Vivo: ದೈತ್ಯ ಫೋನಿನ ಬೆಲೆ ಇಳಿಕೆ; ಬರೋಬ್ಬರಿ 15,000 ಡಿಸ್ಕೌಂಟ್.. ಈಗಲೇ ಖರೀದಿಸಿ
ವಿವೋ ಪ್ರಿಯರಿಗೆ ಖುಷಿ ಸುದ್ದಿ ಇದೆ. ಇತ್ತೀಚೆಗೆ ಬಿಡುಗಡೆಯಾದ ದೈತ್ಯ ಫೋನ್ ಬೆಲೆಯನ್ನು ದಿಢೀರ್ ಇಳಿಕೆ ಮಾಡಲಾಗಿದೆ. ಹೌದು, ವಿವೋ (Vivo) ತನ್ನ ಬಹುನಿರೀಕ್ಷಿತ ಫೋಲ್ಡಬಲ್ ಫೋನ್ ವಿವೋ X ಫೋಲ್ಡ್ 3 ಪ್ರೊ 5G (Vivo X Fold3 Pro 5G) ಬಿಡುಗಡೆ ಮಾಡಿದೆ. ಈ ಮೊಬೈಲ್ ದೀಪಾವಳಿ ಪ್ರಯುಕ್ತ ಭಾರೀ ರಿಯಾಯಿತಿಗಳನ್ನು ಪಡೆಯುತ್ತಿದೆ. ನೀವು, ಈ ಮೊಬೈಲ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸುವ ಸುವರ್ಣಾವಕಾಶ ಕಲ್ಪಿಸಲಾಗಿದೆ. ಬನ್ನಿ, ಕಂಪನಿಯು ಯಾವೆಲ್ಲಾ ಆಫರ್‌ಗಳನ್ನು ನೀಡುತ್ತಿದೆ ಮತ್ತು ಫೋನಿನ ವೈಶಿಷ್ಟ್ಯಗಳೇನು? ಎನ್ನುವುದನ್ನು ತಿಳಿಯೋಣ.
ಪ್ರಸ್ತುತ ದೀಪಾವಳಿ ಅಂಗವಾಗಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಯುತ್ತಿದೆ. ಇದರಲ್ಲಿ ಈ ದೈತ್ಯ ಫೋನಿನ ಮೇಲೆ ಭಾರೀ ಡಿಸ್ಕೌಂಟ್ ಘೋಷಿಸಲಾಗಿದೆ. ವಿವೋ ಕಂಪನಿಯ ಈ ಫೋನ್ ಹಲವು ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಅಳವಡಿಸಿದೆ. ಈ ಫೋನ್ 8.03 ಇಂಚಿನ ಮುಖ್ಯ ಡಿಸ್ಪ್ಲೇ ಮತ್ತು 6.53 ಇಂಚಿನ ಕವರ್ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ 5700mAh ಬ್ಯಾಟರಿಯನ್ನು ಹೊಂದಿದೆ.

ವಿವೋ X ಫೋಲ್ಡ್ 3 ಪ್ರೊ 5G ಬೆಲೆ ಮತ್ತು ಆಫರ್‌ಗಳು
16GB + 512GB ಸ್ಟೋರೇಜ್ ಬೆಲೆ = 1,59,999 ರೂ.
ಆಫರ್ ಬೆಲೆ = 1,44,999 ರೂ.
ರಿಯಾಯಿತಿ = 15,000 ರೂ.
ಕಂಪನಿಯು ವಿವೋ X ಫೋಲ್ಡ್ 3 ಪ್ರೊ 5G ಅನ್ನು 16GB + 512GB ರೂಪಾಂತರದಲ್ಲಿ ಮಾರಾಟ ಮಾಡುತ್ತಿದೆ. ಇದನ್ನು 1,59,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ನೀವು, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಅಮೆಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ, 15,000 ರೂ.ಗಳನ್ನು ನೇರವಾಗಿ ಉಳಿಸಬಹುದು. ಈ ಸೀಮಿತ ಕೊಡುಗೆಯಿಂದಾಗಿ, ನೀವು ಈ ಫೋನನ್ನು 1,44,999 ರೂ.ಗಳಲ್ಲಿ ಕೊಳ್ಳಬಹುದು.
