Home
Deal of the day

Xiaomi 14 Ultra: ಭಾರಿ ಬೆಲೆ ಕುಸಿತ.. ಕೈಗೆಟುಕುವ ದರಕ್ಕೆ ಖರೀದಿಸಲು ಸುವರ್ಣಾವಕಾಶ

ಶಿಯೋಮಿ ಅಕ್ಟೋಬರ್ ತಿಂಗಳಲ್ಲಿ Xiaomi 15 ಸರಣಿಯನ್ನು ಬಿಡುಗಡೆ ಮಾಡುವ ಸಾಧ್ಯೆತಯಿದೆ. ಈ ಮಧ್ಯೆಯೇ, Xiaomi 14 Ultra ಫೋನ್‌ನ ಎಲ್ಲಾ ಮಾದರಿಗಳ ಬೆಲೆಯನ್ನು ದಿಢೀರನೆ ಕಡಿಮೆ ಮಾಡಿದೆ. ಈ ಮೂಲಕ ತನ್ನ ಎಲ್ಲಾ ಗ್ರಾಹಕರಿಗೆ ಆಶ್ಚರ್ಯವನ್ನು ಉಂಟುಮಾಡಿದೆ. ಈ ಫೋನ್‌ನ ಎಲ್ಲಾ ರೂಪಾಂತರಗಳು 500 ಯುವಾನ್‌ಗಳವರೆಗೆ ಇಳಿಕೆ ಕಂಡಿದೆ. ಇದು ಸರಿಸುಮಾರು $68ಗೆ ಸಮನಾಗಿರುತ್ತದೆ. ಪ್ರಸ್ತುತ ಡಿಸ್ಕೌಂಟ್‌ನೊಂದಿಗೆ ಈ ಸರಣಿಯ ಆರಂಭಿಕ ಬೆಲೆ 5,999 (66,400 ರೂ.) ಯುವಾನ್ ಆಗಿದೆ. ಹಾಗಿದ್ರೆ, ಈ ಫೋನ್‌ನ ಹೊಸ ಬೆಲೆ ಮತ್ತು ವಿಶೇಷತೆಗಳ ಬಗ್ಗೆ ತಿಳಿಯೋಣ ಬನ್ನಿ.

ಈ ಸ್ಮಾರ್ಟ್‌ಫೋನ್‌ನ 12GB/256GB ವೇರಿಯಂಟ್‌ ಬೆಲೆ ಈ ಹಿಂದೆ 6,499 ಯುವಾನ್ (ಅಂದಾಜು 76,058 ರೂ.) ಆಗಿತ್ತು. ಇದು ಬೆಲೆ ಕಡಿತದ ನಂತರ 5,999 (66,400 ರೂಪಾಯಿ) ಯುವಾನ್‌ಗೆ ಇಳಿದಿದೆ. ಆದರೆ, ಇದರ 16GB/512GB ರೂಪಾಂತರದ ಬೆಲೆಯು ಮೊದಲು 6,999 ಯುವಾನ್ (ಅಂದಾಜು 80,639 ರೂ.) ಇತ್ತು. ಅದು ಈಗ 6,499 ಯುವಾನ್‌ ಇದೆ. 16GB/1TB ಟೈಟಾನಿಯಂ ಬೆಲೆ ಮೊದಲು 8,799 ಯುವಾನ್‌ ಇತ್ತು. ಆದರೀಗ, ಗ್ರಾಹಕರು 8,299 ಯುವಾನ್‌ಗೆ ಖರೀದಿಸಬಹುದು.

Xiaomi 14 Ultra: ಭಾರಿ ಬೆಲೆ ಕುಸಿತ.. ಕಡಿಮೆ ದರಕ್ಕೆ ಖರೀದಿಸಲು ಸುವರ್ಣಾವಕಾಶ

Xiaomi 14 ಅಲ್ಟ್ರಾ ವಿಶೇಷತೆಗಳು

ಈ ಫೋನ್ 6.73 ಇಂಚಿನ LTPO AMOLED ಡಿಸ್ಲ್ಪೇ ಅನ್ನು ಹೊಂದಿದೆ. ಇದರ ರೆಸಲ್ಯೂಶನ್ 1440 x 3200 ಪಿಕ್ಸೆಲ್‌ಗಳು, ಗರಿಷ್ಠ ಬ್ರೈಟ್‌ನೆಸ್ 3000 ನಿಟ್ಸ್. ಈ ಫೋನ್ ಫ್ಲಾಟ್ ಸೈಡ್ (ಟೈಟಾನಿಯಂ ಅಥವಾ ಅಲ್ಯೂಮಿನಿಯಂ) ನೊಂದಿಗೆ ಬರುತ್ತದೆ. ಇದರ ಡಿಸ್ಪ್ಲೇ ಮತ್ತು ಬ್ಯಾಕ್ ಪ್ಯಾನೆಲ್ ಎರಡೂ ಬದಿಗಳಲ್ಲಿ ಸ್ವಲ್ಪ ವಕ್ರವಾಗಿರುತ್ತದೆ. ಇದಲ್ಲದೆ Xiaomi ಸೆರಾಮಿಕ್ ಗ್ಲಾಸ್ ಪ್ರೊಟೆಕ್ಷನ್‌ ಪಡೆದಿದೆ.

ಶಿಯೋಮಿ 14 ಅಲ್ಟ್ರಾ ಪ್ರೊಸೆಸರ್‌ ಏನು?

ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 Gen 3 4nm ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು Android 14 ಆಧಾರಿತ HyperOS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಹಾಗೂ 16GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. USB 3.2 Gen 2 ಪೋರ್ಟ್ 10Gbps ಡೇಟಾ ಟ್ರಾನ್ಸ್‌ಮಿಷನ್ ಮತ್ತು 4K ಡಿಸ್ಪ್ಲೇಪೋರ್ಟ್ ಔಟ್‌ಪುಟ್‌ ಅನ್ನು ಬೆಂಬಲಿಸುತ್ತದೆ.

Xiaomi 14 Ultra: ಭಾರಿ ಬೆಲೆ ಕುಸಿತ.. ಕಡಿಮೆ ದರಕ್ಕೆ ಖರೀದಿಸಲು ಸುವರ್ಣಾವಕಾಶ

ಈ ಫೋನ್‌ ಕ್ಯಾಮೆರಾ ಸೆಟಪ್‌ ಮಸ್ತ್

ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಹೈಪರ್ OIS, LED ಫ್ಲ್ಯಾಷ್ ಒಳಗೊಂಡಿದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ 122° ಲೈಕಾ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಪಡೆದಿದೆ. ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಲೈಕಾ ಟೆಲಿಫೋಟೋ ಲೆನ್ಸ್‌, ನಾಲ್ಕನೇ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ 5X 30cm ಲೈಕಾ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ ಹೊಂದಿದೆ. ಇದಲ್ಲದೆ, 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

Xiaomi 14 Ultra: ಭಾರಿ ಬೆಲೆ ಕುಸಿತ.. ಕಡಿಮೆ ದರಕ್ಕೆ ಖರೀದಿಸಲು ಸುವರ್ಣಾವಕಾಶ

5300mAh ಬ್ಯಾಟರಿ, 90W ವೈರ್ಡ್ ಫಾಸ್ಟ್ ಚಾರ್ಜಿಂಗ್

ಶಿಯೋಮಿ 14 ಅಲ್ಟ್ರಾ ಫೋನ್‌ 5300mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ. 80W ವಾಯರ್‌ಲೆಸ್ ಚಾರ್ಜಿಂಗ್, 10W ರಿವರ್ಸ್ ವಾಯರ್‌ಲೆಸ್ ಚಾರ್ಜಿಂಗ್ ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, ಡ್ಯುಯಲ್ 4G VoLTE, Wi-Fi 7 802.11 be, Bluetooth 5.4, Beidou, Galileo, GLONASS, GPS (L1 + L5), NavIC, USB Type-C 3.2 Gen 1, NFC, ಸ್ಯಾಟ್‌ಲೈಟ್‌ ಕಮ್ಯೂನಿಕೇಷನ್‌ ಹೊಂದಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+