2,000 ಅಗ್ಗ! Vivo Y58 5G ಫೋನಿನ ಬೆಲೆ ಭಾರೀ ಇಳಿಕೆ; ಹೊಸ ಬೆಲೆ ಎಷ್ಟು?
ವಿವೋನ ಈ 5G ಫೋನ್ ಮತ್ತಷ್ಟು ಅಗ್ಗ! 1,000 ರೂ. ಬೆಲೆ ಕಡಿತ.. 1,000 ಬ್ಯಾಂಕ್ ಡಿಸ್ಕೌಂಟ್ ಕೂಡ ಲಭ್ಯ. ಹೌದು, ವಿವೋ ಕಂಪನಿಯು ವಿವೋ Y58 5G (Vivo Y58 5G) ಫೋನಿನ ಬೆಲೆಯನ್ನು ದಿಢೀರ್ ಇಳಿಕೆ ಮಾಡಿದೆ. ನೀವು 20,000 ರೂ.ಗಳಿಗಿಂತ ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದರೆ, ವಿವೋ Y58 5G ಫೋನ್ ನಿಮಗೆ ಫರ್ಪೆಕ್ಟ್ ಆಯ್ಕೆಯಾಗಿದೆ. ಇಂದಿನಿಂದ (ಆಗಸ್ಟ್ 8) ಈ ಫೋನನ್ನು ಹೊಸ ಬೆಲೆಯಲ್ಲಿ ಖರೀದಿಸಬಹುದು.
ಹೌದು, ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವ ತನ್ನ ಗ್ರಾಹಕರಿಗೆ ವಿವೋ ಸಿಹಿ ಸುದ್ದಿ ನೀಡಿದೆ. ಕಂಪನಿಯು ವಿವೋ Y58 5G (Vivo Y58 5G) ಫೋನಿನ ಬೆಲೆಯನ್ನು ಕಡಿಮೆ ಮಾಡಿದೆ. ಈ ಫೋನನ್ನು ಜೂನ್ (2024) ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯ ಸಮಯದಲ್ಲಿ ಈ ಫೋನಿನ ಬೆಲೆ 19,499 ರೂ. ಇತ್ತು. ಆದರೆ, ಈಗ ನಿಮಗೆ ಈ ಫೋನ್ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಈ ಫೋನಿನ ಹೊಸ ಬೆಲೆ ತಿಳಿಯೋಣ ಬನ್ನಿ.

ವಿವೋ Y58 5G ಫೋನಿನ ಬೆಲೆ ಮತ್ತು ಆಫರ್
ವಿವೋ Y58 5G ಫೋನ್ ಹಿಮಾಲಯನ್ ಬ್ಲೂ ಅಥವಾ ಸುಂದರಬನ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನ್ ಒಂದೇ 8GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಯಲ್ಲಿ ಬರುತ್ತದೆ. ಬಿಡುಗಡೆ ವೇಳೆ ಇದರ ಬೆಲೆ 19,499 ರೂ. ಆಗಿತ್ತು. ಬೆಲೆ ಕಡಿತದೊಂದಿಗೆ ನೀವು ಈ ಫೋನನ್ನು ಪ್ರಸ್ತುತ 18,499 ರೂ.ಗಳಿಗೆ ಖರೀದಿಸಬಹುದು. ನೀವು ಈ ಫೋನನ್ನು ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಎಲ್ಲಾ ಪಾಲುದಾರ ಅಂಗಡಿಗಳಿಂದ ಇಂದಿನಿಂದ ಹೊಸ ಬೆಲೆಗೆ ಖರೀದಿಸಬಹುದು.
ವಿವೋ Y58 5G ಫೋನಿನ ಫೀಚರ್ಸ್
ಡಿಸ್‌ಪ್ಲೇ: ವಿವೋ Y58 5G ಫೋನ್ 6.72 ಇಂಚಿನ ಪೂರ್ಣ HD + LCD ಡಿಸ್ಪ್ಲೇಯನ್ನು ಹೊಂದಿದೆ. ಇದು 2408 x 1080 ಪಿಕ್ಸೆಲ್ ರೆಸೆಲ್ಯೂಷನ್, 120Hz ರಿಫ್ರೆಶ್ ದರ, 393 ppi ಪಿಕ್ಸೆಲ್ ಸಾಂದ್ರತೆ ಮತ್ತು 1024 nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದರ 2.5D ಡಿಸ್ಲ್ಪೇ TUV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಐ ಕೇರ್ ಪ್ರಮಾಣೀಕರಣದೊಂದಿಗೆ ಬರುತ್ತದೆ.
ಪ್ರೊಸೆಸರ್: ವಿವೋ Y58 5G ಫೋನ್ Qualcomm Snapdragon 4 Gen 2 ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ Funtouch OS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. 8GB RAM + 128 GB ಇಂಟರ್ನಲ್ ಸ್ಟೋರೇಜ್ ಮತ್ತು 8GB ವಿಸ್ತೃತ RAM ಅನ್ನು ಬೆಂಬಲಿಸುತ್ತದೆ. ನೀವು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು.

ಕ್ಯಾಮೆರಾ: ವಿವೋ Y58 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.
ಬ್ಯಾಟರಿ: ಈ ವಿವೋ ಫೋನ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು 44W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವಿದೆ. ಕಂಪನಿಯು 4 ವರ್ಷಗಳವರೆಗೆ ಆರೋಗ್ಯಕರ ಬ್ಯಾಟರಿಯನ್ನು ಒದಗಿಸಿದೆ. ಈ ಫೋನ್ 1657x76x7.99mm ಅಳತೆ ಮತ್ತು 199 ಗ್ರಾಂ ತೂಕ ಹೊಂದಿದೆ.
ಇತರೆ ಫೀಚರ್ಸ್: ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದು ಧೂಳು ಮತ್ತು ನೀರಿನಿಂದ ಸುರಕ್ಷಿತವಾಗಿರಲು IP64 ರೇಟಿಂಗ್ ಪಡೆದುಕೊಂಡಿದೆ. ಅತ್ಯುತ್ತಮ ಧ್ವನಿ ಗುಣಮಟ್ಟಕ್ಕಾಗಿ ಸ್ಟೀರಿಯೋ ಸ್ಪೀಕರ್‌ಗಳನ್ನು ಇದರಲ್ಲಿ ಒದಗಿಸಲಾಗಿದೆ. ಇದು ಡ್ಯುಯಲ್ ನ್ಯಾನೋ ಸಿಮ್ ಅನ್ನು ಸಪೋರ್ಟ್ ಮಾಡುತ್ತದೆ.


Click it and Unblock the Notifications