ಮನಸೋತ ಗ್ರಾಹಕರು! ಕೇವಲ 10,999 ಸಾಕು.. 108MP ಕ್ಯಾಮೆರಾ ಇರುವ 5G ಫೋನ್.. ಆಫರ್ ಏನಿದೆ?
ಟೆಕ್ನೋ ಕಂಪನಿ ಮತ್ತು ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಒಳ್ಳೆಯ ಸುದ್ದಿ ನೀಡಿದೆ. ಟೆಕ್ನೋ ಫೋನ್‌ಗಳನ್ನು ಅಗ್ಗದ ದರದಲ್ಲಿ ಲಭ್ಯಗೊಳಿಸುತ್ತಿವೆ. ಹೌದು, ಟೆಕ್ನೋ ಸಂಸ್ಥೆಯು ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಜೊತೆಗೆ ಕೈಜೋಡಿಸಿದೆ. ಈ ಪಾಲುದಾರಿಕೆಯ ಅಡಿಯಲ್ಲಿ, ಕಂಪನಿಯ ಫೋನ್‌ಗಳನ್ನು ವೆಬ್‌ಸೈಟ್‌ನಲ್ಲಿ ಅಗ್ಗದ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಅದರಂತೆ ಟೆಕ್ನೋ ಪೋವಾ 6 ನಿಯೋ 5G (TECNO POVA 6 Neo 5G) ಕೂಡ ಫ್ಲಿಪ್‌ಕಾರ್ಟ್‌ನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಫೋನಿನ ಮೂಲ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.
ನೀವು 11,000 ರೂ. ಒಳಗೆ ಹೊಸ ಫೋನ್ ಖರೀದಿಸಲು ಬಯಸಿದರೆ, ಟೆಕ್ನೋ ಪೋವಾ 6 ನಿಯೋ 5G ಉತ್ತಮ ಆಯ್ಕೆಯಾಗಿದೆ. ಈ ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 8GB RAM + 256GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟೆಕ್ನೋ ಪೋವಾ 6 ನಿಯೋ 5G ಹೊಸ ಬೆಲೆ
6GB RAM + 128GB ಸ್ಟೋರೇಜ್ ಬೆಲೆ = 10,999 ರೂ.
8GB RAM + 256GB ಸ್ಟೋರೇಜ್ ಬೆಲೆ = 12,999 ರೂ.
ಫ್ಲಿಪ್‌ಕಾರ್ಟ್‌ನಲ್ಲಿ ಟೆಕ್ನೋ ಪೋವಾ 6 ನಿಯೋ 5G ಫೋನನ್ನು ಕೇವಲ 10,999 ರೂ.ಗೆ ಖರೀದಿಸಬಹುದು. ಈ 5G ಫೋನಿನ 8GB RAM ರೂಪಾಂತರವನ್ನು 12,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಟೆಕ್ನೋ 5G ಮೊಬೈಲ್ ಮಿಡ್‌ನೈಟ್ ಶ್ಯಾಡೋ, ಅಜುರೆ ಸ್ಕೈ ಮತ್ತು ಅರೋರಾ ಕ್ಲೌಡ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಅಮೆಜಾನ್‌ನಲ್ಲಿಯೂ ಸಹ ಈ ಫೋನಿನ ಬೆಲೆ ಇಳಿಕೆಯಾಗಿದೆ.
ಟೆಕ್ನೋ ಪೋವಾ 6 ನಿಯೋ 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ಟೆಕ್ನೋ ಪೋವಾ 6 ನಿಯೋ 5G ಸ್ಮಾರ್ಟ್‌ಫೋನ್ 6.67 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 720 × 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 480 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಪ್ರೊಸೆಸರ್ ಯಾವುದು?
ಟೆಕ್ನೋ ಪೋವಾ 6 ನಿಯೋ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ. ಇದನ್ನು 6 ನ್ಯಾನೋಮೀಟರ್ ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ ಹೈ ಓಎಸ್ 14.5 ನಲ್ಲಿ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ ಇದು, ಮಾಲಿ G57 MC2 ಜಿಪಿಯು ಹೊಂದಿದೆ. ಈ ಸ್ಮಾರ್ಟ್‌ಫೋನ್ 8GB RAM ಮತ್ತು 256GB ಸ್ಟೋರೇಜ್ ಹೊಂದಿದೆ. ನೀವು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1 TB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು.
ಡ್ಯುಯಲ್ ಕ್ಯಾಮೆರಾ ಸೆಟಪ್
ಟೆಕ್ನೋ ಪೋವಾ 6 ನಿಯೋ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ ಎಐ ತಂತ್ರಜ್ಞಾನದೊಂದಿಗೆ ದ್ವಿತೀಯ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.
ಅದ್ಭುತ ಬ್ಯಾಟರಿ ಬ್ಯಾಕಪ್
ಟೆಕ್ನೋ ಪೋವಾ 6 ನಿಯೋ 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಡ್ಯುಯಲ್ ಸಿಮ್ 5G, ವೈ-ಫೈ, ಬ್ಲೂಟೂತ್, ಇನ್ಫ್ರಾರೆಡ್ ಸೆನ್ಸರ್, ಎನ್‌ಎಫ್‌ಸಿ, ಲೈಟ್ ಸೆನ್ಸರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








