Tablets: 40,000 ರೂ. ಬಜೆಟ್ ಒಳಗೆ ಟ್ಯಾಬ್ಲೆಟ್ ಖರೀದಿಸಬೇಕಾ ? ಇಲ್ಲಿವೆ ಕೆಲವು ಉತ್ತಮ ಆಯ್ಕೆಗಳು !
ಟೆಕ್ ಕಂಪನಿಗಳು ಪ್ರತೀ ವರ್ಷ ಹಲವಾರು ಟ್ಯಾಬ್ಲೆಟ್‌ಗಳನ್ನು (Tablets) ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿವೆ, ಕಾರ್ಯಕ್ಷಮತೆ, ಸ್ಟೈಲ್ ಮತ್ತು ಸೃಜನಶೀಲತೆ ಸಂಯೋಜಿಸುವ ಟ್ಯಾಬ್ಲೆಟ್‌ಗಳನ್ನು ಕಂಡು ಹಿಡಿಯುವುದು ಮತ್ತು ಅವುಗಳನ್ನು ಗ್ರಾಹಕರು ಖರೀದಿಸುವಂತೆ ಪ್ರಮೋಶನ್ ನೀಡುವುದು ನಿರಂತರ ಪ್ರಕ್ರಿಯೆ ಆಗಿದೆ. ನೀವು ಕೂಡ ನಿಮ್ಮ ಬಜೆಟ್‌ನಲ್ಲಿ ಉತ್ತಮ ಗುಣಮಟ್ಟದ ಟ್ಯಾಬ್ಲೆಟ್ ಖರೀದಿಸುವ ಯೋಜನೆ ಹೊಂದಿದ್ದರೆ ನಾವು ನಿಮಗೆ 40,000 ರೂ. ಗಳಿಗಿಂತ ಕಡಿಮೆ ಬೆಲೆಯ ಉತ್ತಮ ಟ್ಯಾಬ್ಲೆಟ್‌ಗಳಲ್ಲಿ ಕೆಲವು ಆಯ್ಕೆಗಳನ್ನು ಈ ಲೇಖನದಲ್ಲಿ ಪರಿಚಯಿಸುತ್ತಿದ್ದೇವೆ.
ಲೆನೊವೊ (Lenovo) ಟ್ಯಾಬ್ P12: ನೀವು ಡ್ರಾಯಿಂಗ್ ಮತ್ತು ವೀಡಿಯೊಗಳನ್ನು ವೀಕ್ಷಿಸಲು ಟ್ಯಾಬ್ ಹುಡುಕುತ್ತಿದ್ದರೆ ಈ ಟ್ಯಾಬ್ಲೆಟ್ ಉತ್ತಮ ಆಯ್ಕೆಯಾಗಲಿದೆ. ಡೈಮೆನ್ಸಿಟಿ 7050 ಚಿಪ್‌ಸೆಟ್ ಒಳಗೊಂಡಿದ್ದು, 12.7 ಇಂಚಿನ 3K IPS LCD ಪರದೆಯನ್ನು ಹೊಂದಿದೆ. ಇದು ಡಾಲ್ಬಿ ಆಟ್ಮೊಸ್ (Dolby Atmos) ಬೆಂಬಲದೊಂದಿಗೆ ಜೆಬಿಎಲ್ ಟ್ಯೂನ್ಡ್ ಕ್ವಾಡ್ ಸ್ಪೀಕರ್ ಸೆಟಪ್ ಅನ್ನುಹೊಂದಿದೆ.
ಇದು ಆಂಡ್ರಾಯ್ಡ್ 13 ರಲ್ಲಿ ರನ್ ಆಗುತ್ತದೆ. ಜೊತೆಗೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ ಹಾಗೂ 30W ವೇಗದ ಚಾರ್ಜರ್ ಜೊತೆಗೆ 10,200mAh ಬ್ಯಾಟರಿ ಹೊಂದಿದೆ. 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ ಅಮೆಜಾನ್‌ನಲ್ಲಿ 26,999 ರೂ. ಗಳಿಗೆ ಲಭ್ಯವಿದೆ. ಇದರ ಜೊತೆಗೆ ನೀವು ಲೆನೊವೊ ಪ್ರೆಸಿಷನ್ ಪೆನ್ 2 ಅನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. ಹಾಗೂ ಇದರ ಬೆಲೆ 3,999 ರೂ. ಗಳಾಗಿವೆ.

ಶಿಯೋಮಿ (Xiaomi) ಪ್ಯಾಡ್ 6:
ಶಿಯೋಮಿ ಪ್ಯಾಡ್-6 ಬೆಲೆಗೆ ತಕ್ಕನಾದ ಡಿವೈಸ್ ಆಗಿದ್ದು, ನೀವು ಆಟವಾಡಲು ಹಾಗೂ ಕೆಲಸ ಮಾಡಲು ಟ್ಯಾಬ್ ಹುಡುಕುತ್ತಿದ್ದರೆ ಇದು ಉತ್ತಮ ಆಯ್ಕೆಯಾಗಲಿದೆ. ಇದು 2.5K 144Hz 11 ಇಂಚಿನ IPS LCD ಸ್ಕ್ರೀನ್ ಹೊಂದಿದೆ. ಮತ್ತು ಪರೀಕ್ಷಿಸಿದ ಸ್ನಾಪ್‌ಡ್ರಾಗನ್ 870ರಿಂದ ಈ ಡಿವೈಸ್ ರನ್ ಆಗಲಿದೆ. ಈ ಟ್ಯಾಬ್ಲೆಟ್ ಆಂಡ್ರಾಯ್ಡ್ 13 ಅನ್ನು ಆಧರಿಸಿ MIUI ಪ್ಯಾಡ್ 14ನಲ್ಲಿ ಕಾರ್ಯನಿರ್ವಹಿಸುತ್ತದೆ.
ಜೊತಗೆ ನೀವು ಆಂಡ್ರಾಯ್ಡ್ 14 ಅನ್ನು ಆಧರಿಸಿ ಹೈಪರ್ OSಗೆ ಅಪ್ಡೇಟ್ ಮಾಡಬಹುದು. ಇದು ಮೆಟಲ್ ಬಾಡಿ ಹೊಂದಿದ್ದು 33W ಚಾರ್ಜರ್ ಜೊತೆಗೆ 8,840mAh ಬ್ಯಾಟರಿಯನ್ನು ಹೊಂದಿದೆ. ನೀವು ಪ್ರತ್ಯೇಕವಾಗಿ 5,999 ರೂ.ಗಳ ಸ್ಟೈಲಸ್ ಅನ್ನು ಖರೀದಿಸಬೇಕಾಗುತ್ತದೆ. ಇದರ 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ನ ಬೆಲೆ ಪ್ರಸ್ತುತ ಅಮೆಜಾನ್‌ನಲ್ಲಿ 26,999 ರೂ. ಗಳಾಗಿದ್ದು ಇದಕ್ಕಿಂತ 2000 ರೂ ಹೆಚ್ಚು ಹಣ ಖರ್ಚು ಮಾಡಿದರೆ ನೀವು 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ ಅನ್ನು ಪಡೆಯಬಹುದು ಮತ್ತು ಇದು ಉತ್ತಮ ಆಯ್ಕೆಯಾಗಿರಲಿದೆ.
ಆಪಲ್ ಐಪ್ಯಾಡ್ (10ನೇ Gen): ನಿವು ಕಡಿಮೆ ಬಜೆಟ್ ನಲ್ಲಿ ಆಪಲ್ ಐಪ್ಯಾಡ್ ಖರೀದಿಸಬೇಕು ಎಂದುಕೊಂಡಿದ್ದರೆ ಈ ಆಯ್ಕೆ ಉತ್ತಮವಾಗಿದೆ. A14 ಬಯೋನಿಕ್ ಚಿಪ್‌ಸೆಟ್‌ನಿಂದ ರನ್ ಅಗುವ ಟ್ಯಾಬ್ಲೆಟ್ ಇದಾಗಿದೆ. 10.9 ಇಂಚಿನ ಡಿಸ್‌ಪ್ಲೇ, ಬಾಕ್ಸ್‌ನ ಹೊರಗೆ ಐಪ್ಯಾಡ್OS 16.1 ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಜೊತೆಗೆ ಇದನ್ನು ಐಪ್ಯಾಡ್ OS 17.5.1 ಗೆ ಅಪ್ಡೇಟ್ ಮಾಡಬಹುದಾಗಿದೆ. ಆಪಲ್ ಸಂಸ್ಥೆ ಇದರ ಅಧಿಕೃತ ಬ್ಯಾಟರಿ ಸಾಮರ್ಥ್ಯವನ್ನು ಬಹಿರಂಗಪಡಿಸದಿದ್ದರೂ, ಕ್ಯುಪರ್ಟಿನೊ ಆಧಾರಿತ ಟೆಕ್ ಸಂಸ್ಥೆ ಐಪ್ಯಾಡ್ 10ನೇ ಜೆನ್ ಇಡೀ ದಿನದ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ತಿಳಿಸಿದೆ.
