Home
Deal of the day

ವಿದ್ಯಾರ್ಥಿಗಳಿಗೆ ಸಿಹಿಸುದ್ದಿ! 10,000ಕ್ಕಿಂತ ಕಡಿಮೆ.. AI ಕ್ಯಾಮೆರಾ.. 5000mAh ಬ್ಯಾಟರಿ.. ಅದೂ Vivo 5G ಫೋನ್

ವಿವೋ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದೆ. ನೀವು ಎಐ (AI) ಕ್ಯಾಮೆರಾ ಹೊಂದಿರುವ 5G ಫೋನನ್ನು 10,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಹೌದು, ಕಂಪನಿಯು ತನ್ನ ಅಗ್ಗದ ಬಜೆಟ್‌ ಸ್ಮಾರ್ಟ್‌ಫೋನ್‌ ವಿವೋ Y28e 5G (Vivo Y28e 5G) ಬೆಲೆಯನ್ನು ಇಳಿಕೆ ಮಾಡಿದೆ. ಈ ಮೊಬೈಲ್ ಖರೀದಿಸುವ ವಿದ್ಯಾರ್ಥಿಗಳಿಗೆ ಬೊಂಬಾಟ್ ಆಫರ್‌ ಸಹ ನೀಡುತ್ತಿದೆ. ಬನ್ನಿ, ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ವಿವೋ Y28e 5G ಫೋನ್ ಕಳೆದ ವರ್ಷ ಬಿಡುಗಡೆಯಾಗಿತ್ತು. ಈ ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 6100 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಇದು ಎಐ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಈ ಫೊನಿನಲ್ಲಿ 6.56 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 4GB RAM + 128GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 15W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ಈ ಫೋನ್‌ ಅಗ್ಗದ ಬೆಲೆಯಲ್ಲಿ ಮಾರಾಟವಾಗುತ್ತಿದೆ.

10000ಕ್ಕಿಂತ ಕಡಿಮೆ! AI ಕ್ಯಾಮೆರಾ, ಬಿಗ್ ಬ್ಯಾಟರಿ.. ಈ Vivo ಫೋನಿನ ಬೆಲೆ ಇಳಿಕೆ

ವಿವೋ Y28e 5G ಹೊಸ ಬೆಲೆ

4GB RAM + 64GB ಸ್ಟೊರೇಜ್ = 10,999
ಹೊಸ ಬೆಲೆ = 9,999

4GB RAM + 128GB ಸ್ಟೊರೇಜ್ = 11,999
ಹೊಸ ಬೆಲೆ = 10,999

ವಿವೋ Y28e 5G ಫೋನಿನ ಬೆಲೆ 500 ರೂ. ಇಳಿಕೆ ಮಾಡಲಾಗಿದೆ. ಬೆಲೆ ಕಡಿತದ ನಂತರ ನೀವು 10,000 ರೂ.ಗಿಂತ ಕಡಿಮೆ ಬೆಲೆಗೆ ಈ ಫೋನ್ ಖರೀದಿಸಬಹುದು. ಈ ಫೋನಿನ 64GB ಸ್ಟೋರೇಜ್ ರೂಪಾಂತರವು 9,999 ರೂ.ಗೆ ಮಾರಾಟವಾಗುತ್ತಿದೆ. ಹಾಗೆಯೇ 128GB ಸ್ಟೋರೇಜ್ ಆಯ್ಕೆಯನ್ನು 10,999 ರೂ.ಗೆ ಖರೀದಿಸಬಹುದು. ಈ ಫೋನನ್ನು ವಿವೋ ಇಂಡಿಯಾ ವೆಬ್‌ಸೈಟ್‌ನಿಂದ ಖರೀದಿಸಿದರೆ, ವಿದ್ಯಾರ್ಥಿ ಆಫರ್ ಸಹ ಪಡೆಯಬಹುದು. ಈ ಮೂಲಕ ವಿದ್ಯಾರ್ಥಿಗಳಿಗೆ 500 ರೂ. ಹೆಚ್ಚುವರಿ ರಿಯಾಯಿತಿ ಸಹ ಲಭ್ಯವಿದೆ.

ವಿವೋ Y28e 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ವಿವೋ Y28e 5G ಸ್ಮಾರ್ಟ್‌ಫೋನ್ 6.56 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ವಾಟರ್‌ಡ್ರಾಪ್ ನಾಚ್ ಸ್ಟೈಲ್ ಎಲ್‌ಸಿಡಿ ಡಿಸ್‌ಪ್ಲೇ ಆಗಿದೆ. ಈ ಡಿಸ್ಪ್ಲೇಯು 1612 × 720 ಪಿಕ್ಸೆಲ್ ರೆಸಲ್ಯೂಶನ್‌, 90Hz ರಿಫ್ರೆಶ್ ದರ ಮತ್ತು 840 ನಿಟ್ಸ್‌ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಫೋನ್ ಗ್ಲೋಬಲ್ ಡಿಸಿ ಡಿಮ್ಮಿಂಗ್ ಮತ್ತು ಲೋ ಬ್ಲೂ ಲೈಟ್ ಪ್ರಮಾಣೀಕರಣ ಸಹ ಹೊಂದಿದೆ.

ಪ್ರೊಸೆಸರ್ ಯಾವುದು?

ವಿವೋ Y28e 5G ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 6100 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್‌ 14 ಆಧಾರಿತ Funtouch OS 14 ಜೊತೆಗೆ ಕೆಲಸ ನಿರ್ವಹಿಸುತ್ತದೆ.

ಸ್ಟೋರೇಜ್ ಆಯ್ಕೆ

ವಿವೋ Y28e 5G ಫೋನ್ 4GB RAM ಹೊಂದಿದೆ ಮತ್ತು 4GB ವಿಸ್ತೃತ RAM ತಂತ್ರಜ್ಞಾನ ಸಹ ಇದೆ. ನೀವು ಭೌತಿಕ RAM ಜೊತೆಗೆ 8GB RAM ವರೆಗೆ ಬಳಸಬಹುದು. ಈ ಫೋನ್ 128GB ಸ್ಟೋರೇಜ್‌ ಆಯ್ಕೆ ಹೊಂದಿದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು.

ಎರಡು ಅದ್ಭುತ ಕ್ಯಾಮೆರಾಗಳು

ವಿವೋ Y28e 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್ಇಡಿ ಫ್ಲ್ಯಾಷ್ ಜೊತೆಗೆ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 0.08 ಮೆಗಾಪಿಕ್ಸೆಲ್ ದ್ವಿತೀಯ AI ಲೆನ್ಸ್‌ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ಶಕ್ತಿಶಾಲಿ ಬ್ಯಾಟರಿ

ವಿವೋ Y28e 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು ಸ್ಮಾರ್ಟ್ ಚಾರ್ಜಿಂಗ್ ಎಂಜಿನ್ 2.0 ಸಹ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP6X, IPX4 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5GHz ವೈ-ಫೈ, ಬ್ಲೂಟೂತ್ 5.4 ಮತ್ತು ಯುಎಸ್‌ಬಿ 2.0 ಜೊತೆಗೆ OTG ಸಹ ಹೊಂದಿದೆ.

Best Mobiles in India

English summary
Vivo Y28e 5G price cut in india: check new price, offers, availability specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+