ಧಮಾಕಾ ಆಫರ್! ಬರೋಬ್ಬರಿ 10,000 ಉಳಿತಾಯ.. ಈ Apple ಸ್ಮಾರ್ಟ್‌ವಾಚ್‌ಗಳ ಮೇಲೆ ಭಾರೀ ಡಿಸ್ಕೌಂಟ್
ಆಪಲ್ ಉತ್ಪನ್ನ ಪ್ರಿಯರಿಗೆ ಇಲ್ಲಿದೆ ಧಮಾಕಾ ಆಫರ್! ಬಹುತೇಕರು ಆಪಲ್ (Apple) ಉತ್ಪನ್ನಗಳನ್ನು ಖರೀದಿಸಲು ಬಯಸುತ್ತಾರೆ. ಆದರೆ, ಅಧಿಕ ಬೆಲೆ ಕಾರಣದಿಂದ ಹಿಂದೆ ಸರಿಯುತ್ತಾರೆ. ನೀವು ಹಬ್ಬಗಳು, ವಿಶೇಷ ದಿನಗಳು ಸೇರಿದಂತೆ ಆನ್‌ಲೈನ್ ಶಾಪಿಂಗ್ ಸೈಟ್ ಸೇಲ್‌ನಲ್ಲಿ ರಿಯಾಯಿತಿಯೊಂದಿಗೆ ಖರೀದಿಸಬಹುದು. ಪ್ರಸ್ತುತ ರಿಪಬ್ಲಿಕ್ ಡೇ ಸೇಲ್ (Republic Day Sale 2025) ನಡೆಯುತ್ತಿದೆ. ಐಫೋನ್‌ಗಳು ಮತ್ತು ಇತರೆ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ವಿಶೇಷವಾಗಿ ಐಫೋನ್ 15 ಸರಣಿ ಮತ್ತು ಐಫೋನ್ 16 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಹಲವು ಜನರು ಭಾರೀ ಡಿಸ್ಕೌಂಟ್‌ನಲ್ಲಿ ಖರೀದಿಸುತ್ತಿದ್ದಾರೆ.
ಪ್ರಸ್ತುತ ಆಪಲ್ ಸ್ಮಾರ್ಟ್‌ವಾಚ್‌ನಲ್ಲಿ ಉತ್ತಮ ಆಫರ್‌ಗಳಿವೆ. ಅಮೆಜಾನ್ ಮತ್ತು ಕ್ರೋಮಾ (Croma) ಸೇರಿದಂತೆ ಇತರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಆಪಲ್ ಸ್ಮಾರ್ಟ್‌ವಾಚ್‌ಗಳನ್ನು ರಿಯಾಯಿತಿಯಲ್ಲಿ (Apple Watch price drops) ಪಡೆಯಬಹುದು. ಈ ಆಫರ್‌ಗಳು Apple Watch SE 2, Apple Watch Series 8, Apple Watch Series 9 ಮತ್ತು Apple Watch Series 10 ಖರೀದಿ ಮೇಲೆ ಲಭ್ಯವಿದೆ. ಈ ವಾಚ್‌ಗಳ ಹೊಸ ಬೆಲೆ ತಿಳಿಯಲು ಮುಂದೆ ಓದಿ.

