Home
Gadgets

ಆಸುಸ್‌ನಿಂದ ExpertCenter ಡೆಸ್ಕ್‌ಟಾಪ್ ಮತ್ತು AiO PC ಬಿಡುಗಡೆ!

ಕಂಪ್ಯೂಟರ್ ಗ್ಯಾಜೆಟ್ಸ್ ಉತ್ಪನ್ನಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುವ Asus ಭಾರತದಲ್ಲಿ ತನ್ನ ವಾಣಿಜ್ಯ ಪಿಸಿ(PC) ಪೋರ್ಟ್‌ಪೊಲಿಯೋವನ್ನು ವಿಸ್ತರಿಸಿದೆ. ವಾಣಿಜ್ಯ ಬಳಕೆದಾರರಿಗೆ ವಿಶ್ವಾಸಾರ್ಹ ಕಾರ್ಯಕ್ಷಮತೆ, ಬಲಿಷ್ಠ ಸುರಕ್ಷತೆ ಮತ್ತು AI ಆಧಾರಿತವಾಗಿ ದೈನಂದಿನ ಐಟಿ ನಿರ್ವಹಣೆಯನ್ನು ಸುಲಭಗೊಳಿಸುವ ಗುರಿಯೊಂದಿಗೆ, ExpertCenter P500 SFF ಡೆಸ್ಕ್‌ಟಾಪ್ ಮತ್ತು ExpertCenter P400 AiO ಆಲ್-ಇನ್-ವನ್ PC ಸಾಧನಗಳನ್ನು ಪರಿಚಯಿಸಿದೆ. ಈ ಹೊಸ ಎಕ್ಸ್‌ಪರ್ಟ್‌ಸೆಂಟರ್ ಮಾದರಿಗಳು ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇವುಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ExpertCenter P500 SFF ಡೆಸ್ಕ್‌ಟಾಪ್: ಹೇಗಿದೆ?
8.6 ಲೀಟರ್‌ನ ಕಿರು ಚ್ಯಾಸಿಸ್‌ನಲ್ಲಿ ಈ ಪಿಸಿ 13ನೇ ತಲೆಮಾರಿ Intel Core H-series ಪ್ರೊಸೆಸರ್‌ಗಳು, 64GB DDR5 RAM, ಡ್ಯುಯಲ್ PCIe Gen4 NVMe SSDಗಳು ಹಾಗೂ ಆಯ್ಕೆಯಾಗಿ NVIDIA RTX A400 ಗ್ರಾಫಿಕ್ಸ್ ಕಾರ್ಡ್‌ಗಳನ್ನು ಬೆಂಬಲಿಸುತ್ತದೆ. ಅಂದರೆ, ಸಣ್ಣ ಜಾಗದಲ್ಲಿಯೇ ಹೆಚ್ಚಿನ ಸಾಮರ್ಥ್ಯ ಬೇಕಿರುವ ಕಚೇರಿಗೆ ಸೂಕ್ತವಾಗುವಂತೆ ವಿನ್ಯಾಸಗೊಂಡಿದೆ. ಸಾಮಾನ್ಯ ವಾಣಿಜ್ಯ ಡೆಸ್ಕ್‌ಟಾಪ್‌ಗಳಿಗಿಂತ 37 ಶೇಕಡಾ ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು Asus ಹೇಳಿದೆ. ಹೀಟ್-ಪೈಪ್ ಕೂಲಿಂಗ್ ಮತ್ತು ಸುಧಾರಿತ ಗಾಳಿಯ ಹರಿವಿನ ಜೊತೆಗೆ ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತವೆ.ಇದು ಬಜೆಟ್‌ ಆದ್ಯತೆಯ ಸಂಸ್ಥೆಗಳಿಗೆ ಪ್ರಯೋಜನಕಾರಿಯಾಗಬಹುದು.

ಈ ಡೆಸ್ಕ್‌ಆಪ್ TPM 2.0, ಸೆಲ್ಫ್ ಹೀಲಿಂಗ್ NIST ಅನುಗುಣ BIOS ಮತ್ತು ಐದು ವರ್ಷಗಳ ಫರ್ಮ್ವೇರ್ ಅಪ್‌ಡೆಟ್‌ಗಳನ್ನು ಒಳಗೊಂಡಿದೆ. McAfee+ Premium ಸಹ ಬಂಡಲ್ ಆಗಿದೆ. ಜೊತೆಗೆ USB-A, USB-C, HDMI, DisplayPort, Ethernet, Wi-Fi 6 ಸೇರಿದಂತೆ ವ್ಯಾಪಕ ಸಂಪರ್ಕಗಳ ಜೊತೆಗೆ Asus AI ExpertMeet ಸ್ಯೂಟ್ ಸಭೆಗಳ ಲೈವ್ ಟ್ರಾನ್ಸ್ಕ್ರಿಪ್ಷನ್ ಮತ್ತು AI ನೊಯ್ಸ್ ಕ್ಯಾನ್ಸಲೇಷನ್‌ನಂತಹ ಸೌಲಭ್ಯಗಳನ್ನು ಒದಗಿಸುತ್ತದೆ. Asus ನಿರ್ಮಿತ ಮದರ್‌ಬೋರ್ಡ್‌ಗಳು, ಗುಣಮಟ್ಟದ ಕ್ಯಾಪಾಸಿಟರ್‌ಗಳು ಮತ್ತು MIL-STD 810H ವಿನ್ಯಾಸ ಇದರ ಸ್ಥಿರತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಈ ಮಾದರಿಯನ್ನು ದೀರ್ಘಾವಧಿ ಬಳಕೆಗೆ ತಕ್ಕಂತೆ ತಯಾರಿಸಲಾಗಿದ್ದು, ಪ್ರೀಮಿಯಂ ವೈಶಿಷ್ಟ್ಯಗಳು ಗಮನಸೆಳೆಯುತ್ತಿವೆ. ಭಾರತದಲ್ಲಿ ಇದರ ಮಾದರಿಯ ಪ್ರಾರಂಭಿಕ ಬೆಲೆ ₹32,500 ಮತ್ತು ತೆರಿಗೆಗಳು..

ಆಸುಸ್‌ನಿಂದ ExpertCenter ಡೆಸ್ಕ್‌ಟಾಪ್ ಮತ್ತು AiO PC ಬಿಡುಗಡೆ!

Asus ExpertCenter P400 AiO: ಹೇಗಿದೆ?
Asus ExpertCenter P400 AiO PC ಲೈನ್‌ಅಪ್ ಟವರ್ ಮತ್ತು ಮಾನಿಟರ್‌ಗಳ ಬದಲಿಗೆ ಒಗ್ಗೂಡಿಸಿದ ಒಂದು ಘಟಕದ ವಿನ್ಯಾಸದೊಂದಿಗೆ ಬಂದಿದೆ. 23.8 ಇಂಚಿನ P440VA ಮತ್ತು 27 ಇಂಚಿನ P470VA ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿರುವ ಈ AiO ಮಾದರಿಗಳು Full-HD NanoEdge IPS ಡಿಸ್‌ಪ್ಲೇ, 100Hz ರಿಫ್ರೆಶ್ ರೇಟ್, 100 ಶೇಕಡಾ sRGB ಕಲರ್ ಶುದ್ಧತೆ ಮತ್ತು TÜV Rheinland ಕಡಿಮೆ ಬ್ಲೂ-ಲೈಟ್ ರಕ್ಷಣೆಯನ್ನು ಒಳಗೊಂಡಿವೆ. ಆಯ್ಕೆ ಪ್ರಕಾರ ಟಚ್‌ಸ್ಕ್ರೀನ್ ಮಾದರಿಗಳೂ ಲಭ್ಯ.

ಹಾರ್ಡ್‌ವೇರ್ ವಿಭಾಗದಲ್ಲಿ, ಈ AiO ಪಿಸಿಗಳು 13ನೇ ತಲೆಮಾರಿ Intel Core i7 H-series ಪ್ರೊಸೆಸರ್‌ಗಳನ್ನು, 64GB ವರೆಗೆ DDR5 RAM ಮತ್ತು ಡ್ಯುಯಲ್ PCIe Gen4 SSD ಸಂಗ್ರಹಣೆಯನ್ನು ಬೆಂಬಲಿಸುತ್ತವೆ. HDMI-in ಪೋರ್ಟ್ ಈ ಮಾದರಿಗಳ ಮುಖ್ಯ ಆಕರ್ಷಣೆ ಎಂದರೆ, ಇದರ ಮೂಲಕ AiO ಅನ್ನು ಲ್ಯಾಪ್‌ಟಾಪ್, CCTV ಅಥವಾ ಸೆಟ್-ಟಾಪ್ ಬಾಕ್ಸ್‌ಗಳ ಬಾಹ್ಯ ಡಿಸ್‌ಪ್ಲೇ ಆಗಿಯಾಗಿ ಬಳಸಬಹುದು. ಬಳಕೆದಾರರು ಒಂದು ಸ್ವಿಚ್ ಮೂಲಕ PC ಮೋಡ್ ಮತ್ತು HDMI ಇನ್‌ಪುಟ್ ನಡುವೆ ಸುಲಭವಾಗಿ ಬದಲಾಯಿಸಬಹುದು.

