AI Smartphones: ಎಐ ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿವು; ಬೆಲೆ ಎಷ್ಟು? ವಿಶೇಷತೆಗಳೇನು?
ಎಐ ಟೆಕ್ ಜಗತ್ತನ್ನು ಬೆಚ್ಚಿಬೀಳಿಸುತ್ತಿದೆ. ಯುವಜನತೆ ಎಐ (AI) ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಹೌದು, ವಿಶೇಷವಾಗಿ ಯುವಜನರು, ಎಐ ತಂತ್ರಜ್ಞಾನ ಹೊಂದಿರುವ ಫೋನ್‌ಗಳನ್ನು (AI Smartphones) ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಪ್ರಸ್ತುತ ಬಿಡುಗಡೆಯಾಗುತ್ತಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಎಐ ವೈಶಿಷ್ಟ್ಯ ಲಭ್ಯವಿರುತ್ತದೆ. ನಾವು ಈ ಲೇಖನದಲ್ಲಿ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ 30,000 ರೂ. ಬಜೆಟ್‌ನಲ್ಲಿ ಲಭ್ಯವಿರುವ ಎಐ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳ (Smartphones) ಬಗ್ಗೆ ತಿಳಿಸಿದ್ದೇವೆ. ನೀವು ಎಐ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಬಯಸಿದರೆ, ತಪ್ಪದೇ ಈ ಸ್ಟೋರಿ ಓದಿ.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ತಂತ್ರಜ್ಞಾನ ಅಭಿವೃದ್ಧಿಯಾದಂತೆ ಮೊಬೈಲ್ ತಯಾರಿಕಾ ಕಂಪನಿಗಳು ಸ್ಮಾರ್ಟ್‌ಫೋನ್‌ಗಳಲ್ಲಿಯೂ ಗಮನಾರ್ಹ ಬದಲಾವಣೆ ತರುತ್ತಿವೆ. ಸದ್ಯ, ಎಐ ತಂತ್ರಜ್ಞಾನವು ಟೆಕ್ ಜಗತ್ತನ್ನೇ ಅಲ್ಲಾಡಿಸುತ್ತಿದೆ. ಬಹುತೇಕ ಮೊಬೈಲ್ ಪ್ರಿಯರು ಎಐ ಫೀಚರ್ ಒಳಗೊಂಡಿರುವ ಫೋನ್‌ಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಈ ಎಐ ಫೀಚರ್ ಅನ್ನು ಇತ್ತೀಚೆಗೆ ಬಿಡುಗಡೆಯಾದ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದು. 30,000 ಬಜೆಟ್‌ನಲ್ಲಿ ಎಐ ವೈಶಿಷ್ಟ್ಯ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ ನೋಡಿ.

ವಿವೋ V40e 5G: 26,999 ರೂ.
ವಿವೋ V40e (vivo V40e 5G) ಮೊಬೈಲ್ 8GB RAM + 128GB ಸ್ಟೋರೇಜ್ ರೂಪಾಂತರ ಹೊಂದಿದೆ. ಇದರ ಆರಂಭಿಕ ಬೆಲೆ 26,999 ರೂ. ಆಗಿದೆ. ಈ ಫೋನ್ ವಿಶೇಷವಾಗಿ ಫೋಟೋಗ್ರಫಿಯನ್ನು ಸುಧಾರಿಸಲು ಎಐ (AI) ಫೀಚರ್ ಒಳಗೊಂಡಿದೆ. ನೀವು ಪೋರ್ಟ್ರೇಟ್ ಮೋಡ್‌ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸಬಹುದು. ಈ ವೈಶಿಷ್ಟ್ಯವು ತುಂಬಾ ಆಕರ್ಷಕವಾಗಿದೆ. ನೆಟ್‌ವರ್ಕ್ ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಧ್ವನಿ ಕರೆ ಅನುಭವವನ್ನು ಹೆಚ್ಚಿಸಲು ಎಐ ಫೀಚರ್ ಸಹಾಯ ಮಾಡುತ್ತದೆ.
ರಿಯಲ್ ಮಿ GT 6T: 27,999 ರೂ.
ರಿಯಲ್ ಮಿ GT 6T (Realme GT 6T) ಫೋನ್ 8GB RAM + 128GB ಸ್ಟೋರೇಜ್ ಆಯ್ಕೆ ಹೊಂದಿದೆ. ಇದರ ಆರಂಭಿಕ ಬೆಲೆ 27,999 ರೂ. ಆಗಿದೆ. ಈ ಫೋನ್ ತನ್ನ ಮುಂದಿನ ಪೀಳಿಗೆಯ ಎಐ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಫೋನಿನಲ್ಲಿರುವ ಎಐ ಪ್ರೊಟೆಕ್ಷನ್ ಡಿಸ್ಪ್ಲೇ ಮತ್ತು ಪಾರ್ಟಿ ಟ್ರಿಕ್ಸ್ ಸೇರಿದಂತೆ ಹಲವು ವೈಶಿಷ್ಟ್ಯಗಳು ಆಕರ್ಷಕವಾಗಿವೆ. ಈ ಫೋನ್ ಹಿನ್ನೆಲೆಯಲ್ಲಿಯೂ ಸಹ ಉತ್ತಮವಾಗಿ ಕೆಲಸ ನಿರ್ವಹಿಸುತ್ತದೆ.
ಪೊಕೊ ಎಕ್ಸ್ ಪ್ರೊ 5G: 29,190 ರೂ.
ಪೋಕೋ ಎಕ್ಸ್ ಪ್ರೊ (POCO X Pro 5G) ಸ್ಮಾರ್ಟ್‌ಫೋನ್ 8GB RAM + 256GB ಸ್ಟೋರೇಜ್ ವೇರಿಯಂಟ್ ಒಳಗೊಂಡಿದೆ. ಈ ಫೋನಿನ ಆರಂಭಿಕ ಬೆಲೆ 29,190 ರೂ. ಆಗಿದೆ. ಈ ಫೋನ್ ಎಐ ಆಪ್ಟಿಮೈಸೇಶನ್‌ಗಳೊಂದಿಗೆ ಬರುತ್ತದೆ. ಎಐ ಆಧಾರಿತ ಕಾರ್ಯಕ್ಷಮತೆ ವರ್ಧನೆ, ಎಐ ಆಧಾರಿತ ಸೂಪರ್ ರೆಸಲ್ಯೂಶನ್ ರೆಂಡರಿಂಗ್ ದೃಶ್ಯಗಳೊಂದಿಗೆ ಬರುತ್ತದೆ.

