ಭಾರತದಲ್ಲಿ Amazfit Bip 6 ಸ್ಮಾರ್ಟ್‌ವಾಚ್ ಬಿಡುಗಡೆ: ಅತ್ಯಾಧುನಿಕ ವೈಶಿಷ್ಟ್ಯಗಳು!
ಜನಪ್ರಿಯ ಸ್ಮಾರ್ಟ್‌ವಾಚ್ ಬ್ರ್ಯಾಂಡ್ Amazfit ಹೊಸದಾಗಿ Amazfit Bip 6 ಎಂಬ ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸಿದೆ. Amazfit Bip ಸರಣಿಗೆ ಹೊಸದಾಗಿ ಸೇರ್ಪಡೆಯಾಗಿರುವ ಈ ನೂತನ ಸ್ಮಾರ್ಟ್‌ವಾಚ್ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಲಗ್ಗೆ ಇಟ್ಟಿದ್ದು, ಈ ಹಿಂದೆ ಇದ್ದ LCD ಪರದೆಯ ಬದಲಿಗೆ AMOLED ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಗಮನಸೆಳೆದಿದೆ. ಇದರಿಂದ ಈ ಸ್ಮಾರ್ಟ್‌ವಾಚ್ ಡಿಸ್‌ಪ್ಲೇ ಮತ್ತು ನೀರಿನ ಪ್ರತಿರೋಧದ ಸಾಮರ್ಥ್ಯ ಗಮನಾರ್ಹವಾಗಿದೆ. ಹಾಗಾದರೆ, ಹೊಸ Amazfit Bip 6 ಸ್ಮಾರ್ಟ್‌ವಾಚ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Amazfit Bip 6 ಸ್ಮಾರ್ಟ್‌ವಾಚ್ ವಿನ್ಯಾಸ ಮತ್ತು ವೈಶಿಷ್ಟ್ಯಗಳು,
ನೂತನ Amazfit Bip 6 ಸ್ಮಾರ್ಟ್‌ವಾಚ್ ಗಟ್ಟಿಮುಟ್ಟಾದ ಅಲ್ಯೂಮಿನಿಯಂ ಮಿಶ್ರಲೋಹದ ಚೌಕಟ್ಟಿನ ವಿನ್ಯಾಸವನ್ನು ಹೊಂದಿದೆ. ಇದರೊಂದಿಗೆ, ಅಂತರ್ನಿರ್ಮಿತ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಸಹ ನೀಡಲಾಗಿದೆ. ಪರದೆಯನ್ನು ಗೀರುಗಳು ಬೀಳದಂತೆ ತಡೆಯಲು ಆಂಟಿ-ಫಿಂಗರ್‌ಪ್ರಿಂಟ್ ಲೇಪನದೊಂದಿಗೆ ಟೆಂಪರ್ಡ್ ಗ್ಲಾಸ್‌ನಿಂದ ರಕ್ಷಿಸಲಾಗಿದೆ. ಇದು ಬಳಕೆದಾರರು ನೇರವಾಗಿ ತಮ್ಮ ಸ್ಮಾರ್ಟ್‌ವಾಚ್ ನಿಂದಲೇ ಬ್ಲೂಟೂತ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಅವಕಾಶ ನೀಡುತ್ತದೆ. ನೀರಿನ ಪ್ರತಿರೋಧದ ವಿಷಯಕ್ಕೆ ಬಂದರೆ, Amazfit Bip 6 5 ಎಟಿಎಂ ವರೆಗಿನ ಸಾಮರ್ಥ್ಯವನ್ನು ಹೊಂದಿದೆ. ಅಂದರೆ ಇದು 50 ಮೀಟರ್ ಆಳದ ನೀರಿನಲ್ಲಿಯೂ ಸುರಕ್ಷಿತವಾಗಿರುತ್ತದೆ. ಈ ವೈಶಿಷ್ಟ್ಯವು ಹಿಂದಿನ ಬಿಪ್ 5 ರ IP68 ರೇಟಿಂಗ್‌ಗಿಂತಲೂ ಉತ್ತಮವಾಗಿದೆ. ಈಜುಗಾರರಿಗೆ ಮತ್ತು