ಭಾರತದಲ್ಲಿ ಬಜೆಟ್ ಬೆಲೆಯ Akai Soul ಸರಣಿ ಸೌಂಡ್‌ಬಾರ್‌ಗಳು ಬಿಡುಗಡೆ!
ಅತ್ಯುತ್ತಮ ಗುಣಮಟ್ಟದ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಗೆ ಹೆಸರುವಾಸಿಯಾದ ಅಕಾಯ್ (Akai) ಕಂಪನಿಯು ಭಾರತದಲ್ಲಿ ತನ್ನ ಹೊಸ Soul ಸರಣಿಯ ಸೌಂಡ್‌ಬಾರ್‌ಗಳನ್ನು ಭಾರತದಲ್ಲಿ ಇಂದು ಬಿಡುಗಡೆ ಮಾಡಿದೆ. ಈ ಹೊಸ ಆಡಿಯೋ ಸರಣಿಯಲ್ಲಿ SB-100, SB-120 Pro, ಮತ್ತು SB-160 ಎಂಬ ಮೂರು ಮಾದರಿಗಳನ್ನು ಪರಿಚಯಿಸಲಾಗಿದ್ದು, ಈ ಎಲ್ಲಾ ಸೌಂಡ್‌ಬಾರ್‌ಗಳು ಬಹು EQ ಸೌಂಡ್ ಮೋಡ್‌ಗಳು, LED ಡಿಸ್ಪ್ಲೇ ಮತ್ತು ಕಾರ್ಯಾಚರಣೆಗಾಗಿ ರಿಮೋಟ್ ಕಂಟ್ರೋಲ್‌ನೊಂದಿಗೆ ಬರುತ್ತವೆ. ಜೊತೆಗೆ ವಿವಿಧ ಸಂಪರ್ಕ ಆಯ್ಕೆಗಳನ್ನು ಸಹ ಇವು ಒಳಗೊಂಡಿವೆ. ಹಾಗಾದರೆ, ಹೊಸ ಅಕಾಯ್ Soul ಸರಣಿ ಸೌಂಡ್‌ಬಾರ್‌ಗಳು ಹೇಗಿವೆ?, ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
Akai Soul SB-100 ವೈಶಿಷ್ಟ್ಯಗಳು
ಅಕಾಯ್‌ನ Soul SB-100 ಸೌಂಡ್‌ಬಾರ್ 2.1 ಚಾನೆಲ್ ಕ್ಲಾಸ್ D ಆಂಪ್ಲಿಫೈಯರ್ ಅನ್ನು ಹೊಂದಿದೆ, ಇದು 100W RMS ಔಟ್‌ಪುಟ್ ನೀಡುತ್ತದೆ. ಇದು ಡೀಪ್ ಬಾಸ್‌ಗಾಗಿ 5.25-ಇಂಚಿನ ಸಬ್ ವೂಫರ್ ಮತ್ತು ಡ್ಯುಯಲ್ 2.25-ಇಂಚಿನ ಡ್ರೈವರ್‌ಗಳನ್ನು ಒಳಗೊಂಡಿದೆ. ಸಂಪರ್ಕ ಆಯ್ಕೆಗಳಲ್ಲಿ ಬ್ಲೂಟೂತ್ 5.0, HDMI (ARC) ಪೋರ್ಟ್, ಆಪ್ಟಿಕಲ್ ಇನ್‌ಪುಟ್, USB ಇನ್‌ಪುಟ್ ಮತ್ತು AUX ಇನ್‌ಪುಟ್ ಸೇರಿವೆ. ಈ ಸೌಂಡ್‌ಬಾರ್ LED ಡಿಸ್ಪ್ಲೇ ಮತ್ತು ರಿಮೋಟ್ ಕಂಟ್ರೋಲ್ ಜೊತೆಗೆ ಹಲವಾರು EQ ಮೋಡ್‌ಗಳನ್ನು ನೀಡುತ್ತದೆ. ಇದರ ಅಳತೆ 640x80x85mm ಆಗಿದೆ.

Akai Soul SB-120 Pro ವೈಶಿಷ್ಟ್ಯಗಳು
Soul SB-120 Pro ಸೌಂಡ್‌ಬಾರ್ 120W RMS ಔಟ್‌ಪುಟ್ ಸಾಮರ್ಥ್ಯವನ್ನು ಹೊಂದಿದೆ. ದೊಡ್ಡ ಕೊಠಡಿಗಳಿಗೆ ಸೂಕ್ತವಾಗಿ ವಿನ್ಯಾಸಗೊಳಿಸಲಾದ ಈ ಸೌಂಡ್‌ಬಾರ್ 5.25-ಇಂಚಿನ ಸಬ್ ವೂಫರ್ ಮತ್ತು ಡ್ಯುಯಲ್ 2.25-ಇಂಚಿನ ಡ್ರೈವರ್‌ಗಳನ್ನು ಹೊಂದಿದೆ. ಇದು HDMI (ARC), ಬ್ಲೂಟೂತ್ 5.0, ಆಪ್ಟಿಕಲ್, USB, ಮತ್ತು AUX ಇನ್‌ಪುಟ್‌ಗಳಂತಹ ವಿವಿಧ ಸಂಪರ್ಕ ಆಯ್ಕೆಗಳನ್ನು ನೀಡುತ್ತದೆ. SB-120 Pro ಸಹ LED ಡಿಸ್ಪ್ಲೇ, ಬಹು EQ ಮೋಡ್‌ಗಳು ಮತ್ತು ರಿಮೋಟ್ ಕಂಟ್ರೋಲ್ ಅನ್ನು ಹೊಂದಿದೆ. ಇದರ ಅಳತೆ 920x80x85mm ಆಗಿದೆ.
