ಆಹಾ..! 50MP ಸೆಲ್ಫಿ ಕ್ಯಾಮೆರಾ.. 5500mAh ಬ್ಯಾಟರಿ.. ಕಡಿಮೆ ಬೆಲೆಗೆ ಸೊಗಸಾದ Vivo ಫೋನ್!
ವಿವೋ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಕಂಪನಿಯು ಮಧ್ಯ ಶ್ರೇಣಿಯ 5G ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷ ತನ್ನ 'T' ಸರಣಿಯಲ್ಲಿ ವಿವೋ T3 ಅಲ್ಟ್ರಾ 5G (Vivo T3 Ultra 5G) ಮೊಬೈಲ್ ಬಿಡುಗಡೆ ಮಾಡಿತ್ತು. ಪ್ರಸ್ತುತ, ಕಂಪನಿಯು ಈ ಸ್ಮಾರ್ಟ್‌ಫೋನ್ ಬೆಲೆಯನ್ನು ಕಡಿಮೆ ಮಾಡಿದೆ. ನೀವು, ಬಿಡುಗಡೆ ಬೆಲೆಗಿಂತ ಅಗ್ಗದ ದರದಲ್ಲಿ ಖರೀದಿಸಬಹುದು. ಬನ್ನಿ, ಈ ಫೋನಿನ ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ವಿವೋ T3 ಅಲ್ಟ್ರಾ 5G ಮೊಬೈಲ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 9200+ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 6.78 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 5500mAh ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜಿಂಗ್ ಒಳಗೊಂಡಿದೆ. ಈ ಫೋನಿನ ಹೊಸ ಬೆಲೆ ತಿಳಿಯಲು ಮುಂದೆ ಓದಿ.

ವಿವೋ T3 ಅಲ್ಟ್ರಾ 5G ಫೋನಿನ ಹೊಸ ಬೆಲೆ
ವಿವೋ T3 ಅಲ್ಟ್ರಾ 5G ಫೋನಿನ ಮೂರು ಸ್ಟೋರೇಜ್ ರೂಪಾಂತರಗಳ ಬೆಲೆ ಇಳಿಕೆಯಾಗಿದೆ. ಫೋನಿನ ಎಲ್ಲಾ ಮೂರು ರೂಪಾಂತರಗಳ ದರವನ್ನು 2,000 ರೂ. ಕಡಿಮೆ ಮಾಡಲಾಗಿದೆ. ನೀವು 8GB RAM + 128GB ಸ್ಟೋರೇಜ್ ರೂಪಾಂತರವನ್ನು 29,999 ರೂ.ಗೆ ಕೊಳ್ಳಬಹುದು. 8GB + 256GB ವೇರಿಯಂಟ್ 31,999 ರೂ.ಗೆ ಲಭ್ಯವಿದೆ. ಮತ್ತು 12GB + 256GB ಮಾದರಿಯನ್ನು 33,999 ರೂ.ಗೆ ಖರೀದಿಸಬಹುದು. ಈ ಮೊಬೈಲ್ ಫಾರೆಸ್ಟ್ ಗ್ರೀನ್ ಮತ್ತು ಲೂನಾರ್ ಗ್ರೇ ಬಣ್ಣಗಳಲ್ಲಿ ಮಾರಾಟವಾಗುತ್ತಿದೆ.
ವಿವೋ T3 ಅಲ್ಟ್ರಾ 5G ವೈಶಿಷ್ಟ್ಯಗಳು
ಡಿಸ್ಲ್ಪೇ ಹೇಗಿದೆ
ವಿವೋ T3 ಅಲ್ಟ್ರಾ 5G ಮೊಬೈಲ್ 6.78 ಇಂಚಿನ 3D ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2800 x 1260 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.
ಪ್ರೊಸೆಸರ್ ಯಾವುದು?
ವಿವೋ T3 ಅಲ್ಟ್ರಾ 5G ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9200+ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ Funtouch ಓಎಸ್ 14 ಜೊತೆಗೆ ಕೆಲಸ ನಿರ್ವಹಿಸುತ್ತದೆ. ಈ ಫೋನ್ 12GB RAM ಮತ್ತು 256GB ಸ್ಟೋರೇಜ್ ಹೊಂದಿದೆ. ಹಾಗೆಯೇ 12GB ವಿಸ್ತೃತ RAM ಸಹ ಹೊಂದಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್
ವಿವೋ T3 ಅಲ್ಟ್ರಾ 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬಿಗ್ ಬ್ಯಾಟರಿ
ವಿವೋ T3 ಅಲ್ಟ್ರಾ 5G ಮೊಬೈಲ್ 5500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್ ಸಿ ಆಡಿಯೋ, ಸ್ಟಿರಿಯೊ ಸ್ಪೀಕರ್‌ಗಳು, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್, ಜಿಪಿಎಸ್, ಯುಎಸ್‌ಬಿ ಟೈಪ್ ಸಿ 2.0 ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








