24,000 ಉಳಿತಾಯ! Xiaomi 14 ಬೆಲೆ ಭಾರೀ ಕುಸಿತ.. 38% ಡಿಸ್ಕೌಂಟ್.. ಈ ಚಾನ್ಸ್ ಬಿಡಬೇಡಿ
ಶಿಯೋಮಿ ತನ್ನ ಗ್ರಾಹಕರಿಗೆ ಎರಡು ಸಿಹಿಸುದ್ದಿ ನೀಡಿದೆ. ಶೀಘ್ರದಲ್ಲೇ ಶಿಯೋಮಿ 15 (Xiaomi 15) ಸರಣಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಆದರೆ, ಇದಕ್ಕೂ ಮೊದಲು ಶಿಯೋಮಿ 14 (Xiaomi 14) ಫೋನಿನ ಬೆಲೆಯನ್ನು ಬರೋಬ್ಬರಿ 20,000 ರೂ.ಗಳಷ್ಟು ಇಳಿಕೆ ಮಾಡಿದೆ. ನೀವು, ಅಮೆಜಾನ್‌ನಲ್ಲಿ 24,000 ರೂ. ಕಡಿಮೆ ಬೆಲೆಗೆ ಖರೀದಿಸಬಹುದು. ಜೊತೆಗೆ, ಎಕ್ಸ್‌ಚೇಂಜ್ ಆಫರ್ ಮತ್ತು ಬ್ಯಾಂಕ್ ರಿಯಾಯಿತಿ ಸಹ ಲಭ್ಯವಿದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಕಂಪನಿಯು ಶಿಯೋಮಿ 14 ಮೊಬೈಲ್ ಅನ್ನು ಮಾರ್ಚ್ 14 ರಂದು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನೊಂದಿಗೆ ಬಂದ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಫೋನಿನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು 6.36 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ 4610mAh ಬ್ಯಾಟರಿ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರಾಟವಾಗತ್ತಿದೆ.

ಶಿಯೋಮಿ 14 ಫೋನಿನ ಬೆಲೆ
12GB RAM + 512GB ಸ್ಟೋರೇಜ್ ಬೆಲೆ = 69,999 ರೂ.
ಆಫರ್ ಬೆಲೆ = 59,999 ರೂ.
ಕಂಪನಿಯು ಶಿಯೋಮಿ 14 ಫೋನನ್ನು ಕೇವಲ 12GB RAM + 512GB ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಈ ಫೋನಿನ ಬಿಡುಗಡೆ ಬೆಲೆ 69,999 ರೂ. ಆಗಿದೆ. ಪ್ರಸ್ತುತ ಸ್ಮಾರ್ಟ್‌ಫೋನಿನ ಬೆಲೆ 10 ಸಾವಿರ ರೂ. ಕಡಿಮೆ ಮಾಡಲಾಗಿದೆ. ನೀವು 59,999 ರೂ.ಗೆ ಖರೀದಿಸಬಹುದು.
ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಇನ್ನೂ ಕಡಿಮೆ ಬೆಲೆಗೆ ಶಿಯೋಮಿ 14 ಮೊಬೈಲ್ ಕೊಳ್ಳಬಹುದು. ಈ ಫೋನ್ Mi.com ನಲ್ಲಿ 59,999 ರೂ.ಗೆ ಲಭ್ಯವಿದೆ. ಅಮೆಜಾನ್‌ನಲ್ಲಿ 45,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ, ನೀವು ಶಿಯೋಮಿ 14 ಅನ್ನು ಬಿಡುಗಡೆ ಬೆಲೆಗಿಂತ 24,000 ರೂ. ಕಡಿಮೆ ಬೆಲೆಗೆ ಕೊಳ್ಳಬಹುದು.
ಶಿಯೋಮಿ 14 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಶಿಯೋಮಿ 14 ಮೊಬೈಲ್ 6.36 ಇಂಚಿನ ಪಂಚ್ ಹೋಲ್ ಓಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 3000 ನಿಟ್ಸ್ ಬ್ರೈಟ್‌ನೆಸ್, 2160PWM ಡಿಮ್ಮಿಂಗ್ ಬೆಂಬಲ ಮತ್ತು 2670 x 1200 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಮತ್ತು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನವನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಶಿಯೋಮಿ 14 ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ನಲ್ಲಿ ತಯಾರಿಸಲಾಗಿದೆ. ಗ್ರಾಫಿಕ್ಸ್‌ಗಾಗಿ, Adreno 750 GPU ಸಹ ಹೊಂದಿದೆ.

ಕ್ಯಾಮೆರಾ ಸೆಟಪ್
ಶಿಯೋಮಿ 14 ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ ಲೈಕಾ ಲೆನ್ಸ್ ಬಳಸಲಾಗಿದೆ. ಇದು OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಶಿಯೋಮಿ 14 ಫೋನಿನಲ್ಲಿ 4610mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಫೋನಿನಲ್ಲಿ 90W ವೇಗದ ಚಾರ್ಜಿಂಗ್ ಸೌಲಭ್ಯ ಇದೆ. ಜೊತೆಗೆ 50W ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನ ಸಹ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಶಿಯೋಮಿ 14 ಸ್ಮಾರ್ಟ್‌ಫೋನ್ ನೀರು ಮತ್ತು ಧೂಳು ನಿರೋಧಕ IP68 ರೇಟಿಂಗ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 7, ಬ್ಲೂಟೂತ್ 5.4, ಎನ್‌ಎಫ್‌ಸಿ, 17 5G ಬ್ಯಾಂಡ್‌ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








