ಎಂತಾ ಆಫರ್..! 13,999 ಸಾಕು.. 43 ಇಂಚಿನ Smart TV.. ಸಸ್ತಾ ಬೆಲೆಗೆ ಇಷ್ಟೊಂದು ವೈಶಿಷ್ಟ್ಯಗಳು!
ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಹೊಸ ಆಫರ್ ಘೊಷಿಸಿದೆ. ನೀವು 43 ಇಂಚಿನ ಈ ಸೊಗಸಾದ ಸ್ಮಾರ್ಟ್ ಟಿವಿಯನ್ನು ಭಾರೀ ರಿಯಾಯಿತಿಯೊಂದಿಗೆ ಖರೀದಿಸಬಹುದು! ಹೌದು, ಕ್ಯಾಂಡಿ 43 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ ಗೂಗಲ್ ಟಿವಿ (CANDY 43 inch 4K Smart Google TV) ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಖರೀದಿಸಲು ಲಭ್ಯವಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈ ಸ್ಮಾರ್ಟ್ ಟಿವಿ ಡಾಲ್ಬಿ ವಿಷನ್, ಡಾಲ್ಬಿ ಸ್ಪೀಕರ್‌ಗಳು ಮತ್ತು 8GB ಮೆಮೊರಿ ಸೇರಿದಂತೆ ಹಲವು ಉತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಬನ್ನಿ, ಕ್ಯಾಂಡಿ ಸ್ಮಾರ್ಟ್ ಟಿವಿಗೆ ಯಾವೆಲ್ಲಾ ಆಫರ್ ಲಭ್ಯವಿದೆ ಮತ್ತು ಇದರ ವೈಶಿಷ್ಟ್ಯಗಳನ್ನು ತಿಳಿಯೋಣ.
ಪ್ರಸ್ತುತ, CA43C9UG ಮಾದರಿ ಸಂಖ್ಯೆಯ ಕ್ಯಾಂಡಿ 43 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ ಗೂಗಲ್ ಟಿವಿಯನ್ನು (CANDY 43 inch 4K Smart Google TV) 14,999 ರೂ.ಗಳಿಗೆ ಲಭ್ಯವಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಪ್ರಸ್ತುತ ಶೇ.51 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಈ ಟಿವಿ ಖರೀದಿಸಿದರೆ, ಹೆಚ್ಚುವರಿಯಾಗಿ 1000 ರೂ. ಡಿಸ್ಕೌಂಟ್ ಲಭ್ಯವಿದೆ. ಒಟ್ಟಾರೆಯಾಗಿ ನೀವು, ಈ ಸ್ಮಾರ್ಟ್ ಟಿವಿಯನ್ನು ಕೇವಲ 13,999 ರೂ. ನಿಮ್ಮದಾಗಿಸಿಕೊಳ್ಳಬಹುದು.

ಕ್ಯಾಂಡಿ 43 ಇಂಚಿನ 4K ಸ್ಮಾರ್ಟ್ ಗೂಗಲ್ ಟಿವಿ ವೈಶಿಷ್ಟ್ಯಗಳು
ಈ ಕ್ಯಾಂಡಿ 43 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ ಗೂಗಲ್ ಟಿವಿಯನ್ನು 4K ಅಲ್ಟ್ರಾ HD ಡಿಸ್ಪ್ಲೇಯೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಡಿಸ್ಪ್ಲೇಯು 3,840 x 2,160 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದು 60Hz ರಿಫ್ರೆಶ್ ದರದ ಬೆಂಬಲ ಸಹ ಪಡೆದಿದೆ. ವಿಶೇಷವಾಗಿ, ಈ ಸ್ಮಾರ್ಟ್ ಟಿವಿ ನಿಮಗೆ ಉತ್ತಮ ಡಿಸ್ಪ್ಲೇ ಅನುಭವವನ್ನು ನೀಡುತ್ತದೆ. ಈ ಸ್ಮಾರ್ಟ್ ಟಿವಿ ಡಾಲ್ಬಿ ವಿಷನ್, 16.07 ಮಿಲಿಯನ್ ಬಣ್ಣಗಳು ಮತ್ತು 178 ಡಿಗ್ರಿ ವೀಕ್ಷಣಾ ಕೋನ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೆ, ಈ ಟಿವಿ ವಿವಿಧ ಅದ್ಭುತ ಪ್ರದರ್ಶನ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಟಿವಿ ಸ್ಮಾರ್ಟ್ ರಿಮೋಟ್ ಜೊತೆಗೆ ಬರುತ್ತದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಈ ಕ್ಯಾಂಡಿ ಸ್ಮಾರ್ಟ್ ಟಿವಿಯು ಗೂಗಲ್ ಟಿವಿ ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಆದ್ದರಿಂದ, ಈ ಟಿವಿಯಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್ ಬೆಂಬಲ ಲಭ್ಯವಿದೆ. ಈ ಟಿವಿಯಲ್ಲಿ ನೀವು ಯೂಟ್ಯೂಬ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಜಿಯೋಹಾಟ್‌ಸ್ಟಾರ್ ಸೇರಿದಂತೆ ಓಟಿಟಿ ಅಪ್ಲಿಕೇಶನ್‌ಗಳನ್ನು ಸಹ ಬಳಸಬಹುದು.