4,000 ರೂ.ಗಿಂತ ಹೆಚ್ಚು ಡಿಸ್ಕೌಂಟ್
ಆಪಲ್ ವಾಚ್ 10 ಸರಣಿ (Apple Watch Series 10) ಅನ್ನು ಕ್ರೋಮಾ ಪ್ಲಾಟ್‌ಫಾರ್ಮ್‌ನಲ್ಲಿ 4,000 ರೂ.ಗಿಂತ ಹೆಚ್ಚು ರಿಯಾಯಿತಿಯೊಂದಿಗೆ ಖರೀದಿಸಬಹುದು. 42 ಎಂಎಂ ಜಿಪಿಎಸ್ ಮಾದರಿಯ ಬೆಲೆ 46,900 ರೂ. ಇದೆ. ಪ್ರಸ್ತುತ ನೀವು 44,990 ರೂ.ಗೆ ಕೊಳ್ಳಬಹುದು. ನೀವು ಹೆಚ್ಚುವರಿಯಾಗಿ ಎಸ್‌ಬಿಐ, ಕೋಟಕ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳೊಂದಿಗೆ 2,500 ರೂ. ರಿಯಾಯಿತಿ ಪಡೆಯಬಹುದು.
ಆಪಲ್ ವಾಚ್ ಸರಣಿ 10 S10 ಪ್ರೊಸೆಸರ್ ಹೊಂದಿದೆ. ಇದು ನಯಗೊಳಿಸಿದ ಅಲ್ಯೂಮಿನಿಯಂ ಚೌಕಟ್ಟನ್ನು ಹೊಂದಿದೆ. ಈ ವಾಚ್‌ನಲ್ಲಿ ಸ್ಲೀಪ್ ಅಪ್ನಿಯ ಪತ್ತೆ ವೈಶಿಷ್ಟ್ಯ ಲಭ್ಯವಿದೆ. ಬ್ಯಾಟರಿ ಬ್ಯಾಕಪ್ ಬಗ್ಗೆ ಹೇಳುವುದಾದರೆ, ಈ ಆಪಲ್ ವಾಚ್ ಸರಣಿ 10 ಮಾದರಿಯು ಕೇವಲ 30 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಆಗುತ್ತದೆ.
10,910 ರೂ. ರಿಯಾಯಿತಿ ಸಿಗುತ್ತೆ!
ಆಪಲ್ ವಾಚ್ ಸರಣಿ 9 (Apple Watch 9 Series) ಅನ್ನು ಕ್ರೋಮಾದಲ್ಲಿ 10,000 ರೂ. ರಿಯಾಯಿತಿಯೊಂದಿಗೆ ಖರೀದಿಸಬಹುದು. ಈ ಸ್ಮಾರ್ಟ್‌ವಾಚ್‌ನ 45 ಎಂಎಂ ಜಿಪಿಎಸ್ ಮಾದರಿಯನ್ನು 44,900 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ 33,990 ರೂ. ಬೆಲೆಯಲ್ಲಿ ಖರೀದಿಸಬಹುದು. ಅಂದರೆ 10,910 ರೂ. ರಿಯಾಯಿತಿ ಲಭ್ಯವಿದೆ.

ಆಪಲ್ ವಾಚ್ ಸರಣಿ 9 S9 ಪ್ರೊಸೆಸರ್ ಹೊಂದಿದೆ. ಈ ವಾಚ್ ಡಬಲ್ ಟ್ಯಾಪ್ ಗೆಸ್ಚರ್‌ಗಳು ಮತ್ತು ಸಿರಿಯನ್ನು ಸಪೋರ್ಟ್ ಮಾಡುತ್ತದೆ. ಡಬಲ್ ಟ್ಯಾಪ್ ಸನ್ನೆಗಳ ಮೂಲಕ ಸಾಂಗ್ ಅನ್ನು ನಿಯಂತ್ರಿಸಬಹುದು. ಹಾಗೆಯೇ ಅಲಾರಾಂ ಮತ್ತು ಫೋನ್ ಕಾಲ್‌ಗಳಿಗೆ ಉತ್ತರಿಸುವ ಆಯ್ಕೆಯೂ ಲಭ್ಯವಿದೆ. ಈ ವಾಚ್ ಓಎಸ್ 10 ನೊಂದಿಗೆ ಕೆಲಸ ಮಾಡುತ್ತದೆ.
ಈ ವಾಚ್‌ಗಳ ಮೇಲೆಯೂ ಬಂಪರ್ ಆಫರ್
ಆಪಲ್ ವಾಚ್ ಸರಣಿ 8 (Apple Watch 8 Series) ಜಿಪಿಎಸ್ ಮಾದರಿಯನ್ನು ವಿಜಯ್ ಸೇಲ್ಸ್‌ನಲ್ಲಿ 30,490 ರೂ.ಗೆ ಖರೀದಿಸಬಹುದು. ಹಾಗೆಯೇ ಆಪಲ್ ವಾಚ್ SE 2 (Apple Watch SE 2) ಅನ್ನು ಅಮೆಜಾನ್‌ನಲ್ಲಿ 19,999 ರೂ.ಗೆ ಮಾರಾಟವಾಗುತ್ತಿದೆ. ಈ ವಾಚ್ 29,900 ರೂ.ಗೆ ಬಿಡುಗಡೆಯಾಗಿತ್ತು. ಇವು ಆಫರ್‌ಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ.
ಆಪಲ್ ವಾಚ್ SE 2 ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ತುರ್ತು SOS, ಫಾಲ್ ಡಿಟೆಕ್ಷನ್ ಫೀಚರ್ ಹೊಂದಿದೆ. ಇದದಲ್ಲಿ ಅನೇಕ ಆರೋಗ್ಯ ಟ್ರ್ಯಾಕರ್‌ಗಳು ಲಭ್ಯವಿದೆ. ಪ್ರಸ್ತುತ, ಈ ಆಪಲ್ ವಾಚ್ ಸರಣಿಗಳು ಪಬ್ಲಿಕ್ ಡೇ ಸೇಲ್‌ನಲ್ಲಿ (Republic Day Sale 2025) ರಿಯಾಯಿತಿ ಬೆಲೆಗೆ ಲಭ್ಯವಿದೆ.


Click it and Unblock the Notifications








