Home
Gadgets

ಪೇಟಿಎಂ ಮಾಲ್ ಕ್ಯಾಷ್ ಬ್ಯಾಕ್ ಸೇಲ್: ಮ್ಯಾಕ್ ಬುಕ್ ಏರ್ ಕೇವಲ ₹ 48,490ಗೆ ಲಭ್ಯ

ಒಂದು ವೇಳೆ ನೀವು ಆಪಲ್ ಮ್ಯಾಕ್ ಬುಕ್ ಏರ್ ನ್ನು ಖರೀದಿಸಬೇಕು ಎಂದು ಯೋಚಿಸುತ್ತಿದ್ದರೆ ಇದು ಸರಿಯಾದ ಸಮಯ.ಇದೀಗ ನಡೆಯುತ್ತಿರುವ ಪೇಟಿಎಂ ಮಾಲ್ ಮಹಾ ಕ್ಯಾಷ್ ಬ್ಯಾಕ್ ಸೇಲ್ ನಲ್ಲಿ 128ಜಿಬಿ ಆಪಲ್ ಮ್ಯಾಕ್ ಬುಕ್ ನ್ನು ಅತೀ ಕಡಿಮೆ ಅಂದರೆ 48,490 ರುಪಾಯಿ ಬೆಲೆಯಲ್ಲಿ ಖರೀದಿಸಲು ಅವಕಾಶವಿದೆ.

ಪೇಟಿಎಂ ಮಾಲ್ ಕ್ಯಾಷ್ ಬ್ಯಾಕ್ ಸೇಲ್: ಮ್ಯಾಕ್ ಬುಕ್ ಏರ್ ಕೇವಲ ₹ 48,490ಗೆ ಲಭ್ಯ

ಕೆಲವೇ ದಿನಗಳಿಗೆ ಇರುವ ಈ ಆಫರ್ ಅಕ್ಟೋಬರ್ 11 ರಿಂದ ಲಭ್ಯವಿದ್ದು ಸ್ಟಾಕ್ ಮುಗಿಯುವವರೆಗೂ ನಡೆಯಲಿದೆ.ಮ್ಯಾಕ್ ಬುಕ್ ಏರ್ ನ ಎಂಆರ್ ಪಿ ಬೆಲೆ 77,200 ರುಪಾಯಿಗಳು. ಆಪಲ್ ಮುಂದಿನ ಜನರೇಷನ್ನಿನ ಮ್ಯಾಕ್ ಬುಕ್ ಏರ್ ನ್ನು ಬಿಡುಗಡೆಗೊಳಿಸುವ ತಯಾರಿಯಲ್ಲಿದ್ದು ಅಧಿಕೃತ ಮಾಹಿತಿ ಇದುವರೆಗೂ ಹೊರಬಿದ್ದಿಲ್ಲ.

ಪೇಟಿಎಂ ಮಾಲ್ ನ ಆಫರ್ ವಿವರ

ಪೇಟಿಎಂ ಮಾಲ್ ನ ಆಫರ್ ವಿವರ

ಮ್ಯಾಕ್ ಬುಕ್ ಏರ್ ನ್ನು ಪೇಟಿಎಂ ಮಾಲ್ ಗ್ರಾಹಕರು ರಿಯಾಯಿತಿ ಬೆಲೆ ಅಂದರೆ 65,990 ರುಪಾಯಿ ಬೆಲೆಗೆ ಅಕ್ಟೋಬರ್ 11 ರಿಂದ ಖರೀದಿಸಬಹುದು. ಪೇಟಿಎಂ ಮಾಲ್ 10,000 ರುಪಾಯಿಯ ಕ್ಯಾಷ್ ಬ್ಯಾಕ್ ಆಫರ್ ನ್ನು ನೀಡುತ್ತಿದೆ ಮತ್ತು 5,000 ರುಪಾಯಿ ಬೆಲೆಬಾಳುವ ವೋಚರ್ ನ್ನು ಸೇಲ್ ನ ಸಂದರ್ಬದಲ್ಲಿ ನೀಡುತ್ತಿದೆ. ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ ಹೆಚ್ಚುವರಿ 10% ಅಂದರೆ 2,500 ರುಪಾಯಿ ಕ್ಯಾಷ್ ಬ್ಯಾಕ್ ಲಭ್ಯವಾಗುತ್ತದೆ. ಈ ಎಲ್ಲಾ ಆಫರ್ ಗಳನ್ನು ಪಡೆದು ಖರೀದಿಸುವ ಗ್ರಾಹಕರಿಗೆ ಆಪಲ್ ಮ್ಯಾಕ್ ಬುಕ್ ಏರ್ 48,490 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ.

ವೋಚರ್ ನಲ್ಲಿ ಏನೇನಿದೆ?

ವೋಚರ್ ನಲ್ಲಿ ಏನೇನಿದೆ?

ಪೇಟಿಎಂ ಮಾಲ್ ನೀಡುವ 5,000 ರುಪಾಯಿ ಬೆಲೆಬಾಳುವ ವೋಚರ್ ನಲ್ಲಿ 4 ಉಚಿತ ಚಲನಚಿತ್ರದ ಟಿಕೆಟ್ ಗಳಿರುತ್ತದೆ ( 600 ರೂಪಾಯಿ ಬೆಲೆ) , ಉಚಿತ ಬ್ಯಾಕ್ ಪ್ಯಾಕ್ ವೋಚರ್ 1,200 ರುಪಾಯಿ, ದಿನಬಳಸಿ ವಸ್ತುಗಳ ಖರೀದಿಯ ವೋಚರ್ 1,200 ರುಪಾಯಿ, ಫ್ಲೈಟ್ ವೋಚರ್ 1,500 ರುಪಾಯಿ, ಮೊಬೈಲ್ ರೀಚಾರ್ಜ್ ಮತ್ತು ಬಿಲ್ ಪಾವತಿ ವೋಚರ್ 500 ರೂಪಾಯಿ ಬೆಲೆಬಾಳುತ್ತದೆ.

ಪೇಟಿಎಂ ಮಾಲ್ ನ ಇತರೆ ಆಫರ್ ಗಳು:

ಪೇಟಿಎಂ ಮಾಲ್ ನ ಇತರೆ ಆಫರ್ ಗಳು:

ಪೇಟಿಎಂ ಮಾಲ್ ಗ್ರಾಹಕರು ರೆನಾಲ್ಟ್ ಕ್ವಿಡ್ , ಚಿನ್ನದ ನಾಣ್ಯ, ಸ್ಯಾಮ್ ಸಂಗ್ ಎಲ್ಇಡಿ ಟಿವಿ, ಐಫೋನ್ ಎಕ್ಸ್ಎಸ್ ಮತ್ತು ಇನ್ನೂ ಹಲವು ವಸ್ತುಗಳನ್ನು ಗೆಲ್ಲುವ ಸದವಕಾಶವು ಮಹಾ ಕ್ಯಾಷ್ ಬ್ಯಾಕ್ ಮೇಳದಲ್ಲಿ ಲಭ್ಯವಿದೆ. ಎಲ್ಲಾ ಪ್ರಮುಖ ಭಾರತೀಯ ಬ್ಯಾಂಕ್ ಗಳಿಂದ ನೋ ಕಾಸ್ಟ್ ಇಎಂಐ ಆಯ್ಕೆಯೂ ಕೂಡ ಲಭ್ಯವಿದೆ.

ಆಪಲ್ ಮ್ಯಾಕ್ ಬುಕ್ ಏರ್ ನ ವೈಶಿಷ್ಟ್ಯತೆಗಳು:

ಆಪಲ್ ಮ್ಯಾಕ್ ಬುಕ್ ಏರ್ ನ ವೈಶಿಷ್ಟ್ಯತೆಗಳು:

ಆಪಲ್ ಮ್ಯಾಕ್ ಬುಕ್ ಏರ್ ಇಂಟೆಲ್ ಕೋರ್ ಐ5 ಪ್ರೊಸೆಸರ್ ನ್ನು ಹೊಂದಿದ್ದು ಅದರ ಕ್ಲಾಕ್ ಸ್ಪೀಡ್ 1.8 GHz ಹೊಂದಿದೆ ಅದನ್ನು ಟರ್ಬೋ ಬೂಸ್ಟ್ ಮೂಲಕ 2.9 GHz ವರೆಗೆ ಹೆಚ್ಚಿಸಲು ಅವಕಾಶವಿರುತ್ತದೆ.ಇಂಟೆಲ್ HD ಗ್ರಾಫಿಕ್ಸ್ 6000 ಗ್ರಾಫಿಕ್ಸ್ ಕಾರ್ಡ್ ಜೊತೆಗೆ 8 GB DDR3 RAM ನ್ನು ಒಳಗೊಂಡಿದೆ. ಮ್ಯಾಕ್ ಬುಕ್ ಏರ್ ನ ತೂಕ 1.35kg ಇದೆ ಮತ್ತು 12 ಗಂಟೆಗಳ ವಯರ್ ಲೆಸ್ ವೆಬ್ ಬ್ಯಾಟರಿ ಟೈಮ್ ನ ಭರವಸೆ ಯನ್ನು ಕಂಪೆನಿ ನೀಡುತ್ತದೆ. ಸ್ಟ್ಯಾಂಡ್ ಬೈ ಟೈಂ 30 ದಿನಗಳವರೆಗೆ ಬ್ಯಾಟರಿ ಬರಲಿದೆ.

ಮ್ಯಾಕ್ ಬುಕ್ ಏರ್ ನಲ್ಲಿ ಫೇಸ್ ಟೈಮ್ ಹೆಚ್ ಡಿ ಕ್ಯಾಮರಾ ಇದ್ದು 720 ಪಿಕ್ಸಲ್ ರೆಸಲ್ಯೂಷನ್ ಇದ್ದು ಫೇಸ್ ಟೈಮ್ ವೀಡಿಯೋ ಕಾಲ್ ಗೆ ಬೆಂಬಲ ನೀಡುತ್ತದೆ.ಬಿಲ್ಟ್ ಇನ್ ಆಪ್ ಗಳಿದೆ ಮತ್ತು ಫೇಸ್ ಟೈಮ್, ಗ್ಯಾರೇಜ್ ಬ್ಯಾಂಡ್,ಐಟ್ಯೂನ್ಸ್, ಟೈಮ್ ಮಷೀನ್ ಮತ್ತು ಸಿರಿ ಇದರಲ್ಲಿ ಇದೆ.

Best Mobiles in India

English summary
Apple MacBook Air available for Rs 48,490 in Paytm Mall Maha cashback sale. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+