Vivo: ಹೊಸ ಫೋನಿನ ಬೆಲೆ ಇಳಿಕೆ; 3,000 ಡಿಸ್ಕೌಂಟ್.. ಸಸ್ತಾ ಬೆಲೆಗೆ ಸೇಲ್!
ವಿವೋ (Vivo) ಕಳೆದ ತಿಂಗಳು ಭಾರತದಲ್ಲಿ ವಿವೋ T3 ಪ್ರೊ 5G (Vivo T3 Pro 5G) ಫೋನನ್ನು ಬಿಡುಗಡೆ ಮಾಡಿದೆ. ಇದು ಬಜೆಟ್ ಬೆಲೆಯಲ್ಲಿ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಈಗಾಗಲೇ ಸ್ಮಾರ್ಟ್‌ಫೋನ್ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ, ಕಂಪನಿಯು ಈ ಫೋನನ್ನು ಮತ್ತಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ನೀವು 3,000 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ಯಾವೆಲ್ಲಾ ಆಫರ್ ಲಭ್ಯವಿದೆ ಎನ್ನುವುದನ್ನು ತಿಳಿಯೋಣ.
ವಿವೋ T3 ಪ್ರೊ 5G ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ನೀವು, ಸ್ಯಾಂಡ್‌ಸ್ಟೋನ್ ಆರೇಂಜ್ ಲೆದರ್ ಹಾಗೂ ಎಮರಾಲ್ಡ್ ಗ್ರೀನ್ ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದು. ಇದು 6.77 ಇಂಚಿನ ದೊಡ್ಡ ಡಿಸ್ಲ್ಪೇಯನ್ನು ಹೊಂದಿದೆ. ಸ್ನಾಪ್‌ಡ್ರಾಗನ್ 7 ಜೆನ್ 3 SoC ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದರೊಂದಿಗೆ, 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 5500mAh ಬ್ಯಾಟರಿ ಮತ್ತು 7.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ವಿವೋ T3 ಪ್ರೊ 5G ಫೋನಿನ ಹೊಸ ಬೆಲೆ ಮತ್ತು ಆಫರ್‌ಗಳು
8GB ಮತ್ತು 128GB = 24,999 ರೂ.
ಆಫರ್ ಬೆಲೆ = 21,999 ರೂ.
8GB ಮತ್ತು 128GB = 26,999 ರೂ.
ಆಫರ್ ಬೆಲೆ = 23,999 ರೂ.
ವಿವೋ T3 ಪ್ರೊ 5G ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಆಗಿದೆ. ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 24,999 ರೂ. ಆಗಿದೆ. ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ 3,000 ರೂ.ಗಳ ತ್ವರಿತ ರಿಯಾಯಿತಿಯನ್ನು ನೀಡಲಾಗುತ್ತಿದೆ. ಡಿಸ್ಕೌಂಟ್ ಬಳಿಕ ಈ ಫೋನಿನ ಬೆಲೆ 21,999 ರೂ.ಗೆ ಲಭ್ಯವಿದೆ. ನೀವು 9,250 ರೂ. ವರಗೆ ಎಕ್ಸ್‌ಚೇಂಜ್ ಆಫರ್ ಸಹ ಪಡೆಯಬಹುದು. ಜೊತೆಗೆ, 4,500 ರೂ.ಗಳ ಮಾಸಿಕ ಇಎಂಐ ಆಯ್ಕೆಯು ಲಭ್ಯವಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಪಡೆಯಿರಿ.
ವಿವೋ T3 ಪ್ರೊ 5G ಫೋನಿನ ವೈಶಿಷ್ಟ್ಯಗಳು
ಡಿಸ್ಲ್ಪೇ ವಿವಿರ
ವಿವೋ T3 ಪ್ರೊ 5G ಫೋನ್ 6.67 ಇಂಚಿನ 3D ಕರ್ವ್ಡ್ ಅಮೋಲೆಡ್ ಡಿಸ್ಲ್ಪೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಮತ್ತು 4,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಸೌಲಭ್ಯ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ವಿವೋ T3 ಪ್ರೊ 5G ಮೊಬೈಲ್ ಅನ್ನು ಸ್ನಾಪ್‌ಡ್ರಾಗನ್ 7 ಜೆನ್ 3 SoC ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇದು ಆಂಡ್ರಾಯ್ಡ್ 14 ಓಎಸ್ ಬೆಂಬಲ ಪಡೆದಿದೆ. ಜೊತೆಗೆ, ಅಡ್ರಿನೊ 720 ಚಿಪ್‌ಸೆಟ್‌ನೊಂದಿಗೆ ಬರುತ್ತದೆ ಇದರಲ್ಲಿ 8GB RAM ಮತ್ತು 128GB, 8GB ಮತ್ತು 256GB ಆಂತರಿಕೆ ಸ್ಟೋರೇಜ್ ಆಯ್ಕೆ ಲಭ್ಯವಿದೆ.
ಕ್ಯಾಮೆರಾ ಸೆಟಪ್
ವಿವೋ T3 ಪ್ರೊ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಸೌಲಭ್ಯ ಪಡೆದಿದೆ. ಸೆಲ್ಫಿ ಪ್ರಿಯರಿಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಬ್ಯಾಕಪ್
ಕಂಪನಿಯು ವಿವೋ T3 ಪ್ರೊ 5G ಅನ್ನು 5500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಿದೆ. ಇದು 80W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಜೊತೆಗೆ, 7.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ ಆವೃತ್ತಿ 5.3, ಜಿಪಿಎಸ್, ಯುಎಸ್‌ಬಿ ಟೈಪ್ ಸಿ, ಇನ್ ಡಿಸ್ಪ್ಲೇ ಫಿಂಗರ್‌ಫ್ರಿಂಟ್ ಸೆನ್ಸರ್ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications