Home
Gadgets

ನಿಮ್ಮನ್ನ ಬಿಟ್ಟು ಟಿವಿ ಸೌಂಡ್ ಯಾರಿಗೂ ಕೇಳದಂತೆ ಟಿವಿ ನೋಡಲು ಹೀಗೆ ಮಾಡಿ!

By Gizbot Bureau

ಟಿವಿ ಆನ್ ಇರುತ್ತೆ. ಆದರೆ ಮನೆಯ ಇತರೆ ಸದಸ್ಯರಿಗೆ ಟಿವಿ ಆನ್ ಇರುವುದು ಕಿರಿಕಿರಿಯಾಗುತ್ತಿರುತ್ತದೆ. ಅದೇ ಕಾರಣಕ್ಕೆ ನೀವು ಟಿವಿ ಆಫ್ ಮಾಡಿ ಮೊಬೈಲ್ ನೋಡುವುದಕ್ಕೋ ಇಲ್ಲಾ ನಿಮ್ಮ ರೂಮಲ್ಲಿರೋ ಲ್ಯಾಪ್ ಟಾಪ್ ಆನ್ ಮಾಡ್ಕೊಂಡು ಕೂರುವುದಕ್ಕೋ ತೆರಳುವ ಪರಿಸ್ಥಿತಿ ಅದೆಷ್ಟೋ ಸಂದರ್ಬದಲ್ಲಿ ಮನೆಯಲ್ಲಿ ಎದುರಾಗುತ್ತದೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಕಾಗಿಲ್ಲ. ಜಸ್ಟ್ ವಯರ್ ಲೆಸ್ ಹೆಡ್ ಫೋನ್ ಬಳಸಿ ಟಿವಿ ನೋಡುವುದನ್ನು ಎಂಜಾಯ್ ಮಾಡಿ.

ನಿಮ್ಮನ್ನ ಬಿಟ್ಟು ಟಿವಿ ಸೌಂಡ್ ಯಾರಿಗೂ ಕೇಳದಂತೆ ಟಿವಿ ನೋಡಲು ಹೀಗೆ ಮಾಡಿ!

ಆದರೆ ಹೀಗೆ ಹೆಡ್ ಫೋನ್ ಅಂದ ಕೂಡ್ಲೆ ಯಾವುದು ಖರೀದಿಸುವುದು? ಟಿವಿಗೆ ಕನೆಕ್ಟ್ ಮಾಡಿಕೊಳ್ಳುವುದಕ್ಕೆ ಯಾವುದು ಅತ್ಯುತ್ತಮವಾದ ಹೆಡ್ ಫೋನ್, ಉತ್ತಮ ಸೌಂಡ್ ಕ್ವಾಲಿಟಿ ನೀಡುವ ಹೆಡ್ ಫೋನ್ ಯಾವುದು ಇತ್ಯಾದಿ ಹಲವು ಪ್ರಶ್ನೆಗಳು ನಿಮ್ಮನ್ನ ಕಾಡಲು ಆರಂಭಿಸುತ್ತದೆ ಮತ್ತು ಅದರ ಉತ್ತರಕ್ಕಾಗಿ ಖಂಡಿತ ನೀವು ಹುಡುಕಾಟ ನಡೆಸುತ್ತೀರಿ. ಆ ಹುಡುಕಾಟಕ್ಕೆ ಉತ್ತರ ನಾವು ಕೊಡುತ್ತಿದ್ದೇವೆ. ಟಾಪ್ 5 ಬೆಸ್ಟ್ ವಯರ್ ಲೆಸ್ ಹೆಡ್ ಫೋನ್ ಗಳು ಟಿವಿಗೆ ಕನೆಕ್ಟ್ ಮಾಡಿಕೊಳ್ಳುವುದರ ಪಟ್ಟಿ ಇಲ್ಲಿದೆ ನೋಡಿ.

ಟಿವಿ ಸೌಂಡ್ ಗಾಗಿ ಉತ್ತಮ ವಯರ್ ಲೆಸ್ ಹೆಡ್ ಫೋನ್ :ಶೆನೈಸರ್ RS 195

ಟಿವಿ ಸೌಂಡ್ ಗಾಗಿ ಉತ್ತಮ ವಯರ್ ಲೆಸ್ ಹೆಡ್ ಫೋನ್ :ಶೆನೈಸರ್ RS 195

1945 ರಿಂದಲೂ ಶೆನೈಸರ್ ಅತ್ಯುತ್ತಮವಾಗ ಆಡಿಯೋ ಕ್ವಾಲಿಟಿ ಹೊಂದಿರುವ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ ಮತ್ತು ಇದೀಗ RS 195 ಮತ್ತು RS 165 ಮುಚ್ಚಿರುವ ಹಿಂಭಾಗವಿರುವ, ವಯರ್ ಲೆಸ್ ಹೆಡ್ ಫೋನ್ ಗಳು ಲಭ್ಯವಾಗುತ್ತದೆ. ಹೊರಗಿನಿಂದ ಬರುವ ಶಬ್ದವನ್ನು ತಡೆಯುವ ನಿಟ್ಟಿನಲ್ಲಿ ಕಿವಿಯನ್ನು ಸಂಪೂರ್ಣ ಮುಚ್ಚುವ ಡಿಸೈನ್ ನ್ನು ಹೊಂದಿದ್ದು ಟಿವಿ ನೋಡುವುದಕ್ಕೆ ಹೇಳಿ ಮಾಡಿಸಿದ ಹೆಡ್ ಫೋನ್ ಆಗಿದೆ. ಪ್ರೈಸರ್ 195 ಮಾಡೆಲ್ ನಲ್ಲಿ ವಿಭಿನ್ನವಾಗಿರುವ ಮೋಡ್ ಗಳು ಲಭ್ಯವಿದ್ದು ಸ್ಪೀಚ್ ಗೆ ಮತ್ತು ಮ್ಯೂಸಿಕ್ ಗೆ ಬೇರೆಬೇರೆ ಮೋಡ್ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.

ಬ್ಲೂಟೂತ್ ನ ಬದಲಾಗಿ ಈ ಹೆಡ್ ಫೋನ್ ನಲ್ಲಿ ವಿಶೇಷ ಶೆನೈಸರ್ ಟ್ರಾನ್ಸ್ ಮಿಟ್ಟರ್ ಗಳು ಇರುತ್ತದೆ. ಇದು 100 ಫೀಟ್ ದೂರದವರೆಗೆ ಕಾರ್ಯ ನಿರ್ವಹಿಸುತ್ತದೆ(ರುಪಾಯಿ 165 ದು) ಇನ್ನು ರುಪಾಯಿ 195 ಬೆಲೆಯದ್ದು ಅಂದಾಜು 330 ಫೀಟ್ ದೂರದವರೆಗೆ ಕಾರ್ಯ ನಿರ್ವಹಿಸುತ್ತದೆ. ಯಾವುದೇ ಬ್ಲೂಟೂತ್ ಅಡಾಪ್ಟರ್ ನಂತೆಯೇ ಈ ಟ್ರಾನ್ಸ್ಮೀಟರ್ ನ್ನು ಕೂಡ ಸರಳವಾಗಿ ಸೆಟ್ ಮಾಡಬಹುದು. ನಿಮ್ಮ ಟೆಲಿವಿಷನ್ ಗೆ ಪ್ಲಗ್ ಇನ್ ಮಾಡಿ. ಅದಕ್ಕಾಗಿ ಆಪ್ಟಿಕಲ್ ಡಿಜಿಟಲ್ ಆಡಿಯೋ ಔಟ್ ಪುಟ್ ಬಳಕೆ ಮಾಡಿ ಅಥವಾ ಸಾಮಾನ್ಯ 3.5ಎಂಎಂ ಹೆಡ್ ಫೋನ್ ಜ್ಯಾಕ್ ಅಥವಾ RCA ಕನೆಕ್ಷನ್ ಮೂಲಕವೂ ಸಾಧಿಸಬಹುದು. ಇದಾದ ನಂತರ ಜಸ್ಟ್ ನಿಮ್ಮ ಹೆಡ್ ಫೋನಿನ ಪವರ್ ಆನ್ ಮಾಡಿ ಎಂಜಾಯ್ ಮಾಡಬಹುದು.

ಇದೆರಡಲ್ಲಿ ಯಾವುದು ಕೊಂಡುಕೊಳ್ಳುವುದು ಉತ್ತಮ ಎಂಬ ಪ್ರಶ್ನೆಗೆ ಉತ್ತರ ನಿಮ್ಮ ಬಜೆಟ್ ಎಂದು ಹೇಳಬಹುದು. 165 ಮಾಡೆಲ್ ಕೂಡ ಉತ್ತಮ ಕ್ವಾಲಿಟಿಯನ್ನು ಆಫರ್ ಮಾಡುತ್ತದೆ.

ಬೆಲೆ: ಶೆನೈಸರ್ RS 165 $219.95 ಇದೆ. ಯಾವುದಕ್ಕೂ ಅಮೇಜಾನ್ ಬೆಲೆಯನ್ನು ಇನ್ನೊಮ್ಮೆ ಪರೀಕ್ಷಿಸಿಕೊಳ್ಳಿ.

ಗೇಮಿಂಗ್ ಗಾಗಿ ಇರುವ ಬೆಸ್ಟ್ ಹೆಡ್ ಫೋನ್: ಲೂಸಿಡ್ ಸೌಂಡ್ ಎಲ್ಎಸ್31 ಗೇಮಿಂಗ್ ಹೆಡ್ ಸೆಟ್

ಗೇಮಿಂಗ್ ಗಾಗಿ ಇರುವ ಬೆಸ್ಟ್ ಹೆಡ್ ಫೋನ್: ಲೂಸಿಡ್ ಸೌಂಡ್ ಎಲ್ಎಸ್31 ಗೇಮಿಂಗ್ ಹೆಡ್ ಸೆಟ್

ಕೇವಲ ಕೇಳುವಿಕೆಗಿಂತ ನೀವು ಟಿವಿಯಲ್ಲಿ ಗೇಮ್ ಆಡುತ್ತೀರಿಯಾದರೆ ನಿಮ್ಮ ಜೊತೆಗಾರ ಆಟಗಾರರೊಂದಿಗೆ ಉತ್ತಮ ಸಂಪರ್ಕದಲ್ಲಿರಬೇಕಾದ ಕಾರಣದಿಂದಾಗಿ ಹೆಚ್ಚು ಆರಾಮದಾಯಕವಾಗಿರುವ ಹೆಡ್ ಫೋನ್ ಗಳ ಮೊರೆ ಹೋಗಬೇಕಾಗುತ್ತದೆ. ಕೈಗೆಟುಕುವ ಬೆಲೆಯಲ್ಲಿ ನೀವೇನಾದರೂ ಹುಡುಕುತ್ತಿದ್ದರೆ ಲೂಸಿಡ್ ಸೌಂಡ್ ಎಲ್ಎಸ್31 ಖಂಡಿತ ನಿಮ್ಮ ಬಿಲ್ ಗೆ ಹೊಂದಿಕೆಯಾಗುವಂತೆಯೇ ಇದೆ.

ಇದರಲ್ಲಿ ಇಯರ್ ಕಪ್ಸ್ ಗಳಿದ್ದು ಆರಾಮದಾಯಕ ಅನುಭವ ನೀಡುತ್ತದೆ.ಇಯರ್ ಕಪ್ ನ ಬಲಭಾಗದ ಮೇಲೆ ಸಿಂಪಲ್ ಕಂಟ್ರೋಲ್ ಬಟನ್ ಗಳಿರುತ್ತದೆ. ಅದರಲ್ಲಿ ವಾಲ್ಯೂಮ್ ಕಂಟ್ರೋಲ್ ಇದ್ದು ಗೇಮ್ ವಾಲ್ಯೂಮ್ ಮತ್ತು ಚಾಟ್ ವಾಲ್ಯೂಮ್ ನ್ನು ಕಂಟ್ರೋಲ್ ಮಾಡಬಹುದಾಗಿದೆ.15 ಘಂಟೆಗಳ ಬ್ಯಾಟರಿ ಲೈಫ್ ನ್ನು ಇದು ನೀಡುತ್ತದೆ. ಎಕ್ಸ್ ಬಾಕ್ಸ್ ಒನ್ ಮತ್ತು ಪ್ಲೇ ಸ್ಟೇಷನ್ 4 ಕನ್ಸೋಲ್ ಗಳಲ್ಲಿ ವಯರ್ ಲೆಸ್ ಆಗಿ ಕಾರ್ಯ ನಿರ್ವಹಿಸುವಂತ ಡಿಸೈನ್ ನ್ನು ಈ ಹೆಡ್ ಸೆಟ್ ನಲ್ಲಿ ಮಾಡಲಾಗಿದೆ. ಇವು ಪಿಸಿಯೊಂದಿಗೆ ಕನೆಕ್ಟ್ ಮಾಡಿದಾಗಲೂ ಕೂಡ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ.

50 ಡಾಲರ್ ಒಳಗೆ ನಿಮ್ಮ ವಸ್ತುಗಳನ್ನು ಖರೀದಿಸಬೇಕು ಎಂದು ನೀವು ಬಯಸುವುದಾದರೆ ನಿಮ್ಮ ಆಯ್ಕೆಗಳು ಕಡಿಮೆ ಇರುತ್ತದೆ. ಅದರ ಬದಲಾಗಿ ನೀವು ನಿಮ್ಮ ಬಳಿ ಇರುವ ಯಾವುದೇ ಬ್ಲೂಟೂತ್ ಹೆಡ್ ಫೋನ್ ನ್ನು ಬಳಕೆ ಮಾಡಬಹುದು. ಯಾಕೆಂದರೆ ಈ ಬಜೆಟ್ ನಲ್ಲಿ ನೀವು ಯಾವುದೇ ಉತ್ತಮ ಭೂಮ್ ಮಿಕ್ ಇರುವ ವಯರ್ ಲೆಸ್ ವಸ್ತುಗಳನ್ನು ಖರೀದಿಸುವುದಕ್ಕೆ ಸಾಧ್ಯವಿಲ್ಲ. ಇದಕ್ಕಾಗಿ ನೀವು ಕನಿಷ್ಟ 100 ಡಾಲರ್ ವ್ಯಯಿಸಬೇಕಾಗುತ್ತದೆ. ಬೆಲೆ: ಲೂಸಿಡ್ ಸೌಂಡ್ ಗೆ $149.99 ಬೆಲೆ ಅಮೇಜಾನ್ ನಲ್ಲಿದೆ.

ನಿಮ್ಮಲ್ಲಿರುವ ಬ್ಲೂಟೂತ್ ಹೆಡ್ ಫೋನ್ ಬಳಕೆಗೆ ಇರುವ ಅತ್ಯುತ್ತಮ ಮಾರ್ಗ: ಅವಂತ್ರೀ ಬ್ಲೂಟೂತ್ ಆಡಿಯೋ ಅಡಾಪ್ಟರ್ ಟಿಸಿ417

ನಿಮ್ಮಲ್ಲಿರುವ ಬ್ಲೂಟೂತ್ ಹೆಡ್ ಫೋನ್ ಬಳಕೆಗೆ ಇರುವ ಅತ್ಯುತ್ತಮ ಮಾರ್ಗ: ಅವಂತ್ರೀ ಬ್ಲೂಟೂತ್ ಆಡಿಯೋ ಅಡಾಪ್ಟರ್ ಟಿಸಿ417

ಕೆಲವು ಹೊಸ ಸ್ಮಾರ್ಟ್ ಟಿವಿಗಳಲ್ಲಿ ಬ್ಲೂಟೂತ್ ಬಿಲ್ಟ್ ಇನ್ ಆಗಿದೆ. ಯಾವುದೇ ಸ್ಟ್ಯಾಂಡರ್ಡ್ ನ ಬ್ಲೂಟೂತ್ ನ್ನು ಕನೆಕ್ಟ್ ಮಾಡುವುದಕ್ಕೆ ಇದು ಅನುವು ಮಾಡಿಕೊಡುತ್ತದೆ.ಆದರೆ ಒಂದು ವೇಳೆ ಬ್ಲೂಟೂತ್ ರೆಡಿ ಇಲ್ಲದೇ ಇದ್ದಲ್ಲಿ ನಿಮಗೆ ಅಡಾಪ್ಟರ್ ಬೇಕಾಗುತ್ತದೆ. ಅಡಾಪ್ಟರ್ ನಿಮ್ಮ ಟಿವಿಯ ಆಡಿಯೋ ಇನ್ ಪುಟ್ ಗೆ ಕನೆಕ್ಟ ಆಗುತ್ತದೆ ಮತ್ತು ನಂತರ ಬ್ಲೂಟೂತ್ ಮೂಲಕ ನಿಮ್ಮ ಹೆಡ್ ಫೋನ್ ಗೆ ಸೌಂಡ್ ನ್ನು ಟ್ರಾನ್ಸ್ಮಿಟ್ ಮಾಡುತ್ತದೆ. ಇದರ ಟಿಪಿಕಲ್ ರೇಂಜ್ 30 ಫೀಟ್ ಆಗಿರುತ್ತದೆ.

ಅವಂತ್ರೀ ಬ್ಲೂಟೂತ್ ಆಡಿಯೋ ಅಡಾಪ್ಟರ್ ಟಿಸಿ417 ಸ್ಟ್ಯಾಂಡರ್ಡ್ ಹೆಡ್ ಫೋನ್ ಜ್ಯಾಕ್(3.5ಎಂಎಂ ಆಡಿಯೋ ಕೇಬಲ್) ಮೂಲಕವೇ ನಿಮ್ಮ ಟಿವಿಗೆ ಕನೆಕ್ಟ ಆಗುತ್ತದೆ. ಅಥವಾ ಆಪ್ಟಿಕಲ್ ಕೇಬಲ್ ಅಥವಾ ಆರ್ ಸಿಎ ಜ್ಯಾಕ್ ಮೂಲಕ ಕನೆಕ್ಟ್ ಮಾಡಿಕೊಳ್ಳಬಹುದು.

ಬೆಲೆ: ಅಮೇಜಾನಿನಲ್ಲಿ ಅವಂತ್ರೀ ಬೆಲೆ $39.99.

ಇಬ್ಬರೂ ಹಂಚಿಕೊಂಡು ನೋಡುವುದಕ್ಕಾಗಿ ಇರುವ ಬೆಸ್ಟ್ ವಯರ್ ಲೆಸ್ ಹೆಡ್ ಫೋನ್: ಫಿಯಾಟಾನ್ ಬಿಟಿ 460

ಇಬ್ಬರೂ ಹಂಚಿಕೊಂಡು ನೋಡುವುದಕ್ಕಾಗಿ ಇರುವ ಬೆಸ್ಟ್ ವಯರ್ ಲೆಸ್ ಹೆಡ್ ಫೋನ್: ಫಿಯಾಟಾನ್ ಬಿಟಿ 460

ನಿಮ್ಮ ಸ್ನೇಹಿತರ ಜೊತೆಗೆ ನೀವು ಟಿವಿಯಲ್ಲಿ ನಿಮ್ಮ ನೆಚ್ಚಿನ ಕಾರ್ಯಕ್ರಮ ನೋಡಲು ಇಚ್ಛಿಸಿದರೆ ಅಥವಾ ಕುಟುಂಬದ ಇತರೆ ಇನ್ನೊಬ್ಬ ಸದಸ್ಯರೊಂದಿಗೆ ಟಿವಿ ನೋಡಲು ಇಚ್ಛಿಸಿದರೆ ಅದಕ್ಕಾಗಿ ನೀವು ರೂಮ್ ಪೂರ್ತಿ ಶಬ್ದವಾಗದಂತೆ ನೋಡಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ನೀವು ಶೇರ್ ಮಿ ಹೆಡ್ ಫೋನ್ ಗಳನ್ನು ಬಳಸಬಹುದು.ಶೇರ್ ಮಿ ಅನ್ನುವುದು ಯಾವುದೇ ನಿರ್ಧಿಷ್ಟ ಹೆಡ್ ಫೋನ್ ಮಾಡೆಲ್ ಅಲ್ಲ ಆದರೆ ಇದೊಂದು ತಂತ್ರಜ್ಞಾನವಾಗಿದ್ದು ಒಂದೇ ಶಬ್ದವನ್ನು ಯಾವುದೇ ಟ್ಯಾಂಗಲ್ ಆಗಿರುವ ವಯರ್ ಸಹಾಯದಿಂದ ಹೆಡ್ ಫೋನ್ ನಲ್ಲಿ ಹಂಚಿಕೊಳ್ಳುವಂತೆ ಮಾಡುವ ವಿಧಾನವಾಗಿದೆ. ಶೇರ್ ಮಿ ಹೆಡ್ ಫೋನ್ ಗಳು ಒಬ್ಬರಿಂದೊಬ್ಬರ ಹೆಡ್ ಫೋನ್ ಗಳನ್ನು ವಯರ್ ಲೆಸ್ ಆಗಿ ಪೇರ್ ಮಾಡುತ್ತದೆ ಮತ್ತು ಒಂದೇ ಸೌಂಡ್ ಸೋರ್ಸ್ ಇಬ್ಬರಿಗೂ ಕೇಳುವಂತೆ ಮಾಡುತ್ತದೆ.

ಅದರಲ್ಲಿ ನೀವು ಆಯ್ಕೆ ಮಾಡಿಕೊಳ್ಳಬಹುದಾಗಿರುವುದು ಯಾವುದೆಂದರೆ ಫಿಯಾಟಾನ್ಬಿಟಿ 460 ಹೆಡ್ ಫೋನ್ ಗಳು. ಇದು ಬ್ಲೂಟೂತ್ ಹೆಡ್ ಫೋನ್ ಆದರೆ ಒಂದು ವೇಳೆ ನೀವು ಪ್ಲಗ್ ಇನ್ ಮಾಡಲು ಇಚ್ಛಿಸಿದರೆ ಇದು ಕೇಬಲ್ ನಲ್ಲೂ ಬರುತ್ತದೆ. ಇವು ಉತ್ತಮ ಸೌಂಡ್ ಕ್ವಾಲಿಟಿಯನ್ನು ನೀಡುತ್ತದೆ ಮತ್ತು ಉತ್ತಮ ಬ್ಯಾಟರಿ ಲೈಫ್ ಹೊಂದಿದೆ. ಒಂದು ಹೇಳಿಕೆಯ ಪ್ರಕಾರ 20 ತಾಸುಗಳ ಬ್ಯಾಟರಿ ಲೈಫ್ ನೀಡುತ್ತದೆ.

ಒಂದು ವೇಳೆ ಟಿವಿಯಲ್ಲಿ ಬಿಲ್ಟ್ ಇನ್ ಬ್ಲೂಟೂತ್ ಇಲ್ಲದೇ ಇದ್ದಲ್ಲಿ ಅದಕ್ಕಾಗಿ ಬ್ಲೂಟೂತ್ ಅಡಾಪ್ಟರ್ ನ ಸಹಾಯ ನಿಮಗೆ ಬೇಕಾಗುತ್ತದೆ ಎಂಬುದು ತಿಳಿದಿರಲಿ.