ಮೊಟೊರೊಲಾ ಎಡ್ಜ್ 50 ಪ್ರೊ 5G: 29,350 ರೂ.
ಮೊಟೊರೊಲಾ ಎಡ್ಜ್ 50 ಪ್ರೊ 5G (Motorola Edge 50 Pro 5G) ಮೊಬೈಲ್ 8GB RAM + 128GB ಸ್ಟೋರೇಜ್ ಆಯ್ಕೆ ಹೊಂದಿದೆ. ಇದರ ಬೆಲೆ 29,350 ರೂ.ನಿಂದ ಪ್ರಾರಂಭವಾಗುತ್ತದೆ. ಮೊಟೊರೊಲಾ ಎಡ್ಜ್ 50 ಪ್ರೊ ಫೋನ್ ಹೆಲೋ ಯುಐನ ಸ್ಟಾಕ್ ಆವೃತ್ತಿಗೆ ಹತ್ತಿರದಲ್ಲಿದೆ. ಈ ಫೋನ್ ಎಐಗೆ ಸಂಬಂಧಿಸಿದ ಅತ್ಯಂತ ಮುಂದುವರಿದ ಅಪ್ಲಿಕೇಶನ್‌ನೊಂದಿಗೆ ಬರುತ್ತದೆ. ಈವರೆಗೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನಲ್ಲಿರುವ ಎಐ ಅನ್ನು ವಿಡಿಯೋಗಳ ಸಂಸ್ಕರಣೆಯನ್ನು ಸುಧಾರಿಸಲು ಬಳಸಬಹುದು.
ಒನ್ಪ್ಲಸ್ ನಾರ್ಡ್ 4 5G: 29,999 ರೂ.
ಒನ್ಪ್ಲಸ್ ನಾರ್ಡ್ 4 (OnePlus Nord 4 5G) ಫೋನ್ 8GB RAM + 128GB ಸ್ಟೋರೇಜ್ ರೂಪಾಂತರದೊಂದಿಗೆ ಬರುತ್ತದೆ. ಇದರ ಬೆಲೆ 29,999 ರೂ. ಆಗಿದೆ. ಈ ಫೋನ್‌ನಲ್ಲಿರುವ ಕ್ವಾಲ್ಕಾಮ್ ಎಐ (AI) ಎಂಜಿನ್ ಆನ್ ಡಿವೈಸ್ ಎಐ ನಿಂದ ಚಾಲಿತವಾಗಿದೆ. ಲಿಂಕ್ ಬೂಸ್ಟ್, ಎಐ ನೋಟ್ ಸಾರಾಂಶ, ಎಐ ಆಡಿಯೋ ಸಾರಾಂಶದಂತಹ ಹಲವು ಎಐ ಫೀಚರ್ ಒಳಗೊಂಡಿದೆ. ಈ ಒನ್ಪ್ಲಸ್ ಫೋನ್ ಆಕ್ಸಿಜನ್ ಓಎಸ್ ಮತ್ತು ಕಲರ್ ಓಎಸ್ ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ.
ಪ್ರಸ್ತುತ, ಮಾರುಕಟ್ಟೆಯಲ್ಲಿ ಬಿಡುಗಡೆ ಆಗುವ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಈ ಎಐ ಫೀಚರ್ ಲಭ್ಯವಿರುತ್ತದೆ. ನಾವು ಈ ಲೇಖನದಲ್ಲಿ 30,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಸಿದ್ದೇವೆ. ನೀವು ಹೊಸ ಮೊಬೈಲ್ ಖರೀದಿಸಲು ಬಯಸಿದರೆ, ಈ ಲೇಖನ ಉಪಯುಕ್ತವಾಗಲಿದೆ. ಇದೇ ರೀತಿಯ ಹೆಚ್ಚಿನ ಸ್ಟೋರಿ ಅಥವಾ ಮಾಹಿತಿಗಾಗಿ ಗಿಜ್‌ಬಾಟ್ ಕನ್ನಡ (GizBot Kannada) ವೆಬ್‌ಸೈಟ್‌ಗೆ ಭೇಟಿ ನೀಡಿ.


Click it and Unblock the Notifications








