ಜಸ್ಟ್ 599 ರೂ.! ಅದೂ 33,999 ಬೆಲೆಯ Vivo ಫೋನ್! ಖರೀದಿಸುವುದು ಹೇಗೆ?
ವಿವೋ ಪ್ರಿಯರಿಗೆ ಇಲ್ಲಿದೆ ಭಾರೀ ಖುಷಿ ಸುದ್ದಿ. ಜಸ್ಟ್ 599 ರೂ.ಗೆ 33,999 ರೂ.ನ ವಿವೋ ಮೊಬೈಲ್ ಲಭ್ಯವಿದೆ. ಹೌದು, ನೀವು ವಿವೋ V40e 5G (Vivo V40e 5G) ಫೋನನ್ನು ಧಮಾಕಾ ಆಫರ್‌ನೊಂದಿಗೆ ಖರೀದಿಸಬಹುದು. ಈ ರೀತಿ ಮಾಡಿದ್ರೆ ನೀವು, ಈ ಸೊಗಸಾದ ಮತ್ತು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ವಿವೋ ಸ್ಮಾರ್ಟ್‌ಫೋನ್ ನಿಮ್ಮದಾಗಿಸಿಕೊಳ್ಳಬಹುದು. ಇದು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಬನ್ನಿ, ಕೇವಲ 599 ರೂ.ಗೆ ವಿವೋ V40e 5G ಫೋನನ್ನು ಖರೀದಿಸುವುದು ಹೇಗೆ? ಎನ್ನುವುದನ್ನು ತಿಳಿಯೋಣ.
ವಿವೋ V40e 5G ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಮಾರಾಟವಾಗುತ್ತಿದೆ. ನೀವು, ರಾಯಲ್ ಬ್ರೋಂಜ್ ಮತ್ತು ಮಿಂಟ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನ್ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.77 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 256GB ಸ್ಟೋರೇಜ್, 5500mAh ಬ್ಯಾಟರಿ ಮತ್ತು 80W ಸ್ಪೀಡ್ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

599 ರೂ.ಗೆ ಈ ಫೋನ್ ಖರೀದಿಸುವುದು ಹೇಗೆ?
ವಿವೋ V40e 5G ಫೋನನ್ನು 33,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಇದು 8GB RAM + 128GB ಸ್ಟೋರೇಜ್ ಬೆಲೆಯಾಗಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ 28,999 ರೂ.ಗೆ ಮಾರಾಟವಾಗುತ್ತಿದೆ. ಕಂಪನಿಯು 5000 ರೂ. ಡಿಸ್ಕೌಂಟ್ ನೀಡುತ್ತಿದೆ. ಜೊತೆಗೆ ಬ್ಯಾಂಕ್ ಆಫರ್, ಶೇ.5 ರಷ್ಟು ಅನ್‌ಲಿಮಿಟೆಡ್ ಕ್ಯಾಶ್‌ಬ್ಯಾಕ್ ಲಭ್ಯವಿದೆ. ಇದಲ್ಲದೆ, ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ನೋ ಕಾಸ್ಟ್ ಇಎಂಐ ಪಾವತಿ ಮೇಲೆ 1500 ರೂ. ಡಿಸ್ಕೌಂಟ್ ಸಿಗುತ್ತದೆ. ಇಎಂಐ ಪಾವತಿ ಮೇಲೆ 2000 ರೂ. ಆಫರ್ ಲಭ್ಯವಿದೆ.
ರಿಯಾಯಿತಿಯೊಂದಿಗೆ ಈ ಫೋನ್ 28,999 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ವಿಶೇಷವೆಂದರೆ, ಈ ಮೊಬೈಲ್ ಖರೀದಿ ಮೇಲಿನ ಎಕ್ಸ್‌ಚೇಂಜ್ ಆಫರ್. ಯೆಸ್, ಈ ಫೋನಿನ ಬೆಲೆ 28,999 ರೂ. ಇದೆ. ಕಂಪನಿಯು 28,400 ರೂ. ವರೆಗೆ ಎಕ್ಸ್‌ಚೇಂಜ್ ಆಫರ್ ನೀಡುತ್ತದೆ. ನೀವು, ಈ ಆಫರ್ ಲಾಭ ಪಡೆದರೆ, ಜಸ್ಟ್ 599 ರೂ.ಗೆ ಈ ಫೋನ್ ನಿಮ್ಮದಾಗುತ್ತದೆ. ಇದು ನಿಮ್ಮ ಹಳೆಯ ಫೋನಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ. ನಿಮ್ಮ ಮೊಬೈಲ್ ಡ್ಯಾಮೇಜ್ ಆಗಿದ್ರೂ 5000 ರೂ. ಡಿಸ್ಕೌಂಟ್ ಸಿಗುತ್ತೆ.
ವಿವೋ V40e 5G ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ವಿವೋ V40e 5G ಮೊಬೈಲ್ 6.77 ಇಂಚಿನ ಕರ್ವ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 2392 x 1080 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಪಡೆದಿದೆ.
ಪ್ರೊಸೆಸರ್ ಯಾವುದು?
ವಿವೋ V40e 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಫನ್ ಟಚ್ ಓಎಸ್ 14 ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದು 8GB RAM + 128GB ಮತ್ತು 8GB RAM + 256GB ಸ್ಟೋರೇಜ್ ಹೊಂದಿದೆ. ಫೋನಿನಲ್ಲಿ 8GB ವಿಸ್ತೃತ RAM ಲಭ್ಯವಿದ್ದು, ಇದರ ಸಹಾಯದಿಂದ 16GB ವರೆಗೆ ಬಳಸಬಹುದು.

50MP ಸೆಲ್ಫಿ ಕ್ಯಾಮೆರಾ
ವಿವೋ V40e 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಇದು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ದೊಡ್ಡ ಬ್ಯಾಟರಿ
ವಿವೋ V40e 5G ಮೊಬೈಲ್ 5500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗೆ IP64 ರೇಟಿಂಗ್ ಪಡೆದಿದೆ. ಜೊತೆಗೆ, ಡ್ಯುಯಲ್ ಸಿಮ್, 5G, 4G, ವೈ-ಫೈ, ಬ್ಲೂಟೂತ್ 5.4 ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications








