Amazon Echo Show 11 ಬಿಡುಗಡೆ: ಪ್ರೀಮಿಯಂ ಸ್ಮಾರ್ಟ್ ಹೋಮ್ ಗ್ಯಾಜೆಟ್!
ಇ-ಕಾಮರ್ಸ್ ದೈತ್ತ ಅಮೆಜಾನ್ ತನ್ನ ಸ್ಮಾರ್ಟ್ ಹೋಮ್ ಗ್ಯಾಜೆಟ್ Amazon Echo Show 11 ಅನ್ನು ಭಾರತದಲ್ಲಿ ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇತ್ತೀಚಿ ಈನ ಸ್ಮಾರ್ಟ್ ಹೋಮ್ ಸಾಧನವು ಕಂಪನಿಯ ಕಸ್ಟಮ್-ವಿನ್ಯಾಸಗೊಳಿಸಿದ ಸಿಲಿಕಾನ್ ಚಿಪ್‌ನಿಂದ ಚಾಲಿತವಾಗಿದ್ದು, ಕುಟುಂಬ ಬಳಕೆ ಮತ್ತು ಸ್ಮಾರ್ಟ್ ಮನೆ ನಿರ್ವಹಣೆಗೆ ಸೂಕ್ತವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಜಾಗತಿಕವಾಗಿ ಪರಿಚಯವಾದ ಕೇವಲ ಮೂರೇ ತಿಂಗಳಿಗೆ ದೇಶದಲ್ಲಿ ಈ ಸಾಧನವು ಪರಿಚಯಗೊಂಡಿರುವುದು ದೇಶದಲ್ಲಿ ಸ್ಮಾರ್ಟ್ ಡಿಸ್‌ಪ್ಲೇ ಮತ್ತು ಮನೆ automation ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಸ್ಪಷ್ಟಪಡಿಸುತ್ತದೆ.
Amazon Echo Show 11: ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Amazon Echo Show 11 ಬೆಲೆ 26,999 ರೂ.ಗಳಾಗಿದ್ದು, ಇದು Glacier White ಮತ್ತು Graphite ಬಣ್ಣಗಳಲ್ಲಿ ಲಭ್ಯವಿದೆ. ಗ್ರಾಹಕರು ಇದನ್ನು Amazon India ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬಹುದು.
Amazon Echo Show 11: ಪ್ರಮುಖ ವೈಶಿಷ್ಟ್ಯಗಳು
ಹೊಸ Amazon Echo Show 11 ಸಾಧನವನ್ನು ಕುಟುಂಬ ಬಳಕೆ ಮತ್ತು ಸ್ಮಾರ್ಟ್ ಮನೆ ನಿರ್ವಹಣೆಗೆ ಸೂಕ್ತವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ.ಪ್ರೀಮಿಯಂ ಸೆಗ್ಮೆಂಟ್‌ನಲ್ಲಿರುವ ಈ ಸಾಧನದ ದೊಡ್ಡ ಪರದೆ, ಹೊಸ ಚಿಪ್ ಮತ್ತು ವೈಯಕ್ತಿಕ ಅಲೆಕ್ಸಾ ಅನುಭವವೇ ಇದರ ಪ್ರಮುಖ ಆಕರ್ಷಣೆಯಾಗಿದೆ. ಇದು ಸೊಗಸಾದ 3D ನಿಟ್ ಫ್ಯಾಬ್ರಿಕ್ ಫಿನಿಶ್ ಮತ್ತು ಕಾಂಪ್ಯಾಕ್ಟ್ ವಿನ್ಯಾಸದಲ್ಲಿ ಪ್ರೀಮಿಯಂ ಲುಕ್ ನೀಡುತ್ತದೆ. ಈ ಸಾಧನದಲ್ಲಿ ಸ್ಮಾರ್ಟ್ ಡಿಸ್‌ಪ್ಲೇ ನೀಡಲಾಗಿದ್ದು, ಇದು 10.95 ಇಂಚಿನ ಫುಲ್ HD ಟಚ್‌ಸ್ಕ್ರೀನ್ ಹೊಂದಿದೆ.
ಕಾರ್ಯಕ್ಷಮತೆಯ ದೃಷ್ಟಿಯಿಂದ, Echo Show 11 ನಲ್ಲಿ Amazon ನ ಸ್ವಂತ AZ3 Pro ಚಿಪ್‌ಸೆಟ್ ಬಳಸಲಾಗಿದೆ. ಇದು ಹೊಸ Vega ಆಪರೇಟಿಂಗ್ ಸಿಸ್ಟಮ್ ಮೇಲೆ ಕಾರ್ಯನಿರ್ವಹಿಸುತ್ತದೆ. ಹೊಸ ಅಲೆಕ್ಸಾ ಹೋಮ್ ಸ್ಕ್ರೀನ್ ಬಳಕೆದಾರರ ದಿನಚರಿ ಮತ್ತು ಆಸಕ್ತಿಗಳ ಆಧಾರದ ಮೇಲೆ ಅಗತ್ಯ ಮಾಹಿತಿಯನ್ನು ತೋರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ, ಹೆಚ್ಚು ಸಂಭಾಷಣಾ ಅನುಭವ ನೀಡುವ Alexa+ ಸೇವೆ ಭಾರತದಲ್ಲಿ ಇನ್ನೂ ಲಭ್ಯವಾಗಿಲ್ಲ ಎಂಬುದನ್ನು ಸಹ ನಾವಿಲ್ಲಿ ಗಮನಿಸಬೇಕು.

ಭದ್ರತೆ ಮತ್ತು ವೈಯಕ್ತಿಕ ಅನುಭವಕ್ಕಾಗಿ, ಈ ಸಾಧನದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು Visual ID ತಂತ್ರಜ್ಞಾನ ನೀಡಲಾಗಿದೆ. ಬಳಕೆದಾರರು ಸಾಧನದ ಮುಂದೆ ಬಂದಾಗ ಅದನ್ನು ಗುರುತಿಸಿ, ಸಂಬಂಧಿತ ಮಾಹಿತಿಯನ್ನು ತೋರಿಸುವ ಸಾಮರ್ಥ್ಯ ಇದಕ್ಕಿದೆ. ಜೊತೆಗೆ, ಹೊಂದಾಣಿಕೆಯಾಗುವ ಸಿಕ್ಯೂರಿಟಿ ಕ್ಯಾಮೆರಾ ಮತ್ತು ವೀಡಿಯೋ ಡೋರ್ಬೆಲ್‌ಗಳನ್ನು ಈ ಡಿಸ್ಪ್ಲೇಗೆ ಸಂಪರ್ಕಿಸಿ ಮನೆಯಿಂದಲೇ ನಿಗಾವಹಿಸಬಹುದು.
Amazon ನ ಹೊಸ Omnisense ಸೆನ್ಸರ್ ಪ್ಲಾಟ್‌ಫಾರ್ಮ್ Echo Show 11 ನ ಮತ್ತೊಂದು ಪ್ರಮುಖ ಅಂಶ. ಇದು ತಾಪಮಾನ ಮತ್ತು ಹಾಜರಾತಿ ಆಧಾರಿತ automation ರೂಟೀನ್‌ಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಕೊಠಡಿಯಲ್ಲಿ ಯಾರಾದರೂ ಪ್ರವೇಶಿಸಿದಾಗ ಲೈಟ್ ಆನ್ ಆಗುವುದು ಅಥವಾ ತಾಪಮಾನ ಹೆಚ್ಚಾದಾಗ ಫ್ಯಾನ್ ಸ್ವಯಂಚಾಲಿತವಾಗಿ ಆನ್ ಆಗುವಂತೆ ಸೆಟ್ ಮಾಡಬಹುದು.ಮನರಂಜನೆಗೆ ಒತ್ತು ನೀಡಿರುವ ಈ ಸಾಧನದಲ್ಲಿ ಫ್ರಂಟ್-ಫೇಸಿಂಗ್ ಸ್ಟೀರಿಯೋ ಸ್ಪೀಕರ್‌ಗಳು, ಕಸ್ಟಮ್ ವೂಫರ್ ಮತ್ತು ಸ್ಪೇಷಿಯಲ್ ಆಡಿಯೋ ಸಪೋರ್ಟ್ ನೀಡಲಾಗಿದೆ. ಮ್ಯೂಸಿಕ್, ಪಾಡ್‌ಕಾಸ್ಟ್ ಮತ್ತು ಆಂಬಿಯಂಟ್ ಸೌಂಡ್‌ಗಳನ್ನು ಸುಲಭವಾಗಿ ಹುಡುಕಲು ಮತ್ತು ನಿಯಂತ್ರಿಸಲು ಹೊಸ ಮೀಡಿಯಾ ಕಂಟ್ರೋಲ್ ಸೆಂಟರ್ ಸಹ ಇದೆ.
ಗೌಪ್ಯತೆ ವಿಚಾರದಲ್ಲಿ Amazon ಹೆಚ್ಚುವರಿ ಭದ್ರತಾ ಕ್ರಮಗಳನ್ನು ಅಳವಡಿಸಿದೆ. ಮೈಕ್ರೋಫೋನ್ ಮ್ಯೂಟ್ ಬಟನ್, ಕ್ಯಾಮೆರಾ ಆನ್/ಆಫ್ ಕಂಟ್ರೋಲ್‌ಗಳು ಮತ್ತು Alexa ಆಪ್ ಮೂಲಕ ಧ್ವನಿ ಹಾಗೂ ವೀಡಿಯೋ ದಾಖಲೆಗಳನ್ನು ವೀಕ್ಷಿಸಿ ಅಳಿಸುವ ಆಯ್ಕೆಗಳು ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣ ನೀಡುತ್ತವೆ.ಒಟ್ಟಿನಲ್ಲಿ, Amazon Echo Show 11 ಭಾರತದಲ್ಲಿ ಸ್ಮಾರ್ಟ್ ಹೋಮ್ ಅನುಭವವನ್ನು ಹೊಸ ಹಂತಕ್ಕೆ ಕೊಂಡೊಯ್ಯುವ ಸಾಧನವಾಗಿ ಕಾಣಿಸುತ್ತದೆ. ದು ಪ್ರೀಮಿಯಂ ಸ್ಮಾರ್ಟ್ ಡಿಸ್ಪ್ಲೇ ಹುಡುಕುತ್ತಿರುವ ಬಳಕೆದಾರರಿಗೆ ಆಕರ್ಷಕ ಆಯ್ಕೆಯಾಗಿದೆ.


Click it and Unblock the Notifications








