Home
Gadgets

BenQ ScreenBar Halo 2 ಬಿಡುಗಡೆ: ಕಂಟೆಂಟ್ ಕ್ರಿಯೇಟರ್‌ಗಳ ಸಮಸ್ಯೆಗೆ ಪರಿಹಾರ!

ಡಿಮೆ ಬೆಳಕು ಇರುವ ಜಾಗದಲ್ಲಿ ಅತ್ಯುತ್ತಮ ಬೆಳಕನ್ನು ಹೊರಸೂಸುವ ಹಾಗೂ ಕಣ್ಣುಗಳಿಗೆ ಆರಾಮ ನೀಡುವ ಬೆಳಕಿನ ಡಿವೈಸ್ ಬೇಕೆ?. ಹಾಗಾದರೆ, ನಿಮಗಾಗಿಯೇ BenQ ತನ್ನ ಹೊಸ ScreenBar Halo 2 ಮಾನಿಟರ್ ಲೈಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕಣ್ಣುಗಳಿಗೆ ಆರಾಮ ನೀಡುವ ಮತ್ತು ಕೆಲಸದ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಉತ್ಪನ್ನವನ್ನು ನಾಲ್ಕು ವರ್ಷಗಳ ಸಂಶೋಧನೆ ಮತ್ತು ಬಳಕೆದಾರರ ಅಭ್ಯಾಸಗಳ ವಿಶ್ಲೇಷಣೆಯ ನಂತರ ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪೆನಿಯು ತಿಳಿಸಿದ್ದು, ಇದು ವೃತ್ತಿಪರರು, ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ಗೇಮರ್‌ಗಳಿಗೆ ಉತ್ತಮವಾಗಿದೆ.

ಏನೆಲ್ಲಾ ವಿಶೇಷತೆಗಳಿವೆ?
ಹೊಸ ScreenBar Halo 2 ಸಾಧನದಲ್ಲಿ ವಿಶೇಷ ಡುಯಲ್-ಲೈಟ್ ವ್ಯವಸ್ಥೆ ಮತ್ತು ಟ್ರಿಪಲ್-ಕರ್ವ್ ಬ್ಯಾಕ್‌ಲೈಟ್ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಹಿಂದಿನ ಮಾದರಿಗಿಂತ 423% ಹೆಚ್ಚು ಬೆಳಕು ವ್ಯಾಪ್ತಿಯನ್ನು ಇದು ನೀಡುತ್ತದೆ. ಈ ಸಮತೋಲನ ಬೆಳಕು ನಿಮ್ಮ ಮಾನಿಟರ್ ಮತ್ತು ಅದರ ಸುತ್ತಮುತ್ತಲಿನ ವಾತಾವರಣದ ಮಧ್ಯೆ ಇರುವ ಬೆಳಕು-ಕತ್ತಲೆ ವ್ಯತ್ಯಾಸವನ್ನು ಕಡಿಮೆ ಮಾಡುತ್ತದೆ, ಇದರಿಂದ ದೀರ್ಘ ಸಮಯ ಕೆಲಸ ಮಾಡಿದರೂ ಕಣ್ಣುಗಳಿಗೆ ತೊಂದರೆ ಆಗುವುದಿಲ್ಲ. ಹಾಗಾಗಿ, ಇದು ವೃತ್ತಿಪರರು, ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ಗೇಮರ್‌ಗಳಿಗೆ ಇದು ಆಕರ್ಷಕ ಆಯ್ಕೆಯಾಗಲಿದೆ.

ಗ್ಲೇರ್ ರಹಿತ ಬೆಳಕಿಗಾಗಿ ಸುಧಾರಿತ ತಂತ್ರಜ್ಞಾನ
ಸಾಮಾನ್ಯ ಟೇಬಲ್ ಲೈಟ್ಸ್ ಕಣ್ಣಿಗೆ ಗ್ಲೇರ್ ಉಂಟುಮಾಡುವ ಸಂಭವ ಹೆಚ್ಚು. ಇದರ ಪರಿಹಾರವಾಗಿ BenQ ಕಂಪೆನಿಯು ASYM-Light optical technology ಅನ್ನು ಬಳಸಿದೆ. ಇದು 18° ಅಸಿಮೆಟ್ರಿಕ್ ಕಟ್-ಆಫ್ ವಿನ್ಯಾಸದಲ್ಲಿ, ಬೆಳಕು ನೇರವಾಗಿ ಪರದೆಗೆ ತಾಗದಂತೆ ಮತ್ತು ಕಣ್ಣಿಗೆ ಅಸಹಜ ಬೆಳಕು ಬೀಳದಂತೆ ಮಾಡಲಿದೆ.ತೈವಾನ್ ಟೆಕ್ನಾಲಜಿ ವಿಶ್ವವಿದ್ಯಾಲಯದ ಜೊತೆ ನಡೆಸಿದ ಅಧ್ಯಯನದ ಆಧಾರದ ಮೇಲೆ, ಡಿಸ್‌ಪ್ಲೇ ಸುತ್ತಮುತ್ತಲಿನ ಸಮತಟ್ಟಾದ ಬೆಳಕು ಕಣ್ಣಿನ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂಬುದು ದೃಢಪಟ್ಟಿದ್ದು, ANSI ಮಾನದಂಡಗಳನ್ನು ಪಾಲಿಸಿ ScreenBar Halo 2 ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿಯು ಹೇಳಿಕೊಂಡಿದೆ.