ನೀವು ಡ್ರಾಯಿಂಗ್ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಟ್ಯಾಬ್ಲೆಟ್‌ಗಾಗಿ ಹುಡುಕುತ್ತಿದ್ದರೆ 64GB ಸಂಗ್ರಹಣೆ ಸಾಮರ್ಥ್ಯ ಹೊಂದಿರುವ ಐಪ್ಯಾಡ್ 10th Gen ನ ಮೂಲ ವೇರಿಯಂಟ್ ಉತ್ತಮ ಆಯ್ಕೆಯಾಗಿದೆ. ಇದು 34,900 ರೂ.ಗಳಿಗೆ ಖರೀದಿಸಬಹುದು. ಇದು ಮೊದಲ ಜೆನರೇಶನ್ ಆಪಲ್ ಪೆನ್ಸಿಲ್ ಅನ್ನು ಮಾತ್ರ ಬೆಂಬಲಿಸುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು ಮತ್ತು ಇದನ್ನು ಪ್ರತ್ಯೇಕವಾಗಿ ಖರೀದಿಸಬೇಕು ಇದರ ಬೆಲೆ 9,500 ರೂ.ಗಳಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S9 FE:
ಇದು ಗ್ಯಾಲಕ್ಸಿ ಟ್ಯಾಬ್ S9 ಸರಣಿಯಂತೆಯೇ ಕಂಡು ಬಂದರೂ, ಮಲ್ಟಿಟಾಸ್ಕಿಂಗ್ ಮತ್ತು ಡ್ರಾಯಿಂಗ್ ವಿಭಾಗಕ್ಕೆ ಬಂದಾಗ ಇದು ಉತ್ತಮವಾಗಿದೆ. ಇದು ಸ್ಯಾಮ್‌ಸಂಗ್ ಎಸ್ ಪೆನ್ ಜೊತೆಗೆ ಬರುತ್ತದೆ, ಇದು ಪಾಮ್ ನಿರಾಕರಣೆ ಮತ್ತು ಒತ್ತಡದ ಸೂಕ್ಷ್ಮತೆಯನ್ನು ಬೆಂಬಲಿಸುತ್ತದೆ, ನೀವು ಡ್ರಾಯಿಂಗ್ ಮಾಡಲು ಮತ್ತು ಸ್ಕ್ರಿಬಲ್ ಮಾಡಲು ಟ್ಯಾಬ್ ಹುಡುಕುತ್ತಿದ್ದರೆ ಇದು ಇದು ಉತ್ತಮ ಆಯ್ಕೆಯಾಗಿರಲಿದೆ. Exynos 1380 ಚಿಪ್‌ಸೆಟ್‌ನಿಂದ ರನ್ ಆಗುವ ಇದು 10.9 ಇಂಚಿನ IPS LCD ಪರದೆ ಹೊಂದಿದೆ. 500 nits ಬ್ರೈಟ್‌ನೆಸ್ ಮತ್ತು 90Hz ರಿಫ್ರೆಶ್ ರೇಟ್ ಹೊಂದಿದೆ.
