75 ಇಂಚಿನ Xiaomi QLED ಸ್ಮಾರ್ಟ್‌ಟಿವಿ ಸೇಲ್ ಶುರು: ಇಲ್ಲಿದೆ ಫುಲ್ ಡೀಟೇಲ್ಸ್!
ಭಾರತದ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಪರಿಚಯಗೊಂಡಿರುವ 75 ಇಂಚಿನ ಬಹುನಿರೀಕ್ಷಿತ Xiaomi QLED TV X Pro 75 ಸ್ಮಾರ್ಟ್‌ಟಿವಿ ಇಂದಿನಿಂದ (ಫೆಬ್ರವರಿ 27) ಖರೀದಿಗೆ ಲಭ್ಯವಾಗಿದೆ. ಇಂದಿನವರೆಗೆ Xiaomi ಕಂಪೆನಿ ಬಿಡುಗಡೆ ಮಾಡಿರುವ ಅತಿ ದೊಡ್ಡ QLED ಮಾದರಿಯ ಸ್ಮಾರ್ಟ್‌ಟಿವಿ ಇದಾಗಿದ್ದು, ಮನೆಯಲ್ಲಿ ಥಿಯೇಟರ್ ಅನುಭವವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಹಾಗಾದರೆ, Xiaomi iaomi QLED TV X Pro 75 ಸ್ಮಾರ್ಟ್‌ಟಿವಿ ಹೇಗಿದೆ?, ಬೆಲೆ ಎಷ್ಟು ಮತ್ತು ಫೀಚರ್ಸ್ ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
Xiaomi QLED TV X Pro 75: ಬೆಲೆ ಮತ್ತು ಲಭ್ಯತೆ
ದೇಶದಲ್ಲಿ Xiaomi QLED TV X Pro 75 ಸ್ಮಾರ್ಟ್‌ಟಿವಿಯನ್ನು 69,999 ರೂ.ಗೆ ಪರಿಚಯಿಸಲಾಗಿದೆ. ಆದರೆ, ಸೀಮಿತ ಅವಧಿಯ ಆರಂಭಿಕ ಆಫರ್‌ನಲ್ಲಿ 5,000 ರೂ. ಬ್ಯಾಂಕ್ ರಿಯಾಯಿತಿ ಲಭ್ಯವಿದ್ದು, ಪರಿಣಾಮಕಾರಿ ಬೆಲೆ 64,999 ರೂ.ಗೆ ದೊರೆಯಲಿದೆ ಎಂದು ಕಂಪೆನಿಯು ತಿಳಿಸಿದೆ. ಗ್ರಾಹಕರು ಇಂದಿನಿಂದ (ಫೆಬ್ರವರಿ 27) Xiaomi ಇಂಡಿಯಾ ವೆಬ್‌ಸೈಟ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ದೇಶಾದ್ಯಂತ ಆಯ್ದ ಅಧಿಕೃತ ಚಿಲ್ಲರೆ ಅಂಗಡಿಗಳಲ್ಲಿ ಈ ಸ್ಮಾರ್ಟ್‌ಟಿವಿಯನ್ನು ಖರೀದಿಸಬಹುದು.

Xiaomi QLED TV X Pro 75: ಪ್ರಮುಖ ವೈಶಿಷ್ಟ್ಯಗಳು
ಹೊಸ Xiaomi QLED TV X Pro 75 ಟಿವಿಯಲ್ಲಿ 75 ಇಂಚಿನ 4K ಅಲ್ಟ್ರಾ ಎಚ್‌ಡಿ (3,840 × 2,160 ಪಿಕ್ಸೆಲ್) QLED ಪ್ಯಾನೆಲ್ ನೀಡಲಾಗಿದೆ. ಡಾಲ್ಬಿ ವಿಷನ್ ಮತ್ತು HDR10+ ಬೆಂಬಲದಿಂದ ಹೆಚ್ಚು ಸ್ಪಷ್ಟತೆ, ಉತ್ತಮ ಕಾಂಟ್ರಾಸ್ಟ್ ಮತ್ತು ಜೀವಂತ ಬಣ್ಣ ಅನುಭವಿಸಬಹುದು. ಇದು ಫಿಲ್ಮ್‌ಮೇಕರ್ ಮೋಡ್ ಸಹ ಒಳಗೊಂಡಿದ್ದು, ಸಿನಿಮಾಗಳನ್ನು ನಿರ್ದೇಶಕರ ಮೂಲ ದೃಷ್ಟಿಕೋನಕ್ಕೆ ಸಮೀಪವಾಗಿ ಪ್ರದರ್ಶಿಸುವುದಾಗಿ ಕಂಪನಿ ಹೇಳಿದೆ. 97.76 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದ ಜೊತೆ ಅತಿ ಸಣ್ಣ ಬೇಝೆಲ್ ವಿನ್ಯಾಸವು ಪರದೆಯು ಇನ್ನಷ್ಟು ದೊಡ್ಡದಾಗಿ ಕಾಣಲು ಸಹಕಾರಿಯಾಗಿದೆ.
