Home
Deal of the day

Vivo T3 Ultra 5G ಬೆಲೆ ಕುಸಿತ; ಜೊತೆಗೆ ಬಿಗ್ ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ವಿವೋ ಕಂಪನಿಯು ದೀಪಾವಳಿಗೂ ಮುನ್ನವೇ ತನ್ನ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌ ನೀಡಿದೆ. ಹೌದು, ಕಂಪನಿಯು 'T' ಸರಣಿಯ ವಿವೋ T3 ಅಲ್ಟ್ರಾ 5G (Vivo T3 Ultra 5G) ಸ್ಮಾರ್ಟ್‌ಫೋನಿನ ಮೇಲೆ 3,000 ರೂ.ಗಳ ರಿಯಾಯಿತಿಯನ್ನು ಘೋಷಿಸಿದೆ. ಜೊತೆಗೆ, ಬ್ಯಾಂಕ್‌ ಡಿಸ್ಕೌಂಟ್ ಮತ್ತು ಇಎಂಐ ಪ್ರಯೋಜನ ಕೂಡ ಲಭ್ಯವಿದೆ. ನೀವು, ಇಂದಿನಿಂದಲೇ ಈ 5G ಫೋನನ್ನು ಅಗ್ಗದ ದರದಲ್ಲಿ ಖರೀದಿಸಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ವಿವೋ ಕಳೆದ ತಿಂಗಳು (ಸೆಪ್ಟೆಂಬರ್) ವಿವೋ T3 ಅಲ್ಟ್ರಾ 5G ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಫೋನ್ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್‌ನೊಂದಿಗೆ ಬರುತ್ತದೆ. 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 6.78 ಇಂಚಿನ ಡಿಸ್ಪ್ಲೇ, 5,500mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

Vivo T3 Ultra 5G ಬೆಲೆ ಕುಸಿತ; ಜೊತೆಗೆ ಬಿಗ್ ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ವಿವೋ T3 ಅಲ್ಟ್ರಾ 5G ಫೋನಿನ ಹೊಸ ಬೆಲೆ

8GB RAM + 128GB ಬೆಲೆ = 31,999 ರೂ.
ಆಫರ್ ಬೆಲೆ = 28,999 ರೂ.

8GB RAM + 256GB ಬೆಲೆ = 33,999 ರೂ.
ಆಫರ್ ಬೆಲೆ = 30,999 ರೂ.

12GB RAM + 256GB ಬೆಲೆ = 35,999 ರೂ.
ಆಫರ್ ಬೆಲೆ = 32,999 ರೂ.

ವಿವೋ T3 ಅಲ್ಟ್ರಾ 5G ಅನ್ನು 3,000 ರೂ.ಗಳ ಅಗ್ಗದ ಬೆಲೆಯಲ್ಲಿ ಖರೀದಿಸಲು ಅವಕಾಶವಿದೆ. ಕಂಪನಿಯು ನೀಡುತ್ತಿರುವ ಈ ರಿಯಾಯಿತಿ ಅಕ್ಟೋಬರ್ 19 ರವರೆಗೆ ಮಾತ್ರ ಲಭ್ಯವಿರುತ್ತದೆ. ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತಯ ಎಸ್‌ಬಿಐ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 3,000 ರೂ.ಗಳ ರಿಯಾಯಿತಿ ಸಿಗುತ್ತದೆ.

ಜೊತೆಗೆ, 3 ತಿಂಗಳು ಅಥವಾ 6 ತಿಂಗಳ ನೋ ಕಾಸ್ಟ್ ಇಎಂಐ ಲಭ್ಯವಿದೆ. ಇದರೊಂದಿಗೆ, 3,000 ರೂ.ಗಳ ಎಕ್ಸ್‌ಚೇಂಜ್‌ ಆಫರ್‌ ಕೂಡ ಲಭ್ಯವಿದೆ. ನೀವು, ವಿವೋ ಇ ಸ್ಟೋರ್‌ನಿಂದ ಈ ಮೊಬೈಲ್ ಖರೀದಿಸಬಹುದು. ಈ ಫೋನ್ ಲೂನಾರ್ ಗ್ರೇ ಮತ್ತು ಫ್ರಾಸ್ಟ್ ಗ್ರೀನ್ ಬಣ್ಣದಲ್ಲಿ ಮಾರಾಟವಾಗಲಿದೆ.

ವಿವೋ T3 ಅಲ್ಟ್ರಾ 5G ಫೀಚರ್ಸ್‌ ವೈಶಿಷ್ಟ್ಯಗಳು

ಡಿಸ್ಲ್ಪೇ ಮಾಹಿತಿ

ವಿವೋ T3 ಅಲ್ಟ್ರಾ 5G ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ 3D ಅಮೇಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 2800 x 1260 ಪಿಕ್ಸೆಲ್ ರೆಸಲ್ಯೂಶನ್ ಮತ್ತು 4,500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಒಳಗೊಂಡಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ವಿವೋ T3 ಅಲ್ಟ್ರಾ 5G ಮೊಬೈಲ್ ಅನ್ನು ಮೀಡಿಯಾ ಟೆಕ್‌ ಡೈಮೆನ್ಸಿಟಿ 9200 ಪ್ಲಸ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ Funtouch OS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 12GB RAM ಮತ್ತು 256GB ಸ್ಟೋರೇಜ್‌ನೊಂದಿಗೆ ಬರುತ್ತದೆ. ಜೊತೆಗೆ, 12GB ವಿಸ್ತೃತ RAM ಅನ್ನು ಸಹ ಹೊಂದಿದೆ.

ಕ್ಯಾಮೆರಾ ಸೆಟಪ್

ವಿವೋ T3 ಅಲ್ಟ್ರಾ 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಇದೆ. ಜೊತೆಗೆ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. ಈ ಫೋನ್ ಹೆಚ್ಚುವರಿ ಲೈಟಿಂಗ್, ಫೆಸ್ಟಿವಲ್ ಪೋರ್ಟ್ರೇಟ್ ಮೋಡ್, ಎಐ ಎರೇಸರ್ ಮತ್ತು 'ಔರಾ ಲೈಟ್' ಅನ್ನು ಹೊಂದಿದೆ.

ಬ್ಯಾಟರಿ ಬ್ಯಾಕಪ್

ವಿವೋ T3 ಅಲ್ಟ್ರಾ 5G ಮೊಬೈಲ್ 5,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್‌ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಈ ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಹೊಂದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ, ಯುಎಸ್‌ಬಿ ಟೈಪ್ ಸಿ ಆಡಿಯೋ, ಸ್ಟಿರಿಯೊ ಸ್ಪೀಕರ್‌ಗಳು, 5G SA/NSA, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್, ಜಿಪಿಎಸ್, ಯುಎಸ್‌ಬಿ ಟೈಪ್‌ ಸಿ 2.0 ಸೇರಿದಂತೆ ಹಲವು ಸೌಲಭ್ಯ ಹೊಂದಿದೆ.

Best Mobiles in India

English summary
Vivo T3 Ultra 5G is now available with rs 3000 discount in india: know Price, Specs and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+