ನೀರು ಮತ್ತು ಧೂಳಿನಿಂದ ರಕ್ಷಣೆ ಪಡೆಯಲು IP68 ಹೊಂದಿದೆ. ಸಾಧನವು ಬಾಕ್ಸ್ ಹೊರಗೆ ಆಂಡ್ರಾಯ್ಡ್ 13ರಲ್ಲಿ ಕಾರ್ಯ ನಿರ್ವಹಿಸುತ್ತದೆ, ಆದರೆ ಸ್ಯಾಮ್‌ಸಂಗ್ ಇತ್ತೀಚೆಗೆ ಆಂಡ್ರಾಯ್ಡ್ 14 ಆಧಾರಿತ One UI 6.1 ಅಪ್‌ಡೇಟ್ ಅನ್ನು ಹೊರತಂದಿದೆ. ಇದು 45W ವೇಗದ ಚಾರ್ಜರ್ ಜೊತೆಗೆ 8,000mAh ಬ್ಯಾಟರಿ ಹೊಂದಿದೆ, 6GB RAM ಮತ್ತು 128GB ವೇರಿಯಂಟ್‌ನ ಬಡಲಡ ಪ್ರಸ್ತುತ ಅಮೇಜಾನ್‌ನಲ್ಲಿ 35,999 ರೂ. ಗಳಿಗೆ ಲಭ್ಯವಿದೆ.
ಒನ್‌ಪ್ಲಸ್ ಪ್ಯಾಡ್: ಇದು ಭಾರತದಲ್ಲಿ ಒನ್‌ಪ್ಲಸ್ ಸಂಸ್ಥೆ ಬಿಡುಗಡೆಗೊಳಿಸಿರುವ ಮೊದಲ ಟ್ಯಾಬ್ಲೆಟ್ ಆಗಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 9000 ಚಿಪ್‌ಸೆಟ್‌ನಿಂದ ನಡೆಸಲ್ಪಡುವ ಮಧ್ಯಮ ಶ್ರೇಣಿಯ ಟ್ಯಾಬ್ಲೆಟ್ ಆಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಾರಂಭವಾದ ಟ್ಯಾಬ್ಲೆಟ್ 11.61 ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. 144Hz ರಿಫ್ರೆಶ್ ರೇಟ್‌ನೊಂದಿಗೆ ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತದೆ.
ಇದು ಆಂಡ್ರಾಯ್ಡ್ 13 ಆಧಾರಿತ ಆಕ್ಸಿಜನ್OS 13.1ರಲ್ಲಿ ಕಾರ್ಯನಿರ್ವಹಿಸುತ್ತದೆ, ಆದರೆ ಒನ್‌ಪ್ಲಸ್ ಸಂಸ್ಥೆ ತನ್ನ ಡಿವೈಸ್‌ಗಳಿಗೆ ಈಗಾಗಲೇ ಆಂಡ್ರಾಯ್ಡ್-14ರ ಅಪ್ಡೇಟ್ ಜಾರಿಗೊಳಿಸಿದೆ. ಇದು 67W ವೈಯರ್ಡ್ ಫಾಸ್ಟ್ ಚಾರ್ಜಿಂಗ್ ಜೊತೆಗೆ 9,510mAh ಬ್ಯಾಟರಿ ಹೊಂದಿದೆ. ನೀವು ಎಲ್ಲಾ ಇತ್ತೀಚಿನ ಟ್ಯಾಬ್ಲೆಟ್‌ಗಾಗಿ ಹುಡುಕುತ್ತಿದ್ದರೆ ಇದು ಉತ್ತಮ ಆಯ್ಕೆಯಾಗಿರಲಿದೆ.
ಒನ್‌ಪ್ಲಸ್ ಪ್ಯಾಡ್ ನ ಮೂಲ ವೇರಿಯಂಟ್ 8GB RAM ಮತ್ತು 128GB ಸಂಗ್ರಹಣೆ ಹೊಂದಿದೆ ಇದರ ಬೆಲೆ 35,999 ರೂ. ಗಳಾಗಿವೆ. ಆದರೆ ಇದಕ್ಕಿಂತ 2000 ರೂ. ಗಳನ್ನು ಹೆಚ್ಚಿಗೆ ವಿನಿಯೋಗಿಸಿದರೆ 12GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ ಪಡೆಯಬಹುದಾಗಿದೆ. ಜೊತೆಗೆ ಇತರೆ ಟ್ಯಾಬ್ಲೆಟ್‌ಗಳಂತೆ ನೀವು ಇದರ ಸ್ಟೈಲಸ್ ಅನ್ನು ಪ್ರತ್ಯೇಕವಾಗಿ 4,999 ರೂ. ಗಳಿಗೆ ಖರೀದಿಸಬೇಕು.


Click it and Unblock the Notifications