ಪ್ರವಾಸ ಮಾಡುವ ಸಂದರ್ಭದಲ್ಲಿ ಇರಲೇಬೇಕಾದ ಗ್ಯಾಜೆಟ್ ಗಳು..!
ನೀವು ಪ್ರವಾಸ ಪ್ರಿಯರಾಗಿದಲ್ಲಿ ನಿಮ್ಮ ಪ್ರವಾಸದ ಸಮಯದಲ್ಲಿ ನಿಮ್ಮೊಂದಿಗೆ ಅಗತ್ಯವಾಗಿ ಇರಬೇಕಾದ ಗ್ಯಾಜೆಟ್ ಗಳ ಕುರಿತ ಮಾಹಿತಿಯನ್ನು ನೀಡುವ ಪ್ರಯತ್ನವನ್ನು ಮಾಡಲಾಗಿದೆ. ನಿಮ್ಮ ಪ್ರವಾಸವನ್ನು ಸುಖಕರವಾಗಿಸಲು ಈ ಗ್ಯಾಜೆಟ್ ಗಳು ಸಹಾಯಕಾರಿಯಾಗಲಿದೆ ಎನ್ನಲಾಗಿದೆ.

ಆಗ್ಗಿಂದ್ದಾಗಯೇ ಪ್ರವಾಸವನ್ನು ಕೈಗೊಳ್ಳುವವರು ಈ ಗ್ಯಾಜೆಟ್ ಗಳನ್ನು ತಮ್ಮ ಬಳಿ ಹೊಂದಿರಲೇಬೇಕಾಗಿದೆ. ಇವುಗಳು ಇಲ್ಲವಾದರೆ ನಿಮ್ಮ ಪ್ರವಾಸವು ತ್ರಾಸದಾಯಕವಾಗಲಿದೆ. ನಿಮ್ಮ ಬಳಿ ಇರಬೇಕಾದ ಗ್ಯಾಜೆಟ್ ಗಳ ಮಾಹಿತಿ ಇಲ್ಲಿದೆ.

ಟಿಂಕ್ ಪೆನ್:
ಇದು ನಿಮ್ಮ ಬಳಿ ಇರಬೇಕಾದ ವಸ್ತುವಾಗಿದೆ. ಇದನ್ನು ನೀವು ಮಡಚಿ ಬಾಲ್ ರೀತಿಯಲ್ಲಿ ಸುತ್ತಿ ಇಡಬಹುದಾಗಿದೆ.

ನೆಕ್ ಪ್ಯಾಕರ್:
ಇದು ಟ್ರಾವಲ್ಸ್ ನೊಂದಿಗೆ ಇರಲೇ ಬೇಕಾದ ಜ್ಯಾಕೇಟ್ ಆಗಿದೆ. ಇದರಲ್ಲಿ ಅವರು ಪಾಕೆಟ್ ಗಳಿದ್ದು, ಇದನ್ನು ನೀವು ಹಲವು ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ವೇರಬಲ್ ಡಿಸ್ ಪ್ಲೇ:
ಇದೊಂದು ಹೆಚ್ ಡಿ ಗುಣಮಟ್ಟದ ಡಿಸ್ ಪ್ಲೇಯಾಗಿದ್ದು, HDMI ಡಿಸ್ ಪ್ಲೇ ಯೊಂದಿಗೆ ಕಾಣಿಸಿಕೊಳ್ಳಲಿದೆ. ಇದರಲ್ಲಿ ಬ್ಯಾಟರಿಯನ್ನು ಕಾಣಬಹುದಾಗಿದೆ. ಇದು 90 ನಿಮಿಷಗಳ ಬ್ಯಾಕಪ್ ಹೊಂದಿದೆ.


ಮೈಕ್ರೋ:
ಇದು ಅತೀ ಸಣ್ಣ ಗಾತ್ರದ ಯೂನಿವರ್ಸಲ್ ಟ್ರಾವಲ್ ಅಡ್ಯಾಪಟರ್ ಆಗಿದ್ದು, ಎಲ್ಲಿ ಬೇಕಾದರು ಚಾರ್ಜ್ ಮಾಡಿಕೊಳ್ಳಲು ಸಹಾಯ ಮಾಡಲಿದೆ.

ಟ್ರಾವಲ್ ಪಿಲ್ಲೋ:
ಇದು ಎಲ್ಲಾ ಬಳಕೆದಾರರ ಕುತ್ತಿಗೆಗೆ ಸರಿ ಹೊಂದುವಂತೆ ವಿನ್ಯಾಸ ಮಾಡಲಾಗಿದೆ. ಇದನ್ನು ಹಾಕಿಕೊಂಡು ಮಲಗಿಕೊಳ್ಳುವುದು ಸುಲಭವಾಗಲಿದೆ.

ಮ್ಯಾಗ್ ಪಿ:
ಇದು ಸ್ಮಾರ್ಟ್ GPS ಟೆಕ್ನಾಲಜಿಯನ್ನು ಹೊಂದಿದೆ. ಸಣ್ಣ ಮತ್ತು ಕಡಿಮೆ ತೂಕದಲ್ಲಿದ್ದು ಎಲ್ಲಿ ಬೇಕಾದರು ಬಳಕೆ ಮಾಡಿಕೊಳ್ಳಬಹುದಾಗಿದೆ.

ನೊಮರಿಕ್ ಬ್ಯಾಗ್:
ಈ ಬ್ಯಾಗ್ ನಲ್ಲಿ ನೀವು ಪ್ರವಾಸಕ್ಕೆ ಅಗತ್ಯವಾದ ಎಲ್ಲಾ ವಸ್ತುಗಳನ್ನು ಇಟ್ಟುಕೊಳ್ಳಬಹುದಾಗಿದೆ. ಇದರಿಂದಾಗಿ ನಿಮ್ಮ ಪ್ರವಾಸವು ಸುಲಭವಾಗಿ ಸಾಗಲಿದೆ.


Click it and Unblock the Notifications








