Home
Deal of the day

ಕೇವಲ 12,499 ಸಾಕು! 6000mAh ಬ್ಯಾಟರಿ.. 50MP ಕ್ಯಾಮೆರಾ.. ಈ Vivo ಫೋನಿನ ಬೆಲೆ ಭಾರೀ ಇಳಿಕೆ

ವಿವೋ ಮೊಬೈಲ್ ಪ್ರಿಯರಿಗೆ ಇಷ್ಟು ಸಾಕು! ಹೊಸ ವರ್ಷದ ಸಂಭ್ರಮದಲ್ಲಿರುವವರಿಗೆ ವಿವೋ ಮತ್ತೊಂದು ಸಿಹಿಸುದ್ದಿ ನೀಡಿದೆ. ಹೌದು, ವಿವೋ T3x 5G (vivo T3x 5G) ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ನೀವು, ಬಂಪರ್ ಆಫರ್‌ನೊಂದಿಗೆ ಈ ಮೊಬೈಲ್‌ ಖರೀದಿಸಬಹುದು. ಕಂಪನಿಯು ಕೇವಲ 12,500 ರೂ. ಗಿಂತ ಕಡಿಮೆ ಬೆಲೆಗೆ ವಿವೋ T3x 5G ಅನ್ನು ಮಾರಾಟ ಮಾಡುತ್ತಿದೆ. ಬನ್ನಿ, ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ವಿವೋ ತನ್ನ 'T' ಸರಣಿಯಲ್ಲಿ ವಿವೋ T3x 5G ಫೋನನ್ನು ಕಳೆದ ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಈ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಸ್ನಾಪ್‌ಡ್ರಾಗನ್‌ 6 ಜೆನ್ 1 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 6.72 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 128GB ಸ್ಟೋರೇಜ್‌, 6000mAh ಬ್ಯಾಟರಿ ಮತ್ತು 44W ವೇಗದ ಚಾರ್ಜಿಂಗ್ ಒಳಗೊಂಡಿದೆ. ನೀವು, ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಈ ಫೋನನ್ನು ಖರೀದಿಸಬಹುದು. ಈ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

Vivo T3x 5G ಬೆಲೆ ಇಳಿಕೆ; 6000mAh ಬ್ಯಾಟರಿ.. 50MP ಕ್ಯಾಮೆರಾ.. ಬೆಲೆ ನೋಡಿ

ವಿವೋ T3x 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ವಿವೋ T3x 5G ಸ್ಮಾರ್ಟ್‌ಫೋನ್ 6.72 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 2,408 × 1,080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 1,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಯಾವುದು?

ವಿವೋ T3x 5G ಮೊಬೈಲ್ ಸ್ನಾಪ್‌ಡ್ರಾಗನ್‌ 6 ಜೆನ್ 1 ಪ್ರೊಸೆಸರ್‌ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್‌ 14 ಆಧಾರಿತ Funtouch OS 14 ನಲ್ಲಿ ಕೆಲಸ ಮಾಡುತ್ತದೆ.

ಸ್ಟೋರೇಜ್‌ ಆಯ್ಕೆ

ವಿವೋ T3x 5G ಫೋನ್ 4GB RAM ಮತ್ತು 128GB ಸ್ಟೋರೇಜ್‌ ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು. ನೀವು, 4GB RAM + 128GB, 6GB RAM + 128GB ಮತ್ತು 8GB RAM + 128GB ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಸಬಹುದು.

ಎರಡು ಕ್ಯಾಮೆರಾಗಳು

ವಿವೋ T3x 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ವಿಡಿಯೋಗಳನ್ನು 4K ಗುಣಮಟ್ಟದಲ್ಲಿ ರೆಕಾರ್ಡ್ ಮಾಡಬಹುದು.

Vivo T3x 5G ಬೆಲೆ ಇಳಿಕೆ; 6000mAh ಬ್ಯಾಟರಿ.. 50MP ಕ್ಯಾಮೆರಾ.. ಬೆಲೆ ನೋಡಿ

ದೊಡ್ಡ ಬ್ಯಾಟರಿ

ವಿವೋ T3X 5G ಮೊಬೈಲ್ 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 44W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ವಿವೋ T3X 5G ಫೋನ್ ಧೂಳು ಮತ್ತು ನೀರಿನ ವಿರುದ್ದ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಇದು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಸಹ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್, 5G, Dual 4G VoLTE, ವೈ-ಫೈ 6, ಬ್ಲೂಟೂತ್ 5.1, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ವಿವೋ T3x 5G ಬೆಲೆ

4GB RAM + 128GB ಸ್ಟೋರೇಜ್‌ ಬೆಲೆ = 13,499 ರೂ.
ಹೊಸ ಬೆಲೆ = 12,499 ರೂ.

6GB RAM + 128GB ಸ್ಟೋರೇಜ್‌ ಬೆಲೆ = 14,999 ರೂ.
ಹೊಸ ಬೆಲೆ = 13,999 ರೂ.

8GB RAM + 128GB 128GB ಸ್ಟೋರೇಜ್‌ ಬೆಲೆ = 16,499 ರೂ.
ಹೊಸ ಬೆಲೆ = 15,499 ರೂ.

ವಿವೋ T3x 5G ಫೋನಿನ ಬೆಲೆ ರೂ. ಕಡಿಮೆಯಾಗಿದೆ. ಕಂಪನಿಯು ಫೋನಿನ ಎಲ್ಲಾ ರೂಪಾಂತರಗಳ ಬೆಲೆಯನ್ನು 1,000 ರೂ. ನಷ್ಟು ಇಳಿಕೆ ಮಾಡಿದೆ. ರಿಯಾಯಿತಿ ಬಳಿಕ ವಿವೋ T3x 5G ಅನ್ನು ಕೇವಲ 12,499 ರೂ.ಗೆ ಖರೀದಿಸಬಹುದು. ಈ ಫೋನಿನ 6GB RAM ರೂಪಾತರದ ಬೆಲೆ 13,999 ರೂ. ಮತ್ತು 8GB RAM ಆಯ್ಕೆಯ ಬೆಲೆ 15,499 ರೂ.ಗೆ ಇಳಿದಿದೆ. ಈ ವಿವೋ ಫೋನ್ ಕ್ರಿಮ್ಸನ್ ಬ್ಲಿಸ್ ಮತ್ತು ಸೆಲೆಸ್ಟಿಯಲ್ ಗ್ರೀನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

English summary
vivo T3x 5G Price Drop in India: know new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+