Akai Soul SB-160 ವೈಶಿಷ್ಟ್ಯಗಳು
Akai Soul ಸರಣಿಯಲ್ಲಿ ಪ್ರಮುಖ ಮಾದರಿಯಾದ SB-160, 2.1-ಚಾನೆಲ್ ಕ್ಲಾಸ್ D ಆಂಪ್ಲಿಫೈಯರ್‌ನಿಂದ ಚಾಲಿತವಾಗಿದ್ದು, 160W RMS ಔಟ್‌ಪುಟ್ ನೀಡುತ್ತದೆ. ಇದು ಶಕ್ತಿಯುತ 6.5-ಇಂಚಿನ ಸಬ್ ವೂಫರ್ ಮತ್ತು ನಾಲ್ಕು 2.25-ಇಂಚಿನ ಡ್ರೈವರ್‌ಗಳನ್ನು ಹೊಂದಿದೆ. ಗೇಮಿಂಗ್ ಮತ್ತು ಗೃಹ ಮನರಂಜನೆಗೆ ಇದು ಸೂಕ್ತವಾಗಿದೆ ಎಂದು ಕಂಪನಿ ಹೇಳುತ್ತದೆ. ಸಂಪರ್ಕ ಆಯ್ಕೆಗಳಲ್ಲಿ HDMI (ARC), ಬ್ಲೂಟೂತ್ 5.0, ಆಪ್ಟಿಕಲ್, USB ಮತ್ತು AUX ಸೇರಿವೆ. ಇದು LED ಡಿಸ್ಪ್ಲೇ, ರಿಮೋಟ್ ಕಂಟ್ರೋಲ್ ಮತ್ತು ಬಹು EQ ಸೌಂಡ್ ಮೋಡ್‌ಗಳನ್ನು ಸಹ ನೀಡುತ್ತದೆ. ಇದರ ಅಳತೆ 920x80x85mm ಆಗಿದೆ.
ಭಾರತದಲ್ಲಿ Akai Soul ಸರಣಿಯ ಸೌಂಡ್‌ಬಾರ್‌ಗಳ ಬೆಲೆ
Akai Soul ಸರಣಿಯ ಸೌಂಡ್‌ಬಾರ್‌ಗಳು ಭಾರತದಲ್ಲಿ ರೂ. 5,990 ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಗಿವೆ. ಇವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು, ಅಕಾಯ್‌ನ ಅಧಿಕೃತ ವೆಬ್‌ಸೈಟ್ ಮತ್ತು ಇತರ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಖರೀದಿಗೆ ಲಭ್ಯವಿವೆ ಎಂದು ಕಂಪೆನಿಯು ತಿಳಿಸಿದೆ.
Akai Soul SB-160 ಸೌಂಡ್‌ಬಾರ್ ಈ ಸರಣಿಯಲ್ಲೇ ಪ್ರೀಮಿಯಂ ಮಾದರಿಯಾಗಿದ್ದು, 160W ಔಟ್‌ಪುಟ್ ಮತ್ತು ಶಕ್ತಿಯುತ 6.5-ಇಂಚಿನ ಸಬ್ ವೂಫರ್ ಅನ್ನು ಹೊಂದಿದೆ. ಇದು ಗೇಮಿಂಗ್ ಮತ್ತು ಗೃಹ ಮನರಂಜನೆಗೆ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಕಂಪನಿಯು ಹೇಳಿದಕೊಂಡಿದೆ. ಪ್ರವೇಶ ಮಟ್ಟದ ಆಯ್ಕೆಯಾಗಿರುವ Akai Soul SB-100 ಸೌಂಡ್‌ಬಾರ್ 100W ಔಟ್‌ಪುಟ್ ನೀಡುತ್ತದೆ. ಮಧ್ಯಮ ಶ್ರೇಣಿಯ Akai Soul SB-120 Pro ಸೌಂಡ್‌ಬಾರ್ 120W ಆಡಿಯೊ ಸಾಮರ್ಥ್ಯವನ್ನು ಹೊಂದಿದೆ.
ಈ ಹೊಸ ಸೌಂಡ್‌ಬಾರ್‌ಗಳು ಅಕಾಯ್‌ನ ಬಜೆಟ್ ಸ್ನೇಹಿ ಉತ್ಪನ್ನಗಳ ಶ್ರೇಣಿಗೆ ಉತ್ತಮ ಸೇರ್ಪಡೆಯಾಗಿದ್ದು, ಗ್ರಾಹಕರಿಗೆ ವೈವಿಧ್ಯಮಯ ಆಯ್ಕೆಗಳನ್ನು ಒದಗಿಸುತ್ತವೆ. ಉತ್ತಮ ಆಡಿಯೊ ಅನುಭವವನ್ನು ಬಯಸುವವರಿಗೆ ಇವು ಆಕರ್ಷಕ ಆಯ್ಕೆಯಾಗಿವೆ ಎಂದು ಹೇಳಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