ಇದಲ್ಲದೆ, ನೀವು ಫೋನಿನ ಮೇಲೆ ಎಕ್ಸ್‌ಚೇಂಜ್ ಆಫರ್ ಕೂಡ ಪಡೆಯಬಹುದು. ನೀವು, ಹಳೆಯ ಫೋನನ್ನು ಎಕ್ಸ್‌ಚೇಂಚ್ ಮಾಡಿಕೊಂಡರೆ, ಇದರ ಮೇಲೆ 53,200 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು. ಇದು, ನಿಮ್ಮ ಹಳೆಯ ಫೋನಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಜೊತೆಗೆ, ನೋ ಕಾಸ್ಟ್ ಇಎಂಐ ಆಯ್ಕೆಯೂ ಸಿಗುತ್ತದೆ. ಅಮೆಜಾನ್‌ನಲ್ಲಿ ಈ ಎಲ್ಲಾ ಆಫರ್‌ಗಳನ್ನು ಪಡೆಯಬಹುದು.
ವಿವೋ X ಫೋಲ್ಡ್ 3 ಪ್ರೊ 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ವಿವೋ X ಫೋಲ್ಡ್ 3 ಪ್ರೊ 5G ಮೊಬೈಲ್ 8.03 ಇಂಚಿನ ಫೋಲ್ಡಬಲ್ LTPO ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ, ಹೊರಭಾಗದಲ್ಲಿ 6.53 ಇಂಚಿನ ಅಮೋಲೆಡ್ ಕವರ್ ಡಿಸ್ಪ್ಲೇ ಲಭ್ಯವಿದೆ. ಈ ಎರಡೂ ಡಿಸ್ಪ್ಲೇಗಳು HDR10+ ಮತ್ತು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತವೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ವಿವೋ X ಫೋಲ್ಡ್ 3 ಪ್ರೊ 5G ಅನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇದು ಆಂಡ್ರಾಯ್ಡ್ 14 ಆಧಾರಿತ FuntouchOS 14 ಸಾಫ್ಟ್‌ವೇರ್ ಸ್ಕಿನ್ ಅನ್ನು ಹೊಂದಿದೆ. ಈ ಫೋನ್ IPX5 ರೇಟಿಂಗ್ ಅನ್ನು ಪಡೆದಿದೆ. ಈ ಫೋಲ್ಡಬಲ್ ಮೊಬೈಲ್ 16GB RAM ಮತ್ತು 512GB ಸ್ಟೋರೇಜ್ ಒಳಗೊಂಡಿದೆ.
ಕ್ಯಾಮೆರಾ ಸೆಟಪ್
ವಿವೋ X ಫೋಲ್ಡ್ 3 ಪ್ರೊ 5G ಫೋನಿನಲ್ಲಿ ಒಟ್ಟು ಐದು ಕ್ಯಾಮೆರಾಗಳಿವೆ. ಕವರ್ ಡಿಸ್ಪ್ಲೇನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಮತ್ತು ಪ್ರಾಥಮಿಕ ಡಿಸ್ಪ್ಲೇಯಲ್ಲಿ ಮತ್ತೊಂದು 32 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ (OIS) ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾ ಮತ್ತು OIS ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 64 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಆಗಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ವಿವೋ X ಫೋಲ್ಡ್ 3 ಪ್ರೊ 5G ಮೊಬೈಲ್ 5700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 100W ಮತ್ತು 50W ವೈರ್‌ಲೆಸ್ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.


Click it and Unblock the Notifications








