ದೀಪಾವಳಿಗೆ ಸಿಹಿಸುದ್ದಿ.. Vivo V30 5G ಫೋನ್ ಬೆಲೆ ಇಳಿಕೆ; ಜೊತೆಗೆ 2,000 ಡಿಸ್ಕೌಂಟ್!
ವಿವೋ (Vivo) ತನ್ನ ಗ್ರಾಹಕರಿಗೆ ದೀಪಾವಳಿ ಉಡುಗೊರೆಯನ್ನು ನೀಡುತ್ತಿದೆ. ಕಂಪನಿಯು ತನ್ನ ವಿವೋ V30 5G (Vivo V30 5G) ಸ್ಮಾರ್ಟ್‌ಫೋನ್ ಬೆಲೆಯನ್ನು ಇಳಿಕೆ ಮಾಡಿದೆ. ಪ್ರಸ್ತುತ ನೀವು, ಈ ಫೋನನ್ನು 2,000 ರೂ. ಕಡಿಮೆ ಬೆಲೆಗೆ ಖರೀದಿಸಬಹುದು. ಈ ಬೆಲೆ ಇಳಿಕೆಯು ಮೊಬೈಲ್‌ನ ಎಲ್ಲಾ ರೂಪಾಂತರಗಳಿಗೆ ಅನ್ವಯಿಸುತ್ತದೆ. ಬೆಲೆ ಇಳಿಕೆಯ ನಂತರ, ವಿವೋ V30 5G ಅನ್ನು 29,999 ರೂ.ಗೆ ಖರೀದಿಸಬಹುದು. ಕಂಪನಿಯು ಯಾವೆಲ್ಲಾ ಆಫರ್‌ಗಳನ್ನು ನೀಡುತ್ತಿದೆ ಮತ್ತು ಫೋನಿನ ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ವಿವೋ V30 5G ಅನ್ನು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದು 120Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ 12GB RAM + 256GB ಸ್ಟೋರೇಜ್ ಲಭ್ಯವಿದೆ. ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ, 5000mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ವಿವೋ V30 5G ಹೊಸ ಬೆಲೆ ಮತ್ತು ರಿಯಾಯಿತಿ
8GB RAM + 128GB ಸ್ಟೋರೇಜ್ ಬೆಲೆ = 31,999 ರೂ.
ಹೊಸ ಬೆಲೆ = 29,999 ರೂ.
8GB RAM + 256GB ಸ್ಟೋರೇಜ್ ಬೆಲೆ = 33,999 ರೂ.
ಹೊಸ ಬೆಲೆ = 31,999 ರೂ.
12GB RAM + 256GB ಸ್ಟೋರೇಜ್ ಬೆಲೆ = 35,999 ರೂ.
ಹೊಸ ಬೆಲೆ = 33,999 ರೂ.
ಕಂಪನಿಯು ವಿವೋ V30 5G ಫೋನಿನ ಬೆಲೆಯನ್ನು 2,000 ರೂ. ಕಡಿತ ಮಾಡಿದೆ. ಇದು ಮೂರು ಸ್ಟೋರೇಜ್ ರೂಪಾಂತರಗಳ ಖರೀದಿಯ ಮೇಲೆಯೂ ಲಭ್ಯವಿದೆ. ಡಿಸ್ಕೌಂಟ್ ನಂತರ ಫೋನನ್ನು ಕ್ರಮವಾಗಿ, 29,999 ರೂ., 31,999 ರೂ. ಮತ್ತು 33,999 ರೂ. ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ವಿವೋ 5G ಫೋನನ್ನು ಪೀಕಾಕ್ ಗ್ರೀನ್, ಅಂಡಮಾನ್ ಬ್ಲೂ ಮತ್ತು ಕ್ಲಾಸಿಕ್ ಕಪ್ಪು ಬಣ್ಣಗಳಲ್ಲಿ ಖರೀದಿಸಬಹುದು.
ವಿವೋ V30 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ವಿವೋ V30 5G ಮೊಬೈಲ್ 6.78 ಇಂಚಿನ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 2,800 x 1,260 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 2,800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ವಿವೋ 5G ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ ಫನ್ ಟಚ್ ಓಎಸ್ 14 ನೊಂದಿಗೆ ಕೆಲಸ ನಿರ್ವಹಿಸಲಿದೆ. ಜೊತೆಗೆ, ಅಲ್ಟ್ರಾ ಸ್ಮಾರ್ಟ್ ಕೂಲಿಂಗ್ ಸಿಸ್ಟಂ ಲಭ್ಯವಿದೆ.
ಸ್ಟೋರೇಜ್ ಆಯ್ಕೆ
ವಿವೋ V30 5G ಸ್ಮಾರ್ಟ್‌ಫೋನ್ 8GB RAM ಮತ್ತು 12GB RAM ಅನ್ನು ಬೆಂಬಲಿಸುತ್ತದೆ. ಈ ಫೋನಿಗೆ 12GB RAM ವಿಸ್ತರಣೆ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಇದು ಫೋನಿನ ಭೌತಿಕ RAM ಜೊತೆಗೆ 24GB RAM ವರೆಗಿನ ಶಕ್ತಿಯನ್ನು ಒದಗಿಸುತ್ತದೆ.
ಕ್ಯಾಮೆರಾ ಸೆಟಪ್
ವಿವೋ V30 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲ ಮತ್ತು ಔರಾ ಲೈಟ್ ವೈಶಿಷ್ಟ್ಯದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಬ್ಯಾಕಪ್
ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಬೆಂಬಲ ಒದಗಿಸಲಾಗಿದೆ.


Click it and Unblock the Notifications