ಜಲ ಕ್ರೀಡೆಗಳನ್ನು ಇಷ್ಟಪಡುವವರಿಗೆ ಇದು ಬಹಳ ಉಪಯುಕ್ತವಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಈ Amazfit Bip 6 ಸ್ಮಾರ್ಟ್‌ವಾಚ್‌ನಲ್ಲಿ 1.97 ಇಂಚಿನ ದೊಡ್ಡದಾದ AMOLED ಡಿಸ್ಪ್ಲೇಯನ್ನು ನೀಡಲಾಗಿದೆ. ಈ ಹಿಂದೆ ಇದ್ದ LCD ಪರದೆಯ ಬದಲಿಗೆ AMOLED ತಂತ್ರಜ್ಞಾನವನ್ನು ಅಳವಡಿಸಿರುವುದು ಬಳಕೆದಾರರಿಗೆ ಉತ್ತಮ ದೃಶ್ಯ ಅನುಭವವನ್ನು ನೀಡುತ್ತದೆ. ಇದರ ಗರಿಷ್ಠ ಹೊಳಪು 2,000 ನಿಟ್ ಗಳವರೆಗೆ ಇರುತ್ತದೆ. ಇದರಿಂದಾಗಿ ನೇರ ಸೂರ್ಯನ ಬೆಳಕಿನಲ್ಲಿಯೂ ಪರದೆಯು ಸ್ಪಷ್ಟವಾಗಿ ಗೋಚರಿಸುತ್ತದೆ. ಅಲ್ಲದೆ, ಸುತ್ತುವರಿದ ಬೆಳಕಿಗೆ ಅನುಗುಣವಾಗಿ ಹೊಳಪನ್ನು ಸ್ವಯಂಚಾಲಿತವಾಗಿ ಹೊಂದಿಸಲು ಆಂಬಿಯೆಂಟ್ ಲೈಟ್ ಸೆನ್ಸರ್ ಅನ್ನು ಸಹ ನೀಡಲಾಗಿದೆ. ಇದಲ್ಲದೆ, ಈ ಸ್ಮಾರ್ಟ್‌ವಾಚ್‌ನಲ್ಲಿ ಅಂತರ್ನಿರ್ಮಿತ ಜಿಪಿಎಸ್ ಅನ್ನು ನೀಡಲಾಗಿದೆ. ಇದರಿಂದಾಗಿ ಬಳಕೆದಾರರು ತಮ್ಮ ಚಲನವಲನಗಳನ್ನು ನಿಖರವಾಗಿ ಟ್ರ್ಯಾಕ್ ಮಾಡಬಹುದು.

ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವವರಿಗಾಗಿ, Amazfit Bip 6 ಸ್ಮಾರ್ಟ್‌ವಾಚ್ 140 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಒಳಗೊಂಡಿದೆ. ಇದರಲ್ಲಿ HYROX ರೇಸ್ ಮತ್ತು ಸ್ಮಾರ್ಟ್ ಸ್ಟ್ರೆಂತ್ ಟ್ರೈನಿಂಗ್‌ನಂತಹ ವಿಶೇಷ ವಿಧಾನಗಳು ಸಹ ಸೇರಿವೆ. ವೈಯಕ್ತೀಕರಿಸಿದ AI ತರಬೇತಿಯನ್ನು ನೀಡುವ ಸಾಮರ್ಥ್ಯವನ್ನು ಈ ವಾಚ್ ಹೊಂದಿದೆ. ಇದರ ಬ್ಯಾಟರಿ ಬಾಳಿಕೆಯು ಸಹ ಗಮನಾರ್ಹವಾಗಿದ್ದು, ಸಾಮಾನ್ಯ ಬಳಕೆಯಲ್ಲಿ ಇದು ಎರಡು ವಾರಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕನೆಕ್ಟಿವಿಟಿಗಾಗಿ ಬ್ಲೂಟೂತ್ 5.2 ಅನ್ನು ನೀಡಲಾಗಿದೆ. ಇದು ಆಂಡ್ರಾಯ್ಡ್ 7.0 ಅಥವಾ ಹೆಚ್ಚಿನ ಮತ್ತು iOS 14.0 ಅಥವಾ ಹೆಚ್ಚಿನ ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುವ ಸಾಧನಗಳೊಂದಿಗೆ ಹೊಂದಿಕೊಳ್ಳುತ್ತದೆ.