ಈ ಎಲ್ಲಾ ಅಪ್ಲಿಕೇಶನ್‌ಗಳನ್ನು ಬಳಸಬಹುದು
ಈ ಕ್ಯಾಂಡಿ 43 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ ಗೂಗಲ್ ಟಿವಿ ಬಹುಕಾರ್ಯಕ ಪ್ರೊಸೆಸರ್ ವೈಶಿಷ್ಟ್ಯವನ್ನು ಹೊಂದಿದೆ. ಈ ಅದ್ಭುತವಾದ ಕ್ಯಾಂಡಿ 43 ಇಂಚಿನ 4K ಸ್ಮಾರ್ಟ್ ಗೂಗಲ್ ಟಿವಿಯನ್ನು 1.5GB RAM ಮತ್ತು 1GB ಮೆಮೊರಿಯೊಂದಿಗೆ ಬಿಡುಗಡೆ ಮಾಡಲಾಗಿದೆ. ನೀವು ಈ ಟಿವಿಯಲ್ಲಿರುವ ಎಲ್ಲಾ ಅಪ್ಲಿಕೇಶನ್‌ಗಳನ್ನು ಯಾವುದೇ ಅಡಚಣೆಯಿಲ್ಲದೆ ಬಳಸಬಹುದು. ಈ ಟಿವಿಯ ವಿನ್ಯಾಸದ ಬಗ್ಗೆ ಕಂಪನಿಯು ಹೆಚ್ಚಿನ ಗಮನಹರಿಸಿದೆ.
ಕಡಿಮೆ ಬೆಲೆಯಲ್ಲಿ ಇಷ್ಟೊಂದು ವೈಶಿಷ್ಟ್ಯಗಳು
ಕ್ಯಾಂಡಿ 43 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ ಗೂಗಲ್ ಟಿವಿ ಅಂಚಿನಿಲ್ಲದ ವಿನ್ಯಾಸದೊಂದಿಗೆ ಬರುತ್ತಿದೆ. ಬಳಸಲು ತುಂಬಾ ಆರಾಮದಾಯಕವಾಗಿದೆ. ಈ ಟಿವಿಯಲ್ಲಿ 16W ಡಾಲ್ಬಿ ಆಡಿಯೋ ಸ್ಪೀಕರ್‌ಗಳು ಸಹ ಇವೆ. ಆದ್ದರಿಂದ ಈ ಟಿವಿ ನಿಮಗೆ ಉತ್ತಮ ಆಡಿಯೊ ಅನುಭವವನ್ನು ನೀಡುತ್ತದೆ. ಈ ಟಿವಿ ವಿವಿಧ ಆಡಿಯೊ ಮೋಡ್‌ಗಳು ಮತ್ತು ಪಿಕ್ಚರ್ ಮೋಡ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಟಿವಿ HDMI ಪೋರ್ಟ್‌ಗಳು, ಯುಎಸ್‌ಬಿ ಪೋರ್ಟ್, ವೈ-ಫೈ, ಆಪ್ಟಿಕಲ್, RF ಮತ್ತು ಬ್ಲೂಟೂತ್ ಸೇರಿದಂತೆ ವಿವಿಧ ಸಂಪರ್ಕ ಬೆಂಬಲವನ್ನು ಹೊಂದಿದೆ. ಎಲ್ಲಾ ಉತ್ತಮ ವೈಶಿಷ್ಟ್ಯಗಳೊಂದಿಗೆ, ಈ ಟಿವಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.


Click it and Unblock the Notifications








