Home
Deal of the day

ಜಸ್ಟ್ 9,499 ರೂ.! 50MP ಕ್ಯಾಮೆರಾ.. 5000mAh ಬ್ಯಾಟರಿ.. ಅಗ್ಗದ ಬೆಲೆಗೆ Vivo 5G ಫೋನ್

ಕೇವಲ 9,499 ರೂ.ಗೆ ವಿವೋ 5G ಫೋನ್! ವಿವೋ ಪ್ರಿಯರಿಗೆ ಇಲ್ಲಿದೆ ಬಂಪರ್‌ ಆಫರ್‌. ನೀವು, ಅಗ್ಗದ ಬೆಲೆಯಲ್ಲಿ 50MP ಕ್ಯಾಮೆರಾ, 5000mAh ಬ್ಯಾಟರಿ ಮತ್ತು 128GB ಸ್ಟೋರೇಜ್‌ ಹೊಂದಿರುವ 5G ಮೊಬೈಲ್ ಖರೀದಿಸಬಹುದು. ಹೌದು, ವಿವೋ T3 Lite 5G (Vivo T3 Lite 5G) ಫೋನ್‌ ಆಕರ್ಷಕ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಜೊತೆಗೆ ಬ್ಯಾಂಕ್ ಆಫರ್‌, ಶೇ.10 ರಷ್ಟು ರಿಯಾಯಿತಿ ಮತ್ತು ಎಕ್ಸ್‌ಚೇಂಜ್‌ ಆಫರ್‌ ಸಹ ಲಭ್ಯವಿದೆ. ಬನ್ನಿ, ಈ ಫೋನಿನ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ವಿವೋ T3 Lite 5G ಫೋನನ್ನು ಈ ವರ್ಷದ ಜೂನ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದನ್ನು ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ನೀವು, ವೈಬ್ರೆಂಟ್ ಗ್ರೀನ್ ಮತ್ತು ಮೆಜೆಸ್ಟಿಕ್ ಕಪ್ಪು ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನಿನ ಸ್ಟೈಲಿಶ್ ಲುಕ್, ಬೊಂಬಾಟ್ ಕ್ಯಾಮೆರಾ ಮತ್ತು ಅತ್ಯಾಕರ್ಷಕ ಫೀಚರ್ಸ್‌ಗಳು ಗ್ರಾಹಕರ ಕಣ್ಣು ಕುಕ್ಕುತ್ತಿದೆ. ಇದು ಮೀಡಿಯಾ ಟೆಕ್ ಡೈಮೆನ್ಶನ್ 6300 ಪ್ರೊಸೆಸರ್ ಹೊಂದಿದೆ. ಹಾಗೆಯೇ, 6.56 ಇಂಚಿನ ಡಿಸ್ಪ್ಲೇ, 15W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಕೇವಲ 9,499 ರೂ.! Vivo T3 Lite 5G ಬೆಲೆ ಇಳಿಕೆ; ಡಿಸ್ಕೌಂಟ್ ಎಷ್ಟು?

ವಿವೋ T3 Lite 5G ಫೋನಿನ ಬೆಲೆ ಮತ್ತು ಆಫರ್‌ಗಳು

ವಿವೋ T3 Lite 5G ಫೋನಿನ ಎರಡು ಸ್ಟೋರೇಜ್‌ ರೂಪಾಂತರಗಳ ಮೇಲೆ 1,000 ರೂ. ಫ್ಲಾಟ್ ರಿಯಾಯಿತಿ ಮತ್ತು ಇಎಂಐ ಮೇಲೆ 1,250 ರೂ. (ಶೇ.10) ಡಿಸ್ಕೌಂಟ್ ಲಭ್ಯವಿದೆ. ನೀವು, ಆಫರ್‌ನೊಂದಿಗೆ 4GB RAM + 128GB ಸ್ಟೋರೇಜ್‌ ರೂಪಾಂತರವನ್ನು ಕೇವಲ 9,499 ರೂ.ಗೆ ಖರೀದಿಸಬಹುದು. 6GB RAM + 128GB ಸ್ಟೋರೇಜ್‌ ಆಯ್ಕೆಯು 11,499 ರೂ.ಗೆ ಲಭ್ಯವಿದೆ.

ನೀವು, 3 ತಿಂಗಳ ನೋ ಕಾಸ್ಟ್ ಇಎಂಐ ಮೂಲಕ ಈ ಫೋನ್‌ ಕೊಳ್ಳಬಹುದು. ಜೊತಗೆ 7,150 ರೂ. ವರೆಗೆ ಎಕ್ಸ್‌ಚೇಂಜ್‌ ಆಫರ್‌ ಸಹ ಲಭ್ಯವಿದೆ. ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು. ಈ ಮೊಬೈಲ್ ಕಂಪನಿಯ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿಯೂ ಖರೀದಿಗೆ ಲಭ್ಯವಿದೆ.

ವಿವೋ T3 Lite 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ?

ವಿವೋ T3 Lite 5G ಮೊಬೈಲ್‌ 6.56 ಇಂಚಿನ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ದರ, 1612 x 720 ಪಿಕ್ಸೆಲ್ ರೆಸಲ್ಯೂಶನ್ ಮತ್ತು 840 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.

ಪ್ರೊಸೆಸರ್ ಯಾವುದು?

ಕಂಪನಿಯು ವಿವೋ T3 Lite 5G ಫೋನನ್ನು ಮೀಡಿಯಾ ಟೆಕ್ ಡೈಮೆನ್ಶನ್ 6300 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇದು ಗ್ರಾಫೀಕ್ಸ್‌ಗಾಗಿ, ಆರ್ಮ್ ಮಾಲಿ G57 MC2 ಜಿಪಿಯು ಹೊಂದಿದೆ. ಫೋನಿನಲ್ಲಿ 6GB RAM ಮತ್ತು 128GB ಸ್ಟೋರೇಜ್‌ ಲಭ್ಯವಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ Funtouch ಓಎಸ್‌ 14 ನಲ್ಲಿ ಕೆಲಸ ನಿರ್ವಹಿಸುತ್ತದೆ.

ಕೇವಲ 9,499 ರೂ.! Vivo T3 Lite 5G ಬೆಲೆ ಇಳಿಕೆ; ಡಿಸ್ಕೌಂಟ್ ಎಷ್ಟು?

ಡ್ಯುಯಲ್ ಕ್ಯಾಮೆರಾ

ವಿವೋ T3 Lite 5G ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೋನಿ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಶಕ್ತಿಶಾಲಿ ಬ್ಯಾಟರಿ

ವಿವೋ T3 Lite 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ವಿವೋ T3 Lite 5G ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಡ್ಯುಯಲ್ ಸಿಮ್ 5G, 4G, ವೈ-ಫೈ, ಬ್ಲೂಟೂತ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Vivo T3 Lite 5G available with 25% discount on Flipkart sale: know new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+