Amazfit Bip 6 ಸ್ಪೆಸಿಫಿಕೇಶನ್‌ಗಳ ಕುರಿತು ನೋಡುವುದಾದರೆ, ಇದು 390 x 450 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ 1.97-ಇಂಚಿನ AMOLED ಪರದೆಯನ್ನು ಹೊಂದಿದೆ. Zepp OS 2.0 ಆಪರೇಟಿಂಗ್ ಸಿಸ್ಟಮ್‌ನಿಂದ ಚಾಲಿತವಾಗುವ ಈ ಸ್ಮಾರ್ಟ್‌ವಾಚ್‌ನಲ್ಲಿ ಬ್ಲೂಟೂತ್ ಕರೆಗಳಿಗಾಗಿ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ನೀಡಲಾಗಿದೆ. ಆರೋಗ್ಯ ಸಂಬಂಧಿತ ವೈಶಿಷ್ಟ್ಯಗಳಾದ ವೇಗವರ್ಧಕ, ಗೈರೊಸ್ಕೋಪ್, ಸುತ್ತುವರಿದ ಬೆಳಕು, ಭೂಕಾಂತೀಯ ಸಂವೇದಕಗಳು ಮತ್ತು ರಕ್ತ-ಆಮ್ಲಜನಕ ಮೇಲ್ವಿಚಾರಣೆಯನ್ನು ಬೆಂಬಲಿಸುವ ಬಯೋಟ್ರಾಕರ್ PPG ಬಯೋಮೆಟ್ರಿಕ್ ಸಂವೇದಕವನ್ನು ಇದು ಒಳಗೊಂಡಿದೆ. ಈ ಸಾಧನವು 340mAh ಬ್ಯಾಟರಿಯನ್ನು ಹೊಂದಿದ್ದು, ಸಾಮಾನ್ಯ ಬಳಕೆಯಲ್ಲಿ ಎರಡು ವಾರಗಳವರೆಗೆ, ಭಾರೀ ಬಳಕೆಯಲ್ಲಿ ಆರು ದಿನಗಳವರೆಗೆ ಮತ್ತು ಬ್ಯಾಟರಿ ಸೇವರ್ ಮೋಡ್‌ನಲ್ಲಿ ಇಪ್ಪತ್ತಾರು ದಿನಗಳವರೆಗೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಇಷ್ಟೇ ಅಲ್ಲದೆ, ಈ Amazfit Bip 6 ವಾಚ್ ನಿರಂತರ ಹೃದಯ ಬಡಿತ ಮಾಪನ, SpO2 ಮಾಪನ, ಒತ್ತಡದ ಮೇಲ್ವಿಚಾರಣೆ ಮತ್ತು ಕೇವಲ ಒಂದು ಸ್ಪರ್ಶದಿಂದ ಎಲ್ಲ ಆರೋಗ್ಯ ಮಾಹಿತಿಯನ್ನು ಪಡೆಯುವಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದರೊಂದಿಗೆ, ಕ್ಯಾಲೆಂಡರ್ ಜ್ಞಾಪನೆಗಳು, ಕರೆ ಅಧಿಸೂಚನೆಗಳು ಮತ್ತು ಇತರ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳ ಅಧಿಸೂಚನೆಗಳನ್ನು ನೇರವಾಗಿ ವಾಚ್‌ನಲ್ಲಿ ಪಡೆಯಬಹುದು. ಸಂಗೀತ ನಿಯಂತ್ರಣ ಮತ್ತು ಕ್ಯಾಮೆರಾ ನಿಯಂತ್ರಣದಂತಹ ಹೆಚ್ಚುವರಿ ವೈಶಿಷ್ಟ್ಯಗಳು ಸಹ ಇದರಲ್ಲಿವೆ. ಈ ಸ್ಮಾರ್ಟ್‌ವಾಚ್ 46.3 x 40.2 x 10.45mm ಅಳತೆಗಳನ್ನು ಹೊಂದಿದೆ ಮತ್ತು ಪಟ್ಟಿಯಿಲ್ಲದೆ ಕೇವಲ 27.9g ತೂಗುತ್ತದೆ. ಇದು ಧೂಳು ಮತ್ತು ನೀರಿನ ನಿರೋಧಕತೆಯನ್ನು ಸಹ ಹೊಂದಿದೆ.
ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Amazfit Bip 6 ಸ್ಮಾರ್ಟ್‌ಫೋನ್ ಬೆಲೆ ರೂ. 7,999 ಆಗಿದೆ. ಇಂದು ಮಧ್ಯಾಹ್ನದಿಂದ ಇದು Amazon.in ಮತ್ತು ಅಧಿಕೃತ ಅಮೇಜ್‌ಫಿಟ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಕಪ್ಪು, ಇದ್ದಿಲು, ಕಲ್ಲು ಮತ್ತು ಕೆಂಪು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪೆನಿ ತಿಳಿಸಿದೆ.ಈ ಬಿಡುಗಡೆಯ ಕುರಿತು ಮಾತನಾಡಿದ ಅಮೇಜ್‌ಫಿಟ್ ಇಂಡಿಯಾದ ಸಿಪಿ ಖಂಡೇಲ್ವಾಲ್, ಭಾರತೀಯ ಸ್ಮಾರ್ಟ್‌ವಾಚ್ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿದೆ ಮತ್ತು ₹7,999 ರ ಬೆಲೆಯಲ್ಲಿ 2000 ನಿಟ್‌ಗಳ ಡಿಸ್ಪ್ಲೇಯನ್ನು ನೀಡುವ ಮೂಲಕ ಉನ್ನತ ಮಟ್ಟದ ತಂತ್ರಜ್ಞಾನವನ್ನು ಎಲ್ಲರಿಗೂ ತಲುಪಿಸುವ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications








