Home
Deal of the day

Vivo V40 5G ಕಡಿಮೆ ಬೆಲೆಗೆ ಲಭ್ಯ; ಜೊತೆಗೆ ಭರ್ಜರಿ ಆಫರ್.. ಹೊಸ ಬೆಲೆ ಎಷ್ಟು?

ನೀವು ಹೊಸ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಇದು ಸರಿಯಾದ ಸಮಯ. ಪ್ರಸ್ತುತ ಇ-ಕಾಮರ್ಸ್ ಸೈಟ್‌ಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಹಬ್ಬದ ಮಾರಾಟವು ಪ್ರಾರಂಭವಾಗಿದೆ. ಈ ವಿಶೇಷ ಸೇಲ್‌ನಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಭಾರಿ ರಿಯಾಯಿತಿಯಲ್ಲಿ ಖರೀದಿಸಬಹುದು. ಅದರಂತೆ, ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ವಿವೋ V40 5G (Vivo V40 5G) ಖರೀದಿ ಮೇಲೆ ಭರ್ಜರಿ ಆಫರ್‌ಗಳು ಲಭ್ಯವಿದೆ. ಈ ಫೋನಿನ ಬೆಲೆ ಮತ್ತು ಯಾವ ಬ್ಯಾಂಕ್ ರಿಯಾಯಿತಿಗಳನ್ನು ನೀಡಲಾಗುತ್ತಿದೆ ಅನ್ನೋದನ್ನು ತಿಳಿಯೋಣ ಬನ್ನಿ.

ವಿವೋ V40 5G ಅನ್ನು ಕಂಪನಿಯು 34,999 ರೂ.ಗಳ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವು ಅಮೆಜಾನ್ ಮಾರಾಟದಲ್ಲಿ 34,440 ರೂ.ಗೆ ಮಾರಾಟವಾಗುತ್ತಿದೆ. ಈ ಫೋನ್‌ ಖರೀದಿ ಮೇಲೆ ಹಲವಾರು ಬ್ಯಾಂಕ್ ಆಫರ್‌ಗಳನ್ನು ನೀಡಲಾಗಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ವಹಿವಾಟು ಮೇಲೆ ಹೆಚ್ಚುವರಿ 500 ರೂ. ರಿಯಾಯಿತಿಯನ್ನು ಪಡೆಯಬಹುದು ಅಥವಾ ಎಸ್‌ಬಿಐ ಡೆಬಿಟ್ ಕಾರ್ಡ್‌ನೊಂದಿಗೆ 1,250 ರೂ. ವರೆಗೆ ಶೇ.10 ರಷ್ಟು ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

Vivo V40 5G ಕಡಿಮೆ ಬೆಲೆಗೆ ಲಭ್ಯ; ಜೊತೆಗೆ ಭರ್ಜರಿ ಆಫರ್.. ಹೊಸ ಬೆಲೆ ಎಷ್ಟು?

ಪ್ರೈಮ್ ಸೇವಿಂಗ್ಸ್ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇಎಂಐ ಅಲ್ಲದ ಪಾವತಿಯ ಮೇಲೆ 1,500 ರೂ. ವರೆಗೆ ಶೇ.10 ರಷ್ಟು ತ್ವರಿತ ರಿಯಾಯಿತಿ ಲಭ್ಯವಿದೆ. ಅಲ್ಲದೆ, ಪ್ರೈಮ್ ಸೇವಿಂಗ್ಸ್ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳಲ್ಲಿ 9 ತಿಂಗಳ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಇಎಂಐ ಟ್ರ್ಯಾಕ್‌ಗಳಲ್ಲಿ 500 ರೂ. ಹೆಚ್ಚುವರಿ ರಿಯಾಯಿತಿ ಸಿಗುತ್ತದೆ. ನೀವು, ಅಮೆಜಾನ್ ಐಸಿಐಸಿಐ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ನೀವು 3 ಅಥವಾ 6 ತಿಂಗಳವರೆಗೆ ನೋ ಕಾಸ್ಟ್ ಇಎಂಐನಲ್ಲಿ ಫೋನ್ ಅನ್ನು ಖರೀದಿಸಬಹುದು.

ವಿವೋ V40 5G ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವನ್ನು ಹೊರತುಪಡಿಸಿ, ನೀವು 8GB + 256GB ಸ್ಟೋರೇಜ್‌ ವೇರಿಯಂಟ್ ಅನ್ನು 36,830 ರೂ. ಮತ್ತು 12GB RAM + 256GB ಸ್ಟೋರೇಜ್ ರೂಪಾಂತರವನ್ನು 42,999 ರೂ.ಗೆ ಖರೀದಿಸಬಹುದು. ಅಮೆಜಾನ್ ಹೊರತಾಗಿ, ಈ ಫೋನನ್ನು ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಸೈಟ್‌ನಿಂದ ಖರೀದಿಸಬಹುದು. ಅಲ್ಲಿ ಫೋನನ್ನು ಬಿಡುಗಡೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದಾಗ್ಯೂ, ಅಲ್ಲಿಯೂ ಆಫರ್‌ಗಳನ್ನು ನೀಡಲಾಗುತ್ತಿದೆ.

