ಭಾರತದಲ್ಲಿ Watch Series 11, Ultra 3 ಮತ್ತು SE 3 ಬಿಡುಗಡೆ: ಸಂಪೂರ್ಣ ಮಾಹಿತಿ!
ಆಪಲ್ ಇತ್ತೀಚೆಗೆ ನಡೆದ ತನ್ನ 'Awe Dropping' ಕಾರ್ಯಕ್ರಮದಲ್ಲಿ ಹೊಸ ತಲೆಮಾರಿನ ಸ್ಮಾರ್ಟ್‌ವಾಚ್‌ಗಳಾದ Apple Watch Series 11, Watch Ultra 3 ಮತ್ತು Watch SE 3 ಸಾಧನಗಳನ್ನು ಪರಿಚಯಿಸಿದೆ. ಈ ಮೂರು ವಾಚ್‌ಗಳು ಸುಧಾರಿತ ವೈಶಿಷ್ಟ್ಯಗಳು, ಉತ್ತಮ ಬ್ಯಾಟರಿ ಬಾಳಿಕೆ ಮತ್ತು ವಿಭಿನ್ನ ವಿನ್ಯಾಸಗಳೊಂದಿಗೆ ಮಾರುಕಟ್ಟೆಗೆ ಬಂದಿವೆ. ಈ ವಾಚ್‌ಗಳ ಜೊತೆಗೆ iPhone 17 ಸರಣಿಯನ್ನೂ ಸಹ ಇದೇ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಗಿದೆ. ಈ ಲೇಖನದಲ್ಲಿ Apple Watch Series 11, Watch Ultra 3 ಮತ್ತು Watch SE 3 ಸ್ಮಾರ್ಟ್‌ವಾಚ್ ಸಾಧನಗಳ ಕುರಿತಂತೆ ನೋಡೋಣ.
ಹೊಸ ವೈಶಿಷ್ಟ್ಯಗಳು
ಆಪಲ್ ಈ ಹೊಸ ತಲೆಮಾರಿನ ವಾಚ್‌ಗಳಲ್ಲಿ ಸುಧಾರಿತ ತಂತ್ರಜ್ಞಾನ ಮತ್ತು ವಿನ್ಯಾಸದ ಮೇಲೆ ಗಮನ ಹರಿಸಿದೆ. Watch Series 11, Watch Ultra 3 ಮತ್ತು Watch SE 3 ಎಲ್ಲಾ ಮಾದರಿಗಳೂ 5G ಸಂಪರ್ಕವನ್ನು ಬೆಂಬಲಿಸುತ್ತವೆ.
Apple Watch Series 11: ಈ ವಾಚ್ watchOS 26 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ದ್ವಿಗುಣ ಸ್ಕ್ರಾಚ್ ರೆಸಿಸ್ಟೆನ್ಸ್ ಹೊಂದಿರುವ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಆರೋಗ್ಯ ವೈಶಿಷ್ಟ್ಯಗಳಲ್ಲಿ, ECG ಮತ್ತು ಹೃದಯ ಬಡಿತದ ನೋಟಿಫಿಕೇಶನ್‌ಗಳ ಜೊತೆಗೆ ರಕ್ತದೊತ್ತಡದ ಎಚ್ಚರಿಕೆಗಳನ್ನು (Hypertension ಸೂಚನೆಗಳು) ಸೇರಿಸಲಾಗಿದೆ. ಇದು ಸಂಪೂರ್ಣವಾಗಿ ಮರುಬಳಕೆಯ ಟೈಟಾನಿಯಂ ಮತ್ತು ಅಲ್ಯುಮಿನಿಯಂ ಬಳಸಿ ತಯಾರಿಸಲ್ಪಟ್ಟಿದೆ. ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 24 ಗಂಟೆಗಳ ಬ್ಯಾಟರಿ ಬಾಳಿಕೆ ನೀಡುತ್ತದೆ.
Apple Watch Ultra 3: ಈ ಮಾದರಿಯು ದೊಡ್ಡದಾದ LTPO3 OLED ಡಿಸ್‌ಪ್ಲೇ ಹೊಂದಿದೆ. ಇದು ಸಾಮಾನ್ಯ ಬಳಕೆಯಲ್ಲಿ 42 ಗಂಟೆಗಳವರೆಗೆ ಮತ್ತು ಲೋ ಪವರ್ ಮೋಡ್‌ನಲ್ಲಿ 72 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ನೀಡುತ್ತದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಉಪಗ್ರಹದ ಮೂಲಕ SOS ಅಲರ್ಟ್ ಮತ್ತು ಸಂದೇಶ ಕಳುಹಿಸುವ ಸಾಮರ್ಥ್ಯ. ಅಪಘಾತ ಅಥವಾ ತುರ್ತು ಪರಿಸ್ಥಿತಿಯಲ್ಲಿ ಇದು ಸ್ವಯಂಚಾಲಿತವಾಗಿ ಸಹಾಯಕ್ಕಾಗಿ ಕರೆ ಮಾಡುತ್ತದೆ.
Apple Watch SE 3: ಈ ಅಗ್ಗದ ಮಾದರಿಯಲ್ಲಿ ಮೊದಲ ಬಾರಿಗೆ ಆಲ್ವೇಸ್-ಆನ್ ಡಿಸ್‌ಪ್ಲೇ (Always-on display) ಮತ್ತು on-device Siri ಸೇರಿಸಲಾಗಿದೆ. ಇದು ದೇಹದ ಉಷ್ಣತೆಯನ್ನು ಅಳೆಯುವ ಸಾಮರ್ಥ್ಯವನ್ನೂ ಹೊಂದಿದೆ. ಈ ವಾಚ್ ಕೂಡ ಸಂಪೂರ್ಣವಾಗಿ ಮರುಬಳಕೆಯ ಅಲ್ಯುಮಿನಿಯಂನಿಂದ ತಯಾರಿಸಲ್ಪಟ್ಟಿದೆ ಮತ್ತು ಕ್ರ್ಯಾಕ್ ರೆಸಿಸ್ಟೆಂಟ್ ಗ್ಲಾಸ್ ಹೊಂದಿದೆ.

ಬೆಲೆ ಮತ್ತು ಲಭ್ಯತೆ
Watch Series 11, Watch Ultra 3 ಮತ್ತು Watch SE 3, ಈ ಮೂರು ಹೊಸ ಆಪಲ್ ವಾಚ್‌ಗಳು ಸೆಪ್ಟೆಂಬರ್ 19 ರಿಂದ ಜಾಗತಿಕವಾಗಿ ಮಾರಾಟಕ್ಕೆ ಲಭ್ಯವಿವೆ. ಪ್ರೀ-ಆರ್ಡರ್‌ಗಳು ನಮ್ಮ ಭಾರತ, ಅಮೆರಿಕಾ, ಯುಕೆ, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಜಪಾನ್, ಜರ್ಮನಿ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳಲ್ಲಿ ಈಗಾಗಲೇ ಪ್ರಾರಂಭವಾಗಿವೆ.
Apple Watch Series 11: ಇದರ ಆರಂಭಿಕ ಬೆಲೆ ಅಮೆರಿಕಾದಲ್ಲಿ $399 (ಸುಮಾರು ₹35,000) ಆಗಿದ್ದರೆ, ಭಾರತದಲ್ಲಿ ₹46,900 ರಿಂದ ಆರಂಭವಾಗುತ್ತದೆ. ಇದು 42mm ಮತ್ತು 46mm ಗಾತ್ರಗಳಲ್ಲಿ, ಜೊತೆಗೆ ಜೆಟ್ ಬ್ಲಾಕ್, ರೋಸ್ ಗೋಲ್ಡ್, ಸಿಲ್ವರ್ ಮತ್ತು ಸ್ಪೇಸ್ ಗ್ರೇ ಅಲ್ಯುಮಿನಿಯಂ ಕೇಸ್‌ಗಳಲ್ಲಿ ದೊರೆಯಲಿದೆ. ಟೈಟಾನಿಯಂ ಕೇಸ್ ಆಯ್ಕೆಯೂ ಲಭ್ಯವಿದೆ.
Apple Watch Ultra 3: ಇದರ ಬೆಲೆ ಅಮೆರಿಕಾದಲ್ಲಿ $799 (ಸುಮಾರು ₹71,000). ಭಾರತದಲ್ಲಿ ₹89,900 ರೂ. ಇದು ನ್ಯಾಚುರಲ್ ಮತ್ತು ಬ್ಲಾಕ್ ಟೈಟಾನಿಯಂ ಕೇಸ್‌ಗಳಲ್ಲಿ ಲಭ್ಯವಿದೆ. ಇದರ ಬ್ಯಾಂಡ್‌ಗಳಿಗೆ ಹೊಸ ಬಣ್ಣಗಳ ಆಯ್ಕೆಗಳನ್ನು ಸಹ ಪರಿಚಯಿಸಲಾಗಿದೆ.
Apple Watch SE 3: ಇದು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಅಮೆರಿಕಾದಲ್ಲಿ ಇದರ ಆರಂಭಿಕ ಬೆಲೆ $249 ಆಗಿದ್ದರೆ, ಭಾರತದಲ್ಲಿ ₹25,900 ರಿಂದ ಆರಂಭವಾಗುತ್ತದೆ. ಇದು ಮಿಡ್‌ನೈಟ್ ಮತ್ತು ಸ್ಟಾರ್‌ಲೈಟ್ ಅಲ್ಯುಮಿನಿಯಂ ಕೇಸ್‌ಗಳಲ್ಲಿ ಲಭ್ಯವಿದೆ.
ಒಟ್ಟಾರೆಯಾಗಿ, ಆಪಲ್ ತನ್ನ ಈ ಹೊಸ ವಾಚ್‌ಗಳಲ್ಲಿ ಉತ್ತಮ ಚಿಪ್‌ಸೆಟ್, ಸುಧಾರಿತ ಆರೋಗ್ಯ ವೈಶಿಷ್ಟ್ಯಗಳು, ಶಕ್ತಿಯುತ ಡಿಸ್‌ಪ್ಲೇ ಮತ್ತು ಪರಿಸರ ಸ್ನೇಹಿ ವಿನ್ಯಾಸಗಳ ಮೇಲೆ ಗಮನ ಹರಿಸಿದೆ. ಈ ಹೊಸ ಮಾದರಿಗಳು ತಂತ್ರಜ್ಞಾನ ಮತ್ತು ಆರೋಗ್ಯದ ವೈಶಿಷ್ಟ್ಯಗಳನ್ನು ಸುಧಾರಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿವೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