ವಿಡಿಯೋ ಸಂವಹನಗಳನ್ನು ಗಮನಿಸಿ, Asus ಇದರಲ್ಲಿ ಹಿಂಪಡೆಯಬಹುದಾದ IR ಕ್ಯಾಮೆರಾ, ಮೂವ್ಮೆಂಟ್ ಟ್ರ್ಯಾಕಿಂಗ್, ಗೇಜ್ ಕರಕ್ಷನ್ ಮತ್ತು Windows Hello ಬೆಂಬಲ ಒದಗಿಸಿದೆ. DMI-in, HDMI-out, USB-A, USB-C, Ethernet, Wi-Fi 6 ಮತ್ತು Bluetooth 5.4 ಸೇರಿದಂತೆ ಹಲವು ಸಂಪರ್ಕ ಆಯ್ಕೆಗಳು ಮತ್ತು ಕೇಬಲ್ ನಿರ್ವಹಣಾ ವ್ಯವಸ್ಥೆ ಇದೆ.Dolby Atmos ಸ್ಪೀಕರ್‌ಗಳು ಮತ್ತು AI ಆಧಾರಿತ ನೊಯ್ಸ್ ಕ್ಯಾನ್ಸಲೇಷನ್ ಮೈಕ್‌ಗಳು ಸ್ಪಷ್ಟವಾದ ಧ್ವನಿಯನ್ನು ಒದಗಿಸುತ್ತವೆ.

ದೊಡ್ಡ ಮಾದರಿ P470VA ಯಲ್ಲಿ ಎತ್ತರ, ಟಿಲ್ಟ್, ಸ್ವಿವಲ್ ಮತ್ತು ಪಿವಟ್ ನಿಯಂತ್ರಣಗಳೊಂದಿಗೆ ಹೆಚ್ಚು ಆರಾಮದಾಯಕ ಸ್ಟ್ಯಾಂಡ್ ಒದಗಿಸಲಾಗಿದೆ.ಈ ಎರಡೂ AiO ಮಾದರಿಗಳು MIL-STD 810H ಬಲಿಷ್ಠ ಮಾನದಂಡಗಳನ್ನು ಪಾಸಾಗಿದ್ದು, Asus ExpertGuardian ಸುರಕ್ಷತೆ, TPM 2.0 ಹಾಗೂ ಐದು ವರ್ಷಗಳ BIOS ಮತ್ತು ಡ್ರೈವರ್ ಅಪ್‌ಡೆಟ್‌ಗಳನ್ನು ಒಳಗೊಂಡಿದೆ. ಈ ExpertCenter P400 AiO ಸರಣಿಯ ಬೆಲೆ ₹41,500 ಪ್ಲಸ್ ತೆರಿಗೆಯಿಂದ ಆರಂಭವಾಗುತ್ತದೆ. ಎರಡೂ ಉತ್ಪನ್ನಗಳು ಈಗ Asus‌ ಪಾಲುದಾರರ ಚಾನೆಲ್‌ಗಳ ಮೂಲಕ ಲಭ್ಯವಿವೆ.

Best Mobiles in India

English summary
ASUS ExpertCenter PCs, ExpertCenter P500 SFF, ExpertCenter P400 AiO, ASUS P500 SFF specifications, ASUS P400 AiO features, gadgets, ಆಸುಸ್ ಎಕ್ಸ್‌ಪರ್ಟ್‌ಸೆಂಟರ್ ಪಿಸಿಗಳು, ಎಕ್ಸ್‌ಪರ್ಟ್‌ಸೆಂಟರ್ P500 SFF, ಎಕ್ಸ್‌ಪರ್ಟ್‌ಸೆಂಟರ್ P400 AiO, ಆಸುಸ್ P500 SFF ವಿಶೇಷಣಗಳು, ಆಸುಸ್ P400 AiO ವೈಶಿಷ್ಟ್ಯಗಳು, ಗ್ಯಾಜೆಟ್‌ಗಳು,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+