ಫ್ಲಿಪ್‌ಕಾರ್ಟ್ ಮತ್ತು ವಿವೋ ಸೈಟ್‌ನಲ್ಲಿನ ಆಫರ್‌ಗಳು

ಫ್ಲಿಪ್‌ಕಾರ್ಟ್‌ನಲ್ಲಿ 20,800 ರೂ.ಗಳ ಎಕ್ಸ್‌ಚೇಂಜ್ ಆಫರ್‌, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಯ ಮೇಲೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಇಎಂಐ ವಹಿವಾಟುಗಳ ಮೇಲೆ 1,000 ರಿಯಾಯಿತಿ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಲ್ಲದ ಇಎಂಐ ಗ್ರಾಹಕರಿಗೆ 1,500 ರಿಯಾಯಿತಿ ಇದೆ.

ವಿವೋ ಕಂಪನಿಯ ಅಧಿಕೃತ ಸೈಟ್‌ನಲ್ಲಿ ಈ ಫೋನ್‌ ಖರೀದಿ ಮೇಲೆ 3,500 ತ್ವರಿತ ರಿಯಾಯಿತಿ ನೀಡಲಾಗುತ್ತಿದೆ. 4,000 ರೂ. ಹೆಚ್ಚುವರಿ ಬೋನಸ್ ಮತ್ತು ಎಕ್ಸ್‌ಚೇಂಜ್ ಡಿಸ್ಕೌಂಟ್ ಅನ್ನು ಸಹ ನೀಡಲಾಗುತ್ತಿದೆ. ನೀವು ಲೋಟಸ್ ಪರ್ಪಲ್, ಗಂಗಾ ಬ್ಲೂ ಮತ್ತು ಟೈಟಾನಿಯಂ ಗ್ರೇ ಬಣ್ಣಗಳಲ್ಲಿ ಫೋನ್ ಖರೀದಿಸಬಹುದು.

ವಿವೋ V40 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ವಿವೋ V40 5G ಫೋನ್ 6.78 ಇಂಚಿನ 1.5K AMOLED ಕರ್ವ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 2800 × 1260 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ.

ಪ್ರೊಸೆಸರ್: ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಚಿಪ್‌ಸೆಟ್ ಹೊಂದಿದೆ. ಗ್ರಾಫಿಕ್ಸ್‌ಗಾಗಿ Adreno 720 GPU ಇದೆ. ಈ ಫೋನ್ 12 GB LPDDR4X RAM ಮತ್ತು 512 GB UFS 2.2 ಆಂತರಿಕ ಸ್ಟೋರೇಜ್‌ ಹೊಂದಿದೆ. ಇದರೊಂದಿಗೆ ಮೊಬೈಲ್ ವರ್ಚುವಲ್ RAM ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದರ ಸಹಾಯದಿಂದ ಫೋನಿನ ಭೌತಿಕ ಮೆಮೊರಿಯನ್ನು ಬಳಸಿಕೊಂಡು RAM ಅನ್ನು ವಿಸ್ತರಿಸಬಹುದು.

ಕ್ಯಾಮೆರಾ: ವಿವೋ V40 5G ಸ್ಮಾರ್ಟ್‌ಫೋನ್ ಆರಾ ಲೈಟ್ ವೈಶಿಷ್ಟ್ಯದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು OIS ತಂತ್ರಜ್ಞಾನದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಝೈಸ್ ಲೆನ್ಸ್ ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ, 50 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಇದೆ.

ಬ್ಯಾಟರಿ: ಈ ಸ್ಮಾರ್ಟ್‌ಫೋನ್‌ 5,500mAh ಸಾಮರ್ಥ್ಯ ದೊಡ್ಡ ಬ್ಯಾಟರಿ ಇದೆ. ಇದನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡಲಾಗಿದೆ.

ಇತರೆ ಫೀಚರ್ಸ್‌: ವಿವೋ V40 5G ಸ್ಮಾರ್ಟ್‌ಫೋನ್ ನೀರು ಮತ್ತು ಧೂಳು ನಿರೋಧಕ IP68 ರೇಟಿಂಗ್, ವೈಫೈ 5, ಬ್ಲೂಟೂತ್ 5.4, NFC, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಫೇಸ್ ಅನ್‌ಲಾಕ್, ಡ್ಯುಯಲ್ 5G, 4G LTE ಕನೆಕ್ಟಿವಿಟಿಯನ್ನು ಹೊಂದಿದೆ.

Best Mobiles in India

English summary
Vivo V40 5G is available Huge Discount on Amazon Great Indian Festival sale 2024: know all details here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+