋ ಪೋವಾ 5 ಪ್ರೊ 5G ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಪ್ರಸ್ತುತ, ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರದ ಮೇಲೆ ರಿಯಾಯಿತಿ ಘೋಷಿಸಲಾಗಿದೆ. ನಿಮಗೆ, 1000 ರೂ. ಫ್ಲಾಟ್ ಡಿಸ್ಕೌಂಟ್ ಮತ್ತು 1500 ರೂ. ಕೂಪನ್ ರಿಯಾಯಿತಿ ಸಿಗುತ್ತದೆ. ಡಿಸ್ಕೌಂಟ್ ಬಳಿಕ ಈ ಫೋನನ್ನು ಕೇವಲ 12,499 ರೂ.ಗೆ ಕೊಳ್ಳಬಹುದು. ಫೋನಿನ ಬಿಡುಗಡೆ ಬೆಲೆ 14,999 ರೂ. ಆಗಿದೆ.
ಫೋನಿನ 8GB RAM + 256GB ಸ್ಟೋರೇಜ್ ರೂಪಾಂತರವನ್ನು 15,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಎರಡೂ ರೂಪಾಂತರಗಳ ಮೇಲೆ 1,750 ರೂ. ವರೆಗೆ ಬ್ಯಾಂಕ್ ಡಿಸ್ಕೌಂಟ್ ನೀಡಲಾಗುತ್ತಿದೆ. ಜೊತೆಗೆ, 3 ರಿಂದ 6 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆ ಸಹ ಲಭ್ಯವಿದೆ. 13,200 ರೂ. ವರೆಗೆ ಎಕ್ಸ್‌ಚೇಂಜ್ ಆಫರ್‌ನ ಪ್ರಯೋಜನ ಪಡೆಯಬಹುದು. ಈ ಎಲ್ಲಾ ಆಫರ್‌ಗಳು ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ಲಭ್ಯವಿದೆ.
ಟೆಕ್ನೋ ಪೋವಾ 5 ಪ್ರೊ 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಟೆಕ್ನೋ ಪೋವಾ 5 ಪ್ರೊ 5G ಮೊಬೈಲ್ 6.78 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಟೆಕ್ನೋ ಪೋವಾ 5 ಪ್ರೊ 5G ಫೋನನ್ನು ಮೀಡಿಯಾ ಟೆಕ್ ಡೈಮೆನ್ಶನ್ 6080 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಗ್ರಾಫಿಕ್ಸ್‌ಗಾಗಿ ಮಾಲಿ G57 MC2 ಜಿಪಿಯು ಲಭ್ಯವಿದೆ. ಈ ಫೋನ್ ಆಂಡ್ರಾಯ್ಡ್ 13 ಆಧಾರಿತ HiOS 13.1 ನಲ್ಲಿ ಕೆಲಸ ಮಾಡುತ್ತದೆ.
ಕ್ಯಾಮೆರಾ ಸೆಟಪ್
ಟೆಕ್ನೋ ಪೋವಾ 5 ಪ್ರೊ 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ದ್ವಿತೀಯ ಎಐ (AI) ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಟೆಕ್ನೋ ಪೋವಾ 5 ಪ್ರೊ 5G ಫೋನಿನಲ್ಲಿ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 68W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರ ವೈಶಿಷ್ಟ್ಯಗಳು
ಟೆಕ್ನೋ ಪೋವಾ 5 ಪ್ರೊ 5G ಮೊಬೈಲ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದರೊಂದಿಗೆ ಎನ್‌ಎಫ್‌ಸಿ ಮತ್ತು 3.5 ಎಂಎಂ ಜ್ಯಾಕ್, ಯುಎಸ್‌ಬಿ ಟೈಪ್ ಸಿ ಪೋರ್ಟ್, ಡ್ಯುಯಲ್ ಸಿಮ್ 5G, 4G ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