ಬೆಲೆ: $129.99.

ವಯರ್ ಲೆಸ್ ಹೆಡ್ ಫೋನ್ ನ ಕೇಳುವಿಕೆಗಾಗಿ ಅತ್ಯುತ್ತಮ ಸ್ಟ್ರೀಮಿಂಗ್ ಪ್ಲೇಯರ್ :ರೂಕು ಆಲ್ಟ್ರಾ

ವಯರ್ ಲೆಸ್ ಹೆಡ್ ಫೋನ್ ನ ಕೇಳುವಿಕೆಗಾಗಿ ಅತ್ಯುತ್ತಮ ಸ್ಟ್ರೀಮಿಂಗ್ ಪ್ಲೇಯರ್ :ರೂಕು ಆಲ್ಟ್ರಾ

ಒಂದು ವೇಳೆ ನಿಮ್ಮ ಬಳಿ ಈಗಾಗಲೇ ರೂಕು ಇದ್ದಲ್ಲಿ , ನೀವು ಯಾವ ರೂಕು ಹೊಂದಿದ್ದೀರಿ ಎಂಬುದರ ಆಧಾರದಲ್ಲಿ ವಯರ್ ಲೆಸ್ ಕೇಳುವಿಕೆಯ ಸೆಟ್ ಅಪ್ ನಿಮ್ಮ ಬಳಿ ಈಗಾಗಲೇ ಇರುತ್ತದೆ. ಕೆಲವು ಮಾಡೆಲ್ ಗಳು ರಿಮೋಟ್ ಫೀಚರ್ ಹೊಂದಿದೆ ಜೊತೆಗೆ ಕೆಲವು ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಬಿಲ್ಟ್ ಇನ್ ಹೆಡ್ ಫೋನ್ ಜ್ಯಾಕ್ ಕೂಡ ಇರುತ್ತದೆ. ಸಾಮಾನ್ಯವಾಗಿರುವ ಒಂದು ಜೊತೆ ಹೆಡ್ ಫೋನ್ ನಿಂದ ಫ್ಯಾಮಿಲಿಯ ಇತರೆ ಸದಸ್ಯರಿಗೆ ಕಿರಿಕಿರಿಯಾಗದಂತೆ ಟಿವಿ ವೀಕ್ಷಣೆ ಮಾಡಬಹುದು.

ಈ ಪ್ಲಾನಿನ ಅತ್ಯುತ್ತಮ ಸಹಾಯವೆಂದರೆ ಬೆಲೆ. ನೀವು ರೂಕು ಹೊಂದಿಲ್ಲದೆ ಇದ್ದರೂ ಕೂಡ ಇತರೆ ಹಲವು ವಸ್ತುಗಳನ್ನು ಖರೀದಿಸುವುದರಿಂದ ನಿಮಗೆ ಪರಿಹಾರ ನೀಡುತ್ತದೆ. ಇದು ನಿಮ್ಮ ಬಜೆಟ್ ಕೂಡ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ.ಇತರೆ ಯಾವುದೇ ಪ್ಲೇಯರ್ ಗಳಲ್ಲಿ ಗಮನಿಸದ ರಿಮೋಟ್ ಹೆಡ್ ಫೋನ್ ಜ್ಯಾಕ್ ಇದರಲ್ಲಿದೆ. ನೀವು ರೂಕು ಎನ್ಹಾನ್ಸ್ ವಾಯ್ಸ್ ರಿಮೋಟ್ ನ್ನು ಸಪರೇಟ್ ಆಗಿ $29.99 ಗೆ ಖರೀದಿಸಬಹುದು.

ಬೆಲೆ: ಅಮೇಜಾನಿನಲ್ಲಿ ರೂಕೂ ಬೆಲೆ $99.99.

Best Mobiles in India

English summary
5 Ways To Watch TV Using Wireless Headphones
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+