Xiaomi QLED TV X Pro 75 ಟಿವಿಯಲ್ಲಿ ವೇಗದ ದೃಶ್ಯಗಳಲ್ಲಿ ಚಿತ್ರ ಸ್ಪಷ್ಟತೆ ಕಾಪಾಡಲು ಅಥವಾ ಚಿತ್ರಗಳು ಬ್ಲರ್ ಆಗದಂತೆ DLG 120Hz ಮತ್ತು MEMC ತಂತ್ರಜ್ಞಾನಗಳನ್ನು ಸೇರಿಸಲಾಗಿದೆ. ಇದರಿಂದ ಕ್ರಿಕೆಟ್, ಫುಟ್‌ಬಾಲ್ ಅಥವಾ ಆ್ಯಕ್ಷನ್ ಸಿನಿಮಾಗಳಂತಹ ವೇಗದ ವಿಷಯಗಳನ್ನು ನೋಡಿದಾಗ ಚಲನೆಯಲ್ಲಿ ಬ್ಲರ್ ಕಡಿಮೆಯಾಗುತ್ತದೆ. ಗೇಮಿಂಗ್ ಅಭಿಮಾನಿಗಳಿಗಾಗಿ Auto Low Latency Mode (ALLM) ಬೆಂಬಲವೂ ಇದೆ, ಇದು ಗೇಮಿಂಗ್ ಕನ್ಸೋಲ್ ಬಳಸುವಾಗ ವಿಳಂಬವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಪ್ರೊಸೆಸಿಂಗ್ ವಿಭಾಗದಲ್ಲಿ, Xiaomi QLED TV X Pro 75 ಟಿವಿಯಲ್ಲಿ ಕ್ವಾಡ್-ಕೋರ್ A55 ಚಿಪ್ ಹಾಗೂ 32GB ಸ್ಟೋರೇಜ್ ನೀಡಲಾಗಿದೆ. ಸಂಪರ್ಕಕ್ಕಾಗಿ ಮೂರು HDMI ಪೋರ್ಟ್‌ಗಳು (ಒಂದು eARC ಬೆಂಬಲದೊಂದಿಗೆ), ಎರಡು USB 2.0 ಪೋರ್ಟ್‌ಗಳು, ಇಥರ್‌ನೆಟ್, ಆಪ್ಟಿಕಲ್, AV ಹಾಗೂ ಆಂಟೆನಾ ಇನ್‌ಪುಟ್‌ಗಳಿವೆ. ಜೊತೆಗೆ ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ ಜೊತೆಗೆ AirPlay 2, Google Cast ಮತ್ತು Miracast ಮೂಲಕ ವೈರ್‌ಲೆಸ್ ಕ್ಯಾಸ್ಟಿಂಗ್ ಮಾಡಬಹುದು. ಮತ್ತು Google Voice Assistant ಮೂಲಕ ಧ್ವನಿ ಆಧಾರಿತ ನಿಯಂತ್ರಣವೂ ಲಭ್ಯವಿದೆ.
ಆಡಿಯೋ ವಿಭಾಗದಲ್ಲಿ, Xiaomi QLED TV X Pro 75 ಟಿವಿಯು 34W ಸಾಮರ್ಥ್ಯದ ಸ್ಪೀಕರ್ ಸಿಸ್ಟಮ್ ಹೊಂದಿದೆ. ಇದು ಡಾಲ್ಬಿ ಆಡಿಯೋ, DTS-X ಮತ್ತು DTS Virtual:X ಬೆಂಬಲದಿಂದ ಹೆಚ್ಚು ಆಳವಾದ ಧ್ವನಿ ಅನುಭವ ಸಿಗುತ್ತದೆ. eARC ಮೂಲಕ ಹೊಂದಾಣಿಕೆಯ ಸೌಂಡ್ ಸಿಸ್ಟಮ್‌ಗಳಿಗೆ ಸಂಪರ್ಕಿಸಿದರೆ ಡಾಲ್ಬಿ ಆಟ್ಮಾಸ್ ಪಾಸ್‌ಥ್ರೂ ಸಹ ಸೌಲಭ್ಯವಿದೆ. ಇತರೆ ಸ್ಮಾರ್ಟ್ ವೈಶಿಷ್ಟ್ಯಗಳಾಗಿ PatchWall ಇಂಟರ್ಫೇಸ್, ಯುನಿವರ್ಸಲ್ ಸರ್ಚ್, ಕಿಡ್ಸ್ ಮೋಡ್, ಲ್ಯಾಂಗ್ವೇಜ್ ಯುನಿವರ್ಸ್ ಹಾಗೂ ಉಚಿತ ಲೈವ್ ಟಿವಿ ಚಾನೆಲ್‌ಗಳಿಗೆ ಪ್ರವೇಶ ಸಿಗುತ್ತದೆ.


Click it and Unblock the Notifications