BenQ ScreenBar Halo 2 ಬಿಡುಗಡೆ: ಕಂಟೆಂಟ್ ಕ್ರಿಯೇಟರ್‌ಗಳ ಸಮಸ್ಯೆಗೆ ಪರಿಹಾರ!
Photo credit: BenQ

ಸ್ವಯಂಚಾಲಿತ ಹಾಗೂ ಬುದ್ಧಿವಂತ ವೈಶಿಷ್ಟ್ಯಗಳು
ಈ ScreenBar Halo 2 ಮಾನಿಟರ್ ಲೈಟ್ ಕೇವಲ ಬೆಳಕು ಮಾತ್ರವಲ್ಲ, ಇದು ಸ್ಮಾರ್ಟ್ ಟೆಕ್ನಾಲಜಿಯೊಂದಿಗೆ ಬರುತ್ತದೆ, ಇವುಗಳಲ್ಲಿ,

  • ಮೋಷನ್ ಸೆನ್ಸರ್: ಬಳಕೆದಾರರು ಡೆಸ್ಕ್‌ಗೆ ಸಮೀಪಿಸಿದಾಗ ಸ್ವಯಂವಾಗಿ ಬೆಳಗುತ್ತದೆ
  • ಸ್ವಯಂ-ಡಿಮ್ಮಿಂಗ್: ಕೊಠಡಿಯ ಬೆಳಕು ಪ್ರಮಾಣಕ್ಕೆ ಅನುಗುಣವಾಗಿ ತೀವ್ರತೆಯನ್ನು ಸರಿಹೊಂದಿಸುತ್ತದೆ
  • ಮೆಮೊರಿ ಮೋಡ್: ಹಿಂದಿನ ಬೆಳಕು ಸೆಟ್ಟಿಂಗ್ಸ್‌ಗಳನ್ನು ಉಳಿಸಿಕೊಂಡಿರುತ್ತದೆ

Nike ಮಾಜಿ ಕ್ರಿಯೇಟಿವ್ ಡೈರೆಕ್ಟರ್ ಸ್ಕಾಟ್ ವಿಲ್ಸನ್ ಸ್ಥಾಪಿಸಿದ MINIMAL Design ತಂಡದೊಂದಿಗೆ ಇದನ್ನು ಸಂಯುಕ್ತವಾಗಿ ವಿನ್ಯಾಸಗೊಳಿಸಲಾಗಿದೆ. ಲೈಟ್ ತನ್ನ ಮಿನಿಮಲ್ ಮತ್ತು ಆಧುನಿಕ ಮೆಟಾಲಿಕ್ ಲುಕ್‌ನಿಂದ ಯಾವುದೇ ವರ್ಕ್‌ಸ್ಟೇಷನ್‌ಗೆ ಚೆನ್ನಾಗಿ ಹೊಂದುತ್ತದೆ ಎಂದು ಕಂಪೆನಿ ತಿಳಿಸಿದೆ.

ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
BenQ ಕಂಪೆನಿಯು ಭಾರತದಲ್ಲಿ ಈ ScreenBar Halo 2 ಸಾಧನವನ್ನು ₹17,490 ಗೆ ಪರಿಚಯಿಸಿದೆ. BenQ ಕಂಪೆನಿಯ PD, RD, MOBIUZ ಮತ್ತು MA ಸರಣಿ ಮಾನಿಟರ್‌ಗಳೊಂದಿಗೆ ಇದರ ವಿನ್ಯಾಸ ವಿಶೇಷವಾಗಿ ಹೊಂದಿಕೊಂಡಿರುವುದರಿಂದ, ಪ್ರೀಮಿಯಂ ಕೆಲಸದ ಸ್ಥಳವನ್ನು ಬಯಸುವವರಿಗೆ ಇದು ಉತ್ತಮ ಆಯ್ಕೆ. ಗ್ರಾಹಕರು BenQ India E-Store, Amazon India ಮತ್ತು ಆಯ್ದ ರಿಟೇಲ್ ಪ್ಲಾಟ್ಫಾರ್ಮ್‌ಗಳಲ್ಲಿ ಈ ಸಾಧನವನ್ನು ಖರೀದಿಸಬಹುದು.

ಈ ಹೊಸ ScreenBar Halo 2 ಸಾಧನವು ನಿಮ್ಮ ಬೆಳಕಿಗೆ ಸಂಪೂರ್ಣ ಪರಿಹಾರವನ್ನು ತರಬಹುದು. ಆದರೆ, ಪ್ರಿಮಿಯಂ ಗುಣಮಟ್ಟವು ಬೆಲೆಯನ್ನು ಸಹ ಹೆಚ್ಚಿಸುತ್ತದೆ ಎಂಬುದನ್ನು ನನ್ನ ಅಭಿಪ್ರಾಯ. ಈ ಕುರಿತು ನಿಮ್ಮ ಅನಿಸಿಕೆ ಏನು?, ನೀವು ಕೂಡ ಇಂತಹ ಬೆಳಕಿನ ಸಾಧನವನ್ನು ಹುಡುಕುತ್ತಿದ್ದರೆ ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The new ScreenBar Halo 2 features a dual-light system with triple-curve backlight technology, delivering 423% more light coverage than the previous model. Its balanced illumination reduces contrast between your monitor and surroundings, helping prevent eye strain during long work sessions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+