ಆಪಲ್ AirPods Pro 3 ಬಿಡುಗಡೆ: ಇದು ವಿಶ್ವದ ಅತ್ಯುತ್ತಮ ANC ಇಯರ್‌ಫೋನ್?!
ಆಪಲ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಬಹು ನಿರೀಕ್ಷಿತ 'awe dropping' ಕಾರ್ಯಕ್ರಮಕ್ಕೆ ಆಪಲ್ ಸಿಇಒ ಟಿಮ್ ಕುಕ್ ವೇದಿಕೆ ಏರಿದ್ದಾರೆ. ಪ್ರತೀ ವರ್ಷದಂತೆಯೇ, ಈ ಬಾರಿ ಸಹ ಹೊಸ ಪೀಳಿಗೆಯ ಸಾಧನಗಳನ್ನು ಪರಿಚಯಿಸುವುದರಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಗಮನ ಸೆಳೆದಿದೆ. ಕಾರ್ಯಕ್ರಮದ ಮೊದಲ ಘಟ್ಟದಲ್ಲೇ ಆಪಲ್ ತನ್ನ ಹೊಸ ಪೀಳಿಗೆಯ ವೈರ್‌ಲೆಸ್ ಇಯರ್‌ಫೋನ್ 'AirPods Pro 3' ಅನ್ನು ಅಧಿಕೃತವಾಗಿ ಘೋಷಿಸಿದೆ.ಈ ಹೊಸ ಮಾದರಿಯು ಹೃದಯ ಬಡಿತ ಅಳೆಯುವ ಸಂವೇದಕ, ಸುಧಾರಿತ ಶಬ್ದ ರದ್ದತಿ ತಂತ್ರಜ್ಞಾನ (ANC), ಮತ್ತು ತತ್‌ಕ್ಷಣದ ಭಾಷಾಂತರದಂತಹ ಹಲವು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ.! ಹಾಗಾದರೆ, ಹೊಸ ಪೀಳಿಗೆಯ ವೈರ್‌ಲೆಸ್ ಇಯರ್‌ಫೋನ್ 'AirPods Pro 3' ಹೇಗಿದೆ?, ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
AirPods Pro 3 ಏನಿದೆ ಹೊಸತು?
ಹೊಸ AirPods Pro 3 ಮೂರು ವರ್ಷಗಳ ನಂತರ ಬಿಡುಗಡೆಯಾದ ಪ್ರಮುಖ ಅಪ್‌ಗ್ರೇಡ್ ಆಗಿದ್ದು, ಇದರಲ್ಲಿರುವ ವೈಶಿಷ್ಟ್ಯಗಳು ಗಮನಾರ್ಹವಾಗಿವೆ. ಆಪಲ್‌ನ ಪ್ರಕಾರ, ಈ ಹೊಸ ಇಯರ್‌ಫೋನ್‌ಗಳು 'ವಿಶ್ವದ ಅತ್ಯುತ್ತಮ ANC' ತಂತ್ರಜ್ಞಾನವನ್ನು ಹೊಂದಿದ್ದು, ಬಾಹ್ಯ ಶಬ್ದವನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ. ಧ್ವನಿ ಗುಣಮಟ್ಟವನ್ನು ಸುಧಾರಿಸಲು ಹೊಸ ಫೋಮ್ ಮಿಶ್ರಿತ ಇಯರ್‌ಟಿಪ್‌ಗಳನ್ನು ಸೇರಿಸಲಾಗಿದೆ. ಇದರಿಂದ ಸಂಗೀತ ಮತ್ತು ಕರೆಗಳ ಸಮಯದಲ್ಲಿ ಸ್ಪಷ್ಟತೆ ಹೆಚ್ಚಾಗುತ್ತದೆ. ಜೊತೆಗೆ, ಇದು ಧ್ವನಿ ವೇದಿಕೆಯ ಅಗಲವನ್ನು ವಿಸ್ತರಿಸುವ ಮೂಲಕ ಉತ್ತಮ ಆಡಿಯೋ ಅನುಭವವನ್ನು ನೀಡುತ್ತದೆ.
ಲೈವ್ ಟ್ರಾನ್ಸ್‌ಲೇಶನ್ (Live Translation) ವೈಶಿಷ್ಟ್ಯ
ಆಪಲ್ ಇಂಟೆಲಿಜೆನ್ಸ್ (Apple Intelligence) ಬೆಂಬಲದೊಂದಿಗೆ, AirPods Pro 3 ಯಲ್ಲಿ ತತ್‌ಕ್ಷಣದ ಭಾಷಾಂತರ (Live Translation) ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಇದು ಇಬ್ಬರು ಬಳಕೆದಾರರು ಇಯರ್‌ಫೋನ್ ಬಳಸಿದಾಗ ಮತ್ತಷ್ಟು ನಿಖರವಾಗಿರುತ್ತದೆ. ಮಾತನಾಡುವವರ ಧ್ವನಿಯನ್ನು ಎಎನ್‌ಸಿ ತಂತ್ರಜ್ಞಾನದಿಂದ ಕಡಿಮೆ ಮಾಡಿ, ತಕ್ಷಣವೇ ನಿಮ್ಮ ಭಾಷೆಯಲ್ಲಿ ಅನುವಾದಿಸಿ ಕೇಳಿಸುತ್ತದೆ. ನೀವು ಮಾತನಾಡುತ್ತಿರುವ ವೇಳೆ ರಿಯಲ್‌ಟೈಮ್‌ನಲ್ಲಿ ಭಾಷಾಂತರವು ನಡೆಯಲಿದೆ. ನಿಮ್ಮ ಭಾಷೆಯು ಅವರಿಗೆ ನಿಮ್ಮ ಪೋನಿನ ಸ್ಕ್ರೀನ್ ಮೂಲಕ ಕಾಣಿಸಲಿದೆ. ಇದನ್ನು ಆಡಿಯೋ ಮಾದರಿಯಲ್ಲೂ ಕೇಳಿಸಬಹುದು.

ಸುಧಾರಿತ ವಿನ್ಯಾಸ ಮತ್ತು ಗಟ್ಟಿಮುಟ್ಟಾದ ನಿರ್ಮಾಣ
ಹೊಸ AirPods Pro 3 ಯನ್ನು 10,000ಕ್ಕೂ ಹೆಚ್ಚು ಕಿವಿಯ 3D ಸ್ಕ್ಯಾನ್‌ಗಳನ್ನು ಅಧ್ಯಯನ ಮಾಡಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿಯು ತಿಳಿಸಿದೆ. ಇದು ಹಳೆಯ ಮಾದರಿಗಿಂತ ಚಿಕ್ಕದಾಗಿದ್ದು, ಕಿವಿಯಲ್ಲಿ ಹೆಚ್ಚು ಆರಾಮದಾಯಕವಾಗಿ ಕೂರುತ್ತದೆ. ಈ ಬಾರಿ ಐದು ವಿವಿಧ ಗಾತ್ರದ ಇಯರ್‌ಟಿಪ್‌ಗಳು ಲಭ್ಯವಿವೆ ಎಂದು ಕಂಪೆನಿಯು ಹೇಳಿದೆ. ಇದರ ಜೊತೆಗೆ, ಇದು IP57 ಪ್ರಮಾಣಿತ ನೀರು ಮತ್ತು ಬೆವರು ನಿರೋಧಕತೆಯನ್ನು ಪಡೆದುಕೊಂಡಿದೆ.
ಐಓಎಸ್ 26 (iOS 26) ಜೊತೆ ಇತರೆ ವೈಶಿಷ್ಟ್ಯಗಳು
AirPods Pro 3 ಜೊತೆಗೆ, ಐಓಎಸ್ 26 ಅಪ್‌ಡೇಟ್ ಹಳೆಯ ಏರ್‌ಪಾಡ್ಸ್ ಮಾದರಿಗಳಿಗೂ ಕೆಲವು ಹೊಸ ಸೌಲಭ್ಯಗಳನ್ನು ತರಲಿದೆ. ಉದಾಹರಣೆಗೆ, ಏರ್‌ಪಾಡ್ಸ್ ಮೂಲಕ ಕ್ಯಾಮೆರಾ ಆಪ್ ಅನ್ನು ನಿಯಂತ್ರಿಸುವುದು, ಸ್ಟುಡಿಯೋ-ಮಟ್ಟದ ಆಡಿಯೋ ಬೆಂಬಲ, ಉತ್ತಮ ಕರೆ ಗುಣಮಟ್ಟ, ಚಾರ್ಜಿಂಗ್ ಜ್ಞಾಪನೆ, ಮತ್ತು ನಿದ್ರೆಗೆ ಜಾರಿದಾಗ ಆಡಿಯೋ ಸ್ವಯಂಚಾಲಿತವಾಗಿ ಸ್ಥಗಿತವಾಗುವ ವೈಶಿಷ್ಟ್ಯಗಳು ಇದರಲ್ಲಿ ಸೇರಿವೆ.
ಬೆಲೆ ಮತ್ತು ಲಭ್ಯತೆ
ಹೊಸ AirPods Pro 3 ಯ ಬ್ಯಾಟರಿ ಅವಧಿಯು 8 ಗಂಟೆಗಳವರೆಗೆ ಇರಲಿದೆ. ಅಮೆರಿಕದಲ್ಲಿ ಇದರ ಆರಂಭಿಕ ಬೆಲೆ $249 (ಸುಮಾರು ₹20,500) ಎಂದು ನಿಗದಿಪಡಿಸಲಾಗಿದೆ. ಶೀಘ್ರದಲ್ಲೇ ಇದು ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿಯೂ ಲಭ್ಯವಾಗಲಿದೆ.


Click it and Unblock the Notifications








