ಸ್ಮಾರ್ಟ್‌ಫೋನ್ ಸಪೋರ್ಟ್ ಮಾಡುವ ಗೇಮ್‌ಪ್ಯಾಡ್ ಲೀಸ್ಟ್!!
ಗೇಮ್‌ಪ್ಯಾಡ್ ಮೂಲಕ ವಿಡಿಯೋಗೇಮ್ ಆಡುವ ಮಜಾನೇ ಬೇರೆ!!
ಎಷ್ಟೇ ಇಂಚಿನ ಟಚ್ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದರೂ ಗೇಮ್‌ಪ್ಯಾಡ್ ಮೂಲಕ ವಿಡಿಯೋಗೇಮ್ ಆಡುವ ಮಜಾನೇ ಬೇರೆ!! ಜಾಯ್‌ಸ್ಟಿಕ್‌ನಲ್ಲಿರುವ ಬಟನ್ ಹಿಡಿದು ಪರದೆಯೊಳಗಿನ ಚಿತ್ರವನ್ನು ನಾವು ಆಟವಾಡಿಸುತ್ತಿದ್ದರೆ ಆ ಗೇಮ್‌ಗೊಂದು ಮಜಾ!! ಹೌದು ತಾನೆ?
ಹಗಾಗಿಯೇ ನಾವು ಇಂದು ಮೊಬೈಲ್‌ಗಳಲ್ಲಿ ಬಳಸಬಹುದಾಗ ಉತ್ತಮ ಗೇಮ್‌ಪ್ಯಾಡ್‌ಗಳು ಯಾವುವು? ಅವುಗಳ ವಿಶೇಷತೆ ಏನು? ಬೆಲೆ ಎಷ್ಟು ಎಂದು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ.! ಅವುಗಳನ್ನು ಖರೀದಿಸಿ ವಿಡಿಯೋ ಗೇಮ್ ಆಡಿ ಎಂಜಾಯ್ ಮಾಡಿ.!!

ಇವೊ ಗೇಮ್‌ಪ್ಯಾಡ್ ಪ್ರೊ 2 (Amkette Evo Gamepad Pro 2 )
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚು ಸಪೋರ್ಟ್ ನೀಡುವಂತಹ ಇವೊ ಗೇಮ್‌ಪ್ಯಾಡ್ ಪ್ರೊ 2 ಗೇಮ್‌ಪ್ಯಾಡ್ ವಿಡಿಯೋ ಗೇಮ್ ಆಡಲು ಉತ್ತಮ ಎನ್ನಬಹುದು. ಇವೊ ಗೇಮ್‌ಪ್ಯಾಡ್ ಆಪ್ ಮೂಲಕ 400 ಕ್ಕೂ ಹೆಚ್ಚುಗೇಮ್ ಡೌನ್‌ಲೋಡ್ ಮಾಡಬಹುದಾಗಿದ್ದು, ಇದರ ಬೆಲೆ 2000 ರೂ.ಗಳಾಗಿವೆ.

ಅಮಿಗೊ ಗೇಮ್‌ಪ್ಯಾಡ್ Amigo 7 IN 1 (STK 7004)
350mAh ಲೀಥಿಯಮ್ ಬ್ಯಾಟರಿ ಸಪೋರ್ಟ್ ಹೊಂದಿರುವ ಅಮಿಗೊ ಗೇಮ್‌ಪ್ಯಾಡ್ ಆಂಡ್ರಾಂಡ್ ಮತ್ತು ಐಒಎಸ್ ಎರಡರಲ್ಲೋ ಲಭ್ಯವಿದೆ.!! ಅಮೆಜಾನ್‌ನಲ್ಲಿ 1200 ರೂಪಾಯಿ ಆಸುಪಾಸಿಗೆ ಈ ಗೇಮ್‌ಪ್ಯಾಡ್ ಲಭ್ಯವಿದೆ.!!

ಮೊಬೈಲ್‌ಗೇರ್ ಬ್ಲೂಟೂತ್ ಗೇಮ್‌ಪ್ಯಾಡ್ (Mobilegear Bluetooth Mobile Gamepad)
ನಿಮ್ಮ ಸ್ಮಾರ್ಟ್‌ಫೋನ್‌ಗೆ ಬ್ಲುಟೂತ್ ಮೂಲಕ ಗೇಮ್‌ಪ್ಯಾಡ್ ಕನೆಕ್ಟ್ ಮಾಡಿಕೊಂಡು ಗೇಮ್ ಆಡಲು ಮೊಬೈಲ್‌ಗೇರ್ ಬ್ಲೂಟೂತ್ ಗೇಮ್‌ಪ್ಯಾಡ್ ಉತ್ತಮ ಎನ್ನಬಹುದು. ಗೇಮ್‌ಪ್ಯಾಡ್ ಅನ್ನು ತನ್ನಿಷ್ಟದಹಾಗೆ ತಿರುಗಿಸಿಕೊಂಡು ಗೇಮ್ ಆಡುವ ಸೌಲಭ್ಯ ಈ ಗೇಮ್‌ಪ್ಯಾಡ್‌ನಲ್ಲಿದೆ.!!

ಇವೊ ಗೇಮ್‌ಪ್ಯಾಡ್ ವೈರಡ್ !! (Amkette Evo Gamepad Wired )
ಇವೊ ಗೇಮ್‌ಪ್ಯಾಡ್ ವೈರಡ್ ವೈರ್ ಮೂಲಕ ಒಟಿಜಿ ಸಪೋರ್ಟೆಡ್ ಆಂಡ್ರಾಯ್ಡ್ ಪೋನ್ ಮೂಲಕ ಗೇಮ್ ಆಡಬಹುದಾಗಿದ್ದು, ವಿಡಿಯೋ ಗೇಮ್ ಆಟದ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಮಡುಯ್ಯುತ್ತದ. ಇದರ ಬೆಲೆ 2500 ದಿಂದ 3000 ರೂಪಾಯಿಗಳಾಗಿವೆ.!!


Click it and Unblock the Notifications








